ಡಿಕ್ಲೇರ್ ಆಗೇಬಿಡುತ್ತಾ ಇಂಡಿಯಾ ಪಾಕಿಸ್ತಾನ ವಾರ್; ಭಾರತ ಹಾಗು ನೇಪಾಳದ ಗಡಿಯಲ್ಲಿ ಪಾಕಿಸ್ತಾನದ ಸೇನಾ ಜಮಾವಣೆ

ಪಾಕಿಸ್ತಾನದ ಸ್ಥಿತಿ ಭಿಕಾರಿ ರಾಷ್ಟ್ರದಂತಾಗಿದೆ, ಪೆಟ್ರೋಲ್ ಬೆಲೆ ಗಗನಕ್ಕೇರಿದೆ, ಡಾಲರ್‌ನೆದರು ಪಾಕಿಸ್ತಾನದ ರೂಪಾಯಿ ಮೌಲ್ಯ ಹತ್ತಿರತ್ತಿರ 150 ಕ್ಕೆ ಬಂದು ನಿಂತಿದೆ, ಪಾಕಿಸ್ತಾನ ರಾಷ್ಟ್ರ ಸಂಪೂರ್ಣ ಸಾಲದಲ್ಲಿ ಮುಳುಗಿ ಹೋಗಿದ್ದು ಪಾಕಿಸ್ತಾನದ ಆರ್ಥಿಕತೆಯ ಕೊನೆಯ ಉಸಿರನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಪಾಕಿಸ್ತಾನಕ್ಕೆ ಬೇರೆ ರಾಷ್ಟ್ರಗಳಿಗೆ ಭಿಕ್ಷೆ ಬೇಡುವುದನ್ನ ಬಿಟ್ಟರೆ ಬೇರ‌್ಯಾವ ದಾರಿಯೂ ಉಳಿದಿಲ್ಲ.

ಚೀನಾಗೆ ಆರ್ಥಿಕ ಸಹಾಯ ಕೇಳೋಣ ಅಂದರೆ ಚೀನಾ ಕೂಡ ತನ್ನ ಪರಮಾಪ್ತ ರಾಷ್ಟ್ರ ಪಾಕಿಸ್ತಾನದ ಮೇಲೆ ಮುನಿಸಿಕೊಂಡಂತೆ ಕಾಣುತ್ತಿದೆ. ತಾನೇ ಬೆಳೆಸಿದ ಪಾಕಿಸ್ತಾನ ಹಾಗು ಭಯೋತ್ಪಾದನೆ ಇಂದು ತನ್ನ ಬುಡಕ್ಕೇ ಬಾಂಬ್ ಇಡುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದೆ ಎಂಬುದೀಗ ಚೀನಾಗೆ ಅರ್ಥವಾದಂತೆ ಕಾಣುತ್ತಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಹಲವು ಕಡೆ ಬಾಂಬ್ ಸ್ಪೋಟವಾಗಿದ್ದವು ಅದರಲ್ಲಿ ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಕಛೇರಿಯೂ ಭಯೋತ್ಪಾದಕರ ದಾಳಿಗೆ ತುತ್ತಾಗಿತ್ತು.

ಮೊನ್ನೆ ಮೊನ್ನೆಯಷ್ಟೇ ಚೀನಾದ ಮೀಡಿಯಾಗಳು ಪಾಕ್ ಆಕ್ರಮಿತ ಕಾಶ್ಮೀರ(POK) ಯನ್ನ ಕೂಡ ಭಾರತದ ಅಂಗವೆಂಬಂತೆ ಚಿತ್ರಿಸಿತ್ತು, ಪಾಕಿಸ್ತಾನಕ್ಕೆ ಈ ಹಿಂದೆ ಚೀನಾ ನೀಡುತ್ತಿದ್ದ ಆರ್ಥಿಕ ಸಹಾಯ ಇದೀಗ ಕಡಿಮೆಯಾಗಿಬಿಟ್ಟಿದೆ. ಅತ್ತ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂಡ ಪಾಕಿಸ್ತಾನವನ್ನ ಹಿಗ್ಗಾಮುಗ್ಗಾ ಝಾಡಿಸಿದೆಯಲ್ಲದೆ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಆರ್ಥಿಕ ಧನ ಸಹಾಯವನ್ನೂ ನಿಲ್ಲಿಸಿಬಿಟ್ಟಿದೆ.

ಇಷ್ಟಾದರೂ ಬುದ್ಧಿ ಬರದ ಪಾಕಿಸ್ತಾನ ಮಾತ್ರ ತಾನು ಸರ್ವನಾಶವಾಗಿದ್ದೇನೆ, ಭಾರತವನ್ನ ಸುಮ್ಮನೆ ಬಿಡೋದ್ಯಾಕೆ ಅಂತ ಭಾರತವನ್ನ ಸರ್ವನಾಶ ಮಾಡಿಬಿಡಲು ಸಂಚು ಮಾತ್ರ ಹೂಡಲು ಸಜ್ಜಾಗಿದೆ‌. ಭಾರತವನ್ನ ಸರ್ವನಾಶ ಮಾಡುತ್ತೇನೆ ಎಂದರೆ ಪಾಕಿಸ್ತಾನಕ್ಕೆ ರಾಶಿ ರಾಶಿ ಹಣ ಬಂದು ಬೀಳುತ್ತೆ ಎಂಬುದು ಪಾಕಿಸ್ತಾನದ ಲೆಕ್ಕಾಚಾರವಾಗಿದೆ. ಅದೇ ಹಣದಿಂದ ತನ್ನ ಆರ್ಥಿಕ ಸ್ಥಿತಿಯನ್ನ ಸುಧಾರಿಸಿಕೊಳ್ಳಬಹುದು ಅನ್ನೋದು ಪಾಕಿಸ್ತಾನದ ಲೆಕ್ಕಾಚಾರವಿದ್ದಂತೆ ಕಾಣುತ್ತಿದೆ.

ಇಂತಹ ಅನುಮಾನಗಳು ಕಾಡಲೂ ಕೂಡ ಪ್ರಬಲ ಕಾರಣಗಳಿವೆ. ಪಾಕಿಸ್ತಾನದ ಜೊತೆ ಹೊಂದಿರುವ ಭಾರತದ ಗಡಿ ಪ್ರದೇಶಗಳಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿದೆ, ಅಷ್ಟೇ ಅಲ್ಲದೆ ಜಿಹಾದಿ ಮಾನಸಿಕತೆಯ ಮುಸಲ್ಮಾನರನ್ನೇ ತಂದು ಅಲ್ಲಿ ನೆಲೆಗೊಳ್ಳುವಂತೆ ಮಾಡಲಾಗುತ್ತಿದೆ. ಇದನ್ನ ನಾವು ಹೇಳುತ್ತಿಲ್ಲ, ಇದನ್ನ ದೇಶದ ಗಡಿ ಕಾಯುವ ದೇಶ ರಕ್ಷಕರ ಪಡೆಯಾದ BSF ಮೂಲಗಳೇ ಬಹಿರಂಗಪಡಿಸಿವೆ‌. BSF ರಿಸರ್ಚ್ ಟೀಂ ಇಂತಹದ್ದೊಂದು ಆಘಾತಕಾರಿ ವಿಷಯವನ್ನ ಬಯಲು ಮಾಡಿದೆ‌.

ಪಾಕಿಸ್ತಾನದ ಜೊತೆ ಗಡಿ ಹೊಂದಿಕೊಂಡಿರುವ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಹಠಾತ್ತಾಗಿ ಹೆಚ್ವಾಗಿರುವುದರಿಂದ BSF(Border Security Force) ಚಿಂತೆಗೀಡಾಗಿದೆ. BSF ನ ಈ ರಿಪೋರ್ಟಿನ ಪ್ರಕಾರ ಕೇವಲ ಮುಸಲ್ಮಾನರ ಜನಸಂಖ್ಯೆಯಷ್ಟೇ ಹೆಚ್ಚಾಗಿತ್ತಿಲ್ಲ ಬದಲಾಗಿ ಇದರ ಜೊತೆ ಜೊತೆಗೆ ಅರಬಿ ಸಂಸ್ಕೃತಿಯ ಮಾನಸಿಕತೆಯ ಜಿಹಾದಿ ರಾಕ್ಷಸ ಪ್ರವೃತ್ತಿಯನ್ನೂ ಅವರಲ್ಲಿ ಬಿತ್ತಲಾಗೊದೆ ಎಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ಬಹಳ ವೇಗವಾಗಿ ಜನಸಂಖ್ಯಾ ಪರಿವರ್ತನವಾಗಿದೆ ಎಂದು BSF ಮೂಲಗಳು ತಿಳಿಸಿವೆ.

BSF ತನ್ನ ಈ ರಿಪೋರ್ಟನ್ನ ಕೇಂದ್ರೀಯ ಗೃಹ ಸಚಿವಾಲಯಕ್ಕೆ ಈಗಾಗಲೇ ಕಳಿಸಿದೆ. BSF ನ ಈ ಅಧ್ಯಯನದಲ್ಲಿ ಬಹಿರಂಗವಾಗಿರುವ ಮತ್ತೊಂದು ಸ್ಪೋಟಕ ವಿಷಯವೇನೆಂದರೆ ಈ ಪ್ರದೇಶಗಳಲ್ಲಿ ಇಸ್ಲಾಂ ಧಾರ್ಮಿಕ ಕೋಮುವಾದ, ಕಟ್ಟರತೆ ಕೂಡ ತೀವ್ರ ಗತಿಯಲ್ಲಿ ಹೆಚ್ಚುತ್ತಿದೆ. ಈಗ ಇಲ್ಲಿ ಮುಸಲ್ಮಾನರು ರಾಜಸ್ಥಾನಿ ಪರಂಪರೆಯ ಬದಲಾಗಿ ಅರಬ್ ಪರಂಪರೆಯನ್ನ ಪಾಲಿಸುತ್ತಿದ್ದಾರೆ. ಈ ಪ್ರದೇಶದಲ್ಲಿರುವ ಹಿಂದುಗಳು ಹೇಳುವ ಪ್ರಕಾರ ಮುಸಲ್ಮಾನರ ಜೊತೆ ಈ ಹಿಂದೆ ಇದ್ದ ಸಂಬಂಧಗಳು, ಮಾತುಕತೆಗಳು ಹಳಸಿ ಹೋಗಿವೆ.

ಈ ಹಿಂದೆ ಮುಸಲ್ಮಾನರು ತಮ್ಮ ಜೊತೆ ಬೆರೆತು ಅನ್ಯೋನ್ಯವಾಗಿದ್ದರು ಆದರೆ ಈಗ ಅವರೆಲ್ಲಾ ಬದಲಾಗಿದ್ದು ಅವರ ಮಾನಸಿಕತೆ ಈ ಹಿಂದಿನಂತಿಲ್ಲ ಎಂದು ಹೇಳಿದ್ದಾರೆ. ಈ ಪ್ರದೇಶಗಳಲ್ಲಿ ಮುಸಲ್ಮಾನರ ಜನಸಂಖ್ಯೆ 20 ರಿಂದ 25 ಪ್ರತಿಶತ ಹೆಚ್ಚಾಗಿದೆ. ‘ಸ್ಟಡಿ ಆಫ್ ಡೆಮಾಗ್ರಾಫಿಕ್ ಪ್ಯಾಟರ್ನ್ ಇನ್ ದಿ ಬಾರ್ಡರ್ ಆಫ್ ರಾಜಸ್ಥಾನ್ & ಇಟ್ಸ್ ಸೆಕ್ಯೂರಿಟಿ ಇಂಪ್ಲಿಕೇಷನ್’ ಹೆಸರಿನಿಂದ ನಡೆಸಲಾದ ಅಧ್ಯಯನದಲ್ಲಿ ಇಂತಹದ್ದೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. 

ಈ ರಿಪೋರ್ಟಿನಲ್ಲಿ ಉಲ್ಲೇಖಿಸಿರುವಂತೆ ಪಾಕಿಸ್ತಾನದ ಜೊತೆಗೆ ಗಡಿ ಹೊಂದಿಕೊಂಡಿರುವ ಭಾರತದ ಪ್ರದೇಶಗಳಲ್ಲಿ ಮುಸ್ಲೀಮರ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಅಲ್ಲಿನ ಹಿಂದುಗಳಿಗೆ ಅಸುರಕ್ಷತೆಯ ಭಯ ಕಾಡುತ್ತಿದೆ. ನೆನಪಿರಲಿ ಸಮಯ ಸಮಯಕ್ಕೆ ಬಿಎಸ್ಸೆಫ್ ಇಂತಹ ರಿಪೋರ್ಟ್ ಗಳನ್ನ ಅಧ್ಯಯನ ನಡೆಸುತ್ತಿರುತ್ತದೆ, ಈ ರೀತಿಯ ರಿಸರ್ಚ್ ನಡೆಸುವುದರ ಮೂಲಕ ದೇಶದ ಗಡಿಯನ್ನ ಸುರಕ್ಷಿತವಾಗಿಟ್ಟುಕೊಳ್ಳಲು ಬಿಎಸ್ಸೆಫ್ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನೂ ಕೈಗೊಳ್ಳುತ್ತದೆ‌.

ಹಾಗೆ ನೋಡಿದರೆ ಭಾರತದ ಗಡಿ ಪ್ರದೇಶಗಳಲ್ಲಿ ಹೇಗೆ ಮುಸಲ್ಮಾನರ ಜನಸಂಖ್ಯೆ ವೃದ್ಧಿಯಾಗುತ್ತಿದೆಯೋ ಅದೇ ರೀತಿಯಲ್ಲಿ ಇಡೀ ದೇಶದಲ್ಲೂ ಮುಸಲ್ಮಾನರ ಜನಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ, ಇದರಿಂದ ಕೇವಲ ಬಿಎಸ್ಸೆಫ್ ಅಷ್ಟೇ ಅಲ್ಲ ದೇಶದ ನಾಗರಿಕರೂ ಚಿಂತಿಸಲೇಬೇಕಾದ ವಿಷಯವಾಗಿದೆ. ಬಿಎಸ್ಸೆಫ್ ನ ಈ ರಿಪೋರ್ಟಿನ ಪ್ರಕಾರ ಕೇವಲ ಭಾರತದ ಗಡಿ ಪ್ರದೇಶಗಳಲ್ಲಷ್ಟೇ ಅಲ್ಲದೆ ನೇಪಾಳದ ಜೊತೆ ಗಡಿ ಹೊಂದಿರುವ ಭಾರತದ ಹಲವು ಪ್ರದೇಶಗಳಲ್ಲೂ ಈವರೀತಿಯ ವಿಶೇಷ ಸಮುದಾಯದವರ ಜಸಂಖ್ಯೆ ಹೆಚ್ಚಾಗಿತ್ತಿದೆ.

ಇತ್ತೀಚೆಗಷ್ಟೇ ಉತ್ತರಪ್ರದೇಶದ ಬುಲಂದ್‌ಶಹರ್ ಎಂಬ ಜಿಲ್ಲೆಯಲ್ಲಿ ಮುಸಲ್ಮಾನರು ಬೃಹತ್ ಸಂಖ್ಯೆಯ ಇಜ್ತೆಮಾ ರ‌್ಯಾಲಿ ನಡೆಸಿದ್ದರು, ಇದರ ವಿಡಿಯೋವನ್ನ ಸುಪ್ರೀಂಕೋರ್ಟ್ ಯುವ ವಕೀಲ್ ಪ್ರಶಾಂತ್ ಉಮರಾವೋ ರವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಈ ದೇಶದಲ್ಲಿ ಜನಸಂಖ್ಯಾ ನಿಯಂತ್ರಣಾ ಕಾನೂನು ಜಾರಿಯಾಗಬೇಕು ಇಲ್ಲವಾದರೆ ಭಾರತದೊಳಗಿನಿಂದಲೇ ಮುಸಲ್ಮಾನರು ಗೃಹಯುದ್ಧ ಆರಂಭಿಸಬಹುದು ಎಂದು ಟ್ವೀಟ್ ಮಾಡಿದ್ದರು. ಭಾರತವನ್ನ ಸರ್ವನಾಶಗೊಳಿಸಲು ಭಯೋತ್ಪಾದಕರಿಂದ ಆಗುತ್ತಿಲ್ಲ, ಹಾಗಾಗಿ ಭಾರತದ ಮುಸಲ್ಮಾನರನ್ನೇ ಬಳಸಿಕೊಂಡು ತಮ್ಮ ಪ್ಲ್ಯಾನ್ ಸಕ್ಸಸ್ ಮಾಡಬೇಕೆಂದು ಪಾಕಿಸ್ತಾನವಹಾಗು ಅರಬ್ ರಾಷ್ಟ್ರಗಳು ಸಂಚು ಹೂಡಿವೆಯೆಂಬ ಆಘಾತಕಾರಿ ವಿಷಯ ಕೂಡ ಬಹಿರಂಗವಾಗಿದೆ

– ಶಿವರಾಜ್ ಮಾಗಡಿ

Leave a Reply

Your e-mail address will not be published. Required fields are marked *

error: Content is protected !!