ಬಿಗ್ ಬ್ರೇಕಿಂಗ್: ನಿಷ್ಠಾವಂತ IPS ಅಧಿಕಾರಿ ಅಣ್ಣಾಮಲೈ ರಾಜಿನಾಮೆ.! ಈ ರೀತಿಯ ದಿಢೀರ್ ನಿರ್ಧಾರಕ್ಕೆ ಕಾರಣವೇನು ಗೊತ್ತಾ

ಪೋಲಿಸ್ ಇಲಾಖೆಯಲ್ಲಿ ತಮ್ಮ ದಿಟ್ಟ ನಿರ್ಧಾರದಿಂದ ಕಾರ್ಯ ನಿರ್ವಹಿಸಿದ ದಕ್ಷ ಅಧಿಕಾರಿ ಅಣ್ಣಾಮಲೈ ತೆಗೆದುಕೊಂಡ ಈ ಒಂದು ನಿರ್ಧಾರ ಎಲ್ಲರ ಅಚ್ಚರಿಗೆ ಕಾರಣವಾಗಿದೆ ಹೌದು ರಾಜ್ಯದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ಅಧಿಕಾರಕ್ಕೆ ರಾಜಿನಾಮೆ ನೀಡಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಅಣ್ಣಾ ಮಲೈ ಹೆಸರು ಕೇಳಿದರೆ ಭ್ರಷ್ಟರು ಮತ್ತು ಅಪರಾಧಿಗಳು ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾರೆ. ಆದರೆ ಅವರ ಕೈ ಕೆಳಗಿನ ಸಹೋದ್ಯೋಗಿಗಳು ಅವರನ್ನು ದೇವರಂತೆ ಪೂಜಿಸುತ್ತಾರೆ. ಸಾಮಾನ್ಯವಾಗಿ ಅಧಿಕಾರದಲ್ಲಿ ಮೇಲಿರುವ ವ್ಯಕ್ತಿಗಳು ತಮ್ಮ ಕೈ ಕೆಳಗಿನ ವ್ಯಕ್ತಿಗಳನ್ನು ತುಛ್ಚವಾಗಿ ನೋಡುತ್ತಾರೆ. ಅದರಲ್ಲೂ ಪೋಲೀಸ್ ಇಲಾಖೆಯಲ್ಲಂತೂ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಹೋದ್ಯೋಗಿಗಳಿಂದ ಮನೆಯ ಕೆಲಸಗಳನ್ನೂ ಮಾಡಿಸುತ್ತಾರೆ ಕೆಲವು ದರ್ಪದ ಮೇಲಾಧಿಕಾರಿಗಳು.

ಆದರೆ ನಮ್ಮ ಅಣ್ಣಾ ಮಲೈ ಅಂಥವರಲ್ಲ. ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಹೋದ್ಯೋಗಿಗಳನ್ನು ತಮ್ಮ ಒಡ ಹುಟ್ಟಿದ ಸಹೋದರ ಸಹೋದರಿಯರಂತೆ ಕಾಣುತ್ತಾರೆ ಎನ್ನುವುದನ್ನು ಸ್ವತಃ ಅವರದೆ ಇಲಾಖೆಯ ಕೆಳ ಹಂತದ ಸಿಬ್ಬಂದಿಯೊಬ್ಬರು ಬರೆದಿದ್ದಾರೆ. ಅಷ್ಟೊಂದು ಮಾತೃ ಸ್ವರೂಪಿ ನಮ್ಮ ಅಣ್ಣಾಮಲೈ ಅವರು.

ಕೊಲೆ, ಅತ್ಯಾಚಾರ ಆರೋಪಿಗಳನ್ನು ಸ್ವತಃ ಮುತುವರ್ಜಿ ವಹಿಸಿ ತಕ್ಷಣವೇ ಅವರನ್ನು ಬಂಧನವಾಗುವಂತೆ ಮಾಡುತ್ತಿದ್ದರಿಂದ, ಅಕ್ರಮ ಗೋಸಾಗಾಟ, ಮಟ್ಕಾ ದಂಧೆಕೋರರನ್ನೆಲ್ಲಾ ಎಗ್ಗಿಲ್ಲದೆ ಮಟ್ಟ ಹಾಕಿದ್ದರಿಂದ ಪೋಲೀಸ್ ಆಫೀಸರ್ ಅಂದ್ರೆ ಹೀಗಿರಬೇಕು ಎಂದು ಜನ ಆಡಿಕೊಳ್ಳುವಂತೆ ಮಾಡಿದ್ದರು.

ಅಣ್ಣಾಮಲೈ ಅವರ ಈ ದಿಢೀರ್ ನಿರ್ಧಾರಕ್ಕೆ ಕಾರಣವೆನೆಂದು ತಿಳಿದು ಬಂದಿಲ್ಲ ಆದರೆ ಅವರ ಮುಂದಿನ ಜೀವನ ಎಲ್ಲರಿಗೂ ಕುತೂಹಲ ಮೂಡಿಸಿದೆ, ಮುಂಬರುವ ದಿನಗಳಲ್ಲಿ ಅಣ್ಣಾಮಲೈ ರಾಜಕೀಯ ಪ್ರವೇಶ ಮಾಡುತ್ತಿದ್ದು ತಮಿಳುನಾಡಿನ ಡಿಎಂಕೆ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅದೆಷ್ಟೋ ಬಾರಿ ವರ್ಗಾವಣೆಯಾದರೂ ಸಹ ಬೇಸರ ವ್ಯಕ್ತಪಡಿಸದೆ ಎಲ್ಲಾದರೂ ಒಂದೆ ನಿಷ್ಠಾವಂತನಾಗಿ ಕೆಲಸ ಮಾಡುವೆ ಎಂದು ಹೇಳುತ್ತಿದ್ದ ಅಣ್ಣಾಮಲೈ ಸದ್ಯ ಬೆಂಗಳೂರಿನ ದಕ್ಷಿಣ ಡಿಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪೋಲಿಸ್ ಅಧಿಕಾರದಲ್ಲಿದ್ದು ಜನಸೇವೆ ಮಾಡಲು ಕಷ್ಟವಾಗುತ್ತಿರುವ ಕಾರಣ ರಾಜಕೀಯ ಜೀವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೇ ಇದಕ್ಕೆಲ್ಲ ಅಣ್ಣಾಮಲೈ ಅವರೇ ನಿಖರ ಮಾಹಿತಿ ನೀಡಬೇಕಾಗಿದೆ.

ಅಣ್ಣಾಮಲೈ ಅಂತಹ ದಕ್ಷ ಅಧಿಕಾರಿ ರಾಜ್ಯಕ್ಕಷ್ಟೇ ಅಲ್ಲ ಇಡೀ ದೇಶಕ್ಕೆ ಬೇಕಾಗಿದೆ, ಹೌದು ಅವರ ದಕ್ಷ ಕಾರ್ಯವೈಖರಿ ನಿಜಕ್ಕೂ ಅದೆಷ್ಟೋ ಪೋಲಿಸ್ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದು ಹೇಳಬಹುದು, ಇಂತಹ ಒಬ್ಬ ಸಿಂಗಂ ರಾಜಿಕೀಯಕ್ಕಿಂತ ಪೋಲಿಸ್ ಅಧಿಕಾರದಲ್ಲೆ ಮುಂದುವರಿಯಬೇಕು ಎನ್ನುವುದೇ ನಮ್ಮ ಆಶಯ.

-Team Google Guru

Leave a Reply

Your e-mail address will not be published. Required fields are marked *

You may have missed

error: Content is protected !!