ದೇವಸ್ಥಾನಕ್ಕೆ ತೆಂಗಿನಕಾಯಿ ಹಾಗೂ ಬಾಳೆಹಣ್ಣು ಮಾತ್ರ ತೆಗೆದುಕೊಂಡು ಹೋಗಲು ಕಾರಣವೇನು – Google Guru

ದೇವಸ್ಥಾನಕ್ಕೆ ತೆಂಗಿನಕಾಯಿ ಹಾಗೂ ಬಾಳೆಹಣ್ಣು ಮಾತ್ರ ತೆಗೆದುಕೊಂಡು ಹೋಗಲು ಕಾರಣವೇನು

ಸಾಮಾನ್ಯವಾಗಿ ದೇವಾಲಯಕ್ಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನು ಮಾತ್ರ ತೆಗೆದುಕೊಂಡು ಹೋಗಿ ದೇವರಿಗೆ ಸಮರ್ಪಿಸುತ್ತಾರೆ ಆದರೆ ಇವುಗಳನ್ನೆ ಯಾಕೆ ತೆಗೆದುಕೊಂಡು ಹೋಗ್ತಾರೆ ಇದರ ಹಿಂದಿರುವ ರಹಸ್ಯವೇನು ಎಂದು ಬಹಳಷ್ಟು ಜನಕ್ಕೆ ತಿಳಿದಿರುವುದಿಲ್ಲ ಇಂದು ನಾವು ನಿಮಗೆ ಈ ಕುರಿತಾದ ಮಾಹಿತಿ ನೀಡಲಿದ್ದೆವೆ.

ಸಾಮಾನ್ಯವಾಗಿ ನಾವು ಯಾವುದೇ ಹಣ್ಣು ಅಥವಾ ಕಾಯಿಯನ್ನು ಅದರ ಪ್ರತ್ಯೇಕ ಹೆಸರನ್ನು ಬಳಸಿಯೇ ಹೇಳುತ್ತೇವೆ. ಆದರೆ ಬರೀ ಕಾಯಿ ಎಂದರೆ ಅದು ತೆಂಗಿನಕಾಯಿ, ಹಣ್ಣು ಎಂದರೆ ಬಾಳೆಹಣ್ಣನ್ನೇ ಸೂಚಿಸುತ್ತದೆ. ಮನೆಯ ಹಿರಿಯರು ದೇವಸ್ಥಾನಕ್ಕೆ ಹೋಗಿ ಹಣ್ಣು-ಕಾಯಿ ಮಾಡಿಸಿಕೊಂಡು ಬಾ ಎನ್ನುತ್ತಾರೆ.ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ ಬಾಳೆ ಹಣ್ಣು ನಿವೇದಿಸುತ್ತಾರೆ.

ತೆಂಗಿನ ಕಾಯಿ ವಿಶೇಷ ಫಲ. ಹೊರಚಿಪ್ಪು, ಕರತಾ, ಹೂವು, ನೀರು ಇವುಗಳಿಗೆ ವಿಶೇಷ ಆಧ್ಯಾತ್ಮಿಕ ಅರ್ಥ ಹೇಳುತ್ತಾರೆ. ಒರಟಾದ ಹೊರ ಲೌಕಿಕ ಪ್ರಪಂಚದಿಂದ ಸೂಕ್ಷ್ಮವಾದ ಒಳ ಪ್ರಪಂಚಕ್ಕೆ, ಆಧ್ಯಾತ್ಮಕ್ಕೆ ನಮ್ಮನ್ನು ಒಯ್ಯಲಿ ಎಂಬ ಸಂಕೇತದಂತೆ ದೇವರಿಗೆ ಹಣ್ಣು ಕಾಯಿ ಒಡೆಯುತ್ತವೆ. ದಕ್ಷಿಣ ಭಾರತದಲ್ಲಿ ಸುಲಭ ಲಭ್ಯ  ಉತ್ಕೃಷ್ಟ ಫಲ ಇದು. ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳು ಎಂಜಲದ ಬೀಜಗಳಿಂದ ಹುಟ್ಟುವ ಸಸ್ಯಗಳಿಂದ ದೊರಕುವ ಫಲಗಳಲ್ಲೂ, ಆದುದರಿಂದ ಶ್ರೇಷ್ಠ ಎಂದು ಹೇಳುತ್ತಾರೆ.

ಹೆಚ್ಚಾಗಿ ನಾವು ಒಂದು ಹಣ್ಣನ್ನೂ ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೃಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ.
ಆದರೆ ಬಾಳೆಹಣ್ಣನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ ಬಾಳೆಹಣ್ಣನ್ನೇ ಹಾಗೆ ಎಸೆದರು ಅದು ಮತ್ತೆ ಬೆಳೆಯುವುದಿಲ್ಲ. ತೆಂಗಿನಕಾಯಿಯೂ ಅಷ್ಟೆ ಒಮ್ಮೆ ಒಡೆದರೆ ಅದರಿಂದ ಗಿಡ ಹುಟ್ಟುವುದಿಲ್ಲ.

ಹಾಗೆಯೇ ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ ಜನ್ಮವಿಲ್ಲದ ಮುಕ್ತಿಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ದತಿಯನ್ನು ನಮ್ಮ ಹಿರಿಯರು ಮಾಡಿರುವರು. ನಮ್ಮ ಹಿರಿಯರು ಏನೇ ಮಾಡಲಿ ಅದಕ್ಕೊಂದು ಅರ್ಥವಿರುತ್ತದೆ. ಅಷ್ಟೇ ಅಲ್ಲ ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ. ಉಪಯೋಗಿಸದ ತೆಂಗು ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ಅರ್ಥಾತ್ ಎಂಜಲಿನಿಂದ ಬೆಳೆಯುವುದಿಲ್ಲ. ಪರಿಶುದ್ಧವಾದ ಪದಾರ್ಥಗಳೇ ದೇವರಿಗೆ ಅರ್ಪಿಸಲು ಯೋಗ್ಯ.

-Team Google Guru

Leave a Reply

Your email address will not be published. Required fields are marked *

error: Content is protected !!