17 ರಾಜ್ಯಗಳಿಂದ ಸಂಪೂರ್ಣ ವಾಶೌಟ್ ಆದ ಕಾಂಗ್ರೆಸ್; ಈ ರಾಜ್ಯಗಳ ಲಿಸ್ಟ್ ಇಲ್ಲಿದೆ ನೋಡಿ

ಲೋಕಸಭಾ ಚುನಾವಣೆಯ ಫಲಿತಾಂಶ ಬಂದಾಗಿದೆ. ಬಿಜೆಪಿ ಈ ಬಾರಿ ತನ್ನ ಸ್ವಂತ ಬಲದ ಮೇಲೆ ಮತ್ತೊಮ್ಮೆ ಪೂರ್ಣ ಬಹುಮತ ಪಡೆದುಕೊಂಡಿದೆ‌. ಬಿಜೆಪಿ ಲೋಕಸಭೆಯ ಒಟ್ಟು 543 ಕ್ಷೇತ್ರಗಳ ಪೈಕಿ ಬರೋಬ್ಬರಿ 303 ಸೀಟುಗಳನ್ನ ಗೆದ್ದಿದೆ. ಈ ಮಟ್ಟದ ಗೆಲುವು ಬಿಜೆಪಿಯ ಇತಿಹಾಸದಲ್ಲೇ ಮೊದಲ ಗೆಲುವು.

ಈ ಜಯದಲ್ಲಿ ಅತಿ ಹೆಚ್ಚು ಪ್ರಮುಖ ಕಾರಣ ಪಶ್ಚಿಮ ಬಂಗಾಳವೆಂದು ಹೇಳಲಾಗುತ್ತಿದ್ದು ಈ ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳಿದ್ದ ಬಿಜೆಪಿ ಈ ಬಾರಿ 18 ಕ್ಷೇತ್ರಗಳನ್ನ ಗೆದ್ದುಕೊಂಡಿದೆ. ಇದು ಬಿಜೆಪಿಯ ಕಥೆಯಾದರೆ ಕಾಂಗ್ರೆಸ್ ಪಕ್ಷ 543 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ 51 ಸೀಟುಗಳನ್ನ ಗೆದ್ದುಕೊಂಡಿದೆ. ಈ ಬಾರಿ ಕಾಂಗ್ರೆಸ್ ಬರೋಬ್ಬರಿ 17 ರಾಜ್ಯಗಳಿಂದ ವಾಶೌಟ್ ಆಗಿ ಬಿಟ್ಟಿದೆ.

ಕಾಂಗ್ರೆಸ್ ಉತ್ತಮ ಪ್ರದರ್ಶನ ಮಾಡಿದ್ದು ದಕ್ಷಿಣ ಭಾರತದಲ್ಲಿ. ಕಾಂಗ್ರೆಸ್ ಮೈತ್ರಿಕೂಟ ಕೇರಳದ 20 ಸೀಟುಗಳಲ್ಲಿ 19 ಸ್ಥಾನಗಳನ್ನ ಗೆದ್ದುಕೊಂಡಿದೆ. ಅದಾದ ಬಳಿಕ ಕಾಂಗ್ರೆಸ್ ಪಂಜಾಬ್ ನಲ್ಲಿ 8 ಕ್ಷೇತ್ರಗಳನ್ನ ಗೆದ್ದುಕೊಂಡಿದೆ. ಈ ಬಾರಿ ಮೋದಿ ಅಧಿಕಾರದಿಂದ ಕೆಳಗಿಳಿಯೋ ಸಮಯ ಬಂತು,‌ ಮೇ 23 ರವರೆಗೆ ಕಾಯಿರಿ ಚೌಕಿದಾರ್ ಚೋರ್ ಹೈ ಅನ್ನೋದು ಸಾಬೀತಾಗುತ್ತೆ ಅನ್ನುತ್ತಿದ್ದ ರಾಹುಲ್ ಗಾಂಧಿ ಮಕಾಡೆ ಮಲಗಿದ್ದಾರೆ.

ಈ ರಾಜ್ಯಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಧೂಳಿಪಟವಾಗಿದೆ:

ದೇಶದ ಅತಿ ದೊಡ್ಡ ಭಾಗಗಳಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ಧೂಳಿಪಟವಾಗಿದೆ. ರಾಜಸ್ಥಾನ, ಹರಿಯಾಣ, ಆಂಧ್ರಪ್ರದೇಶ, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ತೆಲಂಗಾಣ, ಗುಜರಾತ್, ಜಮ್ಮು ಕಾಶ್ಮೀರ, ಮಣಿಪುರ, ಅಂಡಮಾನ್ ನಿಕೋಬಾರ್, ಚಂಡೀಗಢ, ದಾದ್ರಾ ನಗರ್ ಹವೇಲಿ, ಡಿಯು ಡಮನ್ & ಲಕ್ಷದ್ವೀಪ, ಮಿಜೋರಾಂ ಹಾಗು ಓರಿಸ್ಸಾ ದಲ್ಲಿ ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಕನಸು ನನಸಾಗಿದೆ.

ಕೇಂದ್ರ ಚುನಾವಣಾ ಆಯೋಗವು ತನ್ನ ಅಂತಿಮ ಫಲಿತಾಂಶವನ್ನ ಈಗಾಗಲೇ ಘೋಷಣೆ ಮಾಡಿಯಾಗಿದೆ. ಇದರಲ್ಲಿ ಬಿಜೆಪಿಗೆ 303, ಕಾಂಗ್ರೆಸ್ಸಿಗೆ 52 ಸೀಟುಗಳು ಗೆದ್ದುಕೊಂಡಿವೆ. ಒಂದು ಕಾಲದಲ್ಲಿ ಇಡೀ ದೇಶದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಿಸಿ ಎಲ್ಲ ರಾಜ್ಯಗಳಲ್ಲೂ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷ ಈಗ ದಕ್ಷಿಣ ಭಾರತದ ಒಂದೆರಡು ರಾಜ್ಯಗಳಿಗೆ ಮಾತ್ರ ಸೀಮಿತವಾಗಿಬಿಟ್ಟಿದೆ.

ಉತ್ತರ, ಪೂರ್ವ ಹಾಗು ಪಶ್ಚಿಮ ಭಾರತದಲ್ಲಿ ಕಾಂಗ್ರೆಸ್ ಅವಶೇಷವೂ ಉಳಿದಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಖುದ್ದು ತನ್ನ ಕ್ಷೇತ್ರ ಅಮೇಥಿಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ‌ ಸ್ಮೃತಿ ಇರಾನಿ ಅಮೇಥಿಯಲ್ಲಿ ರಾಹುಲ್ ಗಾಂಧಿಯನ್ನ ಬರೋಬ್ಬರಿ 55 ಸಾವಿರ ಮತಗಳ ಅಂತರದಿಂದ ಸೋಲಿಸಿ ಕಾಂಗ್ರೆಸ್ಸಿನ ವಂಶಪಾರಂಪರ್ಯ ಕ್ಷೇತ್ರದಲ್ಲಿ ಕೇಸರಿ ಬಾವುಟ ಹಾರಿಸಿದ್ದಾರೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೇನೆಂದರೆ ರಾಹುಲ್ ಗಾಂಧಿ ತಾನು ಅಮೇಥಿಯಲ್ಲಿ ಸೋಲುತ್ತೇನೆಂದು ಗೊತ್ತಾದ ಮೇಲೆಯೇ ಸೇಫ್ ಜೋನ್ ಗಾಗಿ ಕೇರಳದ ವಯನಾಡ್ ನಲ್ಲೂ ಸ್ಪರ್ಧಿಸಿದ್ದರು. ವಯನಾಡ್ ನಲ್ಲಿ ರಾಹುಲ್ ಗಾಂಧಿ 4,31,770 ಮತಗಳಿಂದ ಗೆಲುವು ದಾಖಲಿಸಿದ್ದಾರೆ. ಪ್ರೆಸ್ ಕಾನ್ಫರೆನ್ಸ್ ಮಾಡಿ ರಾಹುಕ್ ಗಾಂಧಿ ಮಾತನಾಡುತ್ತ ನಾವು ಈ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಹಾಗು ನಮ್ಮ ಸಂಘರ್ಷ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ‌.

– Team Google Guruu

Leave a Reply

Your email address will not be published. Required fields are marked *

error: Content is protected !!