ಗುಣಪಡಿಸಲಾಗದ ಮಹಾಮಾರಿ ಏಡ್ಸ್ HIV ಗೆ ಕೊನೆಗೂ ಸಿಕ್ತು ಗೋವಿನಿಂದ ಮುಕ್ತಿ; ಅಮೇರಿಕಾದ ಸಂಶೋಧನೆಯಿಂದ ಬಯಲಾಯ್ತು ಸ್ಪೋಟಕ ಸತ್ಯ..!

ಗೋ ಮೂತ್ರ ಹಾಗು ಗೋವಿನ ಸಗಣಿಯ ಕುರಿತಾಗಿ ಈವರೆಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ‌. ಈ ಸಂಶೋಧನೆಯಲ್ಲಿ ಗೋವನ್ನ ಬಹುಪಯೋಗಿ ಎಂದೇ ಹೇಳಲಾಗಿದೆ‌. ಗೋವಿನ ಹಾಲನ್ನೂ ಕೂಡ ವಿಜ್ಞಾನಿಗಳು ಉಪಯುಕ್ತ ಅಮೃತವೆಂದೇ ಹೇಳಲಾಗಿದೆ. ಈ ಮಧ್ಯೆ ಅಮೇರಿಕಾದಲ್ಲಿ ಸಂಶೋಧನೆಯೊಂದು ನಡೆದಿದ್ದು ಅದರಲ್ಲಿ ಗೋವು ಕೇವಲ ಒಂದು ಪ್ರಾಣಿಯಲ್ಲ ಬದಲಾಗಿ ನಾವು ಯೋಚಿಸುವುದಕ್ಕಿಂತಲೂ ಹೆಚ್ಚು ಉಪಕಾರಿ ಎಂದು ತಿಳಿಸಲಾಗಿದೆ.

ಗೋವಿನಿಂದ ನಮಗೆ ಪೌಷ್ಟಿಕ ಹಾಲು ಹಾಗು ಡೈರಿ ಪ್ರಾಡಕ್ಟ್ಸ್ ಗಳೂ ಸಿಗುತ್ತವೆ, ಆದರೆ ಈಗ ಗೋವಿನ ಮೂಲಕ HIV ಯನ್ನೂ ಗುಣಪಡಿಸಬಹುದು ಎಂದು ಹೇಳಲಾಗಿದೆ. ಅಮೇರಿಕಾದಲ್ಲಿ ನಡೆದ ರಿಸರ್ಚ್ ಒಂದರ ಪ್ರಕಾರ HIV ಯ ವಿರುದ್ಧ ಹೋರಾಡಲು ವ್ಯಾಕ್ಸಿನ್ ತಯಾರಿಸುವಲ್ಲಿ ಗೋವು ಪ್ರಮುಖ ಪಾತ್ರ ವಹಿಸುತ್ತದೆಯೆಂತೆ. ವಿಜ್ಞಾನಿಗಳು ಹೇಳುವಂತೆ ಗೋವು ಸದಾ ಆ್ಯಂಟಿಬಾಡೀಸ್ ಪ್ರೊಡ್ಯೂಸ್ ಮಾಡುತ್ತವಂತೆ‌.‌ ಇದರಿಂದ HIV ಯನ್ನ ನಿಯಂತ್ರಿಸುವುದಷ್ಟೇ ಅಲ್ಲದೆ ಅದನ್ನ ಬುಡಸಮೇತ ಕಿತ್ತು ಹಾಕಬಹುದು.

ವಿಜ್ಞಾನಿಗಳು ಹೇಳುವಂತೆ ಕಾಂಪ್ಲೆಕ್ಸ್ ಹಾಗು ಬ್ಯಾಕ್ಟೀರಿಯಾ ಯುಕ್ತ ಪಚನ ತಂತ್ರದ ಕಾರಣದಿಂದ ಗೋವುಗಳಲ್ಲಿ ರೋಗ ನಿರೋಧಕ ಪ್ರಭಾವಶಾಲಿ ಅಂಶವಿದೆ‌. ಅಮೇರಿಕಾದ ನ್ಯಾಶನಲ್ ಇನ್ಸ್ಟಿಟ್ಯೂಟ್ಸ್ ಆಫ್ ಹೆಲ್ತ್ ನಿಂದ ಈ ಕುರಿತು ನಡೆದಿರುವ ಸಂಶೋಧನೆಯನ್ನ ಬಹಳ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. HIV ಒಂದು ಮಹಾಮಾರಿ ಕಾಯಿಲೆಯಾಗಿದೆ‌.

HIV ರೋಗಾಣು ತನ್ನ ಸ್ಥಿತಿಯನ್ನ ಬಹಖ ಬೇಗ ಬದಲಿಸುತ್ತದೆ ಹಾಗು ಇದರ ವೈರಸ್ ರೋಗಿಯ ರೋಗ ನಿರೋಧಕ ಶಕ್ತಿಯನ್ನೇ ಮುಗಿಸಿಬಿಡುತ್ತೆ‌. ಅಮೇರಿಕಾ ವಿಜ್ಞಾನಿಗಳಿಂದ ನಡೆದ ಸಂಶೋಧನೆಯಲ್ಲಿ ಗೋವಿನ ಸಹಾಯದಿಂದ ಒಂದು ವ್ಯಾಕ್ಸಿನ್ ತಯಾರಿಸಬಹುದಾಗಿದ್ದು ಅದು HIV ಪೀಡಿತ ರೋಗಿಯ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವುದಷ್ಟೇ ಅಲ್ಲದೆ ರೋಗಿಯನ್ನ HIV ಯ ಮೊದಲನೆಯ ಸ್ಟೇಜ್ ನಲ್ಲಿಯೇ ಪ್ರಾಣ ಉಳಿಸಬಹುದಾಗಿದೆ.

ಇಂಟರ್ನ್ಯಾಷನಲ್ ಏಡ್ಸ್ ವ್ಯಾಕ್ಸಿನ್ ಇನಿಶಿಯೇಟಿವ್ ಹಾಗು ದಿ ಸ್ಕ್ರಿಪ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಡಾ.ಡೆವಿನ್ ಸೋಕ್ ರವರು ಮಾತನಾಡುತ್ತ ಹೀಗೆವ ಹೇಳ್ತಾರೆ “ಯಾವಾಗ ನಾವು ಈ ರಿಸರ್ಚ್ ನಡೆಸಿದೆವೊ ಆಗ ಅದರ ರಿಸಲ್ಟ್ ನಮ್ಮನ್ನ ದಂಗುಬಡಿಸುವಂಥದ್ದಾಗಿತ್ತು. ಉಪಯುಕ್ತ ಆ್ಯಂಟಿಬಾಡೀಸ್ ಗೋವುಗಳಲ್ಲಿ ಹಲವು ಸಪ್ತಾಹಗಳಲ್ಲೇ ಸೃಷ್ಟಿಯಾಗಿಬಿಡುತ್ತೆ, ಆದರೆ ಮನುಷ್ಯನಲ್ಲಿ ಇಂತಹ ಆ್ಯಂಟಿಬಾಡಿ ಕ್ರಿಯೇಟ್ ಆಗಲು ಮೂರರಿಂದ ಐದು ವರ್ಷಗಳ ಸಮಯ ಬೇಕಾಗುತ್ತೆ. HIV ರೋಗದ ಚಿಕಿತ್ಸೆಯಲ್ಲಿ ಗೋವಿನ ಇಂಥಾ ದೊಡ್ಡ ಯೋಗದಾನವಿದೆ ಅಂತ ನಮಗೆ ನಂಬೋಕೇ ಆಗಿರಲಿಲ್ಲ” ಎಂದಿದ್ದಾರೆ.

HIV ಎಫೆಕ್ಟ್‌ 42 ದಿನಗಳಲ್ಲಿ 20% ಕಡಿಮೆಯಾಗುತ್ತೆ

ನೇಚರ್ ನ ಜರ್ನಲ್ ನಲ್ಲಿ ಪ್ರಕಾಶಿತವಾದ ರಿಪೋರ್ಟ್ ಒಂದರ ಮೂಲಕ ಟೈಮ್ ಮ್ಯಾಗಜೀನ್ ನಲ್ಲಿ ಪ್ರಕಟವಾದ ಅಂಕಣದಲ್ಲಿ ಹೇಳಿರುವಂತೆ ಗೋವಿನ ಆ್ಯಂಟಿಬಾಡೀಸ್ ನಿಂದ HIV ಯ ಎಫೆಕ್ಟ್‌ನ್ನ 42 ದಿನಗಳಲ್ಲಿ ಬರೋಬ್ಬರಿ 20% ವರೆಗೆ ಕಡಿಮೆ ಮಾಡಬಹುದಾಗಿದೆಯಂತೆ. ಸಂಶೋಧನೆಯಲ್ಲಿ ತಿಳಿದು ಬಂದ ಮತ್ತೊಂದು ಸ್ಫೊಟಕ ವಿಚಾರವೇನೆಂದರೆ 381 ದಿನಗಳಲ್ಲಿ ಗೋವಿನ ಈ ಆ್ಯಂಟಿಬಾಡೀಸ್ 96% HIV ರೋಗವನ್ನ ಗುಣಪಡಿಸುತ್ತಂತೆ.

ಮತ್ತೊಬ್ಬ ಸಂಶೋಧನಕ ಡಾ.ಡೆನಿಸ್ ಬರ್ಟನ್ ರವರು ಈ ಕುರಿತು ಮಾತನಾಡುತ್ತ ಹೀಗೆ ಹೇಳ್ತಾರೆ “ಮನುಷ್ಯನ ಹೋಲಿಕೆಯಲ್ಲಿ ಪ್ರಾಣಿಗಳಲ್ಲಿನ ಆ್ಯಂಟಿಬಾಡೀಸ್ ಹೆಚ್ಚು ಯೂನಿಕ್(ವಿಶಿಷ್ಟ) ಆಗಿರುತ್ತವೆ ಹಾಗು HIV ಯನ್ನ ಸಂಪೂರ್ಣವಾಗಿ ಗುಣಮುಖ ಮಾಡುವ ಸಾಮರ್ಥ್ಯವನ್ನು ಗೋವಿನ ಆ್ಯಂಟಿಬಾಡೀಸ್ ಹೊಂದಿದೆ”

ಕಳೆದ ವರ್ಷ HIV ಯಿಂದ 10 ಲಕ್ಷ ಜನರ ಪ್ರಾಣ ಕಳೆದುಕೊಂಡಿದ್ದಾರೆ:

ಸಂಯುಕ್ತ ರಾಷ್ಟ್ರ ತನ್ನ ರಿಪೋರ್ಟ್ ಒಂದರಲ್ಲಿ 2016 ರ ವರ್ಷದಲ್ಲಿ ಏಡ್ಸ್ ನಿಂದ ಬರೋಬ್ಬರಿ 10 ಲಕ್ಷ ಜನ ಪ್ರಾಣ ತೆತ್ತಿದ್ದಾರೆ, 2005 ರಲ್ಲಿ ಈ ರೋಗದಿಂದ ಪ್ರಾಣತೆತ್ತವರ ಸಂಖ್ಯೆಗಿಂತ 2016 ರ ಸಂಖ್ಯೆ ಡಬಲ್ ಆಗಿದೆ. ಈಗ ರಿಲೀಸ್ ಆಗಿರುವ ರಿಪೋರ್ಟಿನ ಪ್ರಕಾರ ಇದರ ಪ್ರಭಾವ ಕ್ರಮೇಣ ಇಳಿಮುಖ ಕಾಣುತ್ತಿದೆ. ಪ್ಯಾರಿಸ್ ನ ಏಡ್ಸ್ ವಿಜ್ಞಾನ ಸಮ್ಮೇಳನವೊಂದರ ಮೂಲಕ ಪ್ರಕಾಶಿತವಾದ ಅಂಕಿ ಅಂಶಗಳ ಪ್ರಕಾರ ಬರೀ HIV ಸಂಕ್ರಮಣದ ಹೊಸ ಪ್ರಕರಣಗಳ ಹಾಗು ಇದರಿಂದಾಗಿ ಸಾಯುವವರ ಸಂಖ್ಯೆ ಇಳಿಮುಖವಾಗುತ್ತಿಲ್ಲ ಬದಲಾಗಿ ಮೊದಲಿಗಿಂತಲೂ ಹೆಚ್ಚು ಜನ HIV ಯಿಂದ ಪ್ರಾಣ ಉಳಿಸಿಕೊಳ್ಳಲು ಜೀವರಕ್ಷಕ ಉಪಚಾರಗಳನ್ನೂ ಮಾಡಿಸಿಕೊಳ್ಳುತ್ತಿದ್ದಾರಂತೆ.

ಏಡ್ಸ್ ರೋಗ ತಗುಲುವವರಲ್ಲಿ ಯುವಕರೇ ಹೆಚ್ಚು:

HIV ಕುರಿತಾಗಿ ಬಯಲಾದ ಮತ್ತೊಂದು ಸ್ಪೋಟಕ ಮಾಹಿತಿಯೇನೆಂದರೆ ವಿಶ್ವದಲ್ಲಿ HIV ಪೀಡಿತರಾಗುವವರಲ್ಲಿ ಅತಿ ಹೆಚ್ಚು ಜನ ಯುವಕರೇ ಇದ್ದಾರೆ‌. ಈ ಸಂಖ್ಯೆ 20 ಲಕ್ಷಕ್ಕೂ ಅಧಿಕವಾಗಿದೆ‌. UNICEF ನ ತಾಜಾ ರಿಪೋರ್ಟ್ ಒಂದರಲ್ಲಿ ತಿಳಿಸಿರುವಂತೆ ಸನ್ 2000 ರಿಂದ ಇಲ್ಲಿಯವರೆಗೆ ಏಡ್ಸ್ ರೋಗದಿಂದ ಬಳಲುತ್ತಿರುವ ಯುವಕರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆಯಂತೆ. ಇದಕ್ಕಿಂತಲೂ ಸ್ಪೋಟಕ ವಿಷಯವೇನೆಂದರೆ 10 ಲಕ್ಷಕ್ಕೂ ಅಧಿಕ ಏಡ್ಸ್ ಪೀಡಿತರು ಕೇವಲ ಆರು ದೇಶದಲ್ಲೇ ಹೆಚ್ಚಿದ್ದಾರಂತೆ. ದಕ್ಷಿಣ ಆಫ್ರಿಕಾ, ನೈಜೇರಿಯಾ, ಕೀನ್ಯಾ, ಮೊಜಾಂಬಿಕ್ ಹಾಗು ತಂಜಾನಿಯಾ ರಾಷ್ಟ್ರಗಳಲ್ಲಿ ಏಡ್ಸ್ ಪೀಡಿತರು ಹೆಚ್ಚಿದ್ದು ಭಾರತ ಮೂರನೆಯ ಸ್ಥಾನ ಪಡೆದಿದೆ.

ಕಳೆದ ವರ್ಷ ಮಾರ್ಚ್ ನಲ್ಲಿ ಕೇಂದ್ರಿಯ ಆರೋಗ್ಯ ಮಂತ್ರಿ ಜೆಪಿ ನಡ್ಡಾ ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡುತ್ತ ಭಾರತದಲ್ಲಿ 21 ಲಕ್ಷ 70 ಸಾವಿರ ಜನ HIV ಪೀಡಿತರಾಗಿದ್ದಾರೆ ಎಂದು ತಿಳಿಸಿದ್ದರು. HIV ಪೀಡಿತರ ಈ ಸಂಖ್ಯೆ ವಿಶ್ವದ ಮೂರನೆಯ ಅತಿ ದೊಡ್ಡ HIV ಪೀಡಿತರ ಸಂಖ್ಯೆಯಾಗಿದೆ. ಜೆಪಿ ನಡ್ಡಾ ರವರ ಮೂಲಕ ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ 68 ಲಕ್ಷ ಹಾಗು ನೈಜೀರಿಯಾದಲ್ಲಿ 34 ಲಕ್ಷ ಜನ HIV ಗೆ ಬಲಿಯಾಗಿದ್ದಾರೆ. ಈ ಎರಡು ರಾಷ್ಟ್ರಗಳ ಬಳಿಕ ಮೂರನೆ ಸ್ಥಾನದಲ್ಲಿ ಭಾರತವಿದೆ.

– Vinod Hindu Nationalist

Leave a Reply

Your email address will not be published. Required fields are marked *

error: Content is protected !!