ಪಾಕ್‌ ಇತಿಹಾಸದಲ್ಲೆ ಇದುವರೆಗೂ ಯಾವ ಪ್ರಧಾನಿಯೂ ಮಾಡದ ದಾಖಲೆ ಮಾಡಿದ ಇಮ್ರಾನ್ ಖಾನ್ – Google Guru

ಪಾಕ್‌ ಇತಿಹಾಸದಲ್ಲೆ ಇದುವರೆಗೂ ಯಾವ ಪ್ರಧಾನಿಯೂ ಮಾಡದ ದಾಖಲೆ ಮಾಡಿದ ಇಮ್ರಾನ್ ಖಾನ್

ಆರ್ಥಿಕ ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನದ ಆಡಳಿತಾರೂಢ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ತನ್ನ ಒಂದು ವರ್ಷದ ಅವಧಿಯಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ ಹೌದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಹಿಂದೆ ಯಾವ ಪ್ರಧಾನಿಯೂ ಮಾಡದಂತಹ ದಾಖಲೆ ಮಾಡಿದ್ದಾರೆ

ಇಮ್ರಾನ್ ಖಾನ್ ಮಾಡಿದ ಆ ದಾಖಲೆ ಯಾವುದು ಎಂದು ನೋಡುವುದಾದರೇ ಅದವೇ ಸಾಲ ಹೌದು ಪಾಕ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಇಷ್ಟೋಂದು ಹೆಚ್ಚು ಸಾಲ ಪಡೆದಿದೆಯಂತೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಪಾಕ್ ಸರ್ಕಾರ ಒಂದು ವರ್ಷದಲ್ಲಿ ದೇಶದ ಒಟ್ಟು ಸಾಲ 7509 ಬಿಲಿಯನ್ ರೂಪಾಯಿ ಹೆಚ್ಚಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಸಾಲದ ಅಂಕಿ ಅಂಶಗಳನ್ನು ಪ್ರಧಾನಿ ಇಮ್ರಾನ್ ಖಾನ್ ಕಚೇರಿಗೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 2018 ಮತ್ತು ಆಗಸ್ಟ್ 2019 ರ ನಡುವೆ 2804 ಬಿಲಿಯನ್ ರೂಪಾಯಿಗಳನ್ನು ವಿದೇಶದಿಂದ ತೆಗೆದುಕೊಂಡಿದೆ ಮತ್ತು 4705 ಬಿಲಿಯನ್ ರೂಪಾಯಿ ಸ್ಟೇಟ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ ತೆಗೆದುಕೊಂಡಿದೆ, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಪಾಕಿಸ್ತಾನದ ಸಾರ್ವಜನಿಕ ಸಾಲವು ಶೇಕಡಾ 1.43 ರಷ್ಟು ಹೆಚ್ಚಾಗಿದೆ.

ಫೆಡರಲ್ ಸರ್ಕಾರದ ಈ ಸಾಲ 32,240 ಬಿಲಿಯನ್ ರೂಪಾಯಿಗಳಿಗೆ ಏರಿದೆ. ಆಗಸ್ಟ್ 2018 ರಲ್ಲಿ ಈ ಸಾಲ 24,732 ಬಿಲಿಯನ್ ರೂಪಾಯಿಯಾಗಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಸರ್ಕಾರದ ತೆರಿಗೆ ಸಂಗ್ರಹವು 960 ಬಿಲಿಯನ್ ರೂಪಾಯಿಗಳಾಗಿದ್ದು, ಇದು 1 ಟ್ರಿಲಿಯನ್ ರೂಪಾಯಿಗಳ ಗುರಿಗಿಂತ ಅತೀ ಕಡಿಮೆಯಾಗಿದೆ ಎಂದು ಡೇಟಾವನ್ನು ಉಲ್ಲೇಖಿಸಿ ಮಾಧ್ಯಮ ವರದಿ ತಿಳಿಸಿದೆ.

ವಿಶ್ವದ ವಿವಿಧ ರಾಷ್ಟ್ರಗಳಿಂದಲೂ ಸಾಲ ಪಡೆದಿರುವ ಪಾಕಿಸ್ತಾನ್ ಬರಿಗೈಯಲ್ಲಿ ವಾಪಸ್ಸು ಬಂದ ಅನೇಕ ಉಧಾಹರಣೆಗಳಿವೆ. ಚೀನಾದ ಅಧ್ಯಕ್ಷ ಕ್ಸಿ ಚಿನ್‌ಪಿಂಗ್ ಅವರು ಮುಂದಿನ ನವ್ಹೆಂಬರ್ ತಿಂಗಳಿನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಚೀನಾ ಭಾರತ ಬೇಟಿಯಾದರೆ ಪಾಕ್‌ಗೆ ಸಾಲ ಸಿಗಲ್ಲ ಎಂದು ಅರಿತ ಪಾಕ್ ಸ್ವಲ್ಪ ಮುಂಚಿತವಾಗಿಯೇ ಇಮ್ರಾನ್ ಖಾನ್ ಅವರು ಬೀಜಿಂಗ್ ಭೇಟಿ ನೀಡಿ ಮತ್ತೆ ಭಿಕ್ಷೆ ಬೇಡಲು ಮುಂದಾಗಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಆರ್ಥಿಕವಾಗಿ ಗಟ್ಟಿಯಾಗಿ ನಿಂತ ಪಾಕ್ ಇದೀಗ ಮೋದಿ ಸರ್ಕಾರದ ಕೇವಲ ಆರು ವರ್ಷಗಳಲ್ಲಿ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ ಅಂದ್ರೆ ಅರ್ಥ ಮಾಡ್ಕೊಳ್ಳಿ ಪಾಕ್‌ಗೆ ಸಾಕಿ ಸಲುಹುತ್ತಿದ್ದ ಸರ್ಕಾರ ಯಾವುದೆಂದು. ಸಮರ್ಥ ನಾಯಕನ್ನು ಕೊಟ್ಟಿರುವ ದೇಶದ ಜನತೆ ಇನ್ನೂ ಐದು ವರ್ಷ ಆರಾಮವಾಗಿ ನಿದ್ದೆ ಮಾಡಬಹುದು.

– Team Google Guruu

Leave a Reply

Your email address will not be published. Required fields are marked *

error: Content is protected !!