ಐಟಿ ದಿಗ್ಗಜ‌ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಧಾನಿ ಮೋದಿಯ ಯಾವ ಕಾರ್ಯಕ್ಕೆ ಇಂಪ್ರೆಸ್ ಆಗಿದಾರೆ? ಮೋದಿ ಬಗ್ಗೆ ಬಿಲ್ ಗೇಟ್ಸ್ ಏನ್ ಹೇಳಿದಾರಂತ ಕೇಳಿ

ಪ್ರಪಂಚದ ಎರಡನೆ ಅತೀ ಶ್ರೀಮಂತ, ಧನಕುಬೇರ ಹಾಗು ಮೈಕ್ರೋಸಾಫ್ಟ್ ಕಂಪೆನಿಯ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಟ್ವೀಟ್ ಮಾಡಿ ಗೆಲುವಿನ ಶುಭಾಷಯಗಳನ್ನ ತಿಳಿಸಿದ್ದಾರೆ. ಬಿಲ್ ಗೇಟ್ಸ್ ಟ್ವೀಟ್ ಮಾಡಿ “ನರೇಂದ್ರ ಮೋದಿ, ಲೋಕಸಭಾ ಚುನಾವಣೆಯ ಭವ್ಯ ಗೆಲುವಿಗೆ ನಿಮಗೆ ಅಭಿನಂದನೆಗಳು. ಸ್ವಾಸ್ಥ್ಯ, ಪೋಷಣೆ ಹಾಗು ಅಭಿವೃದ್ಧಿಯಲ್ಲಿ ಸುಧಾರಣೆಗಾಗಿ ನಿಮ್ಮ ನಿರಂತರವಾದ ಪ್ರಯಿಬದ್ಧತೆ ಹಲವರ ಜೀವನದಲ್ಲಿ ಉಲ್ಲೇಖನೀಯ ಬದಲಾವಣೆ ತಂದಿದೆ” ಎಂದಿದ್ದಾರೆ

ಬಿಲ್ ಗೇಟ್ಸ್ ರವರ ಬಿಲೆಂಡಾ ಗೇಟ್ಸ್ ಫೌಂಡೇಶನ್ ಪ್ರಪಂಚದ ಅತಿ ದೊಡ್ಡ ಫೌಂಡೇಶನ್ ಆಗಿದ್ದು ಜನರ ಆರೋಗ್ಯ ಹಾಗು ಶಿಕ್ಷದ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಹಾಗು ಬಿಲ್ ಗೇಟ್ಸ್ ರವರು ತಮ್ಮ ಟ್ವೀಟ್ ನಲ್ಲಿ ಆರೋಗ್ಯ ಹಾಗು ಪೋಷಣೆಯ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಮೋದಿಯವರ ಪ್ರತಿಬದ್ಧತೆಯ‌ನ್ನ ಬಿಲ್ವ ಗೇಟ್ಸ್ ತಮ್ಮ ಟ್ವೀಟ್ ನಲ್ಲಿ ಶ್ಲಾಘಿಸಿದ್ದಾರೆ.

ಅಭೂತಪೂರ್ವ ಗೆಲುವಿನ ಬಳಿಕ ಮಾತನಾಡಿದ್ದ ಮೋದಿ ತಮ್ಮ ಭಾಷಣದಲ್ಲಿ ತಮ್ಮ ಈ ಗೆಲುವು “40 ಕೋಟಿ ಅಸಂಘಟಿತ ಕಾರ್ಮಿಕರ ಗೆಲುವಾಗಿದೆ, ಇವರೆಲ್ಲರಿಗೂ ಪೆನ್ಶನ್ ಜಾರಿ ಮಾಡುವಂತಹ ಕೆಲಸ ಮಾಡುವ ಸೌಭಾಗ್ಯ ನನಗೆ ಒದಗಿ ಬಂತು. ಈ ಜಯ ಆತ್ಮಸಮ್ಮಾನ, ಆತ್ಮಗೌರವದ ಜೊತೆ ಜೊತೆಗೆ ಒಂದು ಶೌಚಾಲಯಕ್ಕಾಗಿ ಪರದಾಡುತ್ತಿದ್ದ ಒಬ್ಬ ತಾಯಿಯ ಗೆಲುವಾಗಿದೆ. 4-5 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ದುಡ್ಡಿಲ್ಲದೆ ಚಿಕಿತ್ಸೆ ಮಾಡಿಸಿಕೊಳ್ಳಲಾಗದೆ ಒದ್ದಾಡಿ‌ ಬಳಿಕ ಈಗ ಉಚಿತ ಚಿಕಿತ್ಸೆ ಪಡೆಯುವಂತಾದ ನನ್ನ ಬಡವರಿಗೆ ಈ ಗೆಲುವು ಸಮರ್ಪಣೆ, ಇದು ಅವರ ಆಶೀರ್ವಾದದಿಂದ ಸಿಕ್ಕ ಗೆಲುವು” ಅಂದಿದ್ದರು.

ಭಾರತೀಯ ಜನತಾ ಪಕ್ಷ 3003 ಸೀಟುಗಳನ್ನ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ‌. ಅದೇ ಕಾಂಗ್ರೆಸ್ ಕೇವಲ 52 ಸೀಟುಗಳನ್ನ ಗೆದ್ದು ಎರಡನೆಯ ಸ್ಥಾನದಲ್ಲಿದೆ. ಡಿಎಂಕೆ, ಶಿವಸೇನಾ ಹಾಗು ವೈಎಸ್‌ಆರ್ ಕಾಂಗ್ರೆಸ್ ಕೂಡ ಭರ್ಜರಿ ಪ್ರದರ್ಶನ ತೋರಿಸುತ್ತ ಕ್ರಮವಾಗಿ 23, 18 ಹಾಗು 22 ಸೀಟುಗಳನ್ನ ಗೆದ್ದಿವೆ‌. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ 34 ಸೀಟುಗಳಿಂದ 22 ಸ್ಥಾನಕ್ಕೆ ಕುಸಿದಿದೆ. ಒರಿಸ್ಸಾದಲ್ಲಿ ಬಿಜೆಪಿಯ ಉತ್ತಮ ಪ್ರದರ್ಶನದಿಂದಾಗಿ ಬಿಜು ಜನತಾ ದಳ ಪಕ್ಷ 12 ಸ್ಥಾನಕ್ಕೆ ಕುಸಿದಿದೆ.

ಸಮಾಜವಾದಿ ಪಕ್ಷ ಹಾಗು ಬಹುಜನ ಸಮಾಜವಾದಿ ಪಕ್ಷ ಮಹಾಗಟಬಂಧನ್ ಮಾಡಿಕೊಂಡು ಚುನಾವಣೆ ಎದುರಿಸಿದರೂ 80 ಕ್ಷೇತ್ರಗಳ ಪೈಕಿ ಕೇವಲ 10 ಸ್ಥಾನಗಳನ್ನ ಮಾತ್ರ ಗೆದ್ದಿವೆ‌

– Team Google Guruu

Leave a Reply

Your email address will not be published. Required fields are marked *

error: Content is protected !!