ಶಾಕಿಂಗ್: ಮಾಜಿ ಸೈನಿಕನಿಗೆ ಬರೋಬ್ಬರಿ 5,190 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

1984 ರಲ್ಲಿ ಇಂದಿರಾ ಗಾಂಧಿಯನ್ನ ಅವರ ಇಬ್ಬರು ಸಿಖ್ ಅಂಗರಕ್ಷಕರು ಕೊಂದುಬಿಟ್ಟರು ಎಂಬ ಕಾರಣಕ್ಕೆ ದೆಹಲಿಯ ಬೀದಿ ಬೀದಿಗಳಲ್ಲಿ ಸಿಖ್ಖರನ್ನ ಹುಡುಕಿ ಮನೆಯಿಂದ ಹೊರ ಎಳೆತಂದು ಕತ್ತರಿಸಿ ಹಾಕಲಾಗಿತ್ತು. ಈ ಮಾರಣಹೋಮದಲ್ಲಿ 10 ಸಾವಿರಕ್ಕೂ ಅಧಿಕ ಸಿಖ್ಖರನ್ನ ಕೊಲ್ಲಲಾಗಿತ್ತು.

ಈ ಪ್ರಕರಣ ನಡೆದು 34 ವರ್ಷಗಳು ಕಳೆದ ಬಳಿಕ ಇತ್ತೀಚೆಗಷ್ಟೇ ನ್ಯಾಯಾಲವು ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಒಬ್ಬನಿಗೆ ಜೀವಾವಧಿ ಶಿಕ್ಷೆಯಾದರೆ ಮತ್ತೊಬ್ಬನಿಗೆ ಮರಣದಂಡನೆ ಶಿಕ್ಷೆಯನ್ನ ವಿಧಿಸಲಾಗಿತ್ತು. 34 ವರ್ಷಗಳ ಬಳಿಕ ಸಿಖ್ಖರಿಗೆ ಗುಲಗಂಜಿಯಷ್ಟು ನ್ಯಾಯ ದೊರಕಿತ್ತು.

ಆದರೆ ಈ ಪ್ರಕರಣದಲ್ಲಿ ಇನ್ನೂ ಹಲವು ಕಾಂಗ್ರೆಸ್ಸಿನ ತಲೆಗಳ ಕೈವಾಡವೂ ಇತ್ತು ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಖ್ಖರು ಈಗಲೂ ಹೋರಾಟ ನಡೆಸುತ್ತಿದ್ದಾರೆ. ಸಿಖ್ಖರ ಮಾರಣಹೋಮಕ್ಕೆ ಪೂರ್ಣ ಪ್ರಮಾಣದ ನ್ಯಾಯ ಸಿಗೋದು ಯಾವಾಗ ಅನ್ನೋದು ಇನ್ನೂ ಯಕ್ಷ ಪ್ರಶ್ನೆಯಾಗೇ ಉಳಿದಿದೆ.

ಈ ಪ್ರಕರಣದಲ್ಲಿ ಈಗ ಇಬ್ಬರಿಗೆ ಮಾತ್ರ ಅದೂ ಒಬ್ಬನಿಗೆ ಜೀವಾವಧಿ ಮತ್ತೊಬ್ಬನಿಗೆ ಮರಣದಂಡನೆ ಶಿಕ್ಷೆಯಾಗಿದೆ. ಒಬ್ಬ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ಎಂದರೆ ಅಬ್ಬಬ್ಬಾ ಅಂದ್ರೆ ಅದು 14 ವರ್ಷಗಳ ಜೈಲುವಾಸ ಎಂಬುದಾಗಿದೆ. ಆದರೆ ಆ ದೇಶದಲ್ಲಿ ನ್ಯಾಯಾಲವು ಒಬ್ಬ ಮಾಜಿ ಸೈನಿಕನಿಗೆ ಬರೋಬ್ಬರಿ 5,190 ವರ್ಷಗಳ ಶಿಕ್ಷೆಯನ್ನ ವಿಧಿಸಿದೆ. ಈ ಪ್ರಕರಣವಾದರೂ ಏನು? ಆ ಮಾಜಿ ಸೈನಿಕನಾದರೂ ಯಾರು? ಆತ ಮಾಡಿದ ತಪ್ಪಾದರೂ ಏನು ಅಂತ ಯೋಚಿಸುತ್ತಿದ್ದೀರ? ಹಾಗಾದ್ರೆ ಈ ರಿಪೋರ್ಟ್ ಓದಿ

ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಬಲ್ಲ? ಮನುಷ್ಯನ ಜೀವಿತಾವಧಿಯಾದರೂ ಎಷ್ಟು? 80, 90, 100 ಅಬ್ಬಬ್ಬಾ ಅಂದ್ರೆ 120. ಆದರೆ ಆ ದೇಶದ ಒಬ್ಬ ಮಾಜಿ ಸೈನಿಕನಿಗೆ 171 ರೈತರ ಹತ್ಯೆಯ ಆರೋಪದಲ್ಲಿ ದೋಷಿಯೆಂದು ಸಾಬೀತಾಗಿತ್ತು. ಬಳಿಕ ಅಲ್ಲಿನ ನ್ಯಾಯಾಲಯವು ರೆಕಾರ್ಡ್ ಬ್ರೇಕಿಂಗ್ ಅನ್ನುವಂತೆ ಬರೋಬ್ಬರಿ 5,160 ವರ್ಷಗಳ ಜೈಲು ಶಿಕ್ಷೆಯನ್ನ ಆತನಿಗೆ ವಿಧಿಸಿದೆ.

ಈ ಘಟನೆ ಮಧ್ಯ ಅಮೇರಿಕಾ ದೇಶದ ಗ್ವಾಟೆಮಾಲಾ ದ್ದಾಗಿದ್ದು ಅಲ್ಲಿನ ನ್ಯಾಯಾಲಯವು ಇತ್ತೀಚೆಗಷ್ಟೇ ಮಾಜಿ ಸೈನಿಕನೊಬ್ಬನಿಗೆ ಆಂತರಿಕ ಯುದ್ಧದ ಸಂಬಂಧದಲ್ಲಿ 201 ರೈತರ ನರಸಂಹಾರ ಮಾಡಲಾಗಿದ್ದ ಕೇಸ್ ನಲ್ಲಿ ಬರೋಬ್ಬರಿ 5,160 ವರ್ಷಗಳ ಶಿಕ್ಷೆಯನ್ನ ನೀಡಿದೆ. ಗ್ವಾಟೆಮಾಲಾ ದ ಈ ನರಸಂಹಾರವು ಮಧ್ಯ ಅಮೇರಿಕಾ ದೇಶದ ಗೃಹಯುದ್ಧವು ಅಮೇರಿಕಾದ ಇತಿಹಾಸದಲ್ಲೇ ಕರಾಳ ಅಧ್ಯಾಯವಾಗಿ ಉಳಿದುಬಿಟ್ಟಿದೆ.

ನ್ಯಾಯಾಲಯವು ಸಾಂತೋಸ್ ಲೋಪೆಜ್ ಎಂಬ ಮಾಜಿ ಅಮೇರಿಕಾ ಯೋಧನಿಗೆ ನರಸಂಹಾರದಲ್ಲಿ 171 ಜನ ರೈತರನ್ನ ಬರ್ಬರವಾಗಿ ಕೊಂದು ಹಾಕಿದ್ದ ಆರೋಪದಲ್ಲಿ ಅಪರಾಧಿಯೆಂದು ಹೇಳಿದ್ದು ಆತನಿಗೆ 171 ಜನರನ್ನ ಕೊಂದಿರುವುದಕ್ಕೆ ಒಬ್ಬ ರೈತನ ಕೊಲೆಗೆ 30 ವರ್ಷದಂತೆ 171 x 30=5,160 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನ ವಿಧಿಸಿದೆ.

ಆ ಮಾಜಿ ಯೋಧನಿಗೆ ಈ ಶಿಕ್ಷೆ ಹೊರತುಪಡಿಸಿ ಬಾಲಕನೊಬ್ಬನ ಹತ್ಯೆಯ ಕೇಸ್ ನಲ್ಲಿ ಮತ್ತೂ 30 ವರ್ಷಗಳ ಶಿಕ್ಷೆ ಅಂದರೆ 5,190 ವರ್ಷಗಳ ಶಿಕ್ಷೆಯನ್ನ ಅಲ್ಲಿನ ನ್ಯಾಯಾಲಯ ವಿಧಿಸಿದೆ. ಈ ಸಜೆಯು ಸಾಂಕೇತಿಕವಾಗಿದೆ, ಕಾರಣವೇನೆಂದರೆ ಗ್ವಾಟೆಮಾಲಾ ನಲ್ಲಿ maximum ಜೈಲು ಶಿಕ್ಷೆಯೆಂದರೆ ಅದು 50 ವರ್ಷದ್ದಾಗಿದೆ. ಲೋಪೆಜ್ ಎಂಬ ಮಾಜಿ ಅಮೇರಿಕಾ ಸೈನಿಕನು ‘ಕ್ಯಾಬಿಲ್’ ಹೆಸರಿನ ಪ್ರಶಿಕ್ಷಿತ ಸೆನಾ ತುಕಡಿಯ ನಾಯಕನಾಗಿದ್ದ‌. ಆತನನ್ನ 2016 ರಲ್ಲೇ ಅಮೇರಿಕಾದಲ್ಲಿ ಬಂಧಿಸಲಾಗಿತ್ತು.

ತನಿಖೆಯ ಪ್ರಕಾರ, ಲೋಪೆಜ್ ಕ್ಯಾಬಿಲ್ ಸಂಸ್ಥೆಯ ಸದಸ್ಯನೂ ಆಗಿದ್ದ, ಆತ 1982 ರ ಡಿಸೆಂಬರ್ ತಿಂಗಳಲ್ಲಿ ಮೆಕ್ಸಿಕೊ ಗಡಿ ಭಾಗದಲ್ಲಿರುವ ಗ್ವಾಟೆಮಾಲಾ ದ ದೋಸ್ ಎರೇಸ್ ಪ್ರದೇಶದಲ್ಲಿ ರೈತರ ನರಸಂಹಾರಕ್ಕೆ ಮುನ್ನುಡಿ ಹಾಡಿ 171 ರೈತರನ್ನ ಬರ್ಬರವಾಗಿ ಕೊಂದು ಹಾಕಿದ್ದ. ವಿಶ್ವಸಂಸ್ಥೆಯ ರಿಪೋರ್ಟ್ ಒಂದರ ಪ್ರಕಾರ ಗ್ವಾಟೆಮಾಲಾ ದಲ್ಲಿ ನಡೆದಿದ್ದ ಆಂತರಿಕ ಸಂಘರ್ಷ 1996 ರವರೆಗೂ ನಡೆದಿತ್ತು.

ಗ್ವಾಟೆಮಾಲಾ ದ ಈ ಆಂತರಿಕ ಕಲಹದಲ್ಲಿ ಬರೋಬ್ಬರಿ ಎರಡು ಲಕ್ಷ ಜನ ಕೊಲ್ಲಲ್ಪಟ್ಟರೆ ಲಕ್ಷಾಂತರ ಜನ ನಾಪತ್ತೆಯಾಗಿದ್ದರು. ಈ ಗೃಹಯುದ್ಧದ 1982 ರ ಪ್ರಕರಣದಲ್ಲಿ 201 ಜನ ರೈತರ ಮಾರಣಹೋಮ ನಡೆಸಲಾಗಿತ್ತು. ಇದರಲ್ಲಿ 171 ಜನ ರೈತರನ್ನ ಲೋಪೆಜ್ ಕೊಂದು ಬಿಸಾಡಿದ್ದ. ಈ ಪ್ರಕರಣದಲ್ಲಿ ಆತನಿಗೆ ಗ್ವಾಟೆಮಾಲಾ ನ್ಯಾಯಾಲಯ ಇದೀಗ ಅಂದರೆ 2018 ರಲ್ಲಿ 5,190 ವರ್ಷಗಳ ಶಿಕ್ಷೆಯನ್ನ ವಿಧಿಸಿದೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!