ಪಶ್ಚಿಮ‌ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕೋಟೆಯನ್ನ ಧ್ವಂಸಗೊಳಿಸಿದ ಬಿಜೆಪಿ; ಮತ್ತೊಂದು ಐತಿಹಾಸಿಕ ಕ್ಷಣ ಬಿಜೆಪಿಗೆ

ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಪಡೆದು ಸಂಭ್ರಮಾಚರಣೆ ಆಚರಿಸಿತ್ತಿರುವ ಬಿಜೆಪಿಗೆ ಇದೀಗ ಪಶ್ಚಿಮ ಬಂಗಾಳದಿಂದ ಮತ್ತೊಂದು ಖುಷಿಯ ಸುದ್ದಿ ಬಂದಿದೆ‌. ಹೌದು ಬಿಜೆಪಿಯು ಮಂಗಳವಾರದಂದು ಪಶ್ಚಿಮ ಬಂಗಾಳದಲ್ಲಿನ ಭಾಟಪಾಡಾ ನಗರಪಾಲಿಕೆಯನ್ನ ಗೆದ್ದು ರಾಜ್ಯದ ತನ್ನ ಮೊಟ್ಟ ಮೊದಲ ನಗರಪಾಲಿಕೆ ನಿಯಂತ್ರಣವನ್ನ ತನ್ನ ಕೈ ವಶ ಮಾಡಿಕೊಂಡಿದೆ.

ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಭಾಟಪಾಡಾ ನಗರಪಾಲಿಕೆಯ ಬಹುತೇಕ ಕಾರ್ಪೋರೆಟ್‌ರಗಳು ಜನ ಬಿಜೆಪಿ ಸೆರ್ಪಡೆಯಾಗಿಬಿಟ್ಟಿದ್ದರು. ಈ ಎಲ್ಲಾ ಕಾರ್ಪೋರೆಟರ್‌ಗಳು ಮುಂಚೆ ತೃಣಮೂಲ ಕಾಂಗ್ರೆಸ್ (ಟಿಎಮ್‌ಸಿ) ಪಕ್ಷದವರಾಗಿದ್ದರು. ನಗರಪಾಲಿಕೆಯ ಕಾರ್ಯಕಾಲ 2020 ರವರೆಗಿದೆ. ಬೋರ್ಡ್‌ನ ಬೈಠಕ್ ನಲ್ಲಿ ಬಿಜೆಪಿಗೆ ನಗರಪಾಲಿಕೆಯ 34 ವಾರ್ಡ್ ಗಳ ಪೈಕಿ 26 ವೋಟುಗಳು ಸಿಕ್ಕಿವೆ.

ವೋಟಿಂಗ್ ಸಂದರ್ಭದಲ್ಲಿ 34 ಜನ ಕಾರ್ಪೋರೆಟರ್‌ಗಳ ಪೈಕಿ 8 ಜನ ಗೈರಾಗಿದ್ದರು. 26 ವೋಟುಗಳ ಮೂಲಕ ಭಾಟಪಾಡಾ ನಗರಪಾಲಿಕೆಯ ಮೇಲೆ ಬಿಜೆಪಿ ತನ್ನ ಅಧಿಕಾರವನ್ನ ಇದೀಗ ಪಡೆದುಕೊಂಡಿದೆ. ಈ ಹಿಂದಿದೆ ಭಾಟಪಾಡಾ ನಗರಪಾಲಿಕೆಯ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಆಡಳಿತವಿತ್ತು. ಬರಾಕಪುರ ಲೋಕಸಭೆಯ ಸಂಸದ ಅರ್ಜುನ್ ಸಿಂಗ್ ರವರ ಸಂಬಂಧಿಕ ಸೌರವ್ ಸಿಂಗ್ ರವರು ಉತ್ತರ 24 ಪರಗಣ್ ಜಿಲ್ಲೆಯಲ್ಲಿ ಭಾಟಪಾಡಾ ನಗರಪಾಲಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಭಾಟಪಾಡಾ ನಗರಪಾಲಿಕೆಯ ಮೇಲೆ ಗೆಲುವು ಸಾಧಿಸಿದ ಬಳಿಕ ಬಿಜೆಪಿ ಹಿರಿಯ ಮುಖಂಡ ಹಾಗು ಪಶ್ಚಿಮ ಬಂಗಾಳದ ಬಿಜೆಪಿ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ್ ರವರು ಮಾತಮಾಡುತ್ತ ರಾಜ್ಯದಲ್ಲಿ ಸಿಕ್ಕ ಗೆಲುವಿನ ಬಳಿಕ ಕಾರ್ಯಕರ್ತರು ರೆಸ್ಟ್ ಮೂಡ್‌ನಲ್ಲಿ ಕೂತಿಲ್ಲ. ನಮ್ಮ ಕಾರ್ಯಕರ್ತರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ ಎಂದು ಅವರು ತಿಳಿಸಿದರು.

– Team Google Guruu

Leave a Reply

Your e-mail address will not be published. Required fields are marked *

error: Content is protected !!