ಸುಷ್ಮಾ ಸ್ವರಾಜ್ ಕುರಿತು ಮನದಾಳದ ಮಾತು ಬಿಚ್ಚಿಟ್ಟ ಪ್ರಧಾನಿ ಮೋದಿ – Google Guru

ಸುಷ್ಮಾ ಸ್ವರಾಜ್ ಕುರಿತು ಮನದಾಳದ ಮಾತು ಬಿಚ್ಚಿಟ್ಟ ಪ್ರಧಾನಿ ಮೋದಿ

ಭಾರತೀಯ ರಾಜಕಾರಣದಲ್ಲಿ ಒಂದು ಅದ್ಭುತ ಅಧ್ಯಾಯವು ಕೊನೆಗೊಂಡಿದೆ. ಸಾರ್ವಜನಿಕ ಸೇವೆಗಾಗಿ ಮತ್ತು ಬಡವರ ಜೀವನವನ್ನು ಉತ್ತಮಗೊಳಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟ ಗಮನಾರ್ಹ ನಾಯಕಿಯ ನಿಧನಕ್ಕೆ ಭಾರತ ದುಃಖಿಸುತ್ತಿದೆ. ಎಂದು ಪ್ರಧಾನಿ ನರೇಂದ್ರ ಮೋದಿ ಸುಷ್ಮಾ ಸ್ವರಾಜ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

ಸುಷ್ಮಾ ಸ್ವರಾಜ್ ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದ್ದರು ಸುಷ್ಮಾ  ಅವರು ಅತ್ಯುತ್ತಮ ಸಂಸದೆಯಾಗಿದ್ದರು. ಅವರ ಪಕ್ಷ, ಹಾಗೂ ಅದರ ಆಚೆಗೂ ಸಹ ಮೆಚ್ಚುಗೆ ಪಡೆದರು ಮತ್ತು ಗೌರವಿಸಲ್ಪಟ್ಟರು. ಬಿಜೆಪಿಯ ಸಿದ್ಧಾಂತ ಮತ್ತು ಹಿತಾಸಕ್ತಿಗಳ ವಿಷಯಕ್ಕೆ ಬಂದಾಗ ಅವರು ರಾಜಿಯಾಗುತ್ತಿರಲಿಲ್ಲ.

ಪಕ್ಷದ ಬೆಳವಣಿಗೆಗೆ ಅವರ ಕೊಡುಗೆ ಅಪಾರವಾದದ್ದು. ಅವರ ಕೌಶಲ್ಯ ಮತ್ತು ಸಂಕಷ್ಟದಲ್ಲಿರುವ ಭಾರತೀಯರಿಗೆ ಸಹಾಯ ಮಾಡುವ ಸಾಮರ್ಥ್ಯದ  ಬಗೆಗೆ ಹೇಳಿದ ಮೋದಿ, ಅತ್ಯುತ್ತಮ ಆಡಳಿತಾಧಿಕಾರಿ, ಸುಷ್ಮಾ ಅವರು  ನಿರ್ವಹಿಸಿದ ಪ್ರತಿಯೊಂದು ಜವಾಬ್ದಾರಿಯೂ  ಉನ್ನತ ಗುಣಮಟ್ಟದ್ದಾಗಿತ್ತು. ಹಾಗೂ ಅವರು ಅದರಲ್ಲಿ ಅತ್ಯ್ನ್ನತ ಕಾಳಜಿಯನ್ನು, ಶ್ರದ್ದೆಯನ್ನೂ ಹೊಂದಿದ್ದರು.

ವಿವಿಧ ರಾಷ್ಟ್ರಗಳೊಂದಿಗಿನ ಭಾರತ ಸಂಬಂಧಗಳನ್ನು ಉತ್ತಮಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸಚಿವರಾಗಿ ನಾವು  ಆಕೆಯ ಸಹಾನುಭೂತಿಯ ಮುಖವನ್ನು ಕಂಡಿದ್ದೇವೆ. ವಿಶ್ವದ ಯಾವುದೇ ಭಾಗದಲ್ಲಿ ಸಂಕಷ್ಟದಲ್ಲಿರುವ ಭಾರತೀಯರ ಪಾಲಿಗೆ ಸುಷ್ಮಾ ಅವರು ಸಹಾಯಕ್ಕೆ ಧಾವಿಸುತ್ತಿದ್ದರು ಎಂದಿದ್ದಾರೆ.

– Team Google Guru

Leave a Reply

Your email address will not be published. Required fields are marked *

error: Content is protected !!