ಮತ್ತೊಮ್ಮೆ ಭ್ರಷ್ಟ ವ್ಯಕ್ತಿಗೆ ಬಲೆ ಬೀಸಿದ ಪ್ರಧಾನಿ ಮೋದಿ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಪೌರತ್ವ ರದ್ದು ಮಾಡಲಾಗುವುದು ಎಂದು ಆಂಟಿಗುವಾ ಸರಕಾರ ತಿಳಿಸಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಕ್ಕಂತಾಗಿದೆ. 

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ 13 ಸಾವಿರ ಕೋಟಿ ರೂ. ವಂಚನೆ ಮಾಡಿ ದೇಶ ತೊರೆದಿರುವ ಉದ್ಯಮಿ ಮೆಹೂಲ್​ ಚೋಕ್ಸಿ, ಅನಾರೋಗ್ಯದ ಕಾರಣದ ನೆಪ ಹೇಳಿ ಸುಮಾರು 41 ಗಂಟೆಗಳ ಪ್ರಯಾಣ ಮಾಡಿ ಭಾರತಕ್ಕೆ ಬರಲು ಅಸಾಧ್ಯ, ಹೀಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಈ ಹಿಂದೆ ಕಾರಣ ಕೊಟ್ಟು ಪಲಾಯನವಾಗಲು ಸಂಚು ರೂಪಿಸಿದ್ದ.

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ನಲ್ಲಿ ಸುಮಾರು 13,000 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮೆಹೂಲ್ ಚೋಕ್ಸಿ ಭಾರತೀಯ ಪೌರತ್ವವನ್ನು ವಾಪಾಸ್ ನೀಡುವ ನಿರ್ಧಾರ ಮಾಡಿ ತನಗಾಗುವ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಯೋಚನೆ ಮಾಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿದ್ದವು ಆದರೆ ಇದೀಗ ಮೆಹೂಲ್ ಚೌಕ್ಸಿಗೆ ತಕ್ಕ ಪಾಠ ಕಲಿಸಿದೆ ಆಂಟಿಗುವಾ.

ಪೌರತ್ವ ರದ್ದುಗೊಂಡರೆ ತಲೆಮರೆಸಿಕೊಂಡಿರುವ ಭ್ರಷ್ಟ ಅಪರಾಧಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಕರೆ ತರುವುದು ಸುಲಭವಾಗುವುದು. ಭಾರತಕ್ಕೆ ವಂಚನೆ ಮಾಡಿರುವ ಮೆಹುಲ್‌ ಚೋಕ್ಸಿಗೆ ನೀಡಿದ್ದ ನಾಗರಿಕ ಪೌರತ್ವ ರದ್ದುಪಡಿಸಲಾಗುವುದು ಎಂದು ಆಂಟಿಗುವಾ ಪ್ರಧಾನಿ ಗ್ಯಾಸ್ಟನ್‌ ಬ್ರೌನ್‌ ತಿಳಿಸಿದ್ದಾರೆ. 

ಆದರೆ ಆತನ ವಿರುದ್ಧ ಎಲ್ಲ ಆರೋಪಗಳು ಸಾಬೀತಾಗಬೇಕು. ಆರ್ಥಿಕ ಅಪರಾಧಿಗಳಿಗೆ ಆಂಟಿಗುವಾ ಎಂದೂ ಸುರಕ್ಷಿತ ತಾಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೆಹುಲ್‌ ಚೋಕ್ಸಿಗೆ ವಾದ ಮಂಡಿಸಲು ಅವಕಾಶ ನೀಡಬೇಕು. ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಬ್ರೌನ್‌ ವಿವರಿಸಿದ್ದಾರೆ. 

ಕಾನೂನು ರೀತಿಯ ಕ್ರಮಗಳು ಪೂರ್ಣಗೊಂಡ ನಂತರ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಆಂಟಿಗುವಾದ ಆಂಟಿಗುವಾ ಪ್ರಧಾನಿ ಗ್ಯಾಸ್ಟನ್‌ ಬ್ರೌನ್‌ ತಿಳಿಸಿದ್ದಾರೆ. ಅಂದು ಕೊಂಡಂತೆ ಎಲ್ಲವೂ ನಡೆದರೆ ಅತೀ ಶೀಘ್ರದಲ್ಲೇ ಭ್ರಷ್ಟ ಉದ್ಯಮಿಗೆ ಶಿಕ್ಷೆಯಾಗಲಿದೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!