ಅನುರಾಗ್ ಕಶ್ಯಪ್, ರಾಮಚಂದ್ರ ಗುಹಾ ಸಮೇತ 49 ಸೆಲೆಬ್ರಿಟಿಗಳ ಮೇಲೆ ಕೇಸ್ ದಾಖಲು – Google Guru

ಅನುರಾಗ್ ಕಶ್ಯಪ್, ರಾಮಚಂದ್ರ ಗುಹಾ ಸಮೇತ 49 ಸೆಲೆಬ್ರಿಟಿಗಳ ಮೇಲೆ ಕೇಸ್ ದಾಖಲು

ಮಾಬ್ ಲಿಂಚಿಂಗ್ ವಿಷಯದ ಕುರಿತಾಗಿ ಚಿಂತೆ ವ್ಯಕ್ತಪಡಿಸುತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದ ರಾಮಚಂದ್ರ ಗುಹಾ, ಮಣಿರತ್ನಂ‌ ಹಾಗು ಅಪರ್ಣಾ ಸೆನ್ ಸಮೇತ್ 49 ಜನರ ವಿರುದ್ದ ಬಿಹಾರ್‌ನ ಮುಜಫರ್‌ಪುರ್ ನಲ್ಲಿ FIR ದಾಖಲಾಗಿವೆ.

ಈ ಕುರಿತು ಮಾಹಿತಿ ನೀಡಿದ ಪೋಲಿಸರು ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಝಾ ರವರು ಎರಡು ತಿಂಗಳ ಹಿಂದೆ ಮುಖ್ಯ ನ್ಯಾಯಾಲಯ ಮ್ಯಾಜಿಸ್ಟ್ರೇಟ್ (ಸಿಜೆಎಮ್) ಸುರ್ಯಕಾಂತ್ ತಿವಾರಿ ರವರ ಆದೇಶದ ಬಳಿಕ ಈಗ ಈ ಸೆಲೆಬ್ರಿಟಿಗಳ ವಿರುದ್ಧ FIR ದಾಖಲು ಮಾಡಲಾಗಿದೆ. ಓಝಾ ರವರು ಮಾತನಾಡುತ್ತ ಸಿಜೆಎಮ್ ರವರು ಆಗಷ್ಟ್ 20 ರಂದು ತಮ್ಮ ಅರ್ಜಿಯನ್ನ ಸ್ವೀಕರಿಸಿದ್ದರು. ‌ಇದಾದ ಬಳಿಕ ಗುರುವಾರದಂದು ನಗರ ಪೋಲಿಸ್ ಸ್ಟೇಷನ್ ನಲ್ಲಿ ಕೇಸ್ ದಾಖಲು ಮಾಡಿ FIR ಹಾಕಲಾಗಿದೆ ಎಂದು ತಿಳಿಸಿದರು.

ಓಝಾ ರವರ ಆರೋಪವೇನೆಂದರೆ ಈ ಸೆಲೆಬ್ರಿಟಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನ ಹಾಳು ಮಾಡಲು ಹುನ್ನಾರ ಮಾಡಿದ್ದರು ಎಂದು ಕೇಸ್ ದಾಖಲು ಮಾಡಿದ್ದರು. ಪೋಲಿಸರು ಈ ಕುರಿತು ಮಾಹಿತಿ ನೀಡುತ್ತ ಭಾರತೀಯ ದಂಡಸಂಹಿತೆ (IPC)ಗೆ ಸಂಬಂಧಿಸಿರುವ ಅನುಚ್ಛೇದಗಳಡಿ ಕೇಸ್ ದಾಖಲು ಮಾಡಲಾಗಿದೆ. ಇದರಲ್ಲಿ ದೇಶದ್ರೋಹ, ಶಾಂತಿ ಹದಗೆಡಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶಗಳಿವೆ ಎಂದು ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೇನೆಂದರೆ ಮಣಿರತ್ನಂ, ಅನುರಾಗ್ ಕಶ್ಯಪ್, ಶ್ಯಾಮ್ ಬೆನೆಗಲ್, ಸೌಮಿತ್ರ್ ಚಟರ್ಜಿ ಹಾಗು ಶುಭಾ ಮುದ್ಗಲ್ ಸಮೇತ 49 ಸೆಲೆಬ್ರಿಟಿಗಳು ಇದೇ ವರ್ಷ ಜುಲೈ ನಲ್ಲಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಇವರೆಲ್ಲರೂ ಮಾಬ್ ಲಿಂಚಿಂಗ್‌ನ್ನ ತಕ್ಷಣವೇ ನಿಲ್ಲಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರ ಬರೆದಿದ್ದರು.

– Team Google Guruu

Leave a Reply

Your email address will not be published. Required fields are marked *

error: Content is protected !!