ಪಾಕ್ ಹಡಗನ್ನು ಅಟ್ಟಾಡಿಸಿಕೊಂಡು ಹೋಗಿ ಸಮದ್ರದ ಮಧ್ಯದಲ್ಲೆ ನಿಲ್ಲಿಸಿದ ಭಾರತೀಯ ಸೇನೆ, ಬಳಿಕ ಸೇನೆ ಮಾಡಿದ್ದೇನು?

ಮೊನ್ನೆಯಷ್ಟೆ ಗಡಿ ಒಳಗೆ ಕಾಲಿಟ್ಟ ಪಾಕಿಸ್ತಾನದ ವಿಮಾನವನ್ನು ಅಟ್ಟಾಡಿಸಿಕೊಂಡು ಹೋಗಿ ಕೆಳಗಿಳಿಸಿದ ಭಾರತೀಯ ಸೇನೆ ವಿಚಾರಣೆ ನಡೆಸಿದ ನಂತರ ಮರಳಿ ತನ್ನ ದೇಶಕ್ಕೆ ಕಳುಹಿಸಿಕೊಟ್ಟಿತ್ತು, ಆದರೇ ಮತ್ತೆ ಅಂತಹ ಅನುಮಾನಕರ ಪ್ರಸಂಗ ಜರುಗಿದೆ, ಹೌದು ಆದರೇ ಈ ಬಾರಿ ನಡೆದದ್ದು ಆಕಾಶದಲ್ಲಿ ಅಲ್ಲ ಬದಲಾಗಿ ಸಮುದ್ರದಲ್ಲಿ.

ಕಳೆದ ದಿನ ಪಾಕಿಸ್ತಾನದ ಹಡಗು ಭಾರತದ ಸಮುದ್ರದ ಗಡಿ ಒಳಗೆ ಕಾಣಿಸಿಕೊಂಡ ಕಾರಣ ಮಾಹಿತಿ ತಿಳಿದ ಭಾರತೀಯ ನೌಕಾ ಸೇನೆ ಕೂಡಲೇ ಎಚ್ಚೆತ್ತುಕೊಂಡು ಖಡಕ್ ನಿರ್ಧಾರವೊಂದನ್ನು ಕೈಗೆತ್ತಿಕೊಂಡಿದೆ. ಮೊನ್ನೆ ವಿಮಾನಕ್ಕೆ ಬೆನ್ನಟ್ಟಿ ಹೋದಂತೆ ಈ ಬಾರಿ ಪಾಕ್ ಹಡಗಿಗೆ ಬೆನ್ನಟ್ಟಿ ಹೋಗಿದೆ ಎಂದು ನೌಕಾ ಸೇನೆಯ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಅಲ್ ಮದಿನಾ ಎಂಬ ಹೆಸರಿನ ಹಡಗು ಗುಜರಾತಿನ ಜಾಕೌ ಕರವಾಳಿಯ ಭಾಗದಲ್ಲಿ ಮಾದಕ ವಸ್ತುಗಳನ್ನು ರಫ್ತು ಮಾಡಲು ಬಂದು ನಿಂತಿದೆ ಎಂದು ಗುಪ್ತಚರ ಇಲಾಖೆ ಖಚಿತ ಮಾಹಿತಿ ನೀಡಿತ್ತು. ಈ ಮಾಹಿತಿಯ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಈ ಹಡಗನ್ನು ಜಪ್ತಿ ಮಾಡಲು ಎರಡು ವೇಗದ ಬೋಟ್‍ನೊಂದಿಗೆ ಸಮುದ್ರಕ್ಕೆ ಧುಮುಕಿದ್ದಾರೆ.

ಭಾರತದ ಬೋಟ್‍ಗಳನ್ನು ತಮ್ಮ ಕಡೆ ಬರುತ್ತಿರುವುದನ್ನು ಗಮನಿಸಿದ ಪಾಕ್ ಹಡಗು ವಾಪಸ್ ತಿರುಗಿಸಿ ಪಾಕ್ ಕರಾವಳಿಯತ್ತ ಹಿಂದಿರುಗಲು ಯತ್ನಿಸಿವೆ ಆದರೇ ಭಾರತದ ಬೋಟ್‍ಗಳು ವೇಗವಾಗಿ ಬೆನ್ನಟ್ಟಿ ಪಾಕ್ ಹಡಗನ್ನು ಓವರ್ ಟೇಕ್ ಮಾಡಿ ತಡೆದು ನಿಲ್ಲಿಸಿದ್ದಾರೆ.

ಪಾಕಿಸ್ತಾನದ ಹಡಗಿನಲ್ಲಿ ಸಾಗಿಸುತ್ತಿದ್ದ 500 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ಸಿಕ್ಕಿ ಬುದ್ದಿದ್ದು ಇದೀಗ ಭಾರತದ ಕೋಸ್ಟ್ ಗಾರ್ಡ್ ಅವುಗಳನ್ನು ವಶಪಡಿಸಿಕೊಂಡಿದೆ.

ಈ ಸಂದರ್ಭದಲ್ಲಿ ಪಾಕಿಗಳು ಆ ಹಡಗಿನಲ್ಲಿದ್ದ ವ್ಯಕ್ತಿಗಳು ಕೆಲವು ಚೀಲಗಳನ್ನು ಸಮುದ್ರಕ್ಕೆ ಎಸೆದಿದ್ದಾರೆ ಆದರೇ ಸಮುದ್ರಕ್ಕೆ ಎಸೆದಿದ್ದ 7 ಚೀಲಗಳನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಹೊರ ತೆಗೆದು ವಿಚಾರಣೆ ನಡೆಸುತ್ತಿದ್ದಾರೆ.

ಹಡಗಿನಿಂದ ವಶಪಡಿಸಿಕೊಂಡ ವಸ್ತುಗಳನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದಾಗ ಈ ಮಾದಕ ವಸ್ತುಗಳ ಸುಮಾರು 400 ರಿಂದ 500 ಕೋಟಿ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಹಡಗಿನಲ್ಲಿದ್ದ ವ್ಯಕ್ತಿಗಳನ್ನು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಈ ಹಿಂದೆಯೂ ಸಹ ಗುಜರಾತ್ ಕೋಸ್ಟ್ ಗಾರ್ಡ್ ಎರಡು ಬಾರಿ ಗುಜರಾತಿನ ಜಾಕೌ ಕರವಾಳಿಯಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿತ್ತು. ಕಳೆದ ಮಾರ್ಚ್‍ನಲ್ಲಿ 100 ಕಿಲೋಗ್ರಾಮ್ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು. 2017ರ ಜುಲೈನಲ್ಲಿ ಪನಾಮ ಎಂಬ ಹಡಗಿನಿಂದ 3,500 ಕೋಟಿ ಬೆಲೆ ಬಾಳುವ 1,500 ಕಿಲೋಗ್ರಾಮ್ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು.

ಇಷ್ಟಾದರೂ ತನ್ನ ನರಿ ಬುದ್ದಿ ಬಿಡದ ಪಾಕ್ ಮತ್ತೆ ದುಷ್ಕೃತ್ಯಕ್ಕೆ ಮುಂದಾಗಿದೆ, ಆದರೇ ಭಾರತೀಯ ಸೇನೆ ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬಂತೆ ಸಿನೆಮಾ ಶೈಲಿಯಲ್ಲಿ ಬೆನ್ನಟ್ಟಿ ಪಾಕ್‌ ಹಡಗನ್ನು ಹಿಡಿದು ವಶಪಡಿಸಿಕೊಂಡಿದ್ದಾರೆ. ದೇಶದಲ್ಲೆ ಇಷ್ಟೊಂದು ಹೆಚ್ಚು ಮೊತ್ತದ ಮಾದಕ ವಸ್ತು ವಶಪಡಿಸಿಕೊಂಡಿದ್ದು ಗುಜರಾತ್ ಕೋಸ್ಟ್ ಗಾರ್ಡ್ ಎಂದು ಹೇಳಬಹುದು.

-Team Google Guruu

Leave a Reply

Your email address will not be published. Required fields are marked *

error: Content is protected !!