ಒಂದೇ ದಿನದಲ್ಲಿ ಕೋಟ್ಯಾಧಿಶ್ವರನಾಗಲು ಈ ವ್ಯಕ್ತಿ ಮಾಡುತ್ತಿದ್ದ ಕೆಲಸ ಕಂಡು ಶಾಕ್ ಆದ ಪೊಲೀಸರು!

ಹಣ ಕಂಡರೆ ಹೆಣ ಕೂಡಾ ಬಾಯಿ ಬಿಡುತ್ತದೆ ಎಂಬ ಗಾದೆ ಮಾತಿದೆ ಹಾಗಂತ ಇಂತಹ ನೀಚ ಕೆಲಸ ಮಾಡೋದಾ ಹೌದು ಇಂದಿನ ಜಗತ್ತಿನಲ್ಲಿ ಹಣ ಇಲ್ಲದೆ ಏನೂ ಇಲ್ಲ. ಹಣ ಇಲ್ಲದವರನ್ನು ಸಮಾಜ ಕೀಳಾಗಿ ನೋಡುತ್ತದೆ, ಜಗತ್ತಿನಲ್ಲಿ ಕಾಸಿಗಿರುವ ಕಿಮ್ಮತ್ತು ವ್ಯಕ್ತಿಗಿಲ್ಲ ಎಂದು ಹಲವರು ಹೇಳುತ್ತಾರೆ.
ಇಂತಹ ಮಾತಿನಿಂದಲೋ ಏನೋ ಎಲ್ಲರೂ ಹಣ ಮಾಡಲು ಒಂದಾದರೊಂದು ಮಾರ್ಗ ಹುಡುಕುತ್ತಾರೆ. ಹಣ ಸಂಪಾದನೆಗಾಗಿ ಯಾವ ಕೆಲಸವನ್ನಾದರೂ ಮಾಡಲು ಸಿದ್ಧರಾಗಿರುತ್ತಾರೆ ಆದರೆ ಚೀನಾದಲ್ಲಿ ಒಬ್ಬ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗುವ ಆಸೆಯಿಂದ ಮಾಡಿರುವ ಕೆಲಸ ತಿಳಿದು ಪೊಲೀಸರೇ ಶಾಕ್ ಆಗಿದ್ದಾರೆ. ವ್ಯಕ್ತಯೋರ್ವ ಚೀನಾದಲ್ಲಿ ಊಟ ಮಾಡಲು ರೆಸ್ಟೋರೆಂಟ್ ಗೆ ತೆರಳಿದ್ದಾಗ ಆತನ ಊಟದಲ್ಲಿ ಇಲಿ ಬಿದ್ದಿದ್ದ ಬಗ್ಗೆ ಸುದ್ದಿಯೊಂದು ಕೇಳಿಬಂದಿತ್ತು. ಅವನ ಆಹಾರದಲ್ಲಿ ಸತ್ತ ಇಲಿ ಸಿಕ್ಕಿದೆಯೆಂದು ಆತ ರೆಸ್ಟೋರೆಂಟ್ ಮಾಲೀಕರಿಗೆ ವಿಷಯ ತಿಳಿಸಿದ್ದಾನೆ ನಂತರ ಮಾಲೀಕ ತಕ್ಷಣ ವ್ಯಕ್ತಿಯ ಆಹಾರವನ್ನು ಬದಲಾಯಿಸಿ ಕೊಟ್ಟರು, ಆದರೇ ಇದೆ ಮಾರ್ಗೋಪಾಯವೆಂದ ವ್ಯಕ್ತಿ ಆಟವಾಡಲು ಶುರು ಮಾಡಿದ್ದಾನೆ.
ಇಲಿ ಬಿದ್ದ ವಿಷಯ ಯಾರಿಗೂ ತಿಳಿಸಬಾರದು ಅಂತ ಹೊಟೆಲ್ ಮಾಲಿಕ, ಆಹಾರದಲ್ಲಿ ಇಲಿ ಸಿಕ್ಕಿದ್ದ ವ್ಯಕ್ತಿಗೆ ಕೇವಲ ಉಚಿತ ಆಹಾರ ನೀಡಿದ್ದು ಮಾತ್ರವಲ್ಲದೆ, ರೆಸ್ಟೋರೆಂಟ್ ಮಾಲೀಕ ಈ ವಿಷಯವನ್ನು ಹೊರಗಡೆ ತಿಳಿಸದಂತೆ ಮನವಿ ಮಾಡಿ ಆತನಿಗೆ ಹಣದ ಆಮಿಷ ತೋರಿದ್ದರು. ಇದು ಹಣ ಮಾಡಲು ಸರಿಯಾದ ಮಾರ್ಗವೆಂದು ತಿಳಿದ ವ್ಯಕ್ತಿ ರೆಸ್ಟೋರೆಂಟ್ ಮಾಲಿಕನ ಬಳಿ ಹಣದ ಆಮೀಷ ಇಟ್ಟಿದ್ದಾನೆ. ಈ ಕುರಿತು ಮಾಧ್ಯಮಗಳ ವರದಿ ಮಾಡಿದ್ದು ರೆಸ್ಟೋರೆಂಟ್ ಮಾಲೀಕ ಅವರಿಗೆ 20 ಸಾವಿರ ಯುವಾನ್ (ಸುಮಾರು 2 ಲಕ್ಷ ರೂ.) ನೀಡಿತ್ತೆನೆ ಎಂದಿದ್ದರಂತೆ ಆದ ಆ ವ್ಯಕ್ತಿ 5 ಮಿಲಿಯನ್ ಯುವಾನ್ (5 ಕೋಟಿ ರೂಪಾಯಿ) ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ರೆಸ್ಟೋರೆಂಟ್ ಮಾಲೀಕ ಮತ್ತು ವ್ಯಕ್ತಿಯ ನಡುವೆ ಇತ್ಯರ್ಥಗೊಳ್ಳದ ಈ ಪ್ರಕರಣ ಪೊಲೀಸರ ಬಳಿ ತಂದು ಮುಂದಿಟ್ಟಾಗ ಪೊಲೀಸರು ಪ್ರಕರಣವನ್ನು ತನಿಖೆ ಮಾಡಲು ಪ್ರಾರಂಭಿಸಿದರು. ವ್ಯಕ್ತಿ ಪ್ಲೇಟ್ ನಲ್ಲಿ ಸತ್ತ ಇಲಿಯನ್ನು ತಾನೇ ಹಾಕಿರುವುದು ಎಂದು ತನಿಖೆಯಿಂದ ಕಂಡು ಹಿಡಿದಿದ್ದು ಬಳಿಕ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದರು. ಪೊಲೀಸ್ ತನಿಖೆಯಲ್ಲಿ ವ್ಯಕ್ತಿಯು ಹಣ ಸಂಪಾದಿಸಲು ಈ ರೀತಿಯ ಪ್ಲಾನ್ ಮಾಡಿದ್ದ ಎಂಬ ಅಂಶ ಇದೀಗ ಬೆಳಕಿಗೆ ಬಂದಿತು. ವ್ಯಕ್ತಿ ಮೊದಲೂ ಕೂಡ ಹಣ ಸಂಪಾದನೆಗಾಗಿ ಇದೇ ರೀತಿಯ ಹಲವು ಕೆಲಸ ಮಾಡಿದ್ದ ಎಂಬುದನ್ನು ತಿಳಿದ ಪೊಲೀಸರು ಒಂದು ಕ್ಷಣ ಶಾಕ್ ಆಗಿದ್ದಾರೆ. ಅತೀ ಆಸೆ ಗತಿ ಗೇಡು ಎಂಬ ಮಾತು ನಾವಿಲ್ಲಿ ಸ್ಮರಿಸಬಹುದು. -Team Google Guru

Leave a Reply

Your e-mail address will not be published. Required fields are marked *

error: Content is protected !!