ಮೋದಿ ಎರಡನೆಯ ಬಾರಿ ಪ್ರಧಾನಿಯಾದ ಬಳಿಕ‌ ಫರ್ಸ್ಟ್ ಈ ದೇಶಕ್ಕೇ ಹೋಗ್ತಾರಂತೆ; ಯಾವುದೀ ದೇಶ?

2014 ರ ಲೋಕಸಭಾ ಚುನಾವಣೆಯಲ್ಲಿ ‌ಯಾರೂ ಊಹಿಸದ ರೀತಿಯಲ್ಲಿ ನರೇಂದ್ರ ಮೋದಿ ಭರ್ಜರಿ ಗೆಲುವನ್ನ ಸಾಧಿಸಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನ ಕಿತ್ತೆಸೆದು ದೆಹಲಿಯ ಗದ್ದುಗೆಯ ಮೇಲೆ ಕೂತಿದ್ದರು. ಆವರೆಗೆ ಭಾರತವೆಂದರೆ ಕೆಂಡ ಕಾರುತ್ತಿದ್ದ ಹಾಗು ಸದಾ ಕ್ಯಾತೆ ತೆಗೆಯುತ್ತಿದ್ದ ಚೀನಾ ಮೋದಿ ಅಂತ ಕೂಡಲೇ ಬೆಚ್ಚಿಬಿದ್ದಿತ್ತು. ಮೋದಿ ಪ್ರಧಾನಿಯಾದ ಬಳಿಕ ನಮ್ಮ ದೇಶಕ್ಕೇ ಮೊದಲು ಬರುತ್ತಾರೆ ಎಂದುಕೊಂಡಿತ್ತು ಚೀನಾ.

ಅತ್ತ ಅಮೇರಿಕಾ ನಮ್ಮ ದೇಶಕ್ಕೆ ಭಾರತದ ಪ್ರಧಾನಿ ಮೋದಿ ಬರುತ್ತಾರೆ ಎಂದುಕೊಂಡಿತ್ತು, ವಿಶ್ವದ ಬಲಿಷ್ಟ ರಾಷ್ಟ್ರಗಳೂ ತಮ್ಮ ದೇಶಕ್ಕೇ ಮೋದಿ ಮೊದಲು ಬರುತ್ತಾರೆ ಎಂದುಕೊಂಡು ಕೂತಿದ್ದವು. ಆದರೆ ಈ ಮನುಷ್ಯ ಮೊದಿ ಮಾತ್ರ ಎಲ್ಲರ ಲೆಕ್ಕಾಚಾರಗಳನ್ನ ತಲೆಕೆಳಗೆ ಮಾಡಿ ಪುಟ್ಟ ರಾಷ್ಟ್ರ ಹಾಗು ಭಾರತದ ಪಕ್ಕದ ರಾಷ್ಟ್ರ ಭೂತಾನ್ ಗೆ ಭೇಟಿ ಕೊಟ್ಟಿದ್ದರು. 2014 ಮುಗಿದು ಈಗ 2019 ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿರುವ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮುಂದಿನ ತಿಂಗಳು ಮಾಲ್ಡೀವ್ಸ್​ ದೇಶಕ್ಕೆ ಭೇಟಿ ನೀಡಲಿದ್ದಾರೆ. ಇದು ಎರಡನೇ ಅವಧಿಗೆ ಪ್ರಧಾನಿಯಾಗುವ ಮೋದಿಯವರ ಮೊದಲ ವಿದೇಶ ಪ್ರವಾಸ ಆಗಲಿದೆ. ಭೇಟಿ ವೇಳೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿ ಜೊತೆ ಪ್ರಧಾನಿ ಮೋದಿ ದ್ವೀಪಕ್ಷಿಯ ಚರ್ಚೆ ನಡೆಸಲಿದ್ದಾರೆ.

ಜೂನ್​ 7-8 ರಂದು ಮಾಲ್ಡೀವ್ಸ್ ರಾಜಧಾನಿ ಮೇಲ್​ಗೆ ಭೇಟಿ ಕೊಡಲಿರುವ ಮೋದಿ ಅಲ್ಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನ ವೀಕ್ಷಣೆ ಮಾಡಲಿದ್ದಾರೆ. ಇದಕ್ಕೂ ಮೊದಲು ಅಂದರೆ, ಕಳೆದ ವರ್ಷ ನವೆಂಬರ್​ನಲ್ಲಿ ಇಬ್ರಾಹಿಂ ಮೊಹಮ್ಮದ್ ಸೋಲಿ ಮಾಲ್ಡೀವ್ಸ್​ನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಮೋದಿ ಭಾಗವಹಿಸಿದ್ದರು. ಇದು ಭಾರತ ಮತ್ತು ಮಾಲ್ಡೀವ್ಸ್​ ನಡುವಿನ ಸಂಬಂಧವನ್ನ ಗಟ್ಟಿಗೊಳಿಸಿತ್ತು.

ಅಲ್ಲದೇ ಭಾರತದ ಈ ಭೇಟಿ ಚೀನಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಬಳಿಕ ಅಂದರೆ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಉತ್ತಮಗೊಳಿಸಲು ಮಾರ್ಚ್​ನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಮಾಲ್ಡೀವ್ಸ್​ಗೆ ಭೇಟಿ ನೀಡಿ, ಮಹತ್ವದ ಚರ್ಚೆ ಕೈಗೊಂಡಿದ್ದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದ ವೇಳೆ ಮೊದಲು ಭೂತಾನ್​ ದೇಶಕ್ಕೆ ಭೇಟಿ ನೀಡಿದ್ದರು.

Source: First News, Indian Express

– Team Google Guruu

Leave a Reply

Your e-mail address will not be published. Required fields are marked *

error: Content is protected !!