ಪ್ರಧಾನಿ ಮೋದಿ ಭಾಗವಹಿಸಿದ ಮ್ಯಾನ್​ VS ವೈಲ್ಡ್‌ ಕಾರ್ಯಕ್ರಮ ಇಂದು ರಾತ್ರಿ ಡಿಸ್ಕವರಿ ಚಾನಲ್‍ನಲ್ಲಿ ಪ್ರಸಾರ ತಪ್ಪದೇ ವೀಕ್ಷಿಸಿ – Google Guru

ಪ್ರಧಾನಿ ಮೋದಿ ಭಾಗವಹಿಸಿದ ಮ್ಯಾನ್​ VS ವೈಲ್ಡ್‌ ಕಾರ್ಯಕ್ರಮ ಇಂದು ರಾತ್ರಿ ಡಿಸ್ಕವರಿ ಚಾನಲ್‍ನಲ್ಲಿ ಪ್ರಸಾರ ತಪ್ಪದೇ ವೀಕ್ಷಿಸಿ

ಸಾಹಸಿಗ ಎಡ್ವರ್ಡ್ ಮೈಕಲ್ ಗ್ರಿಲ್ಸ್ ನಡೆಸಿಕೊಡುವ ಮ್ಯಾನ್​ ವರ್ಸ್‌ಸ್ ವೈಲ್ಡ್ ಕ್ರಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿರುವ ವಿಶೇಷ ಸಂಚಿಕೆ ಸೋಮವಾರ ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ಉತ್ತರಾಖಂಡದ ಜಿಮ್ ಕಾರ್ಬೆಟ್ ಮತ್ತು ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನಗಳಲ್ಲಿ ಈ ಕಾರ್ಯಕ್ರಮದ ಚಿತ್ರೀಕರಣ ನಡೆಸಲಾಗಿದ್ದು, ಪ್ರಧಾನಿ ಮೋದಿ ಇದರಲ್ಲಿ ಪಾಲ್ಗೊಂಡಿದ್ದಾರೆ.

ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಈ ಕಾರ್ಯಕ್ರಮದ ಟೀಸರ್ ಅನ್ನು ತನ್ನ ‘ಇನ್​ಕ್ರೆಡಿಬಲ್ ಇಂಡಿಯಾ’ ವೆಬ್​ಸೈಟ್​ನಲ್ಲಿ ಬಿಡುಗಡೆ ಮಾಡಿದ್ದು, ಇದರಲ್ಲಿ ದಟ್ಟ ಅರಣ್ಯದಲ್ಲಿ ಪ್ರಧಾನಿ ಪಯಣದ ಕೆಲವು ದೃಶ್ಯಗಳನ್ನು ಹಂಚಿಕೊಳ್ಳಲಾಗಿತ್ತು. ಆದರೆ ಇಂದು ರಾತ್ರಿ ಪೂರ್ಣ ಸಂಚಿಕೆ ಪ್ರಸಾರವಾಗಲಿದ್ದು, ಪ್ರಧಾನಿ ಮೋದಿ ಅವರು ಗ್ರಿಲ್ಸ್ ಜೊತೆ ಕಾಡಿನೊಳಗೆ ಓಡಾಡಿರುವ ಮತ್ತು ವನ್ಯ ಜೀವಿ ಸಂರಕ್ಷಣೆ ಬಗ್ಗೆ ಮಾತನಾಡಿದ್ದಾರೆ. 

ಈ ಕಾರ್ಯಕ್ರಮ ಡಿಸ್ಕವರಿಯ 12 ಚಾನೆಲ್ ಗಳಲ್ಲಿ ಪ್ರಸಾರವಾಗಲಿದ್ದು, ಭಾರತದಲ್ಲಿ ಮಾತ್ರವಲ್ಲೆಡೆ ಇತರ 180 ರಾಷ್ಟ್ರಗಳಲ್ಲಿ ಪ್ರಸಾರವಾಗಲಿದೆ. ಡಿಸ್ಕವರಿ ಚಾನೆಲ್ ನಲ್ಲಿ ಮಾತ್ರವಲ್ಲದೆ, ಪ್ರಧಾನಮಂತ್ರಿ ಕಾರ್ಯಾಲಯದ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿಯೂ ಸಹ ಈ ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ. 

ಈಗಾಗಲೇ ಈ ಕಾರ್ಯಕ್ರಮದ ಎರಡು ಪ್ರೊಮೊ ಬಿಡುಗಡೆಯಾಗಿದ್ದು ಅದರಲ್ಲಿ ಮೂಡಿಬಂದ ಮೋದಿ ಹಾಗೂ ಗ್ರಿಲ್ಸ್ ಅವರ ಮಾತಿನ ಸಂಭಾಷಣೆ ಎಲ್ಲರಿಗೂ ಕುತೂಹಲ ಕೆರಳಿಸಿವೆ, ಟ್ರೇಲರ್ ಈ ರಿತಿಯಾಗಿದೆ ಇನ್ನೂ ಸಂಪೂರ್ಣ ಕಾರ್ಯಕ್ರಮ ಹೇಗೆದೆ ಎಂದು ನೋಡಲು ಕಾತುರರಾದ ಜನರಿಗೆ ಇಂದು ಡಿಸ್ಕವರಿ ಚಾನೆಲ್ ಖುಷಿ ನೀಡಲು ಮುಂದಾಗಿದೆ.

Team Google Guru

Leave a Reply

Your email address will not be published. Required fields are marked *

error: Content is protected !!