ನಾನು ಆ ಒಂದು ತಪ್ಪು ಮಾಡಬಾರದಿತ್ತು; ದೇವೆಗೌಡರು – Google Guru

ನಾನು ಆ ಒಂದು ತಪ್ಪು ಮಾಡಬಾರದಿತ್ತು; ದೇವೆಗೌಡರು

ರಾಜ್ಯ ರಾಜಕೀಯದಲ್ಲಿ ಕಿಂಗ್ ಮೇಕರ್ ಎಂದೇ ಪ್ರಖ್ಯಾತರಾಗಿರುವ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೆಗೌಡರು, ಮೈತ್ರಿ ಸರಕಾರ ಪತನಗೊಂಡ ನಂತರ ರಾಜಕೀಯದಲ್ಲಿ ಬೇಸರ ವ್ಯಕ್ತಪಡಿಸಿದ್ದು ಇದೀಗ ತಮ್ಮ ಹೊಸ ಹೇಳಿಕೆಯಿಂದ ಕಾರ್ಯಕರ್ತರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರಂತೆ.

ಹೌದು ಮೈತ್ರಿ ಸರ್ಕಾರದ ದೋಸ್ತಿ ಮಾಡಿದ್ದರಿಂದ ಜೆಡಿಎಸ್ ಪಕ್ಷ ಬಹಳ ಬಿಕ್ಕಟ್ಟಿನಲ್ಲಿದೆ ಅಧಿಕಾರದಿಂದ ಹೊರಬಂದ ಮೇಲೆ ಎಲ್ಲವನ್ನೂ ಗಮನಿಸಿದ್ದೇನೆ ಎಂದು ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಬುಧವಾರ ಹೇಳಿದರು. ಮಾಧ್ಯಮ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ತಪ್ಪಿನ ಕುರಿತಾಗಿ ಹೇಳಿದ್ದಾರೆ.

ಅಷ್ಟಕ್ಕೂ ದೇವೆಗೌಡರು ಮಾಡಿದ ಆ ತಪ್ಪು ಯಾವುದೆಂದು ನೋಡುವುದಾದರೇ ಅವರೇ ಹೇಳುವಂತೆ, ಕಳೆದ ರಾಜ್ಯಸಭಾ ಚುನಾವಣೆಯ ನಂತರ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ‌ ನೀಡಿದ್ದೆವು ಆದರೇ ಅದನ್ನು ಸ್ವತಃ ನಮ್ಮ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು ಆದರೂ ಸಹ ಅವರ ಮಾತನ್ನು ಮೀರಿದ್ದಕ್ಕೆ ನನಗೆ ಸರಿಯಾದ ಶಿಕ್ಷೆ ಸಿಕ್ಕಿದೆ ಎಂದರು.

ಜೆಡಿಎಸ್ ಪಕ್ಷದ ಕಾರ್ಯಕರ್ತರು ವಿರೋಧಿಸಿದ ನಂತರವೂ ನಾನು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದೆನೆ ಇದು ನಾ ಮಾಡಿದ ಅತೀ ದೊಡ್ಡ ತಪ್ಪು ಎಂದು ಜೆಡಿಎಸ್ ವರಿಷ್ಠ ದೇವೆಗೌಡರು ಬಹಿರಂಗವಾಗಿ ಹೇಳಿದ್ದಾರೆ, ನಾನು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಬಾರದಿತ್ತು ಎಂಬರ್ಥದಲ್ಲಿ ಮಾತನಾಡಿದ ಅವರು ಪಕ್ಷದ ಕಾರ್ಯಕರ್ತರ ಮಾತಿಗೆ ಬೆಲೆ ಕೊಡಬೇಕಿತ್ತು ಎಂದು ಪಶ್ಚಾತಾಪ ಪಟ್ಟುಕೊಂಡಿದ್ದಾರಂತೆ.

ಈಗಾಗಲೇ ಅತೃಪ್ತ ಶಾಸಕರು ಯಾರು ಪಕ್ಷ ಬಿಟ್ಟು ಹೋಗಿದ್ದಾರೆ ಅವರ ಬಗ್ಗೆ ನಾನು ಮಾತನಾಡಲ್ಲ, ಹೋಗಿರುವ ಮೂವರ ಬಗ್ಗೆಯೂ ಯಾವುದೇ ಚಕಾರವೆತ್ತಲ್ಲ, ಆ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಗಳನ್ನ ನಿಲ್ಲಿಸುತ್ತೆವೆ, ಆಗಸ್ಟ್, ಸೆಪ್ಟಂಬರ್​ನಲ್ಲಿ ಸಮಾವೇಶ ಆಯೋಜನೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೆವೆ ಇದಕ್ಕೆ ಜನರೇ ಉತ್ತರಿಸಲಿ ಎಂದರು.

– Team Google Guru

Leave a Reply

Your email address will not be published. Required fields are marked *

error: Content is protected !!