ಮತ್ತೆ ಪಾಕಿಸ್ತಾನಕ್ಕೆ ದಿಗ್ಬಂಧನ ಹೇರಿದ ಅಮೇರಿಕಾ ಕೈಗೊಂಡ ನಿರ್ಧಾರವೇನು ಗೊತ್ತಾ

ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಚೀನಾ, ಪಾಕಿಸ್ತಾನ ಸೇರಿದಂತೆ 10 ರಾಷ್ಟ್ರಗಳನ್ನು ಅಮೆರಿಕ ಬ್ಲಾಕ್‍ಲಿಸ್ಟ್ ನಲ್ಲಿ ಸೇರಿಸಿತ್ತು, ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 1998 ಪ್ರಕಾರ, ಈ ರಾಷ್ಟ್ರಗಳು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘನೆ ಮಾಡಿವೆ. ಹಾಗು ಹಲವು ಭಾಗಗಳಲ್ಲಿ ಜನತೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಅಮೇರಿಕಾ ಪಾಕ್‌ಗೆ ಛಿಮಾರಿ ಹಾಕಿತ್ತು.

ಈ ಮುಂಚೆ ವರ್ಷಕ್ಕೆ 1.3 ಶತಕೋಟಿ ಡಾಲರ್‌ನಷ್ಟು ಹಣವನ್ನು ಪಾಕ್‌ಗೆ ನೀಡುತ್ತಿದ್ದ ಅಮೇರಿಕಾ ಸರಕಾರ ಇನ್ನು ಮುಂದೆ ಒಂದು ನಯಾ ಪೈಸೆಯ ಹಣವು ನೀಡುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಖಡಕ್ ಆಗಿ ಹೇಳಿದ್ದಾರೆ. ಪಾಕಿಸ್ತಾನಕ್ಕೆ ನಾವು ಆರ್ಥಿಕ ನೆರವು ಮಾಡುತ್ತಿದ್ದೆವೆ ಆದರೆ ಅವರು ನಮಗೆ ಏನನ್ನೂ ಮಾಡುತ್ತಿಲ್ಲ ಹೊರತಾಗಿ ಭಯೋತ್ಪಾದನೆಗೆ ಪ್ರಚೋದನೆ ನೀಡಿ ನಮಗೆ ಕೆಟ್ಟದ್ದನ್ನೆ ಮಾಡುತ್ತಿದ್ದಾರೆ ಎಂದು ಅರೋಪಿಸಿದ್ದರು.

ಆದರೆ ಈಗ ಮತ್ತೆ ಅಮೇರಿಕಾ ಪಾಕಿಸ್ತಾನದ ವಿರುದ್ಧ ಹರಿ ಹಾಯ್ದಿದ್ದು ಈ ಬಾರಿ ಅಮೇರಿಕಾದ ಸಂಸದ ಪಾಕ್‌ಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (ನ್ಯಾಟೋ) ಯ ಸದಸ್ಯೇತರ ಪ್ರಮುಖ ಮಿತ್ರರಾಷ್ಟ್ರ ಎಂಬ ಪಾಕಿಸ್ತಾನದ ಸ್ಥಾನಮಾನವನ್ನು ರದ್ದುಗೊಳಿಸಿ ಎಂದು ಅಮೆರಿಕದ ಪ್ರಭಾವಿ ಸಂಸದರೊಬ್ಬರು ಸಂಸತ್‍ನಲ್ಲಿ ಮಸೂದೆಯೊಂದನ್ನು ಮಂಡಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಇತ್ತೀಚೆಗೆ ಅಮೆರಿಕ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಇಮ್ರಾನ್ ಖಾನ್ ಗೆ ಮತ್ತೊಂದು ಬಿಗ್ ಶಾಕ್ ಕೊಟ್ಟಿದೆ ಎಂದು ಹೇಳಬಹುದು ಇದರಿಂದ ಇಸ್ಲಾಮಾಬಾದ್‍ಗೆ ಹಿನ್ನಡೆಯಾಗಿ ಭಾರಿ ಮುಖಭಂಗವಾಗಿದೆ.

ಪಾಕಿಸ್ತಾನವು ಭಯೋತ್ಪಾದನೆ ಸಂಘಟನೆಗಳ ನಿಗ್ರಹದಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಕಾಂಗ್ರೆಸ್ ಸದಸ್ಯರ ಆಂಡಿ ಬ್ರಿಗ್ಸ್ ಅವರು ಹೌಸ್ ಆಫ್ ರೆಪ್ರಸೆಂಟೇಟೀವ್ಸ್‌ ನಲ್ಲಿ ಈ ಸಂಬಂಧ ನಿರ್ಣಯ 73 ಮಸುದೆ ಮಂಡಿಸಿದ್ದಾರೆ.

ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್(ನ್ಯಾಟ್) ಉತ್ತರ ಅಮೆರಿಕ ಮತ್ತು ಯುರೋಪ್‍ನ 29 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದ್ದು

ಈ ನ್ಯಾಟೋದ ಸದಸ್ಯೇತರ ಪ್ರಮುಖ ಮಿತ್ರರಾಷ್ಟ್ರ ಎಂಬ ಸ್ಥಾನಮಾನದಿಂದ ಪಾಕಿಸ್ತಾನವನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿರುವ ಅಮೇರಿಕಾದ ಸಂಸದ ಆಂಡಿ ಒಂದು ವೇಳೆ ಪಾಕಿಸ್ತಾನವನ್ನು ಮರು ಸೇರ್ಪಡೆ ಮಾಡಿಕೊಳ್ಳಲೇಬೇಕಾದರೆ ಕೆಲವು ಷರತ್ತುಗಳನ್ನು ಪಾಲಿಸಬೇಕೆಂದು ಆಗ್ರಹಿಸಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!