ಕಣ್ಣಿಲ್ಲದ ಈ ನಿಗೂಢ ಮಹಿಳೆ ಹೇಳಿದ ಭವಿಷ್ಯ ಇದುವರೆಗೂ ಸುಳ್ಳಾಗಿಲ್ಲ! ಮೋದಿ, ಅಮೆರಿಕಾ ಮತ್ತು ರಷ್ಯಾ ಅಧ್ಯಕ್ಷರ ಬಗ್ಗೆ ಈಕೆ ನುಡಿದ ಭವಿಷ್ಯ ಕೇಳಿ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ

ಕಣ್ಣು ಕಾಣದಿದ್ದರೂ ಸಹ ವಿಶ್ವದ ಭವಿಷ್ಯವನ್ನು ನಿಖರವಾಗಿ ಹೇಳುವ ಈ ವೃದ್ದೆ ಇದುವರೆಗೂ ಹೇಳಿದ ಭವಿಷ್ಯಗಳಲ್ಲಿ ಯಾವುದು ಸುಳ್ಳಾಗಿಲ್ಲ ಅಷ್ಟಕ್ಕೂ ಈ ನಿಗೂಢ ಮಹಿಳೆ ಯಾರು ಗೊತ್ತೆ? ಈ ವೃದ್ಧೆಯ ಹೆಸರು ಬಾಬಾ ವಂಗಾ. ಆಕೆ ನುಡಿದ ಭವಿಷ್ಯಗಳು ಸತ್ಯವಾದ ನಂತರ ಎಲ್ಲರಿಗೂ ಭಯ ಹುಟ್ಟಿಸಿವೆ. 09/11 ರಂದು ಐಎಸ್ಐಎಸ್ ಉಗ್ರ ಸಂಘಟನೆಯು ಅಮೆರಿಕದ ಮೇಲೆ ದಾಳಿ ನಡೆಸುತ್ತದೆ ಎಂದು ಈಕೆ ಮೊದಲೆ ಹೇಳಿದ್ದರಂತೆ ಹಾಗೆಯೇ ನಡೆಯಿತು ಸಹ.

1996ರಲ್ಲೇ ಈ ಮಹಿಳೆ ಸ್ತನ ಕ್ಯಾನ್ಸರ್ ನಿಂದಾಗಿ ಬಲಿಯಾದ ಈ ಮಹಿಳೆ ಮುಂದಿನ 51ನೇ ಶತಮಾನದವರೆಗೂ ಏನೇನು ಘಟನೆ ನಡೆಯುತ್ತವೆ ಎಂಬುದನ್ನು ಇವರು ಈಗಾಗಲೆ ಭವಿಷ್ಯ ನುಡಿದಿದ್ದಾರಂತೆ. ಆಕೆ ಪ್ರಕಾರ, 51ನೇ ಶತಮಾನವು ಈ ಬ್ರಹ್ಮಾಂಡದ ಅಂತ್ಯ. ಅದಿರಲಿ, ಈ ವರ್ಷ 2019ನೇ ಇಸವಿಗೆ ಸಂಬಂಧಿಸಿದಂತೆ ಆಕೆ ಹೇಳಿದ ಭವಿಷ್ಯ ಏನು ಗೊತ್ತಾ?

 

ಬಾಬಾ ವಂಗಾ ಹುಟ್ಟಿದ್ದು ಮೆಸಿಡೋನಿಯಾ ಸ್ಟ್ರುಮಿಕಾದ ಪಂದೆವಾ ಡಿಮಿಟ್ರೋವಾದಲ್ಲಿ. ತನ್ನ ಹನ್ನೆರಡನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಕೆಲ ಕಾಲ ಆಕೆ ನಾಪತ್ತೆಯಾಗಿದ್ದರು. ಆ ನಂತರ ಪತ್ತೆಯಾದ ಮೇಲೆ ಮೊದಲ ಬಾರಿಗೆ ಭವಿಷ್ಯ ನುಡಿದರು. ಎರಡನೇ ಪ್ರಪಂಚ ಯುದ್ಧದ ಸಂದರ್ಭದಲ್ಲಿ ಆಕೆಯ ಹೀಲಿಂಗ್ ಮೂಲಕ ಹೆಸರು ಗಳಿಸಿದರು.

ಹಲವು ರಾಷ್ಟ್ರಗಳ ನಾಯಕರು ಆಕೆಯನ್ನು ಭೇಟಿ ಮಾಡಿದ್ದರು. ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ಭಯೋತ್ಪಾದನಾ ದಾಳಿಯು ಆಕೆ ನುಡಿದ ಭವಿಷ್ಯಗಳ ಪೈಕಿಯೇ ಹೆಚ್ಚು ಚಾಲ್ತಿಗೆ ಬಂದಿತು. ಭೀಕರ, ಭೀಕರ! ಅಮೆರಿಕದ ಮೇಲೆ ಲೋಕದ ಹಕ್ಕಿಗಳ ದಾಳಿಗಳಾಗುತ್ತವೆ. ತೋಳಗಳು ಕೂಗಿಡುತ್ತವೆ, ಅಮಾಯಕರ ರಕ್ತ ಹರಿಯುತ್ತದೆ’ ಎಂದು ಹೇಳಿದ್ದರು ವಂಗಾ.

 

ಇಡೀ ವರ್ಷ ಪ್ರಾಕೃತಿಕ ವೈಪರೀತ್ಯಗಳು ಸಂಭವಿಸುತ್ತವಂತೆ. ಆರ್ಥಿಕ ಸಂಕಷ್ಟಗಳು ಭಾರೀ ದೊಡ್ಡ ಪ್ರಮಾಣದಲ್ಲಿ ಎದುರಾಗುತ್ತವಂತೆ. ಇನ್ನು ಪ್ರಪಂಚದ ಅತಿ ದೊಡ್ಡ ಶಕ್ತಿ ಎಂದು ಪರಿಗಣಿಸುವ ಎರಡು ದೇಶಗಳ ನಾಯಕರ ಜೀವಕ್ಕೆ ಅಪಾಯವಿದೆಯಂತೆ. ಬಾಬಾ ವಂಗಾ ಪ್ರಕಾರ, ರಷ್ಯಾದ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ರ ರಕ್ಷಣೆಗೆ ಇರುವ ತಂಡವೇ ವರ್ಷದ 12 ತಿಂಗಳ ಒಳಗಾಗಿ ಅವರನ್ನು ಕೊಲ್ಲಲು ಯತ್ನಿಸುತ್ತದಂತೆ.

ತನ್ನ ಮೇಲೆ ನಾಲ್ಕು ಹತ್ಯಾಯತ್ನಗಳು ನಡೆದಿವೆ ಎಂದು ಸ್ವತಃ ಪುಟಿನ್ ಮಾಹಿತಿ ಬಯಲು ಮಾಡಿದ್ದರು. ಕಾವಲಿಗಾಗಿ ಸದಾ ಇರುವ ಶಸ್ತ್ರಸಜ್ಜಿತ ತಂಡದಿಂದ ಇಂಥ ಪ್ರಯತ್ನ ವಿಫಲವಾಗಿದೆ. ಕ್ಯೂಬಾದ ನಾಯಕ ಫಿಡೆಲ್ ಕ್ಯಾಸ್ಟ್ರೊ ಮೇಲೆ ಐವತ್ತಕ್ಕೂ ಹೆಚ್ಚು ಬಾರಿ ಹತ್ಯಾ ಯತ್ನಗಳು ನಡೆದಿದ್ದವು.

 

ಅಂಥದ್ದರಿಂದ ತಪ್ಪಿಸಿಕೊಂಡಿದ್ದ ಕ್ಯಾಸ್ಟ್ರೊ ಅವರು, ದಾಳಿಗಳಿಂದ ತಪ್ಪಿಸಿಕೊಳ್ಳುವ ಬಗ್ಗೆ ಪುಟಿನ್ ಗೆ ಸಲಹೆ ನೀಡಿದ್ದರಂತೆ. ‘ಅವರು ನನಗೆ ಹೇಳಿದ್ದರು. ‘ನಾನಿನ್ನೂ ಬದುಕಿದ್ದೇನೆ ಏಕೆ ಗೊತ್ತಾ?’ ನಾನು ಕೇಳಿದೆ ಏಕೆ? ‘ಏಕೆಂದರೆ ನನ್ನ ರಕ್ಷಣೆ ವಿಚಾರದ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸುತ್ತೀನಿ’ ಎಂಬುದಾಗಿ ತಿಳಿಸಿದ್ದರು’ ಎಂದು ಪುಟಿನ್ ಹೇಳಿಕೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಕೊನೆಯ ಅಧ್ಯಕ್ಷ ಹಾಗೂ ಅವರ ಅಧಿಕಾರ ಅವಧಿಯ ನಂತರ ಆ ರಾಷ್ಟ್ರದ ಸ್ಥಿತಿ ಅತಂತ್ರವಾಗಲಿದೆ ಎಂಬುದು ವಂಗಾ ಭವಿಷ್ಯವಾಗಿತ್ತು, ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಗೂಢವಾದ ಕಾಯಿಲೆಯಿಂದ ಬಳಲುತ್ತಾರೆ. ಕಿವಿ ಕೇಳಿಸದಿರುವುದು ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಎದುರಿಸುತ್ತಾರೆ ಎಂದು ವಂಗಾ ಭವಿಷ್ಯ ನುಡಿದಿದ್ದಾರೆ.

 

ಈಗಾಗಲೇ ಕ್ಯೂಬಾ ಹಾಗೂ ಚೀನಾದಲ್ಲಿರುವ ಅಮೆರಿಕದ ಅಧಿಕಾರಿಗಳಿಗೆ ಡೊನಾಲ್ಡ್ ಟ್ರಂಪ್ ವಿಚಾರದಲ್ಲಿ ಅಂಥ ಅನುಭವಗಳಾಗಿವೆ. ಅಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪತ್ತೆ ಹಚ್ಚಲಾಗದಂಥ ಕಾಯಿಲೆಗಳು ಬರುತ್ತವೆ. ಅದರಿಂದ ಅವರ ಜೀವಕ್ಕೆ ಅಪಾಯ ಇದೆ ಅಂತ ಅಲ್ಲವೆ? ಇದು ಬಾಬಾ ವಂಗಾ ಹೇಳಿದ ಭವಿಷ್ಯ.

ಯುರೋಪಿಯನ್ ಒಕ್ಕೂಟದಲ್ಲಿ ಆರ್ಥಿಕ ಕುಸಿತ ಕಾಣಿಸಿಕೊಳ್ಳಲಿದೆ ಎಂಬ ಬಗ್ಗೆ ಆಕೆ ಭವಿಷ್ಯ ನುಡಿದಿದ್ದಾರೆ. ರಷ್ಯಾ ದೇಶದಲ್ಲಿ ಆಕಾಶಕಾಯವೊಂದು ಭಾರೀ ಅನಾಹುತ ಸೃಷ್ಟಿಸಲಿದೆಯಂತೆ. ಬೆನು ಆಕಾಶಕಾಯದಿಂದ ಬಾಹ್ಯಾಕಾಶ ದೂಳು ಮಾದರಿಯನ್ನು ಈ ವರ್ಷದ ಆರಂಭದಲ್ಲಿ ಸಂಗ್ರಹ ಮಾಡಿತ್ತು ನಾಸಾ. ಅದರ ಪ್ರಕಾರ, ಆ ಆಕಾಶಕಾಯದಿಂದ ಸದ್ಯಕ್ಕೆ ಭೂಮಿಗೆ ಯಾವುದೇ ಅಪಾಯವಿಲ್ಲ. ಆದರೆ ಬಾಬಾ ವಂಗಾ ನುಡಿದ ಭವಿಷ್ಯದ ಪ್ರಕಾರ 2019ರಲ್ಲಿ ರಷ್ಯಾದಲ್ಲಿ ಆಕಾಶಕಾಯವೊಂದು ಅನಾಹುತ ಸೃಷ್ಟಿಸಲಿದೆ. ಒಟ್ಟಿನಲ್ಲಿ ಅದೇನು ಕಾದಿದೆಯೋ?

 

ಇಡೀ ವಿಶ್ವ 2043ರ ವೇಳೆಗೆ ಭಯೋತ್ಪಾದಕರ ವಶವಾಗಲಿದೆ, 2066ರಲ್ಲಿ ಉಗ್ರಗಾಮಿಗಳು ಸರ್ವನಾಶವಾಗಲಿದ್ದಾರೆ, ಒಬಾಮಾ  ಅಮೆರಿಕದ ಕಟ್ಟಕಡೆಯ ಅಧ್ಯಕ್ಷ ಹಾಗೂ ಅವರ ಅಧಿಕಾರ ಅವಧಿಯ ನಂತರ ಜಗತ್ತಿನ ಅತ್ಯಂತ ಬಲ ಮತ್ತು ಶ್ರೀಮಂತ ರಾಷ್ಟ್ರ ಅಮೆರಿಕ ಅತಂತ್ರವಾಗಲಿದೆ-ಇದು ಬಲ್ಗೇರಿಯಾದ ಪ್ರವಾದಿ ಅಂಧ ವೃದ್ಧೆ ಬಾಬಾ ವಂಗಾ ನುಡಿದಿರುವ ಆತಂಕಕಾರಿ ಭವಿಷ್ಯವಾಣಿ ಎಲ್ಲರಲ್ಲೂ ಆತಂಕ ಮೂಡಿಸಿದೆ.

1996ರಲ್ಲಿ 85ನೇ ವಯಸ್ಸಿನ ಬಾಬಾ ವಂಗಾ ನಿಧಾನರಾದರು. ಅವರು ಸಾಯುವುದಕ್ಕೂ ಮುನ್ನ ಅನೇಕ ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದು , ಜಗದ್ವಿಖ್ಯಾತ ಜ್ಯೋತಿಷಿ ನಾಸ್ಟ್ರೊಡೊಮಸ್ ಅವರ ಭವಿಷ್ಯವಾಣಿಯಂತೆ ಇವರ ಮುನ್ಸೂಚನೆಗಳು ನಿಖರವಾಗಿದ್ದೂ ಭಾರತದ ಒಬ್ಬ ವ್ಯಕ್ತಿ ತನ್ನ ತೇಜಸ್ಸಿನ ಮೂಲಕ ಇಡೀಯ ವಿಶ್ವವನ್ನೇ ಆಳಲಿದ್ದಾನೆ ಎಂದು ವಿಶ್ಲೇಷಿಸಲಾಗಿದೆ.

– Team Google Guruu

Leave a Reply

Your email address will not be published. Required fields are marked *

error: Content is protected !!