ಜೈಷ್-ಎ-ಮೊಹಮ್ಮದ್ ನಂತರ ಮತ್ತೊಂದು ಕುಖ್ಯಾತ ಉಗ್ರ ಸಂಘಟನೆಯ ವಿರುದ್ದ್ ಸ್ಟ್ರೈಕ್ ನಡೆಸಿ ಬೆನ್ನುಮೂಳೆ ಮರಿದ ಮೋದಿ ಸರ್ಕಾರ

ಕಳೆದ ತಿಂಗಳು ರಾಮನಗರದಲ್ಲಿ ಸೆರೆಸಿಕ್ಕ ಉಗ್ರ ಮುನೀರ್ ಶೇಖ್ ಅಲಿಯಾಸ್ ಕೌಸರ್ ರಾಜಧಾನಿ ಬೆಂಗಳೂರಿನಲ್ಲೇ 9 ಜನರಿಗೆ ಬಾಂಬ್ ತಯಾರಿಕೆ ಕುರಿತು ತರಬೇತಿ ನೀಡಿದ್ದನೆಂಬ ಸ್ಪೋಟಕ ಮಾಹಿತಿ ಹೊರಬಿದ್ದಿತ್ತು ಆದರೇ ಇದರ ಜಾಲತಾಣ ಪತ್ತೆ ಹಚ್ಚಿದ ಭಾರತೀಯ ಸೈನಿಕರು ಯಶಸ್ವಿ ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

ಬಾಂಗ್ಲಾ ದೇಶದಲ್ಲಿ ಹಲವು ಉಗ್ರ ಕೃತ್ಯಗಳನ್ನು ಎಸಗಿದ್ದ ಮತ್ತು ಭಾರತದಲ್ಲೂ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದ ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ ಸಂಘಟನೆಯ ಮೇಲೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿದೆ. 

ಭಾರತದಲ್ಲಿ ಹಲವು ಉಗ್ರ ಕೃತ್ಯಗಳಿಗೆ ಪ್ರಚೋದನೆ ನೀಡಿ, ವಿಧ್ವಂಸಕ ಕೃತ್ಯಗಳನ್ನು ಎಸಗಲು ಯುವಕರನ್ನು ನೇಮಿಸಿಕೊಳ್ಳುತ್ತಿದ್ದ ಜೆಎಂಬಿ ಸಂಘಟನೆಯನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ 1967 ಗೆ ಸೇರಿಸಲಾಗಿದೆ. ಹೀಗಾಗಿ ತಕ್ಷಣದಿಂದಲೇ ಭಾರತದಲ್ಲಿ ಇದರ ಮೇಲೆ ನಿಷೇಧ ಜಾರಿಯಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ. 

ಜಮಾತ್‌ ಉಲ್‌ ಮುಜಾಹಿದ್ದೀನ್‌ ಇಂಡಿಯಾ ಅಥವಾ ಜಮಾತ್‌ ಉಲ್‌ ಮುಜಾಹಿದ್ದೀನ್‌ ಹಿಂದೂಸ್ತಾನ್‌ ಹೆಸರಿನಲ್ಲೂ ಈ ಸಂಘಟನೆ ಸಕ್ರಿಯವಾಗಿತ್ತು. 2016ರ ಜುಲೈ 1ರಂದು ಢಾಕಾದ ಹೋಟೆಲೊಂದರಲ್ಲಿ ನಡೆದ ಸ್ಫೋಟದ ಹೊಣೆಯನ್ನು ಈ ಸಂಘಟನೆ ಹೊತ್ತಿತ್ತು. 17 ವಿದೇಶಿಯರು ಸೇರಿದಂತೆ 22 ಮಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದರು. 

ಈ ಹಿಂದೆ ಜೆಎಂಬಿಯ ಭಾರತದ ಮುಖ್ಯಸ್ಥ ಮುನೀರ್, ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್ ಬದಲು ಜಮಾತ್ ಉಲ್ ಮುಜಾಹಿದ್ದೀನ್ ಇಂಡಿಯಾ (ಜೆಎಂಐ) ಎಂದು ಬದಲಾಯಿಸಲು ಆಲೋಚಿಸಿದ್ದ. ಆದರೆ, ಸಂಘಟನೆ ಸದಸ್ಯರ ವಿರೋಧದ ಬಳಿಕ ಆ ನಿರ್ಧಾರ ಕೈ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು. ಜೆಎಂಬಿ ಭಯೋತ್ಪಾದನೆ ಚಟುವಟಿಕೆ ಕೈಗೊಳ್ಳಲು ಪ್ರಚೋದನೆ ನೀಡಿದೆ ಮತ್ತು ಯುವಕರನ್ನು ಉಗ್ರಗಾಮಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿ ಈ ಸಂಘಟನೆಯನ್ನು ಬ್ಯಾನ್ ಮಾಡಿದೆ.

-Team Google Guruu

Leave a Reply

Your e-mail address will not be published. Required fields are marked *

You may have missed

error: Content is protected !!