ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಿಜೆಪಿ ಅಧ್ಯಕ್ಷ ಅಮಿತ್ ಶಾಹ್, ರವಿಶಂಕರ್ ಪ್ರಸಾದ್

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಹ್, ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹಾಗು ಡಿಎಂಕೆ ಪಕ್ಷದ ಕನಿಮೋಳಿ ಇಂದು ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈ ಮೂವರೂ ನಾಯಕರು ಲೋಕಸಭಾ ಚುನಾವಣೆ 2019 ರಲ್ಲಿ ಬೇರೆ ಬೇರೆ ಪಕ್ಷಗಳ ಮೂಲಕ ಚುನಾವಣಾ ಕಣದಕದಲ್ಲಿದ್ದರು.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಈ ಮೂರು ನಾಯಕರು ಭರ್ಜರಿ ಗೆಲುವು ಪಡೆದ ಬಳಿಕ ಇದೀಗ ತಾವು ಮುಂಚೆಯಿದ್ದ ರಾಜ್ಯಸಭಾ ಸಂಸದ ಸ್ಥಾನಕ್ಕೆ ಇದೀಗ ರಾಜೀನಾಮೆ ನೀಡಿದ್ದಾರೆ. ಅಮಿತ್ ಶಾಹ್ ಗುಜರಾತಿನ ಗಾಂಧಿನಗರ್, ರವಿಶಂಕರ್ ಪ್ರಸಾದ್ ಬಿಹಾರಿನ ಪಟ್ನಾ ಹಾಗು ಕನಿಮೋಳಿ ತಮಿಳುನಾಡಿನ ತುತುಕುಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವಿ ದಾಖಲಿಸಿದ್ದರು.‌

ಇಷ್ಟೇ ಅಲ್ಲದೆ ಅಮಿತ್ ಶಾಹ್ ಹಾಗು ರವಿಶಂಕರ್ ಪ್ರಸಾದ್ ರವರ ಹೊರತಾಗಿ ಸ್ಮೃತಿ ಇರಾನಿ ಕೂಡ ಭಾರತೀಯ ಜನತಾ ಪಕ್ಷದಿಂದ ರಾಜ್ಯಸಭಾ ಸದಸ್ಯೆಯಾಗಿದ್ದರು. ಅವರು ಮೊನ್ನೆಯಷ್ಟೇ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನ ಅವರ ಸ್ವ ಕ್ಷೇತ್ರ ಅಮೇಥಿಯಲ್ಲಿ ಭಾರೀ ಬಹುಮತದಿಂದ ಸೋಲಿಸಿದ್ದರು. ಆದರ ಸದ್ಯ ಸ್ಮೃತಿ ಇರಾನಿ ಇನ್ನೂ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿಲ್ಲ.

ಈ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾಹ್ ಗುಜರಾತಿನ ಗಾಂಧಿನಗರ್ ಕ್ಷೇತ್ರದಿಂದ ಗೆದ್ದು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರ ಬಿಜೆಪಿಯ ಪಾಲಿಗೆ ಪರಂಪರಾಗತವಾದ ಸೀಟ್ ಎಂದೇ ಹೇಳಲಾಗುತ್ತಿದೆ. ಗಾಂಧಿನಗರ ಕ್ಷೇತ್ರದಿಂದ ಅಮಿತ್ ಶಾಹ್ ಬರೋಬ್ಬರಿ 5,57,014 ಮತಗಳಿಂದ ಗೆದ್ದು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಮಿತ್ ಶಾಹ್ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಜೆ ಚಾವಡಾ ರನ್ನ ಸೋಕಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ರವರು ಬಿಹಾರದ ಪಟ್ನಾಸಾಹೀಬ್ ಕ್ಷೇತ್ದಿಂದ ಕಾಂಗ್ರೆಸ್ಸಿನ ಶತ್ರುಘ್ನ ಸಿನ್ಹಾ ರವರನ್ನ ಭಾರೀ ಅಂತದರಿಂದ ಸೋಲಿಸಿ ಭಾರು ಗೆಲುವು ದಾಖಲಿಸಿದ್ದಾರೆ. ರವಿಶಂಕರ್ ಪ್ರಸಾದ್ ರವರು ಶತ್ರಿಘ್ನ ಸಿನ್ಹಾ ರನ್ನ 2,84,657 ಮತಗಳಿಂದ ಅಂತರದಿಂದ ಸೋಲಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಶತ್ರುಘ್ನ ಸಿನ್ಹಾ ಬಿಜೆಪಿ ಪಕ್ಷದಲ್ಲೇ ಇದ್ದರು ಹಾಗು ಈ ಹಿಂದೆ ಅವರೇ ಪಟ್ನಾದಿಂದ ಬಿಜೆಪಿ ಸಂಸದರಾಗಿದ್ದರು. ಆದರೆ ಮೊನ್ನೆ ನಡೆದ ಚುನಾವಣೆಗೂ ಮುನ್ನ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪಟ್ನಾ ಕ್ಷೇತ್ರದಿಂದ ಬಿಜೆಪಿಯ ರವಿಶಂಕರ್ ಪ್ರಸಾದ್ ವಿರುದ್ಧ ಸ್ಪರ್ಧಿಸಿದ್ದರು.

ಇತ್ತ ಲೋಕಾಭಾ ಚುನಾವಣೆ ಗೆದ್ದ ಬಳಿಕ ತಮಿಳುನಾಡಿನ ತುತುಕುಡಿ ಕ್ಷೇತ್ರದಿಂದ ಕನಿಮೋಳಿ ತನ್ನ ರಾಜ್ಯಸಭಾ ಸದಸ್ಯತ್ವಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಕಮಿಮೋಳಿ 3,47,209 ವೋಟು ಪಡೆದು ಭರ್ಜರಿಯಾದ ಗೆಲುವನ್ನು ದಾಖಲಿಸಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!