ಮೋದಿ ಮತ್ತೆ ಪ್ರಧಾನಿಯಾದ ಸುದ್ದಿ ಕೇಳಿ ಬೆಚ್ಚಿಬಿದ್ದು ಪಾಕಿಸ್ತಾನದಲ್ಲಿ ದಾವೂದ್ ಇಬ್ರಾಹಿಂ ರಾತ್ರೋ ರಾತ್ರಿ ಮಾಡಿದ್ದೇನು ಗೊತ್ತಾ?

ಇಂಟೆಲಿಜೆನ್ಸ್ ಏಜೆನ್ಸಿಗಳ ಮೂಲಗಳ ಪ್ರಕಾರ ಲೋಕಸಭಾ ಚುನಾವಣೆ 2019 ರ ಫಲಿತಾಂಶವನ್ನು ಕಂಡು ಪಾಕಿಸ್ತಾನದಲ್ಲಿ ಅಡಗಿ ಕೂತಿರುವ ಅಂಡರ್‌ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂ ಕೈ ಕೈ ಹಿಸುಕಿಕೊಂಡು ಬೆಚ್ಚಿಬಿದ್ದಿದ್ದಾನಂತೆ. ಕಳೆದ 5 ವರ್ಷಗಳಲ್ಲಿ ದಾವುದ್ ಹಾಗು ಆತನ ಸಹಚರರ ಆರ್ಥಿಕ ಬೆನ್ನು ಮೂಳೆ ಮುರಿದ ಬಳಿಕ ಚಡಪಡಾಯಿಸುತ್ತಿದ್ದ ದಾವುದ್‌ಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಗೆಲ್ಲದಿದ್ದರೆ ಮತ್ತೆ ಡಿ ಕಂಪೆನಿಯ ದಂಧೆಗಳನ್ನ ಶುರು ಮಾಡಬೇಕೆಂದುಕೊಂಡಿದ್ದ.

ಆದರೆ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಐತಿಹಾಸಿಕ ಪ್ರಚಂಡ ಗೆಲುವನ್ನ ನೋಡಿದ ಬಳಿಕ ದಾವುದ್ ಬೆಚ್ಚಿಬಿದ್ದಿದ್ದಾನೆ. ಇದನ್ನ ಸ್ವತಃ ಗುಪ್ತಚರ ಇಲಾಖೆಯ ಮೂಲಗಳೇ ತಿಳಿಸಿವೆ. ಮೂಲಗಳ ಪ್ರಕಾರ ಭಾರತದ ಫಲಿತಾಂಶ ತಿಳಿದ ಬಳಿಕ ಬೆದರಿರುವ ದಾವುದ್ ಗುರುವಾರ ಮಧ್ಯರಾತ್ರಿ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ವರಿಷ್ಟ ಅಧಿಕಾರಿಯೊಬ್ಬನಿಗೆ ಹಾಗು ಇಬ್ಬರು ರಿಟೈರ್ಡ್ ಅಧಿಕಾರಿಗಳಿಗೆ ಫೋನ್ ಮಾಡಿ ತನ್ನ ಚಿಂತೆಯನ್ನ ವ್ಯಕ್ತಪಡಿಸಿದ್ದಾನೆ.

ಮೂಲಗಳ ಪ್ರಕಾರ, ಈ ಮಾತುಕತೆಯಲ್ಲಿ ಆತ ಹೆಚ್ಚುತ್ತಿರುವ ಮೋದಿಯ ಜನಪ್ರೀಯತೆಯ ಜೊತೆಜೊತೆಗೆ ಅಮೇರಿಕಾ ಹಾಗು ಇಸ್ರೇಲ್‌ನಂತಹ ರಾಷ್ಟ್ರಗಳ ಜೊತೆ ಪ್ರಧಾನಿ ಮೋದಿಯ ಉತ್ತಮ ಬಾಂಧವ್ಯದ ಬಗ್ಗೆಯೂ ಉಲ್ಲೇಖಿಸಿದ್ದು ಹಾಗು ಐಎಸ್‌ಐ ಗೆ ತನ್ನ ಜೀವ ಉಳಿಸುವಂತೆ ಸಹಾಯ ಮಾಡಿ ಎಂಬ ಮನವಿಯನ್ನೂ ಮಾಡಿಕೊಂಡಿದ್ದಾನೆ.

ರಿಟೈರ್ಡ್ ಐಪಿಎಸ್ ಅಧಿಕಾರಿ ಪಿಕೆ ಜೈನ್ ರವರ ಪ್ರಕಾರ “ಬಿಜೆಪಿ ಸರ್ಕಾರ ವಾಪಸ್ಸಾಗಿದ್ದರ ಜೊತೆಗೆ ಇಂಟರ್ನ್ಯಾಷನಲ್ ಇಕ್ಷೇಶನ್ ಚೇಂಜ್ ಆಗಲಿವೆ. ಒಂದು ಸದೃಢ ಸರ್ಕಾರ ಬಂದಿದ್ದರಿಂದ ಪಾಕಿಸ್ತಾನ ಹಾಗು ದಾವುದ್‌ನ ಮೇಲೆ ಸೈಕಾಲಜಿಕಲ್ ಪ್ರೆಶರ್ ಹೆಚ್ಚಾಗಿದೆ, ಆದರೆ ದಾವುದ್ ವಾಪಸ್ ಬರಲಿದ್ದಾನೋ ಇಲ್ಲವೋ ಇದನ್ನ ಪಾಕಿಸ್ತಾನ ಸರ್ಕಾರದ ಮೇಲೆ ಭಾರತ ಸರ್ಕಾರ ಒತ್ತಡ ಹೇರಿಕೆ ನಿರ್ಣಯಿಸಲಿದೆ. ಈಗ ಭಾರತ ದಾವುದ್‌ನನ್ನ ಭಾರತಕ್ಕೆ ವಾಪಸ್ ಕರೆತರಲು ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ.

ಪಾಕಿಸ್ತಾನದ ಹಲವು ರಹಸ್ಯಗಳು ದಾವುದ್ ಬಳಿಯಿವೆ, ಹಾಗಾಗಿ ಪಾಕಿಸ್ತಾನ ಅವನನ್ನ ಭಾರತಕ್ಕೆ ಹಸ್ತಾಂತರಿಸುವುದಾಗಲಿ ಅಥವ ಭಾರತ ಆತನನ್ನ ಬಂಧಿಸುವುದು ಕಷ್ಟಕರ ಕೆಲಸವಾಗಿದೆ, ಆದರೆ ಅಸಾಧ್ಯವೇನೂ ಅಲ್ಲ. ಇದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ” ಎಂದಿದ್ದಾರೆ.

ಮೂಲಗಳ ಪ್ರಕಾರ ದಾವುದ್‌ಗೆ ಭಯವಿರೋದೇನಂದರೆ ನರೇಂದ್ರ ಮೋದಿ ಆತನನ್ನ ಹಿಡಿಯಲು ಏನು ಬೇಕಾದರೂ ಮಾಡುತ್ತಾರೆ. ಆತ ಐಎಸ್‌ಐ ಅಧಿಕಾರಿಗಳಿಗೆ ಸೂಚನೆ ನೀಡಿ ನರೇಂದ್ರ ಮೋದಿ ಎಂಥಾ ಆಪರೇಷನ್ ಕೂಡ ನಡೆಸಬಹುದು, ಅದು ಐಎಸ್‌ಐ ಗೂ ಗೊತ್ತಾಗಲ್ಲ ಎಂದಿದ್ದಾನಂತೆ‌. ಅಂಡರ್‌ವರ್ಲ್ಡ್ ಡಾನ್ ಗೆ ಅಮೇರಿಕಾ ಗುಪ್ತಚರ ಇಲಾಖೆ CIA ಹಾಗು ಇಸ್ರೇಲ್ ಗುಪ್ತಚರ ಇಲಾಖೆ ಮೊಸಾದ್ ಕೂಡ ದಾವುದ್‌ನ ವಿರುದ್ಧ ಭಾರೀ ಕಾರ್ಯಾಚರಣೆ ನಡೆದಲು ಮೋದಿ ಸರ್ಕಾರದ ಸಹಾಯ ಮಾಡಬಹುದು ಎಂಬ ಭಯ ದಾವುದ್‌ ಗಿದೆ.

ಇದೇ ಕಾರಣದಿಂದಾಗಿ ದಾವುದ್ ತನ್ನ ಭದ್ರತೆಗಾಗಿ ಐಎಸ್‌ಐ ಮುಂದೆ ಈಗ ಬೇಡಿಕೊಳ್ಳುತ್ತಿದ್ದಾನೆ. ಮೂಲಗಳ ಪ್ರಕಾರ ಐಎಸ್ಐ ಅಧಿಕಾರಿಗಳೂ ಕೂಡ ದಾವುದ್ ಗೆ ಆಶ್ವಾಸನೆ ನೀಡಿ ತನ್ನ ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಮೀಟಿಂಗ್ ಕರೆದು ಈ ಕುರಿತು ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರಂತೆ.

ವರಿಷ್ಠ ಪತ್ರಕರ್ತ ಎಸ್.ಬಾಲಕೃಷ್ಣನ್ ರವರು ಹೇಳುವ ಪ್ರಕಾರ “ಅಜಿತ್ ದೋವಲ್ ಮೊದಲಿನಿಂದಲೂ ದಾವುದ್‌ನ ಡಿ-ಕಂಪೆನಿಯ ಕುರಿತಾಗಿ ವರ್ಕೌಟ್ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಪಾರ್ಟ್ 2 ಬಂದಿದೆ, ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಹೋಲ್ಡ್ ಇಟ್ಟುಕೊಂಡಿದೆ. ದಾವುದ್ ಈಗ ಬಚಾವಾಗಲು ಸಾಧ್ಯವೇ ಇಲ್ಲ. ಒಂದಲ್ಲ ಒಂದು ಆಪರೇಷನ್ ಮಾಡಿ ಅಥವ ಬೇರೆ ಯಾವುದಾದರೂ ಒಂದು ಮಾರ್ಗದಿಂದ ಡಿ ಕಂಪೆನಿಯ ಕಥೆಯನ್ನ ಕ್ಲೋಸ್ ಮಾಡಲಾಗುವುದು.

ದಾವುದ್‌ಗೆ ಪಾಕಿಸ್ತಾನ ಸೀದಾ ಭಾರತಕ್ಕೆ ಒಪ್ಪಿಸುವಂತೆ ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಮಾಡಲಾಗುತ್ತದೆ, ಆದರೆ ಹೀಗೆ ಮಾಡಿದರೆ ತನ್ನ ಬಣ್ಣ ಬಯಲಾಗುತ್ತೆ ಎಂಬ ಕಾರಣದಿಂದಾಗಿ ಆತನನ್ನ ಬೇರೆ ಯಾವುದಾದರೂ ಗುಪ್ತ ಜಾಗಕ್ಕೆ ತೆರಳುವಂತೆ ಆತನಿಗೆ ಸೂಚನೆ ನೀಡಬಹುದು. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ದೇಶಗಳ ಜೊತೆ ಸೇರಿ ಭಾರತ ಗುಪ್ತ ಆಪರೇಷನ್ ಕೂಡ ನಡೆಸಬಹುದು” ಎಂದು ಅವರು ಹೇಳುತ್ತಾರೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ ದಾವುದ್‌ನ ಹಲವಾರು ಸಂಪತ್ತನ್ನ ಜಪ್ತಿ ಮಾಡುವುದಲ್ಲದೆ ಆತನ ಅಣ್ಣ ಇಕ್ಬಾಲ್ ಕಾಸಕರ್‌ನ ಸಮೇತ ಹಲವು ಏಜೆಂಟ್ ಗಳನ್ನ ಭಾರತಕ್ಕೆ ಕರೆತರಲಾಗಿದೆ.

ಇಂಥದ್ರಲ್ಲಿ ವಿಶೇಷಜ್ಞರು ಹೇಳುವಂತೆ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ನ ಮುಖ್ಯಸ್ಥ ಮಸೂದ್ ಅಜರ್‌ನ ವಿರುದ್ಧ ಕಾರ್ಯಾಚರಣೆ ನಡೆಸಿದ ಬಳಿಕ ಈಗ ನೆಕ್ಸ್ಟ್ ಟಾರ್ಗೇಟ್ ದಾವುದ್ ಇಬ್ರಾಹಿಂ ಎಂದು ಹೇಳಲಾಗುತ್ತಿದೆ. ಇದೇ ಆತನ ಚಿಂತೆಗೆ ಕಾರಣವಾಗಿದೆ.

– Vinod Hindu Nationalist

Leave a Reply

Your e-mail address will not be published. Required fields are marked *

error: Content is protected !!