ಗೆದ್ದು ಬೀಗುತ್ತಿರುವ ಪ್ರಧಾನಿ ಮೋದಿಗೆ ತುರ್ತಾಗಿ ಎದುರಾಗಿರುವ ಸವಾಲುಗಳೇನು ಗೊತ್ತಾ.?

ಜನಾಭಿಪ್ರಾಯ ಸಮೀಕ್ಷೆಗಳು ಅನಾಮಿಕವಾದುವು. ಆದಾಗ್ಯೂ ಸಮೀಕ್ಷೆ ಬಳಿಕ ದೇಶದ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. 2004ರಲ್ಲಿ ಅಂದರೆ 15 ವರ್ಷ ಹಿಂದೆ ಕಾಂಗ್ರೆಸ್‌ ಪಡೆದಿದ್ದ ಸೀಟುಗಳು ಈಗ ಅನೇಕ ರಾಜ್ಯಗಳಲ್ಲಿ ಸಿಂಗಲ್‌ ಡಿಜಿಟ್‌ಗೆ ಬಂದಿವೆ ಇದಕ್ಕೆ ಕಾರಣ ಆ ಒಬ್ಬ ವ್ಯಕ್ತಿ ಹೌದು ಅವರೇ ನರೇಂದ್ರ ದಾಮೋದರದಾಸ ಮೋದಿ. ಮೂಲ ಮೋದಿ ರಾಜಕೀಯ ತಂತ್ರ ದೇಶದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೆ ರೋಮಾಂಚನಗೊಳಿಸಿದೆ ಎನ್ನಬಹುದು.

ಮೊಟ್ಟ ಮೊದಲಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು ಮಾಡುವುದಾಗಿ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ ನೀಡಿತ್ತು ಆದರೆ ಇದಕ್ಕೆ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಸ್ಥಳೀಯರ ವಿರೋಧ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳ ನಡುವೆಯೇ, ಈ ವಿವಾದಿತ ಕಾಯ್ದೆಯನ್ನು ಬಿಜೆಪಿ ಹೇಗೆ ರದ್ದು ಮಾಡಲೆಬೇಕಾದ ಅನಿವಾರ್ಯವಿದೆ.

ಎರಡನೇ ಸವಾಲೆಂದರೇ 1991ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣ ಆಗಬೇಕು ಎಂದು ಬಹಿರಂಗವಾಗಿಯೇ ಘೋಷಿಸಿತ್ತು. ಆದರೇ ಇದುವರೆಗೂ 2 ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಸಹ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಲಿಲ್ಲ. ವಿವಾದ ವಿಚಾರಣೆ ಹಂತದಲ್ಲಿರುವ ಮಂದಿರ ನಿರ್ಮಾಣ ಮಾಡುವುದು ಬೆಜೆಪಿಗೆ ನುಂಗಲಾರದ ತುತ್ತಾಗಿದೆ.

ಮೂರನೇ ಸವಾಲೆಂದರೇ ಪ್ರಸಕ್ತ ಭಾರತದಲ್ಲಿ 1955ರ ಹಿಂದೂ ವಿವಾಹ ಕಾಯ್ದೆ, 1937ರ ಮುಸ್ಲಿಂ ವೈಯಕ್ತಿಕ ಕಾನೂನು, 1872ರ ವಿವಾಹ ಕಾಯ್ದೆ ಮತ್ತು 1937ರ ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆಗಳು ಜಾರಿಯಲ್ಲಿವೆ. ಆಯಾ ಧರ್ಮಗಳ ನಂಬಿಕೆ, ಆಚರಣೆ ಆಧರಿಸಿ ಈ ಕಾಯ್ದೆಗಳನ್ನು ರೂಪಿಸಲಾಗಿದೆ. ಹೀಗೆ ವಿವಾಹ, ವಿಚ್ಛೇದನ, ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಹಿಂದೂಗಳಿಗೆ ಒಂದು ರೀತಿ, ಮುಸ್ಲಿಮರಿಗೆ ಇನ್ನೊಂದು ರೀತಿ ಕಾನೂನಿನ ಆಧಾರದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಬೇಕು.

ಈ ಕಾನೂನು ತಪ್ಪಿಸಿ, ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಧರ್ಮವನ್ನು ಬದಿಗೊತ್ತಿ, ಎಲ್ಲರಿಗೂ ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆ ಜಾರಿಯ ಉದ್ದೇಶವನ್ನು ಕೇಂದ್ರ ಹೊಂದಿದೆ. ಆದರೆ ಇದಕ್ಕೆ ಮುಸ್ಲಿಂ ಧಾರ್ಮಿಕ ಸಂಘಟನೆಗಳು ಈಗಾಗಲೇ ತೀವ್ರ ವಿರೋಧ ಹೊಂದಿವೆ. ಈ ನೀತಿಯೂ ಕೂಡ ಮೋದಿ ಸರಕಾರ ಅತೀ ಶೀಘ್ರದಲ್ಲೇ ಜಾರಿಗೆ ತರಬೇಕಾಗಿದೆ.

ಭಾರತದಲ್ಲು ಅಕ್ರಮವಾಗಿ ನೆಲೆಸಿರುವ ವಿದೇಶಿ ವಲಸಿಗರನ್ನು ದೇಶದಿಂದ ಹೊರಹಾಕುವ ನಿಟ್ಟಿನಲ್ಲಿ ಸರ್ಕಾರ ರಾಷ್ಟ್ರೀಯ ನಾಗರಿಕ ನೊಂದಣಿ ಕಾಯ್ದೆ ರೂಪಿಸಿದೆ. ಅಸ್ಸಾಂಗೆಂದು ರೂಪಿಸಲಾದ ಈ ಕಾಯ್ದೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾದ ಅಂತಿಮ ಕರಡು ಪಟ್ಟಿಯಲ್ಲಿ ಅಸ್ಸಾಂನ 2.89 ಕೋಟಿ ನಾಗರಿಕರು ಮಾತ್ರವೇ ಸ್ಥಾನ ಪಡೆದಿದ್ದಾರೆ.

ಇದರ ಹೊರತುಪಡಿಸಿ 40 ಲಕ್ಷಕ್ಕೂ ಹೆಚ್ಚು ನಾಗರಿಕರು ಅರ್ಹ ದಾಖಲೆ ನೀಡಲಾಗದೆ ಪಟ್ಟಿಯಿಂದ ಹೊರಗೆ ಉಳಿದಿದ್ದಾರೆ. ಜುಲೈ 31ರೊಳಗೆ ಅಂತಿಮ ಪಟ್ಟಿಬಿಡುಗಡೆಗೆ ಈಗಾಗಲೇ ಸುಪ್ರೀಂಕೋರ್ಟ್‌ ಸೂಚಿಸಿದೆ. ಆ ಗಡುವಿನ ಬಳಿಕ ಪಟ್ಟಿಯಿಂದ ಹೊರಗೆ ಉಳಿದ 40 ಲಕ್ಷ ವಿದೇಶಿ ಜನರನ್ನು ಹೇಗೆ ದೇಶದಿಂದ ಹೊರಗೆ ಹಾಕಲಾಗುತ್ತದೆ ಎಂಬು ಕಾದು ನೋಡಬೇಕು.

ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಬುಲೆಟ್‌ ರೈಲು ಯೋಜನೆ ಕೂಡ ಒಂದು. 2018ರಲ್ಲಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದ ಪ್ರಧಾನಿ ಮೋದಿ 2022ರಲ್ಲಿ ಮೊದಲ ರೈಲು ಓಡಿಸುವ ಗುರಿಯನ್ನೂ ಹಾಕಿಕೊಂಡಿದ್ದಾರೆ. ಯೋಜನೆಗೆ ಹಣಕಾಸಿನ ಅಡ್ಡಿ ಏನೂ ಇಲ್ಲ. ಆದರೆ ಯೋಜನೆಗೆ ಅಗತ್ಯವಾದ ಜಮೀನು ನೀಡಲು ಹಲವೆಡೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಹಲವು ಕಡೆ ಇನ್ನೂ ಭೂ ಸ್ವಾಧೀನವೇ ಆಗಿಲ್ಲ. ಜೊತೆಗೆ ಯೋಜನೆಗೆ ಕೆಲವೊಂದು ವಿನಾಯಿತಿ ನೀಡಲು ಮಹಾರಾಷ್ಟ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದ್ದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಅದೀಗ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ 2022ರ ವೇಳೆಗೆ ಅಂದರೆ ಇನ್ನು ಕೇವಲ 3 ವರ್ಷಗಳಲ್ಲಿ 1 ಲಕ್ಷ ಕೋಟಿ ರೂಪಾಯಿಯ ಬೃಹತ್‌ ಯೋಜನೆ ಪೂರ್ಣಗೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಏಳುವುದು ಸಹಜ.

ರೈತರ ಆದಾಯ ದ್ವಿಗುಣ ಮಾಡುತ್ತೆವೆ ಎಂದು ಹೇಳಿಕೊಂಡು ಬಂದಿರುವ ಮೋದಿ ಸರಕಾರ 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ಗ್ರಾಮೀಣ ಭಾಗದ ಶೆಕಡಾ 70ರಷ್ಟುಕುಟುಂಬಗಳು ತಮ್ಮ ಜೀವನೋಪಾಯಕ್ಕೆ ಇನ್ನೂ ಕೃಷಿಯನ್ನೇ ಅವಲಂಬಿಸಿವೆ. ಇವರ ಪೈಕಿ ಶೆ.80ರಷ್ಟುಜನ ಸಣ್ಣ ಮತ್ತು ಮಧ್ಯಮ ಕೃಷಿಕರು.

ರೈತರ ಜೀವನ ಮಟ್ಟಸುಧಾರಿಸಲು 2022ರೊಳಗೆ ಅವರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಬಿಜೆಪಿಯದ್ದು. ಆದರೆ ಇದು ಸಾಧ್ಯವಾಗಬೇಕಾದಲ್ಲಿ ಮುಂದಿನ 3 ವರ್ಷಗಳ ಕಾಲ ರೈತರ ಆದಾಯ ಸತತವಾಗಿ ಶೇ.10ರ ದರದಲ್ಲಿ ಏರಿಕೆಯಾಗಬೇಕು. ಆದರೆ ಸದ್ಯದ ಪ್ರಗತಿ ದರ ಕೇವಲ ಶೇ.3.8ರಷ್ಟಿದೆ. ಈ ದರವೇ ಮುಂದುವರೆದರೆ ಸರ್ಕಾರ ಗುರಿ ಈಡೇರಲು ಇನ್ನೂ 2 ದಶಕವೇ ಬೇಕು. ಇದರ ಜೊತೆ ಮಳೆ ಕೊರತೆ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ರೈತರು ಸಾವಿರಾರು ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವಾಗ, ಸರ್ಕಾರ ಗುರಿ ಮುಟ್ಟುವುದು ಹೇಗೆ ಎಂಬುದು ಪ್ರಶ್ನೆ.

ದೇಶಗಳ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯೂ ಮಹತ್ತರ ಹೆಜ್ಜೆಯಾಗಿದ್ದು ದೇಶದ 100 ಆಯ್ದ ನಗರಗಳನ್ನು ವಿಶ್ವದ ಮಹತ್ತರ ಪಟ್ಟಿಗೆ ಸೇರಿಸುವ ಮತ್ತು ಜನರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2017ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಜಾರಿಗೊಳಿಸಿತ್ತು.

ಕಳೆದ 5 ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ಜಾರಿಗೆ ಹಣ ಪೂರೈಕೆ ಮಾಡಲಿದ್ದು, 2023ರಿಂದ ಈ ಯೋಜನೆ ಫಲ ಜನರಿಗೆ ಸಿಗಲು ಆರಂಭವಾಗಲಿದೆ ಎಂಬುದು ಸರ್ಕಾರ ಹೇಳಿಕೆಯಾಗಿತ್ತು. ಆದರೆ ಸ್ಪರ್ಧಾತ್ಮಕ ಮಾದರಿಯಲ್ಲಿ ಕೇಂದ್ರ ಸರ್ಕಾರ ಆರಿಸಿದ 100 ನಗರಗಳ ಪೈಕಿ ಬಹುತೇಕ ನಗರಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ದೊಡ್ಡ ಮಟ್ಟದಲ್ಲಿ ಜನರಿಗೆ ಕಾಣಸಿಗುತ್ತಿಲ್ಲ. ಇನ್ನು 4 ವರ್ಷಗಳಲ್ಲಿ ಅಂದರೆ ತನ್ನ ಮುಂದಿನ ಅಧಿಕಾರಾವಧಿಯಲ್ಲಿ ಇದು ಮತದಾರರ ಕಣ್ಣಿಗೆ ಕಾಣುವಂತೆ ಮಾಡುವುದು ಮೋದಿ ಸರ್ಕಾರದ ಬಹುದೊಡ್ಡ ಸವಾಲಾಗಿದೆ.

ಈ ಬಾರಿ ಚುನಾವಣೆಯಲ್ಲಿ ವಿಪಕ್ಷಗಳು ನಿರುದ್ಯೋಗ ಸಮಸ್ಯೆ ಮುಂದಿಟ್ಟುಕೊಂಡು ಟೀಕಾ ಪ್ರಹಾರ ಮಾಡಿದ್ದರು. ಹೀಗಾಗಿ ಅಧಿಕಾರಕ್ಕೆ ಬಂದ ತಕ್ಷಣ ಯುವ ಸಮೂಹಕ್ಕೆ ಹೊಸ ಉದ್ಯೋಗ ಸೃಷ್ಟಿಸಲು ವಿವಿಧ ಉತ್ತೇಜನಾ ಕ್ರಮ ಕೈಗೊಳ್ಳುವುದು ಮೋದಿ ಸರ್ಕಾರದ ಪ್ರಮುಖ ಗುರಿಯಾಗುವುದು ಅನಿವಾರ್ಯವಾಗಿದೆ.

ಸಾಕಷ್ಟು ಅಂಕಿಅಂಶಗಳು ಕೂಡ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಿದೆ ಎಂದು ಹೇಳಿವೆ. ಅದಕ್ಕೆ ತಕ್ಕಂತೆ ಕಂಪ್ಯೂಟರೀಕರಣ, ಡಿಜಿಟಲೀಕರಣ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ದೇಶದಲ್ಲಿ ಹೆಚ್ಚುತ್ತಿರುವುದರಿಂದ ಸಾಕಷ್ಟುಕ್ಷೇತ್ರಗಳಲ್ಲಿ ಉದ್ಯೋಗಿಗಳ ಅವಶ್ಯಕತೆ ಇಳಿಮುಖವಾಗುತ್ತಿದೆ. ಜೊತೆಗೆ ಆರ್ಥಿಕತೆಯಲ್ಲಾದ ಹಿನ್ನಡೆಯಿಂದಲೂ ಕಂಪನಿಗಳು ನೌಕರರನ್ನು ಕಿತ್ತುಹಾಕುತ್ತಿವೆ. ಇದಕ್ಕೆ ತಕ್ಷಣವೇ ಪರಿಹಾರ ಹುಡುಕಬೇಕಿದೆ.

ಬಡ ರಾಷ್ಟ್ರ ಭಾರತ ಎಂದೇ ಕರೆಸಿಕೊಳ್ಳುತ್ತಿದ್ದ ಭಾರತ ಕಳೆದ ಐದು ವರ್ಷದಲ್ಲಿ ಮೇಕ್‌ ಇನ್‌ ಇಂಡಿಯಾದಂಥ ಯೋಜನೆ ಜಾರಿಗೆ ತಂದರೂ ಸಣ್ಣ ಉದ್ಯಮ ವಲಯಕ್ಕೆ ಹೆಚ್ಚಿನ ಲಾಭ ಉಂಟಾಗಿಲ್ಲ. ಜೊತೆಗೆ ಸಣ್ಣ ಮತ್ತು ಮದ್ಯಮ ವಲಯದ ಉದ್ಯಮಗಳು ಅಪನಗದೀಕರಣ ಮತ್ತು ಜಿಎಸ್‌ಟಿ ಹೊಡೆತದಿಂದ ಪೂರ್ಣವಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಇದರಿಂದಾಗಿ ದೇಶದಲ್ಲಿ ಔದ್ಯೋಗಿಕ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ.

ಸಣ್ಣ ಉದ್ಯಮಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರಿಂದಾಗಿ ಆರ್ಥಿಕತೆಗೂ ಹಿನ್ನಡೆ ಉಂಟಾಗುತ್ತಿದೆ. ಗುಡಿ ಕೈಗಾರಿಕೆಗಳು ಸಂಕಷ್ಟದಲ್ಲಿವೆ. ಸ್ವ-ಉದ್ಯೋಗಕ್ಕೆ ನಿರೀಕ್ಷಿತ ಒತ್ತು ಸಿಗುತ್ತಿಲ್ಲ. ಹೀಗಾಗಿ ಇವುಗಳನ್ನು ಉತ್ತೇಜಿಸುವ ಮೂಲಕ ಮತ್ತೆ ಆರ್ಥಿಕತೆಗೆ ಚೇತರಿಕೆ ನೀಡುವುದು ಸರ್ಕಾರದ ಆದ್ಯತೆ ಆಗಲೇಬೇಕಿದೆ. ವಿದೇಶಿ ನೇರ ಬಂಡವಾಳಕ್ಕೆ ಮುಕ್ತ ಅನುಮತಿ ಮುಂತಾದ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರೂ ದೇಶದ ಸಮಗ್ರ ಆರ್ಥಿಕ ವ್ಯವಸ್ಥೆಯ ಸುಧಾರಣೆಗೆ ಹೊಸ ಸರ್ಕಾರ ಮುಂದಾಗಬೇಕಿದೆ.

ಮೋದಿ ಅಧಿಕಾರ ಪಡೆಯುವುದಕ್ಕೂ ಮುಂಚೆ ಬೆಲೆಯೇರಿಕೆ ಸಮಸ್ಯೆಯನ್ನು ಕಠೂರವಾಗಿ ವಿರೋಧಿಸಿದ್ದರು. ಅದನ್ನು ನಿಯಂತ್ರಿಸುತ್ತೇನೆಂದು ಮೋದಿ ಹೇಳಿದಾಗ ಜನರು ಖುಷಿಪಟ್ಟಿದ್ದರು. ಅದಕ್ಕೆ ತಕ್ಕಂತೆ ಎನ್‌ಡಿಎ ಸರ್ಕಾರದ ಮೊದಲ ಎರಡು ವರ್ಷ ಅಗತ್ಯ ವಸ್ತುಗಳ ಬೆಲೆಗಳು ನಿಯಂತ್ರಣದಲ್ಲೇ ಇದ್ದವು.

ಆದರೆ ಈಗ ಮತ್ತೆ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಭಾರಿ ದುಬಾರಿಯಾಗಿದೆ. ಜನರ ಆದಾಯದಲ್ಲಿ ಹೆಚ್ಚಳವಾಗದೆ ಖರ್ಚು ಮಾತ್ರ ಹೆಚ್ಚಳವಾಗುತ್ತಿದೆ. ಜಿಎಸ್‌ಟಿ ಹಾಗೂ ಅಪನಗದೀಕರಣದ ನಂತರ ಎಲ್ಲ ಸರಕು, ಸೇವೆಗಳೂ ಮೊದಲಿಗಿಂತ ದುಬಾರಿಯಾಗಿವೆ ಎಂಬುದು ಜನರ ಹೇಳುತ್ತಿದ್ದಾರೆ ಈ ಒಂದು ಸಮಸ್ಯೆ ಕೂಡ ಇದೀಗ ಮೋದಿ ಹೇಗೆ ಬಗೆಹರಿಸುತ್ತಾರೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.

-Team Google Guruu

Leave a Reply

Your email address will not be published. Required fields are marked *

error: Content is protected !!