ಬೆಂಕಿ ಅವಘಡಧಿಂದ ನಾಶವಾಯಿತು ಜಗತ್ತಿನ ಶ್ರೇಷ್ಠ ಕಟ್ಟಡ.! ಐತಿಹಾಸಿಕ ಕಟ್ಟಡದ ಮರು ನಿರ್ಮಾಣಕ್ಕೆ ಹರಿದು ಬಂದ ಹಣ ಬರೋಬ್ಬರಿ 1500 ಕೋಟಿ

ಫ್ರಾನ್ಸ್​ನ ಐತಿಹಾಸಿಕ ನಾಟ್ರೆ ಡೇಮ್​​​ ಕ್ಯಾಥೆಡ್ರಲ್​​ನಲ್ಲಿ ನಿನ್ನೆ ಅಗ್ನಿ ಅವಘಡ ಸಂಭವಿಸಿದ್ದು, ಇಲ್ಲಿನ ಜನರಿಗೆ ಶಾಕ್ ನೀಡಿತ್ತು. ಕ್ಯಾಥಡ್ರಲ್​​​ನಲ್ಲಿ ಆವರಿಸಿದ್ದ ಬೆಂಕಿಯನ್ನು ಸದ್ಯ ಸಂಪೂರ್ಣವಾಗಿ ನಂದಿಸಲಾಗಿದೆ. 15 ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಬೆಂಕಿ ಕೆನ್ನಾಲಿಗೆಗೆ ಕ್ಯಾಥೆಡ್ರಲ್​​​ನ ಛಾವಣಿ ಸಂಪೂರ್ಣ ಸುಟ್ಟು ಹೋಗಿದೆ. ಪ್ಯಾರಿಸ್​​ನ ಈ ಐತಿಹಾಸಿಕ ಕ್ಯಾಥೆಡ್ರಲ್​​ ಅನ್ನು ಮರುನಿರ್ಮಾಣ ಮಾಡುತ್ತೇವೆಂದು ಫ್ರಾನ್ಸ್​ ಅಧ್ಯಕ್ಷ ಇಮ್ಯಾನುವಲ್ ಮ್ಯಾಕರಾನ್​​ ಪ್ರತಿಜ್ಞೆ ಮಾಡಿದ್ದಾರೆ. ಇದೀಗ ಮರುನಿರ್ಮಾಣ ಕಾರ್ಯಕ್ಕೆ ಫ್ರಾನ್ಸ್​​ನ ಕೋಟ್ಯಾಧಿಪತಿಗಳಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ.

ಫ್ರಾನ್ಸ್​ನ ಕೋಟ್ಯಾಧಿಪತಿ ಉದ್ಯಮಿ ಬರ್ನಾರ್ಡ್​​ ಅರ್ನಾಲ್ಟ್, ಕ್ಯಾಥೆಡ್ರಲ್ ಮರುನಿರ್ಮಾಣಕ್ಕೆ  200 ಮಿಲಿಯನ್ ಯೂರೋ( ಸುಮಾರು ₹1,500 ಕೋಟಿ) ನೀಡುವುದಾಗಿ ಘೋಷಿಸಿದ್ದಾರೆ. ಹಾಗೇ ಅಂತರಾಷ್ಟ್ರೀಯ ಲಕ್ಷುರಿ ಗ್ರೂಪ್​​​ ಕೆರಿಂಗ್​​ನ ಸಿಇಓ ಫ್ರಾಂಕೋಯಿಸ್​​ ಹೆನ್ರಿ ಪಿನಾಲ್ಟ್​ 100 ಮಿಲಿಯನ್ ಯೂರೋಸ್​( ಸುಮಾರು ₹700 ಕೋಟಿ) ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

ಕ್ಯಾಥಡ್ರಲ್ ಮರುನಿರ್ಮಾಣಕ್ಕೆ ರಾಷ್ಟ್ರ ಮಟ್ಟದಲ್ಲಿ ಹಣ ಸಂಗ್ರಹಣೆಗೆ ಅಭಿಯಾನ ನಡೆಸುವುದಾಗಿ ಅಧ್ಯಕ್ಷ ಮ್ಯಾಕರಾನ್ ಹೇಳಿದ್ದಾರೆ. 800 ವರ್ಷಗಳ ಇತಿಹಾಸ ಹೊಂದಿರೋ ಫ್ರಾನ್ಸ್‌ನ ನಾಟ್ರೆ ಡೇಮ್​ ಕ್ಯಾಥಡ್ರಲ್​​ಗೆ ಈ ಹಿಂದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜೀರ್ಣೋದ್ಧಾರ ಮಾಡಲಾಗಿತ್ತು.

ಇಂತಹ ಅದ್ಭುತ ಕಟ್ಟಡ ಮತ್ತೆ ತಲೆ ಎತ್ತಿ ನಿಲ್ಲಿಸಲು ಹರ ಸಾಹಸಾಡುತ್ತಿರುವ ಫ್ರಾನ್ಸ್ ಸರಕಾರ ಇದರ ಜೀರ್ಣೋದ್ಧಾರಕ್ಕಾಗಿ ರಾಷ್ಟ್ರದೆಲ್ಲೆಡೆ ಹಣ ಸಂಗ್ರಹ ಮಾಡುವ ಅಬನಿಯಾನ ನಡೆಸುತ್ತಿದ್ದಾರೆ, ಈಗಾಗಲೇ ಒಟ್ಟು ಒಂದೂವರೆ ಸಾವಿರ ಕೋಟಿ ಹಣ ಜಮಾವಣೆಯಾಗಿದ್ದು ಅತೀ ಶೀಘ್ರದಲ್ಲೇ ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.

-Team Google Guruu

Leave a Reply

Your e-mail address will not be published. Required fields are marked *

error: Content is protected !!