PUBG ಆಟಕ್ಕೆ ಬೆಚ್ಚಿಬಿದ್ದ ಮುಸಲ್ಮಾನರು; ತಮಿಳುನಾಡಿನಲ್ಲಿ PUBG ವಿರುದ್ಧ ಮುಸ್ಲಿಮರು ಮಾಡಿದ್ದಾದರೂ ಏನಂತ ನೋಡಿ

ಇತ್ತೀಚೆಗೆ ಇಸ್ಲಾಮಿಕ್ ಕಟ್ಟರಪಂಥೀಯವಾದಿಗಳ ಉಪಟಳ ಹೆಚ್ಚಾಗಿಬಿಟ್ಟಿದೆ, ಪ್ರತಿಯೊಂದು ಮಾತಿಗೂ ಇಸ್ಲಾಮಿನಲ್ಲಿ ಹಾಗಿಲ್ಲ ಹೀಗಿಲ್ಲ, ಇದು ಹರಾಮ್ ಅದು ಹರಾಮ್ ಅಂತ ನಿರ್ಬಂಧವನ್ನ ಹೇರುತ್ತಲೇ ಫತ್ವಾ ಹೊರಡಿಸುತ್ತಲೇ ಇರುತ್ತಾರೆ. ಇದೀಗ ಈ ಕಟ್ಟರಪಂಥೀಯವಾದಿಗಳ ಇಸ್ಲಾಮಿಕ್ ಭಾವನೆಗಳಿಗೆ ಧಕ್ಕೆಯಾಗಿದೆ, ಈ ಬಾರಿ ಇವರ ಭಾವನೆಗಳಿಗೆ ಧಕ್ಕೆ ತಮಿಳುನಾಡಿನಲ್ಲಾಗಿದೆ.

ಸ್ವರಾಜ್ಯ ವಾಹಿನಿಯ ಸುದ್ದಿಯ ಪ್ರಕಾರ ಈ ಬಾರಿ ಒಂದು ಮೊಬೈಲ್ ಗೇಮ್ ನಿಂದಾಗಿ ಇಸ್ಲಾಮಿಕ್ ಭಾವನೆಗಳಿಗೆ ಭಾರೀ ಧಕ್ಕೆಯಾಗಿದೆ, ಅದೊಂದು ಮೊಬೈಲ್ ಗೇಮ್ PUBG, ಈ ಆಟದ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ, ಈ ಗೇಮ್‌ನಿಂದ ಇದೀಗ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗಿದೆಯಂತೆ.

ತಮಿಳುನಾಡಿನ ಚೆನ್ಮೈನಲ್ಲಿ ಪೋಲಿಸ್ ಕಮಿಷನರ್‌ಗೆ ತಮಿಳುನಾಡು ಮುಸ್ಲಿಂ ಲೀಗ್ ಕಂಪ್ಲೇಂಟ್ ಒಂದನ್ನ ನೀಡಿದೆ, ತಮಿಳುನಾಡು ಮುಸ್ಲಿಂ ಲೀಗ್ ಹೇಳುವುದೇನೆಂದರೆ PUBG ಆಟದಿಂದಾಗಿ ಮುಸಲ್ಮಾನರ ಭಾವನೆಗಳಿಗೆ ಧಕ್ಕೆ ಬಂದಿದೆಯಂತೆ ಹಾಗು ಈ ಕಾರಣದಿಂದಾಗಿ ಇಡೀ ಇಸ್ಲಾಂ ಕೋಮಿಗೇ ಅಪಾಯ ಬಂದೊದಗಿದೆಯಂತೆ.

ತಮಿಳುನಾಡು ಮುಸ್ಲಿಂ ಲೀಗ್ ನೀಡಿರುವ ಕಂಪ್ಲೇಂಟ್‌ನಲ್ಲಿ ಹೇಳಿರುವುದೇನೆಂದರೆ PUBG ಗೇಮ್ ನಲ್ಲಿ ಇತ್ತೀಚೆಗೆ ಬಂದಿರುವ ಹೊಸ ಅಪ್ಡೇಟ್ ನಲ್ಲಿ ‘ಕಾಬಾ’ ಫೋಟೋ ಇರುವ ಚಿತ್ರವೊಂದು ಬಂದಿದೆ, ಈ ಫೋಟೋವಿನ ಕಾರಣದಿಂದ ಮುಸಲ್ಮಾನರ ಹಾಗು ಇಸ್ಲಾಂ ಧರ್ಮದ ಭಾವನೆಗಳಿಗೆ ಧಕ್ಕೆಯಾಗುತ್ತಿರುವ ಕಾರಣ ಕಂಪ್ಲೇಂಟ್ ದಾಖಲು ಮಾಡಲಾಗಿದೆ.

ಮುಸ್ಲಿಂ ಲೀಗ್ ಹೇಳುವುದೇನೆಂದರೆ ಈ ಗೇಮ್ ಇಡೀ ಮುಸ್ಲಿಂ ಕೋಮನ್ನೇ ಭಯದಲ್ಲಿ ನೂಕಿಬಿಟ್ಟಿದೆಯಂತೆ, ಇದರಿಂದ ಇಸ್ಲಾಂ ಧರ್ಮವೇ ಅಪಾಯದಲ್ಲಿದೆಯಂತೆ ಹಾಗು ಈ ಕಾರಣದಿಂದಾಗಿ ಸರ್ಕಾರ ತಕ್ಷಣವೇ PUBG ಆಟದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗು ಆದಷ್ಟು ಬೇಗ ಈ ಗೇಮನ್ನ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!