ಟಿಕ್‌ಟಾಕ್ ಪ್ರಿಯರಿಗೆ ಸಂತಸದ ಸುದ್ದಿ.! ಮದ್ರಾಸ್ ಹೈಕೋರ್ಟ್‌ ಹೇಳಿದ್ದೇನು ಗೊತ್ತೆ..?

ಇತ್ತಿಚಿನ ದಿನಗಳಲ್ಲಿ ಅತೀ ಹೆಚ್ಚು ಸುದ್ದಿ ಮಾಡಿದ ಸಾಮಾಜಿಕ ಜಾಲತಾಣದ ಮನರಂಜನೆಯ ಒಂದು ಆ್ಯಪ್ “ಟಿಕ್ ಟಾಕ್” ಈ ಆ್ಯಪ್ ನಿಂದ ಅನೇಕ ಮಹಿಳೆಯರ ಮರ್ಯಾದ ಹತ್ಯಾ ಕಾರಣ ಹಾಗೂ ಆ್ಯಪ್‌ನಿಂದ ಇನ್ನೊಬ್ಬರ ವಯಕ್ತಿಕ ವಿಡಿಯೋ ದುರುಪಯೋಗಿಸುತ್ತಿರುವ ಕಾರಣ ಏಪ್ರಿಲ್​ 18ರಂದು, ಮದ್ರಾಸ್​ ಹೈಕೋರ್ಟ್​ ತೀರ್ಪಿನಂತೆ, ಟಿಕ್​ಟಾಕ್ ಆ್ಯಪ್‌ ಅನ್ನು ಮಧ್ಯಂತರ ನಿಷೇಧ ಹೇರಿತ್ತು.

ದೇಶದಾದ್ಯಂತ ಟಿಕ್ ಟಾಕ್ ಆ್ಯಪ್ ನಿಷೇಧದಿಂದ ಆ್ಯಪ್​ ಸ್ಟೋರ್​​ ಮತ್ತು ಪ್ಲೇ ಸ್ಟೋರ್​​ಗಳಲ್ಲಿ ಆ್ಯಪ್​ ಡೌನ್​​ಲೋಡ್​​ಗೆ ಕೇಂದ್ರ ಸರ್ಕಾರ ನಿಷೇಧ ಮಾಡುವಂತೆ ಆದೇಶ ಹೊರಡಿಸಿತ್ತು. ಹೀಗಾಗಿ ಟಿಕ್ ಟಾಕ್ ಪ್ರಿಯರಿಗೆ ಭಾರಿ ನಿರಾಷೆ ಮೂಡಿತ್ತು, ದಿನಾಲೂ ಮನರಂಜನೆಗಾಗಿ ಉಪಯೋಗಿಸುವ ಈ ಆ್ಯಪ್ ತತ್‌ಕ್ಷಣ ನಿಷೇಧದಿಂದಾಗಿ ಅಭಿಮಾನಿಗಳು ನಿರಾಶೆ ಹೊಂದಿದ್ದರು.

ಆದರೇ ಇದೀಗ ಟಿಕ್ ಟಾಕ್ ಪ್ರಿಯರಿಗೆ ಸಂತಸದ ಸುದ್ದಿ ನೀಡಿದೆ. ಆನ್​​ಲೈನ್​ ಸ್ಪೀಚ್​​ ಮತ್ತು ಸೋಷಿಯಲ್ ಮೀಡಿಯಾವನ್ನು ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯದ 19 (1) (a) ವಿಧಿಯಡಿ​​ ಪರಿಗಣಿಸಲಾಗಿ ಅದನ್ನು ನಿಷೇಧಗೊಳಿಸಲು ಸಾಧ್ಯವಿಲ್ಲ ಎಂದು ಮದ್ರಾಸ್​ ಹೈಕೋರ್ಟ್​ ಸ್ಪಷ್ಟಪಡಿಸಿದೆ.

ಮದುರೈ ನ್ಯಾಯಪೀಠವು ಟಿಕ್​ಟಾಕ್ ಆ್ಯಪ್ ಮೇಲಿನ ನಿಷೇಧವನ್ನು ವಾಪಸ್​ ಪಡೆದಿದ್ದು ಈ ಸಂಬಂಧ ಮದ್ರಾಸ್​ ಹೈಕೋರ್ಟ್​ ಇಂದು ತೀರ್ಪು ನೀಡಿದೆ, ಟಿಕ್​ಟಾಕ್ ಆ್ಯಪ್ ಅನ್ನು ಡೌನ್​ಲೋಡ್​​ ಮಾಡಿಕೊಳ್ಳುವುದಕ್ಕೆ ಅಡ್ಡಿಯಿಲ್ಲ. ಅದರ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ತೀರ್ಪು ನೀಡಿದೆ.

-Gururaj Sahukar

Leave a Reply

Your e-mail address will not be published. Required fields are marked *

error: Content is protected !!