2002 ರ ಗುಜರಾತ್ ದಂಗೆಯ ಬಗ್ಗೆ ಕೊನೆಗೂ ಮೌನ ಮುರಿದ ಬಿಜೆಪಿ ಭೀಷ್ಮ ಲಾಲಕೃಷ್ಣ ಅಡ್ವಾಣಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು

2002 ರಲ್ಲಿ ಗುಜರಾತಿನ ಗೋಧ್ರಾದಲ್ಲಿ ಭೀಕರ ಗಲಭೆಯಾಗಿತ್ತು, ಈ ಗಲಭೆಗೆ ಕಾರಣವಾಗಿದ್ದು ಅಯೋಧ್ಯೆಯಲ್ಲಿ ರಾಮನ ದರ್ಶನ ಮಾಡಿ ಬರುತ್ತಿದ್ದ ರಾಮಭಕ್ತರನ್ನ ಗೋಧ್ರಾ ರೇಲ್ವೆ ಸ್ಟೇಷನ್ನಿನಲ್ಲಿ S6 ಬೋಗಿಯಲ್ಲಿ ಲಾಕ್ ಮಾಡಿ ಎಣ್ಣೆ ಸುರಿದು ಜೀವಂತವಾಗಿ 59 ಜನರನ್ನ ಸುಟ್ಟು ಹಾಕಲಾಗಿತ್ತು.

ಈ ಬಳಿಕ ಹಿಂಸಾಚಾರ ಭುಗಿಲೆದ್ದು ಗಲಭೆಯಾಗಿತ್ತು. ರಾಮಭಕ್ತರನ್ನ ಟ್ರೈನಿನಲ್ಲೇ ಜೀವಂತವಾಗಿ ಸುಟ್ಟು ಹಾಕುವ ಪ್ಲ್ಯಾನ್ ರೂಪಿಸಿದ್ದಾತ ಕಾಂಗ್ರೆಸ್ಸಿನ ಒಬ್ಬ ಮುಸಲ್ಮಾನ ಹಾಗು ಮಾಜಿ ಕಾರ್ಪೋರೇಟರ್ ಆಗಿದ್ದ‌. ಕರಸೇವಕರನ್ನ ಜೀವಂತವಾಗಿ ಸುಟ್ಟು ಹಾಕಿದ್ದನ್ನ ಕಂಡ ಹಿಂದೂ ಸಮಾಜದಲ್ಲಿ ಆಕ್ರೋಶ ಭುಗಿಲೆದ್ದು ಗೋಧ್ರಾ ಹತ್ಯಾಕಾಂಡಕ್ಕೆ ಮುನ್ನುಡಿ ಬರೆದಿತ್ತು. ಆಗ ತಾನೆ ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ನರೇಂದ್ರ ಮೋದಿಯವರು ಗಲಭೆಯನ್ನ ಹತ್ತಿಕ್ಕಲು ನಾನಾ ಪ್ರಯತ್ನಗಳನ್ನ ಮಾಡಿದ್ದರು.

ಗುಜರಾತಿನ ಪಕ್ಕದ ರಾಜ್ಯಗಳಾದ ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗು ರಾಜಸ್ಥಾನದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತುರ್ತಾಗಿ ಪೋಲಿಸ್ ಫೋರ್ಸ್ ಕಳಿಸಿ ಎಂದು ನರೇಂದ್ರ ಮೋದಿ ಪತ್ರ ಬರೆಯುತ್ತಾರೆ ಆದರೆ ಆ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ಕಾರಣ ಆ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ನರೇಂದ್ರ ಮೋದಿಯವರ ಮನವಿಗೆ ಕ್ಯಾರೆ ಅನ್ನಲಿಲ್ಲ‌. ಬಳಿಕ ಒಂದೆರಡು ದಿನಗಳ ಕಾಲ ಗುಜರಾತಿನ ಗೋಧ್ರಾ ಅಕ್ಷರಶಃ ರಣಾಂಗಣವಾಗಿಬಿಟ್ಟಿತ್ತು.

2002 ರ ಗೋಧ್ರಾ ಘಟನೆಯ ಕುರಿತು ಇದೀಗ ಭಾರತೀಯ ಜನತಾ ಪಕ್ಷದ ವರಿಷ್ಠ ನಾಯಕ, ಬಿಜೆಪಿಯ ಭೀಷ್ಮನೆಂದೇ ಕರೆಯುವ ಲಾಲಕೃಷ್ಣ ಅಡ್ವಾಣಿ ತಮ್ಮ‌ಮೌನ ಮುರಿದಿದ್ದಾರೆ. ಅಡ್ವಾಣಿ ಜೀ ಸದ್ಯದ ಪ್ರಧಾನಿ ನರೇಂದ್ರ ಮೊದಿಯವರ ಕುರಿತಾಗಿಯೂ ಕೆಲ ಮಾಹಿತಿಗಳನ್ನ ಬಿಚ್ಚಿಟ್ಟಿದ್ದಾರೆ. ಅಂದು ಗೋಧ್ರಾ ಹತ್ಯಾಕಾಂಡದ ಕುರಿತಾಗಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಹೆಸರನ್ನ ಹಾಳು ಮಾಡಲು ಕಾಂಗ್ರೆಸ್ ಸಮೇತ ಎಲ್ಲ ಮೀಡಿಯಾಗಳೂ ಅವರ ವಿರುದ್ಧ ಮುಗಿಬಿದ್ದಿದ್ದವು. ಆದರೆ ಮೋದಿಯವರಿಗೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ಕೊಟ್ಟೆ ಬಿಟ್ಟಿತ್ತು.

ಈ ಘಟನೆಯ ಬಗ್ಗೆ ಅಡ್ವಾಣಿ ಈಗ ತಮ್ಮ ಲೇಖನದಲ್ಲಿ ಒಂದಿಷ್ಟು ಮಾಹಿತಿಯನ್ನ ಬರೆದಿದ್ದಾರೆ. ಆ ಘಟನೆ ನಡೆದ ಬಳಿಕ ಅವರು ಹಲವಾರು ಮಾಹಿತಿಗಳನ್ನ ಬಹಿರಂಗಪಡಿಸಿದ್ದಾರೆ. ಲೇಖನದಲ್ಲಿ ಅವರು ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹಾಗು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಬಗ್ಗೆಯೂ ಬರೆದಿದ್ದಾರೆ.

ಗುಜರಾತ್ ದಂಗೆಯ ಬಳಿಕ ಅಟಲ್ ಬಿಹಾರಿ ವಾಜಪೇಯಿಯವರು ನರೇಂದ್ರ ಮೋದಿಯವರ ರಾಜೀನಾಮೆ ಕೇಳಿದ್ದರು ಆದರೆ ಅಡ್ವಾಣಿಯವರಿಗೆ ಈ ನಿರ್ಧಾರದ ಕುರಿತು ಅಸಮಾಧನಾವಿತ್ತು ಎಂದು ಅವರು ತಿಳಿಸಿದ್ದಾರೆ. ಅಡ್ವಾಣಿಯವರು ಸಾಹಿತ್ಯ ಅಮೃತ್ ಪತ್ರಿಕೆಯ ಅಟಲ್ ಸ್ಮೃತಿ ಲೇಖನದಲ್ಲಿ ಅವರು ಹೀಗೆ ಬರೆಯುತ್ತಾರೆ ಪಕ್ಷದೊಳಗೆ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು ಆದರೆ ಅಡ್ವಾಣಿಯವರ ಅಭಿಪ್ರಾಯ‌ ಮಾತ್ರ ಭಿನ್ನವಾಗಿತ್ತಂತೆ. ಆ ಪ್ರಕರಣದಲ್ಲಿ ನರೇಂದ್ರ ಮೋದಿ ಅಪರಾಧಿ ಎಂದು ಅಡ್ವಾಣಿ ಒಪ್ಪಿರಲಿಲ್ಲ.

ತಮ್ಮ ಲೇಖನದಲ್ಲಿ ಮುಂದೆ ಈ ಘಟನೆಯ ಕುರಿತು ಉಲ್ಲೇಖಿಸುತ್ತ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿ ಇನ್ನೂ ಒಂದು ವರ್ಷ ಕೂಡ ಆಗಿಲ್ಲ ಹಾಗಾಗಿ ಅವರನ್ನ ರಾಜಕೀಯ ಬಲಿಪಶು ಮಾಡುವ ಹುನ್ನಾರ ನಡೆದಿದೆ ಎಂಬುದು ಅರ್ಥವಾಗಿತ್ತು. ಅಂಥ ಸಂದರ್ಭದಲ್ಲಿ ಅವರ ರಾಜೀನಾಮೆ ಕೇಳಿ ಅವರನ್ನ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸೋದು ಅವರಿಗೆ ಮಾಡುವ ದ್ರೋಹವೆಂಬುದು ಅಡ್ವಾಣಿಯವರ ಅಭಿಪ್ರಾಯವಾಗಿತ್ತು.

ಆದರೆ ವಿರೋಧ ಪಕ್ಷಗಳ, ಮೀಡಿಯಾಗಳ ಹುನ್ನಾರದಿಂದ ನರೇಂದ್ರ ಮೋದಿಯವರ ರಾಜೀನಾಮೆಗೆ ತೀವ್ರವಾದ ಒತ್ತಡ ಹಾಕಲಾಗಿತ್ತು. ನರೇಂದ್ರ ಮೋದಿಯವರ ರಾಜೀನಾಮೆಗಾಗಿ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿಯವರ ಮೇಲೆ ಸಾಕಷ್ಟು ಒತ್ತಡವಿತ್ತು. ಆದರೆ ಅಡ್ವಾಣಿಯವರು ನರೇಂದ್ರ ಮೋದಿಯವರ ಜೊತೆ ಮಾತನಾಡಿ ನೀವೇ ಖುದ್ದು ಜನರೆದುರು ಬಂದು ಇಡೀ ಘಟನೆಯ ವಿವರ ಜನರೆದುರಿಟ್ಟು ರಾಜೀನಾಮೆ ನೀಡುವ ಕುರಿತು ಮಾತನಾಡಿ ಎಂದು ಹೇಳಿದ್ದರು.

ಇದಾದ ಬಳಿಕ ನರೇಂದ್ರ ಮೋದಿಯವರೂ ಕೂಡ ಇದಕ್ಕೆ ಒಪ್ಪಿ ತಮ್ಮ ರಾಜೀನಾಮೆಯ ಕುರಿತಾಗಿ ತಮ್ಮ ಮಾತುಗಳನ್ನ ಜನರೆದುರಿಟ್ಟಾಗ ಹಾಗು ತಾವೀಗ ರಾಜೀನಾಮೆ ನೀಡಲು ಹೊರಟಿದ್ದೇನೆ ಎಂದು ಹೇಳಿದಾಗ ಸಭೆಯಲ್ಲಿದ್ದ ಜನರೆಲ್ಲ ಅವರಿಗೆ ರಾಜೀನಾಮೆ ಕೊಡೋದು ಬೇಡ ಎಂದು ತೀವ್ರ ಪ್ರತಿಭಟನೆ ನಡೆಸಲಾರಂಭಿಸಿದ್ದರು. ಬಳಿಕ ಮೋದಿ ಅಟಲ್‌ಜೀ ರವರಿಗೂ ತಮ್ಮ ರಾಜೀನಾಮೆ ನೀಡಲು ಮುಂದಾಗಿದ್ದರು ಆದರೆ ಅದನ್ನ ಬಳಿಕ ಅಟಲ್ ಜೀ ಕೂಡ ಒಪ್ಪಲಿಲ್ಲ & ನರೇಂದ್ರ ಮೋದಿಯವರೇ ಗುಜರಾತ್ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದರು.

2002 ರ ಗುಜರಾತಿನ ಗೋಧ್ರಾ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವಿದೆಯೆಂದು ಅವರ ವಿರುದ್ಧ ಷಡ್ಯಂತ್ರ ನಡೆಸಿದ್ದ ವಿರೋಧಿಗಳ ಅಸ್ತ್ರ ಕೂಡ ಠುಸ್ ಆಗಿತ್ತು. ಮುಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಜಯಗಳಿಸಿ ಅವರು ಮತ್ತೆ ಗುಜರಾತಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆ ಘಟನೆ ನಡೆದು ಬರೋಬ್ಬರಿ 12 ವರ್ಷಗಳ ಕಾಲ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದರು.

– Vinod Hindu Nationalist

Leave a Reply

Your e-mail address will not be published. Required fields are marked *

error: Content is protected !!