ಮೊದಲ ಬಾ’ರಿಗೆ ರೈಲಿನಲ್ಲಿ ಪ್ರ’ಯಾಣಿಸುತ್ತಿದ್ದ 21 ವರ್ಷದ ಈ ಸುಂ’ದರ ಯುವತಿಯ ಕಥೆ ಕೇಳಿದರೆ ನಿಮ್ಮ ಮನ ಕಲಕುತ್ತೆ

ಒಮ್ಮೆ 21 ವರ್ಷದ ಬಾಲಕಿ ಮತ್ತು ಅವಳ ತಂದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆ ಪುಟ್ಟ ಹುಡುಗಿ ನಿರಂತರವಾಗಿ ರೈಲಿನ ಕಿಟಕಿಯಿಂದ ಇಣುಕಿ ಹೊರ ನೋಡಿ ರೈಲಿನ ಬದಿಯಲ್ಲಿ ಪಾಸಾಗುತ್ತಿರುವ ಮರ, ಗುಡ್ಡ ಗಾಡು ಪ್ರದೇಶಗಳನ್ನು ನೋಡುತ್ತಾ ಆನಂದಿಸುತ್ತಿದ್ದಳು. ಮರಗಳು ಕಂಡಾಗ ಹಾಗೂ ಗಾಳಿಯ ಬೀಸುತ್ತಿರುವುದನ್ನು ಕಂಡು ಜೋರಾಗಿ ಕಿರುಚುತ್ತಾ ಸಂಭ್ರಮ ವ್ಯಕ್ತಪಡಿಸುತ್ತಿದ್ದಳು.

ಆ ಹುಡುಗಿಯ ತಂದೆ ತನ್ನ ಮಗಳಿಗೆ ಮರಗಳು ಅಂದ್ರೆ ಇವುಗಳು, ಮೋಡಗಳ ಪರಿಚಯ ಗಾಳಿಯ ಕುರಿತಾಗಿ ಹೇಳುತ್ತಿದ್ದರು, ನಾವು ಚಲಿಸುವ ರೈಲಿನ ಜೊತೆ ಮೋಡಗಳು ಚಲಿಸುತ್ತಿವೆ ಎಂದು ಹೇಳುತ್ತಿದ್ದರು, ಆಗ ಹತ್ತಿರ ಕುಳಿತ ವಿವಾಹಿತ ದಂಪತಿಗಳು ಇದೆಲ್ಲವನ್ನೂ ನೋಡಿ ತಂದೆ ಮಗಳಿಗೆ ಹೇಳುವ ಮಾತುಗಳನ್ನು ಕೇಳಿ ಅಪಹಾಸ್ಯ ಮಾಡಿ ನಗುತ್ತಿದ್ದರು.

ತಂದೆ ಮಗಳ ಈ ಮಾತುಗಳು ಅವರಿಗೆ ಹುಚ್ಚುತನ ಎಂದೆನಿಸಿತು ಆಗ ಆ ವಿವಾಹಿತ ದಂಪತಿಗಳು ಸಹಿಸಲಿಲ್ಲ ಆಗ ಹುಡುಗಿಯ ತಂದೆಯೊಂದಿಗೆ ಮಾತನಾಡಿಸಿ ನಿಮ್ಮ ಮಗಳಿಗೆ ಈ 21 ವಯಸ್ಸಿನಲ್ಲೂ ಇವೆಲ್ಲ ಅರ್ಥವಾಗಲಿಲ್ಲವೆಂದರೆ ಆಕೆಯನ್ನು ಮಾನಸಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಎಂದರು.

ಇದನ್ನು ಕೇಳಿದ ಹುಡುಗಿಯ ತಂದೆ ಗದ್ಘದಿತನಾಗಿ ಉತ್ತರಿಸಿದರು, ಹೌದು ನಾವು ಈಗ ಆಸ್ಪತ್ರೆಯಿಂದಲೇ ಬರುತ್ತಿದ್ದೇವೆ ಆದರೆ ಮಾನಸಿಕ ಆಸ್ಪತ್ರೆಯಿಂದ ಅಲ್ಲ ಬದಲಾಗಿ ಕಣ್ಣಿನ ಆಸ್ಪತ್ರೆಯಿಂದ, ನನ್ನ ಮಗಳಿಗೆ ಹುಟ್ಟಿದಾಗಿನಿಂದ ಕಣ್ಣು ಕಾಣುತ್ತಿರಲಿಲ್ಲ ಹೀಗಾಗಿ ಆಕೆಗೆ ಯಾವುದನ್ನು ನೋಡಲು ಸಾಧ್ಯವಾಗುತ್ತಿಲ್ಲ ಇದೀಗ ನಾವು ಆಕೆಗೆ ಚಿಕಿತ್ಸೆ ಕೊಡಿಸಿದ್ದೆವೆ ಈಗ ದೃಷ್ಟಿ ಬಂದಿದೆ ಎಂದರು.

ವೈದ್ಯರ ಯಶಸ್ವಿ ಆಪರೇಷನ್ ನಿಂದಾಗಿ ನನ್ನ ಮಗಳು ಈ ಜಗತ್ತು ನೋಡುವಂತಾಗಿದೆ ಹೀಗಾಗಿ ನಾನು ಅವಳಿಗೆ ಪ್ರತಿಯೊಂದು ವಸ್ತುವಿನ ಪರಿಚಯ ಮಾಡಿಸುತ್ತಿದ್ದೆನೆ ಎಂದು ಆ ಯುವತಿಯ ತಂದೆ ಅಲ್ಲಿದ್ದ ನವ ದಂಪತಿಗೆ ಹೇಳಿದರು ಆಗ ಆ ದಂಪತಿಗಳು ಒಂದು ಕ್ಷಣ ಮೂಕ ವಿಸ್ಮಿತರಾಗಿ ಸುಮ್ಮನಾದರು.

ಈ ಅಂಕಣದಿಂದ ನಾವು ಇತರರನ್ನು ಅವಸರದಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ, ಅದರ ಹಿಂದಿನ ಕಾರಣ ತಿಳಿಯದೆ ತಪ್ಪಾಗಿ ಇನ್ನೊಬ್ಬರ ಮೇಲೆ ಹಿಯಾಳಿಕೆ ಮಾತುಗಳನ್ನಾಡುತ್ತೆ, ಈ ರೀತಿಯಾಗಿ ಎಂದಿಗೂ ಯೋಚಿಸುವ ಮೊದಲು ನಾವು ಸಂಪೂರ್ಣವಾಗಿ ಗಮನಿಸಿ ತಿಳಿದುಕೊಂಡು ಮಾತನಾಡುವುದು ಉತ್ತಮ. ಇನ್ನೊಬ್ಬರಿಗೆ ಬೇಸರವಾಗದಂತೆ ನಡೆದುಕೊಳ್ಳಬೇಕು.

ಕೆಲವರಿಗೆ ಜೀವನ ತುಂಬಾ ಪಾಠ ಕಲಿಸಿ ತುಂಬಾ ದುಃಖಿಯಾಗಿಸಿ ಬಿಟ್ಟಿರುತ್ತೆ ಅಂಥವರಿಗೆ ನಾವು ಅನವಶ್ಯಕ ಹೇಳಿಕೆಯಿಂದ ಇನ್ನಷ್ಟು ದುಃಖ ನೀಡಿ ಅವರಿಗೆ ಬೇಸರ ಮಾಡುವುದು ಎಷ್ಟು ಸರಿ.? ಸಾಧ್ಯವಾದರೆ ಎಲ್ಲರಿಗೂ ಖುಷಿ ಹಂಚೋಣ ಇಲ್ಲವಾದರೇ ಸುಮ್ಮನಿರೋಣ ಈ ಒಂದು ಅಂಶ ಪ್ರತಿಯೊಬ್ಬರು ಪಾಲಿಸಿ, ಇತರರಿಗೂ ತಿಳಿಸಿ.

-Team Google Guru

Leave a Reply

Your e-mail address will not be published. Required fields are marked *

error: Content is protected !!