ಮೋದಿಯ ಭರ್ಜರಿ ಗೆಲುವಿನ ಬಳಿಕ ಇದೀಗ ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ತನಿಖಾ ಸಂಸ್ಥೆ

ಲೋಕಸಭಾ ಚುನಾವಣೆ 2019 ರ ಸಲುವಾಗಿ ಭಾರೀ ಹೈಡ್ರಾಮಾ ಸೃಷ್ಟಿಸಿ ಪ್ರಧಾನಿ ಮೋದಿ ವಿರುದ್ಧ ದೇಶದ ಜನರಲ್ಲಿ ಆಕ್ರೋಶ ಉಂಟುಮಾಡಲು ಹಾಗು ತನ್ನ ರಾಜಕೀಯ ದುರುದ್ದೇಶದಿಂದ 2019 ರಲ್ಲಿ ಮಹಾಗಟಬಂಧನ್ ಮೂಲಕ ತಾನೇ ಪ್ರಧಾನಿಯಾಗಬೇಕು ಎಂಬ ಕನಸು ಕಂಡಿದ್ದ ಮಮತಾ ಬ್ಯಾನರ್ಜಿಗೆ ಈ ಲೋಕಸಭಾ ಚುನಾವಣೆಯ ಫಲಿತಾಂಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ.‌

2019 ರ ಲೋಕಸಭಾ ಚುನಾವಣೆಗಾಗಿ ಬಿಜೆಪಿಯನ್ನ ಸೋಲಿಸಲು ಇನ್ನಿಲ್ಲದ ಕಸರತ್ತುಗಳನ್ನ ಮಮತಾ ಬ್ಯಾನರ್ಜಿ ನಡೆಸಿದ ಬಳಿಕವೂ ಪಶ್ಚಿಮ ಬಂಗಾಳದಲ್ಲಿ 2014 ರಲ್ಲಿ ಎರಡು ಸೀಟುಗಳಿದ್ದ ಬಿಜೆಪಿ ಈ ಬಾರಿ ಬರೋಬ್ಬರಿ 18 ಸೀಟುಗಳನ್ನ ಗೆದ್ದು ಬೀಗಿದೆ. ಒಟ್ಟು 42 ಲೋಕಸಭಾ ಕ್ಷೇತ್ರಗಳ ಪೈಕಿ ಕಳೆದ ಬಾರಿ ಟಿಎಂಸಿ 32 ಸ್ಥಾನಗಳನ್ನ ಗೆದ್ದಿತ್ತು ಆದರೆ ಈ ಬಾರಿ ಈ ಸಂಖ್ಯೆ 22 ಕ್ಕೆ ಕುಸಿದಿದೆ. ರಾಜಕೀಯವಾಗಿ ಕುಗ್ಗುತ್ತಿರುವ ಮಮತಾ ಬ್ಯಾನರ್ಜಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ನೂರಾರು ಕೋಟಿ ಹಗರಣವಾದ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಮಮತಾ ಬ್ಯಾನರ್ಜಿ ಹಾಗು ಆಕೆಯ ಪಕ್ಷದ ಹಲವು ಮುಖಂಡರ ಜೊತೆಗೆ ಕೋಲ್ಕತ್ತಾ ಪೋಲಿಸರ್ ಕಮಿಷನರ್ ರಾಜೀವ್ ಕುಮಾರ್ ಹೆಸರು ಕೂಡ ಕೇಳಿ ಬಂದಿದ್ದವು. ಲೋಕಸಭಾ ಚುನಾವಣೆಗೆ ಮುನ್ನ ಸಿಬಿಐ ರಾಜೀವ್ ಕುಮಾರ್‌ರನ್ನ ವಿಚಾರಣೆ ನಡೆಸಲು ಕೊಲ್ಕತ್ತಾ ತಲುಪಿತ್ತು.

ಆದರೆ ಆತನ ವಿಚಾರಣೆ ನಡೆಸಲು ಸಿಬಿಐ ತೆರಳಿದ್ದಕ್ಕೆ ಕೆಂಡಾಮಂಡಲವಾಗಿದ್ದ ಮಮತಾ ಬ್ಯಾನರ್ಜಿ ಧರಣಿ ಕೂತಿದ್ದಳು. ಬಳಿಕ ಈ ವಿಚಾರ ಸುಪ್ರೀಂಕೋರ್ಟ್ ಗೂ ತಲುಪಿತ್ತು. ಇದೀಗ ಸುಪ್ರೀಂಕೋರ್ಟ್ ಸಿಬಿಐಗೆ ರಾಜೀವ್ ಕುಮಾರ್ ವಿಚಾರಣೆ ನಡೆಸಲು ಅನುಮತಿ ಕೊಟ್ಟಿದೆ. ಇದರಿಂದ ಮಮತಾ ಬ್ಯಾನರ್ಜಿಯ ಪಿತ್ತ ಮತ್ತೆ ನೆತ್ತಿಗೇರಿದೆ.

ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ ಆಪ್ತ, ಮಾಜಿ ಪೊಲೀಸ್​ ಕಮಿಷನರ್​​ ರಾಜೀವ್ ಕುಮಾರ್​ ದೇಶ ಬಿಟ್ಟು ತೆರಳದಂತೆ ನಿನ್ನೆ ಸಿಬಿಐ ಏರ್​ಪೋರ್ಟ್​ ಅಧಿಕಾರಿಗಳಿಗೆ ನೋಟಿಸ್​ ನೀಡಿತ್ತು. ಈಗ ಇದರ ಬೆನ್ನಲ್ಲೆ ಇಂದು ರಾಜೀವ್​ ಕುಮಾರ್​ರನ್ನ ಸಿಬಿಐ ತಂಡ ಬಂಧಿಸಿ ಶಾರದಾ ಚಿಟ್​ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದೆ ಎನ್ನಲಾಗಿದೆ.

ಅಲ್ಲದೇ ಈ ಹಿಂದೆ ರಾಜೀವ್​ರನ್ನ ತನಿಖೆ ಮಾಡಲು ಅವರ ಆಫೀಸ್​ ಮತ್ತು ಮನೆಗೆ ತೆರಳಿದ್ದಾಗ ಸಿಎಂ ಮಮತಾ ಬ್ಯಾನರ್ಜಿ 70 ಗಂಟೆ ಕಾಲ ಪ್ರತಿಭಟನೆ ಮಾಡಿದ್ದರು. ಸದ್ಯ ಇದು ಸಹ ತನಿಖೆಯಲ್ಲಿ ಪ್ರಮುಖವಾದ ಅಂಶವಾಗಿದ್ದರಿಂದ ವಿಚಾರಣೆಯಲ್ಲಿ ಈ ಬಗ್ಗೆನೂ ಪ್ರಶ್ನೆಗಳನ್ನ ಕೇಳಲಾಗುತ್ತದೆ ಅಂತ ತಿಳಿದುಬಂದಿದೆ. ರಾಜೀವ್​ 1989ರ ಐಪಿಎಸ್​ ಬ್ಯಾಚ್​ನ ಅಧಿಕಾರಿಯಾಗಿದ್ದು, ಪೋಂಜಿ ಸ್ಕ್ಯಾಮ್​ನಲ್ಲಿಯೂ ಪ್ರಮುಖ ಆರೋಪಿ ಅಂತ ಹೆಸರು ಕೇಳಿ ಬಂದಿದೆ.

ಶಾರದಾ ಚಿಟ್​ ಫಂಡ್​ ಕೇಸ್​​ಗೆ ಸಂಬಂಧಿಸಿದಂತೆ ಪ್ರಮುಖ ದಾಖಲೆ ನಾಶಪಡಿಸಿದ ಆರೋಪ ರಾಜೀವ್​ ಅವರ ಮೇಲಿದೆ. ಈ ಕುರಿತು ತನಿಖೆಗೆಂದು ಇದೇ ಫೆಬ್ರವರಿಯಲ್ಲಿ ರಾಜೀವ್​ ಮನೆಗೆ ಸಿಬಿಐ ತಂಡ ತೆರಳಿತ್ತು. ಈ ವೇಳೆ ಸಿಎಂ ದೀದಿ, ಧರಣಿ ಮಾಡಿ ತನಿಖೆಗೆ ಅಡ್ಡಿ ಪಡಿಸಿ, ಇದು ‘ಸಾಂವಿಧಾನಿಕ ನಿಯಮಗಳ ಮೇಲೆ ದಾಳಿ’ ಎಂದು ಕರೆದಿದ್ದರು.

Leave a Reply

Your e-mail address will not be published. Required fields are marked *

error: Content is protected !!