ಕರ್ನಾಟಕದಲ್ಲಿ ಬಿಜೆಪಿ 25+1 ಸೀಟ್ ಗೆಲ್ಲಲು ಪ್ರಮುಖ ಕಾರಣವೇನು? ಕಳೆದ ವರ್ಷ ಯಡಿಯೂರಪ್ಪ ಈ ಬಗ್ಗೆ ಏನು ಹೇಳಿದ್ದರು ಗೊತ್ತಾ?

ಕಳೆದ ವರುಷ ಕರ್ನಾಟಕ ವಿಧಾನಸಭೆಯಲ್ಲಿ ಬಿ.ಎಸ್.ವೈ ಹೇಳಿದ ಮಾತು ನಿಜವಾಗಿದೆ, ಸತತ ಒಂದು ವರುಷದಿಂದ ಮಾಡಿದ ಹೋರಾಟ, ಕಾರ್ಯತಂತ್ರಗಳು ಫಲ ನೀಡಿದೆ…

ಕರ್ನಾಟಕದ ಈ ಅಭೂತಪೂರ್ವ ವಿಜಯದ ಹಿಂದೆ ಮೋದಿ ಸುನಾಮಿ ಜೊತೆಗೆ ಮತ್ತೊಂದು ಕಾರಣ ಇದ್ದರೆ ಅದು ಯಡಿಯೂರಪ್ಪ ಎಂಬ ನಾಮಫಲ ಮಾತ್ರ.. ಹಿಡಿದ ಹಠ ಬಿಡುವುದಿಲ್ಲ ಯಡಿಯೂರಪ್ಪ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.. ಕಳೆದ ವರ್ಷದಿಂದಲೇ 22 ಸ್ಥಾನಗಳನ್ನು ಪಡೆದೇ ತೀರುತ್ತೇವೆ ಎಂದು ಬಾಯಲ್ಲಿ ಮಾತ್ರ ಹೇಳಿದ್ದು ಅಲ್ಲ, ಅದರ ಪ್ರಕಾರ ನಡೆದು ಮಾಡಿದ ಪ್ರಯತ್ನಗಳು ಫಲ ನೀಡಿ 25 + 1 ಸ್ಥಾನಗಳನ್ನು ನಾವು ಗೆದ್ದಿದ್ದೇವೆ..

ಸೋಲು ಕಾಣದಂತಹ ಮಲ್ಲಿಕಾರ್ಜುನ ಖರ್ಗೆಯನ್ನು ಮಖಾಡೆ ಮಲಗಿಸುವಲ್ಲಿ ಯಶಸ್ವಿಯಾಗಿದ್ದಾರೆ, ತನ್ನ ಆಪ್ತ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರನ್ನು ಕಲಬುರ್ಗಿ ಹಾಗೂ ಚಿಂಚೋಳಿಯ ಉಸ್ತುವಾರಿ ವಹಿಸಿ ವಿಜಯರೇಖೆಯನ್ನು ಬಿಜೆಪಿ ದಾಟುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತೆಲಂಗಾಣ ಉಸ್ತುವಾರಿಯಿಂದ ಬಿಜೆಪಿ ಅಲ್ಲಿ ಯಶ ಕಂಡಿದೆ ಹಾಗೂ ಬೆಂಗಳೂರು ಸೆಂಟ್ರಲ್ ವಿಜಯಗೊಳ್ಳುವಲ್ಲಿ ಸಫಲವಾಗಿದೆ.

ಮಹದೇವಪುರ ಕ್ಷೇತ್ರದಲ್ಲಿ ಬರೋಬ್ಬರಿ 60000 ಲೀಡ್ ಇದಕ್ಕೆ ಕಾರಣ. ತುಮಕೂರು ಕ್ಷೇತ್ರದಲ್ಲಿ ದೇವೇಗೌಡರನ್ನು ಹೇಗಾದರೂ ಸೋಲಿಸಬೇಕೆಂಬ ಕಾರಣದಿಂದ ತನ್ನ ಆಪ್ತ ಜಿ.ಎಸ್.ಬಸವರಾಜ್ ಅವರನ್ನು ಅಭ್ಯರ್ಥಿಯನ್ನಾಗಿಸಿ ವಿ.ಸೋಮಣ್ಣ ಹಾಗೂ ಜ್ಯೋತಿಗಣೇಶ್ ಮೂಲಕ ಕಾರ್ಯತಂತ್ರ ರೂಪಿಸಿದ್ದು ಇದೇ ಬಿ.ಎಸ್.ವೈ.

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಹಾಕಿದರೆ ಜೆಡಿಎಸ್ ಸುಲಭವಾಗಿ ವಿನ್ ಆಗ್ತಾದೆ ಎಂಬ ಕಾರಣಕ್ಕೆ ಸುಮಲತಾಗೆ ಬೆಂಬಲ ನೀಡಿ ಕುಮಾರಸ್ವಾಮಿ ಎದ್ದೇಳದಂತೆ ಮಾಡಿದ್ದು ಇದೇ ಯಡಿಯೂರಪ್ಪ. ಉತ್ತರ ಕರ್ನಾಟಕದಲ್ಲಿ ಯಡಿಯೂರಪ್ಪ ಅಲೆ ಇಲ್ಲದಿದ್ದರೆ ಈ ನಮೂನೆಯ ದಿಗ್ವಿಜಯ ಸಾಧ್ಯವಿಲ್ಲ ಎಂಬುದು ಜನರ ಮಾತು.. ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾದ ಲಿಂಗಾಯತ ಸಮುದಾಯದ ಮತಗಳು ಸಂಪೂರ್ಣವಾಗಿ ಬಿಜೆಪಿಗೆ ಬಿದ್ದದ್ದೇ ಇದಕ್ಕೆ ಸಾಕ್ಷಿ.

ಇನ್ನೂ ಕರಾವಳಿ ಭಾಗದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಯಶ್ಪಾಲ್ ಸುವರ್ಣ, ಮಟ್ಟಾರ್ ರತ್ನಾಕರ ಹೆಗ್ಡೆ ಮುಂತಾದ ನಾಯಕರುಗಳಿಗೆ ಜವಾಬ್ದಾರಿ ನೀಡಿ ಯುವಸಮೂಹವನ್ನು ಒಟ್ಟು ಮಾಡಿದ್ದು. ಬಿಲ್ಲವ ಸಮುದಾಯದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನೀಲ್ ಕುಮಾರ್ ಅವರಿಗೆ ಸರಕಾರದ ಮಟ್ಟದಲ್ಲಿ ಕ್ಯಾಬಿನೆಟ್ ದರ್ಜೆಯ ಹುದ್ದೆಯನ್ನು ನೀಡಿದ್ದು ಇದೆಲ್ಲವೂ ಯಡಿಯೂರಪ್ಪ ರವರ ದೂರದೃಷ್ಟಿಯ ಕಾರ್ಯತಂತ್ರದ ಫಲ ಅಂದ್ರೆ ತಪ್ಪಿಲ್ಲ.

ಯಾರು ಏನೇ ಹೇಳಲಿ ಕರ್ನಾಟಕದಲ್ಲಿ ಬಿಜೆಪಿಯ “ನ ಭೂತೋ” ಸಾಧನೆಯ ಹಿಂದೆ ಮೋದಿ ಹಾಗೂ ಬಿ.ಎಸ್.ವೈ ಕಾರಣ.. ಮತ್ತೊಮ್ಮೆ ಬಿ.ಎಸ್.ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿ ಆಗಿ ಕರ್ನಾಟಕ ಅಭಿವೃದ್ಧಿ ಆಗಲಿ, ದೇಶದಲ್ಲಿ ನಂಬರ್ ಒನ್ ರಾಜ್ಯ ಆಗಲಿ ಎಂಬ ಸದಾಶಯ ನಮ್ಮದು.

 

Leave a Reply

Your e-mail address will not be published. Required fields are marked *

error: Content is protected !!