ಮಗನ ಅಂತಿಮ ಸಂಸ್ಕಾರ ಮಾಡುವ ಮುನ್ನ ಕಾಲಭೈರವನನ್ನ ಪ್ರಾರ್ಥಿಸಿದ ತಂದೆ; ಚಿತೆಗೆ ಬೆಂಕಿಯಿಡುವ ಮುನ್ನವೇ ಶಿವನ ಚಮತ್ಕಾರದಿಂದ ಎದ್ದು ಕುಳಿತ ಮಗ

ಭೂಮಂಡಲದಲ್ಲಿ ದೇವರಿದ್ದಾನಾ? ನಿಮ್ಮ ಕಣ್ಣಿಗೆ ಕಾಣಿಸಿದ್ದಾನಾ? ದೇವರಿರುವ ಬಗ್ಗೆ ನಿಮಗೆ ಎಂದಾದರೂ ಅನುಭವವಾಗಿದೆಯಾ? ದೇವರಿದ್ದಾನೆ ಆದರೆ ನಾವು ದೇವರ ರೂಪದಲ್ಲಿ ಕಾಣುವ ಪ್ರತಿರೂಪದಲ್ಲೇ ನಮಗೆ ದೇವರು ಕಾಣಬೇಕು ಅಂತೇನೂ ಇಲ್ಲ, ದೇವರಿದ್ದಾನೆ, ಜನರ ಸಂಕಷ್ಟಗಳನ್ನ ದೂರ ಮಾಡಲು ದೇವರು ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ.

ಅಂತಹುದ್ದೇ ಒಂದು ವಿಸ್ಮಯಕಾರಿ ಘಟನೆಯೊಂದನ್ನ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಇದನ್ನ ನೀವು ಪ್ರಕೃತಿಯ ವಿಸ್ಮಯ ಅಂತನ್ನುತ್ತೀರೋ ಅಥವ ದೇವರ ಚಮತ್ಕಾರ ಅನ್ನುತ್ತೀರೋ. ಚಂಡೀಗಢ ನ PGI ಡಾಕ್ಟರ್ ನಿಂದ ಮೃತ ವ್ಯಕ್ತಿಯೆಂದು ಘೋಷಣೆಯಾದ 8 ಗಂಟೆಗಳ ಬಳಿಕ ಯುವಕನೊಬ್ಬನಿಗೆ ಮತ್ತೆ ಜೀವ ಬಂದಿದೆ. ಆಸ್ಪತ್ರೆಯ ಫಾರ್ಮಾಲಿಟಿಸ್ ಪೂರ್ಣಗೊಳಿಸಿದ ಬಳಿಕ ಯುವಕನ ಶವವನ್ನ ಕುಟುಂಬಸ್ಥರು ಮನೆಗೆ ಕೊಂಡೊಯ್ಯಬಹುದು ಎಂದು ಆಸ್ಪತ್ರೆ ತಿಳಿಸಿತ್ತು.

ಆಸ್ಪತ್ರೆಯ ಬಿಲ್ ಕಟ್ಟಿ ಅಲ್ಲಿ ಫಾರ್ಮಾಲಿಟಿಸ್ ಮುಗಿಸಿ ಮನೆಗೆ ಶವ ಕೊಂಡೊಯ್ದ ಕುಟುಂಬ ಆ ಯುವಕನ ಅಂತಿಮ‌ ಸಂಸ್ಕಾರಕ್ಕಾಗಿ ಸಕಲ ಸಿದ್ಧತೆಗಳನ್ನ ಆರಂಭಿಸಿದ್ದರು. ಅಂತಿಮ ಸಂಸ್ಕಾರದ ತಯಾರಿಯ ಸಮಯದಲ್ಲೇ 10 ನೆಯ ತರಗತಿಯಲ್ಲಿ ಓದುತ್ತಿದ್ದ 15 ವರ್ಷದ ಯುವಕ ಗುರುತೇಜ್ ಸಿಂಗ್ ನ ಪ್ರಾಣ ಪಕ್ಷಿ ಮತ್ತೆ ವಾಪಸ್ ಬಂದಿತ್ತು. ಇದನ್ನ ನೋಡಿದ ಬಳಿಕ ಕುಟುಂಬಸ್ಥರು ಒಂದು ಕ್ಷಣ ದಂಗಾಗಿಬಿಟ್ಟರು.

ಕುಟುಂಬಸ್ಥರ, ಯುವಕನ ತಂದೆ ತಾಯಿಯ ಖುಷಿಗೆ ಪಾರವೇ ಇರಲಿಲ್ಲ‌. ಕುಟುಂಬಸ್ಥರು PGI ಡಾಕ್ಟರ್ ನ ಮೇಲೆ ನಿರ್ಲಕ್ಷ್ಯದ ಆರೋಪವನ್ನ ಹೊರಿಸಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಪಕ್ಖೋಕಲಾ ಹಳ್ಳಿಯ ನಿವಾಸಿಯಾಗಿರುವ ಸಿಂಗಾರಾ ಸಿಂಗ್ ರವರ 15 ವರ್ಷದ ಪುತ್ರ ಗುರುತೇಜ್ ಸಿಂಗ್ ಕೆಲ ದಿನಗಳಿಂದ ತನ್ನ ಕಣ್ಣಿನ ದೃಷ್ಟಿ ಸರಿಯಾಗಿ ಕಾಣುತ್ತಿಲ್ಲ ಎಂದು ಬಠಿಂಡಾ ದ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದ.

ಬಳಿಕ ಡಾಕ್ಟರ್ ಗಳು‌ ಯುವಕನ ತಲೆಯಲ್ಲಿ ಗಂಭೀರ ಸನಸ್ಯೆಯಿರುವುದಾಗಿ ತಿಳಿಸಿ ಆತನನ್ನ DMC ಲುಧಿಯಾನಾ ಹಾಗು ಬಳಿಕ PGI‌ ಚಂಡೀಗಢ್ ಗೆ ರೆಫರ್ ಮಾಡಿ ಕಳಿಸಿದರು. ಜನೇವರಿ 10 ರಂದು ಆತನನ್ನ ಚಂಢೀಗಢ್ ನ‌ PGI ನಲ್ಲಿ‌ ಅಡ್ಮಿಟ್ ಮಾಡಲಾಯಿತು. ಆದರೆ ಜನೇವರಿ 11 ರ ಬೆಳಿಗ್ಗೆಯೇ ಡಾಕ್ಟರ್ ಗಳು ಯುವಕ‌ ಮೃತಪಟ್ಟಿದ್ದಾನೆಂದು ಡಿಕ್ಲೇರ್ ಮಾಡಿಬಿಟ್ಟರು. ಆದರೆ ಯುವಕನ ಡೆತ್ ಸರ್ಟಿಫಿಕೇಟ್ ಮಾತ್ರ ತಂದೆಗೆ ಕೊಡಲಿಲ್ಲ.

ಹೀಗಾಗಿ ಆತನ ಟ್ರೀಟಮೆಂಟ್ ನಡೆಸಿದ ಡಾಕ್ಟರ್ ಹೆಸರು ಯುವಕನ ತಂದೆಗೆ ಗೊತ್ತಿರಲಿಲ್ಲ. ತನ್ನ ಮಗ ಸತ್ತಿದ್ದಾನೆ ಅಂತ ಆ ತಂದೆಯೂ ಅಂದುಕೊಂಡಿದ್ದರು, ಮನೆಯಲ್ಲಿ ಗುರುತೇಜ್ ನ ಅಂತಿಮ ಸಂಸ್ಕಾರಕ್ಕಾಗಿ ಸಕಲ ತಯಾರಿಗಳೂ ನಡೆದವು. ಶವದ ಬಟ್ಟೆಯನ್ನ ಬದಲಿಸಲು ತಯಾರಿ ನಡೆಯಿತು, ಬಳಿಕ ಆತನ ಶವವನ್ನ ಅಂತಿಮ ಸಂಸ್ಕಾರಕ್ಕಾಗಿ ಸ್ಮಶಾನಕ್ಕೂ ತರಲಾಯಿತು. ಬಾಲಕನ ತಂದೆ ಮಹಾಕಾಲ ಶಿವನನ್ನ ಬೇಡಿಕೊಳ್ಳುತ್ತ ಸ್ಮರಣೆ ಮಾಡುತ್ತಿದ್ದರು.

ಇನ್ನೇನು ಚಿತೆಗೆ ಅಗ್ನಿ ಸ್ಪರ್ಶ ಮಾಡಬೇಕು ಅಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಬಾಲಕನ ಮನೆಯ ಪಕ್ಕದ ವ್ಯಕ್ತಿ ಸತನಾಮ್ ಸಿಂಗ್ ರವರಿಗೆ ಗುರುತೇಜ್ ನ ಎದೆ ಬಡಿತ ಶುರುವಾಗಿರುವ ದೃಶ್ಯ ಕಂಡು ಬಂತು. ತಕ್ಷಣವೇ ಈ ವಿಷಯವನ್ನ ಅವರು ಗುರುತೇಜ್ ನ ತಂದೆ ಸಿಂಗಾರಾ ಸಿಂಗ್ ರಿಗೆ ತಿಳಿಸಿದರು. ಆ ದೃಶ್ಯವನ್ನ ಕಂಡ ತಂದೆ ಹಾಗು ಕುಟುಂಬಸ್ಥರು ಒಂದು ಕ್ಷಣ ದಂಗಾಗಿಬಿಟ್ಟಿದ್ದರು. ತಕ್ಷಣವೇ ಹತ್ತಿರದ ಕೆಮಿಸ್ಟ್ ಗೆ ಸ್ಥಳಕ್ಕೆ ಕರೆತರಲಾಯಿತು.

ಬಳಿಕ ಆ ಕೆಮಿಸ್ಟ್ ಸಮೇತ ಅಂತಿಮ ಸಂಸ್ಕಾರದಲ್ಲಿ ನರೆದಿದ್ದ ಪ್ರತಿಯೊಬ್ಬನಿಗೂ ಅಲ್ಲಿ ಚಮತ್ಕಾರ ಕಂಡಿತ್ತು, ಬಾಲಕ‌ನ ಉಸಿರಾಟ ಶುರುವಾಗಿತ್ತು. ಯುವಕನ ಬ್ಲಡ್ ಪ್ರೆಷರ್ ಕೂಡ ನಾರ್ಮಲ್ ಇತ್ತು. ಗುರುತೇಜ್ ಸಿಂಗ್ ಕಣ್ಣು ತೆರೆದು, ಎದ್ದು ಮಾತನಾಡಲು ಪ್ರಯತ್ನಿಸುತ್ತಿದ್ದ. ಆಗ ಮಗನನ್ನ ತುರ್ತಾಗಿ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಡಾಕ್ಟರ್ ಗಳು ಪರಿಶೀಲಿಸಿ ಮದ ಬಳಿಕ ಬಾಲಕ ಜೀವಂತವಾಗಿದ್ದಾನೆ ಎಂದು ಘೋಷಿಸಿ ಬಳಿಕ ಫರೀದಕೋಟ್ ನ ಬಾಬಾ ಫರೀದ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ರೆಫರ್ ಮಾಡಿದರು.

ಸಿಂಗಾರಾ ಸಿಂಗ್ ರವರು ಬಳಿಕ ಮಾತನಾಡುತ್ತ ತಮಗೆ ಒಬ್ಬನೇ ಮಗನಿದ್ದು ತಾನೊಬ್ಬ ರೈತನೆಂದು ಹೇಳಿದ್ದಾರೆ. ಮಗನ ಟ್ರೀಟಮೆಂಟ್ ಗಾಗಿ ಇಲ್ಲಿಯವರೆಗೆ 4 ಲಕ್ಷ ರೂ. ಖರ್ಚು ಮಾಡಿದ್ದೆ ಆದರೂ ಮಗನ ಜೀವ ಉಳಿಯಲಿಲ್ಲ ಎಂದು ಎದೆ ಒಡೆದುಕೊಂಡಿದ್ದೆ ಆದರೆ ಮಗನ‌ಜೀವ ವಾಪಸ್ ಬಂದಿದ್ದನ್ನ ನೋಡಿದರೆ ಇದು ಭಗವಂತನ ಚಮತ್ಕಾರವೇ ಸರಿ ಎಂದಿದ್ದಾರೆ. ಆದರೆ ವೈದ್ಯರು ಬಾಲಕ ಸತ್ತಿದ್ದಾನೆ ಅಂತ ಡಿಕ್ಲೇರ್ ಮಾಡಿದ ಬಳಿಕ ಆತನ ಜೀವ ವಾಪಸ್ ಬಂದಿದ್ದಾದರೂ ಹೇಗೆ? ಅನ್ನೋದು ಮಾತ್ರ ಕಾಲಭೈರವ ಶಿವನ ಲೀಲೆ ಅಂತಲೇ ಹೇಳುತ್ತಿದ್ದಾರೆ.

– Team Google Guruu

Leave a Reply

Your email address will not be published. Required fields are marked *

error: Content is protected !!