ಯೋಗಾಸನವನ್ನ ಅವಮಾನಿಸಿದ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟ ನಟ ಪರೇಶ್ ರಾವಲ್

ಕಳೆದ ದಿನ ಅಂದರೆ ಶುಕ್ರವಾರದಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಾಗಿದ್ದು ಭಾರತ ದೇಶವಷ್ಟೆ ಅಲ್ಲ ಇಡೀ ವಿಶ್ವದಲ್ಲೇ ಯೋಗ ದಿನವನ್ನು ಆಚರಿಸಲಾಯಿತು. ಈ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಮುಸ್ಲಿ ಕ್ರಿಶ್ಚಿಯನ್ ರಾಷ್ಟ್ರಗಳು ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಈ ಬೆನ್ನಲ್ಲೆ ಅನವಶ್ಯಕವಾಗಿ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಕಾಲೆಳೆಯಲು ಮುಂದಾದ ರಾಹುಲ್ ಗಾಂಧಿ ಎಡವಟ್ಟಿಗೆ ಸಿಲುಕಿ ಟ್ರೋಲ್‌ಗೆ ಒಳಗಾಗಿದ್ದಾರೆ ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಅನೆಕರು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಹೌದು ನಿನ್ನೆಯಷ್ಟೆ ಯೋಗ ದಿನ ಕಾರ್ಯಕ್ರಮದ ಅಂಗವಾಗಿ ಆರ್ಮಿ ಶ್ವಾನ ದಳ ಕೂಡ ಯೋಗ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದವು.

ಈ ಶ್ವಾನದಳ ಯೋಗ ಮಾಡಿರುವ ಫೋಟೊ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ “ನ್ಯೂ ಇಂಡಿಯಾ” ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ ಈ ಪೋಸ್ಟ್ ನೋಡಿದ ಬಿಜೆಪಿ ನಾಯಕರು ಹಾಗೂ ನಟ ಪರೇಶ್ ರಾವಲ್ ಕೆಂಡಾಮಂಡಲವಾಗಿದ್ದಾರೆ.

ರಾಹುಲ್ ಗಾಂಧಿಯ ಈ ಟ್ವೀಟ್ ಗೆ ಖಡಕ್ ಉತ್ತರ ಕೊಟ್ಟ ಪರೇಶ್ ರಾವಲ್” ಇದು ಹೊಸ ಭಾರತ ರಾಹುಲ್ ಜೀ, ಇಲ್ಲಿ ನಾಯಿಗಳು ನಿಮಗಿಂತ ಹೆಚ್ಚು ಬುದ್ದಿ ಹೊಂದಿವೆ” ಎಂದು ಖಾರವಾಗಿ ರೀ ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲದೇ ಅಮಿತ್ ಶಾ ಕೂಡ “ಕಾಂಗ್ರೆಸ್ ನಕಾರಾತ್ಮಕ ಜೊತೆ ನಿಲ್ಲುತ್ತದೆ, ಯೋಗದ ಕುರಿತು ಮಜಾ ಉಡಾಯಿಸುತ್ತಾರೆ, ನಮ್ಮ ಸೈನಿಕರನ್ನು ಅವಮಾನ ಮಾಡುತ್ತಾರೆ” ಎಂದು ಹೇಳಿದ್ದಾರೆ.

ಅಂತರಾಷ್ಟ್ರೀಯ ಯೋಗ ದಿನ ಎಂಬುದು ಭಾರತ ವಿಶ್ವಕ್ಕೆ ಕೊಟ್ಟ ಶ್ರೇಷ್ಠ ಸಂದೇಶ ಅದನ್ನು ಎಲ್ಲಾ ರಾಷ್ಟ್ರಗಳು ವಿನಮ್ರದಿಂದ ಸ್ವೀಕರಿಸಿ ಕಳೆದ ಐದು ವರ್ಷದಿಂದ ಅದನ್ನು ಪಾಲಿಸುತ್ತಾ ಬಂದಿವೆ. ಭಾರತದ ಸಿಯಾಚಿನ್‌ನಲ್ಲಿ ಮೈಕೊರೆಯುವ ಚಳಿಯಲ್ಲೂ ಸಹ ನಮ್ಮ ಯೋಧರು ಯೋಗ ಮಾಡಿದ್ದಾರೆ ಅವರ ಜೊತೆ ಗಡಿಯಲ್ಲಿರುವ ಪ್ರಾಣಿ ತರಬೇತಿ ಪೋಲಿಸ್ ಸಿಬ್ಬಂದಿಗಳು ಶ್ವಾನದ ಜೊತೆ ಯೋಗ ಮಾಡಿದ್ದಾರೆ.

ಶ್ವಾನಗಳ ಜೊತೆ ಪೋಲಿಸ್ ಸಿಬ್ಬಂದಿಗಳು ಯೋಗ ಮಾಡಿರುವ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆ ಒಂದು ಫೋಟೊ ತೆಗೆದುಕೊಂಡ ರಾಹುಲ್ ಗಾಂಧಿ ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಹಾಕಿಕೊಂಡು ಅನೇಕರಿಂದ ಹಿಗ್ಗಾ ಮುಗ್ಗಾ ಜಾಡಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ‌ನ ವಿಕ್ರತಿ ಎಂಬ ಮಾತುಗಳು ಕೇಳಿಬರುತ್ತಿವೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!