ಅಧಿಕಾರಿಗಳ ತುರ್ತುಸಭೆ ಕರೆದ ಗೃಹಸಚಿವ ಅಮಿತ್ ಶಾಹ್

ಶನಿವಾರದಂದು ಗೃಹಸಚಿವ ಅಮಿತ್ ಶಾಹ್ ರವರು ದೇಶದ ವಿಭಿನ್ನ ಪ್ರದೇಶ ಹಾಗು ಪ್ರಾಂತ್ಯಗಳಲ್ಲಿ ನಡೆದ ಭಾರೀ ಮಳೆ ಹಾಗು ಸದ್ಯ ಪ್ರವಾಹಪೀಡಿತ ಸ್ಥಿತಿಯನ್ನ ನಿಭಾಯಿಸಲು ಸಂಬಂಧಿತ ರಾಜ್ಯಗಳ ಹಾಗು ಕೇಂದ್ರೀಯ ಸಚಿವಾಲಯಗಳ ಹಾಗು ಏಜೆನ್ಸಿಗಳ ಉನ್ನತ ಮಟ್ಟದ ಸಭೆಯ ಬೈಠಕ್ ನಡೆಸಿದ್ದಾರೆ. ಇದರಲ್ಲಿ ಪ್ರವಾಹ ಪರಿಸ್ಥಿತಿ ಪ್ರದೇಶಗಳ ಸ್ಥಿತಿಯನ್ನ ನಿಭಾಯಿಸಲು ಸಮೀಕ್ಷೆ ನಡೆಸಲಾಗಿದೆ.

ಎನ್‌ಡಿಆರ್‌ಎಫ್ ನ ಮಹಾನಿರ್ದೇಶಕ ಎಸ್‌ಎನ್ ಪ್ರಧಾನ್ ರವರು ಈ ಕುರಿತು ಮಾಹಿತಿ ನೀಡುತ್ತ 73 NDRF ತಂಡಗಳು ಅವಶ್ಯಕ ಉಪಕರಣಗಳ ಜೊತೆ ಪ್ರವಾಹಪೀಡಿತ ರಾಜ್ಯಗಳ ಸಂವೇದನಾಶೀಲ ಕ್ಷೇತ್ರಗಳಲ್ಲಿ ನಿಯೋಜಿಸಲಾಗಿದೆ, ಇದರ ಹೊರತಾಗಿ ಬಟಾಲಿಯನ್ ಹೆಡ್ ಕ್ವಾರ್ಟರ್ ಹಾಗು ಕ್ಷೇತ್ರಿಯ ಪ್ರತಿಕ್ರಿಯಾ ಕೇಂದ್ರಗಳಲ್ಲಿ ಟೀಂ ಗಳನ್ನ ಅಲರ್ಟ್‌ನಲ್ಲಿಡಲಾಗಿದೆ. ಎನ್‌ಡಿಆರ್‌ಎಫ್ ನ ಈ ತಂಡಗಳು ಈವರೆಗೆ ಅಸ್ಸಾಮ್ ಹಾಗು ಬಿಹಾರದಲ್ಲಿ ಹತ್ತಿರತ್ತಿರ 750 ಜನರ ಪ್ರಾಣವನ್ನ ಉಳಿಸಿದ್ದಾರೆ ಎಂದು ತಿಳಿಸಿದರು.

ಭಾರತೀಯ ಹವಾಮಾನ ವಿಭಾಗವು ಈ ಕುರಿತು ಮಾಹಿತಿ ನೀಡುತ್ತ ಕಳೆದ 3-4 ದಿನಗಳಿಂದ ಅಸ್ಸಾಂ ಹಾಗು ಬಿಹಾರದಲ್ಲಿ ಅತ್ಯಧಿಕ ಮಳೆಯಾಗಿದೆ, ಅದರಿಂದ ಈ ರಾಜ್ಯಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಮುಂಬರುವ 48 ಗಂಟಗಳಲ್ಲೂ ಈ ಎರಡೂ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ. ಅಸ್ಸಾಂ ನಲ್ಲಿ ಪ್ರವಾಹದಿಂದ ಈವರೆಗೆ 17 ಜಿಲ್ಲೆಗಳ 4.23 ಲಕ್ಷಕ್ಕೂ ಅಧಿಕ ಜನ ಪ್ರಭಾವಿತರಾಗಿದ್ದಾರೆ.

ರಾಜ್ಯದಲ್ಲಿ ಹಲವಾರು ನದಿಗಳು ಅಪಾಯ ಮಟ್ಟಕ್ಕೂ ಮೀರಿ ಹರಿಯುತ್ತಿವೆ. ರಾಜ್ಯ ಪ್ರವಾಹ ನಿಯಂತ್ರಣಾ ಪ್ರಾಧಿಕಾರವು ಈ ಬಗ್ಗೆ ಮಾಹಿತಿ ನೀಡುತ್ತ ಪ್ರವಾಹ ಪೀಡಿತ ಜಿಲ್ಲೆಗಳ ಸಂಖ್ಯೆ 11 ರಿಂದ 17 ಕ್ಕೇರಿವೆ‌. ಜನರಿಗೆ ಪ್ರವಾಹದಿಂದ ಭಾರೀ ಸಂಕಷ್ಟ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಸೇನೆ ಶ್ಲಾಘನೀಯ ಕಾರ್ಯ ಮಾಡುತ್ತಿದೆ‌.

ಸೇನೆಯ ಸೈನಿಕರು ಪ್ರವಾಹ ಪರಿಸ್ಥಿತಿ ಎದುರಿಸಲು ಹಾಗು ಜನರ ಪ್ರಾಣ ರಕ್ಷಣೆ ಮಾಡುತ್ತಿದ್ದಾರೆ.ಭಾರತೀಯ ಸೈನಿಕರು ಜನರಿಗೆ ಬೇಕಾದ ಅವಶ್ಯಕ ವಸ್ತುಗಳನ್ನ ಪೂರೈಸುವ ಹಾಗು ಅವರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಸುತ್ತಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!