ಬೀಗದ ಕೈಯಿಂದಲ್ಲ ಈ ಮಂತ್ರದಿಂದ ತೆರೆಯುತ್ತೆ ನಿಧಿಯಿರುವ ಈ ನಿಗೂಢ ಬಾಗಿಲು; ಅಷ್ಟಕ್ಕೂ ಅದರೊಳಗಿರುವ ಒಟ್ಟು ನಿಧಿಯೆಷ್ಟು ಗೊತ್ತಾ?

ಕೇರಳ ರಾಜ್ಯ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಪುಟ್ಟ ರಾಜ್ಯವಾಗಿದೆ. ಅದೇ ಕೇರಳದ ತಿರುವನಂತಪುರಂ ನಲ್ಲಿರುವ ಪದ್ಮನಾಭ ಸ್ವಾಮಿ ದೇವಾಲಯ ಕೂಡ ಜಗತ್ತಿನಲ್ಲೇ ಸುಪ್ರಸಿದ್ಧವಾದ ದೇವಸ್ಥಾನವೂ ಹೌದು. ಆದರೆ ಜಗತ್ತಿನ ಕೆಲ ರಹಸ್ಯಮಯ ಜಾಗಗಳಲ್ಲಿ ಅನಂತ ಪದ್ಮನಾಭ ಸ್ವಾಮಿ ದೇವಾಲಯವೂ ಕೂಡ ಒಂದು. ಈ ದೇವಾಲಯವನ್ನ ನೋಡಲು, ದೇವರ ದರ್ಶನ ಪಡೆಯಲು ದೇಶ ವಿದೇಶದಿಂದ ಜನ ಬರುತ್ತಾರೆ.

ಇಂಟರೆಸ್ಟಿಂಗ್ ಸಂಗತಿಯೇನೆಂದರೆ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿರುವ ಈ ಹಿಂದೂ ಮಂದಿರದಲ್ಲಿ ಕೇವಲ ಹಿಂದೂ ಧರ್ಮೀಯರಿಗೆ ಮಾತ್ರ ದೇಗುಲ ಪ್ರವೇಶಿಸುವ ಅದೂ ವಿಶೇಷವಾದ ವಸ್ತ್ರವಿನ್ಯಾಸವುಳ್ಳ ಬಟ್ಟೆ(ಡ್ರೆಸ್ ಕೋಡ್) ನ್ನ ಧರಿಸುವುದು ಅತ್ಯವಶ್ಯಕ. ಇದರ ಹೊರತಾಗಿ ಈ ಮಂದಿರದಲ್ಲಿ ಅಪಾರವಾದ ಸಂಪತ್ತಿರುವುದರ ಮಾಹಿತಿಯ ಮೇರೆಗೆ ಸುಪ್ರೀಂಕೋರ್ಟ್ ಮೂಲಕ ಕೆಲ ಬಾಗಿಲುಗಳನ್ನು ಈಗಾಗಲೇ ತೆರೆಯಲಾಗಿದೆ.

ಇದರಲ್ಲಿ 5 ರಹಸ್ಯ ಕೋಣೆಗಳಿಂದ ಬರೋಬ್ಬರಿ 1 ಲಕ್ಷ 32 ಸಾವಿರ ಕೋಟಿಯಷ್ಟು ಸಂಪತ್ತು ದೊರೆತಿದೆ. ಆದರೆ ಕೊನೆಯ ಅಂದರೆ 6 ನೆಯ ಕೋಣೆಯ ಪ್ರವೇಶದ್ವಾರವನ್ನ ಮಾತ್ರ ಈಗಲೂ ತೆಗೆಯಲು ಯಾರಿಂದಲೂ ಸಾಧ್ಯವಾಗಿಲ್ಲ. ಮಂದಿರದ ಆರು ದ್ವಾರಗಳ ಕೋಣೆಯಿಂದ ಸುಪ್ರೀಂಕೋರ್ಟ್ ಅನುಮತಿಯ ಮೇರೆಗೆ ತೆರೆದಾಗ ಅಲ್ಲಿದ್ದ ಸಂಪತ್ತನ್ನ ಹೊರ ತೆಗೆಯೋಕೆ ಬರೋಬ್ಬರಿ 12 ದಿವಸಗಳೇ ಹಿಡಿದಿದ್ದವು. 

ಈ ರಹಸ್ಯಮಯ ಕೋಣೆಯನ್ನ ಈವರೆಗೂ ತೆಗೆಯಲು ಸಾಧ್ಯವಾಗಿಲ್ಲ

ಕೇರಳದ ತಿರುವನಂತಪುರಂನಲ್ಲಿರುವ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಗರ್ಭಗೃಹದಲ್ಲಿ ಭಗವಾನ್ ವಿಷ್ಣುವಿನ ಮೂರ್ತಿ ವಿರಾಜಮಾನವಾಗಿದೆ. ಇದೇ ಕಾರಣದಿಂದಾಗಿ ದೇಶದ ಸುಪ್ರಸಿದ್ಧ ವೈಷ್ಣವ ಮಂದಿರಗಳಲ್ಲಿ ಇದೂ ಒಂದು. ಆದರೆ ವಿಶ್ವದ ಅತ್ಯಂತ ಶ್ರೀಮಂತ ದೇಗುಲವಾದ ಈ ಮಂದಿರ ಸಾಕಷ್ಟು ರಹಸ್ಯಗಳಿಂದ ಕೂಡಿದೆ. ಈ ಮಂದಿರದಲ್ಲಿರುವ ರಹಸ್ಯಮಯ ದ್ವಾರವನ್ನ ಒಬ್ಬ ಸಿದ್ಧ ಪುರುಷ ಮಾತ್ರ ತೆರೆಯಬಲ್ಲನೆಂದು ಹೇಳಲಾಗುತ್ತದೆ.

ಆದರೆ ಇಲ್ಲಿಯವರೆಗೂ ಆ ದ್ವಾರವನ್ನ ಯಾರಿಂದಲೂ ತೆಗೆಯಲು ಸಾಧ್ಯವಾಗಿಲ್ಲ. ನಂಬಿಕೆಗಳ ಹಾಗು ಧಾರ್ಮಿಕ ಮಾನ್ಯತೆಗಳ ಪ್ರಕಾರ ಈ ದ್ವಾರ ಭಗವಂತನ ಸನ್ನಿಧಿಗೆ ತೆರಳಿತ್ತೆ ಎಂದು ಹೇಳಲಾಗುತ್ತದೆ. ಈವರೆಗೂ ಈ ದ್ವಾರವನ್ನ ತೆಗೆಯುವುದಾಗಲಿ ಅಥವ ಈ ದ್ವಾರದ ರಹಸ್ಯವನ್ನ ಭೇದಿಸುವುದಾಗಲಿ ಯಾರಿಂದಲೂ ಸಾಧ್ಯವಾಗಿಲ್ಲ.

ಈ ದ್ವಾರದೊಳಗಡೆ ಅಡಗಿದೆಯಂತೆ ಎರಡು ಲಕ್ಷ ಕೋಟಿಯಷ್ಟು ಚಿನ್ನ

ಈಗಾಗಲೇ ಆರು ದ್ವಾರಗಳನ್ನ ತೆಗೆಯಲಾಗಿದ್ದು ಆ ಆರೂ ದ್ವಾರಗಳೊಳಗಿನ ಕೋಣೆಯೊಳಗಿನಿಂದ ಬರೋಬ್ಬರಿ 1 ಲಕ್ಷ 32 ಸಾವಿರ ಕೋಟಿಯಷ್ಟು ಖಜಾನೆಯನ್ನ ಹೊರತೆಗೆಯಲಾಗಿತ್ತು ಆದರೆ ಈ 7 ನೆಯ ದ್ವಾರವನ್ನ ತೆಗೆಯಲು ಸಾಧ್ಯವೇ ಆಗಿಲ್ಲ. ಈ ದ್ವಾರದೊಳಗಿನ ಕೋಣೆಯಲ್ಲಿ ಬರೋಬ್ಬರಿ ಎರಡು ಲಕ್ಷ ಕೋಟಿಯಷ್ಟು ಚಿನ್ನದ ಸಂಪತ್ತಿದೆ ಎಂದು ಹೇಳಲಾಗುತ್ತೆ. ಆದರೆ ಇತಿಹಾಸಕಾರರ ಅನುಮಾನಗಳ ಪ್ರಕಾರ ಅಸಲಿಗೆ ಈ ಕೋಣೆಯಲ್ಲಿ 2 ಲಕ್ಷ ಕೋಟಿಯಲ್ಲ ಬದಲಾಗಿ ಅದಕ್ಕೂ ಹತ್ತು ಪಟ್ಟು ಚಿನ್ನದ ರಾಶಿಯಿದೆಯೆಂದು ಹೇಳಲಾಗುತ್ತೆ‌.

ಈ ಖಜಾನೆಯಲ್ಲಿ ಚಿನ್ನ, ಬೆಳ್ಳಿಯ ದುಬಾರಿ ಚೈನ್, ವಜ್ರ, ಪನ್ನಾ, ರೂಬಿ ಹಾಗು ಇನ್ನಿತರ ಬೆಲೆ ಬಾಳುವ ವಸ್ತುಗಳಾದ ಕಲ್ಲುಗಳು, ಚಿನ್ನದ ಮೂರ್ತಿಗಳು, ರೂಬಿಯಂತಹ ವಿಶಿಷ್ಟ ಹಾಗು ಅತೀ ಬೆಲೆ ಬಾಳುವ ವಸ್ತುಗಳಿವೆಯಂತೆ ಆದರೆ ಇವುಗಳೆಲ್ಲದರ ಸಂಪತ್ತು ಎಷ್ಟು ಬೆಲೆ ಬಾಳುತ್ತೆ ಅನ್ನೋದನ್ನ ಅಂದಾಜು ಮಾಡಿ ಊಹಿಸಲೂ ಸಾಧ್ಯವಿರದಷ್ಟು ಸಂಪತ್ತು ಈ ಕೋಣೆಯಲ್ಲಿದೆ ಎಂದು ಹೇಳಲಾಗುತ್ತೆ.

ಕಲಿಯುಗದ ಮೊದಲನೆಯ ದಿನದಂದೇ ಸ್ಥಾಪನೆಯಾಗಿತ್ತು ಈ ಮಂದಿರ

ಮಾನ್ಯತೆಗಳ ಪ್ರಕಾರ 18 ನೆಯ ಶತಮಾನದಲ್ಲಿ ತಿರುವಾಂಕೂರಿನ ರಾಜರುಗಳು ಈ ಮಂದಿರದಲ್ಲಿ ಅನಂತ ಪದ್ಮನಾಭ ಸ್ವಾಮಿಯ ಮೂರ್ತಿಯನ್ನ ಪ್ರತಿಷ್ಠಾಪಿಸಿದ್ದರು, ಆದರೆ ಇತಿಹಾಸಕಾರರಿಗೆ ಮಾತ್ರ ಈ ಕುರಿತು ಇನ್ನೂ ಯಾವ ಮಾಹಿತಿಗಳೂ ಸಿಕ್ಕಿಲ್ಲ. ಇಂತಹದ್ದೊಂದು ರಹಸ್ಯಮಯ ಮಂದಿರವನ್ನ 5000 ವರ್ಷಗಳ ಹಿಂದೆ ಕಲಿಯುಗದ ಮೊದಲನೆಯ ದಿನದಂದೇ ಕಟ್ಟಲಾಗಿತ್ತು ಎಂಬ ನಂಬಿಕೆ ಇಲ್ಲಿನ ಜನರದ್ದು.

ಇದರ ಜೊತೆ ಜೊತೆಗೆ ತಿರುವಂಕೂರು ರಾಜ ವಂಶಸ್ಥರು ತಮ್ಮ ಇಡೀ ಸಂಪತ್ತನ್ನ ಈ ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ಅರ್ಪಿಸಿದ್ದರು. ಸದ್ಯ ಈ ಮಂದಿರವನ್ನ ಹಾಗು ಮಂದಿರದ ಕಾರ್ಯಕಲಾಪಗಳನ್ನ ರಾಜ ಮನೆತನದ ಅಧೀನದಲ್ಲಿರುವ ಒಂದು ಪ್ರೈವೇಟ್ ಟ್ರಸ್ಟ್ ನೋಡಿಕೊಳ್ಳುತ್ತಿದೆ.

6 ನೆಯ ರಹಸ್ಯಮಯ ದ್ವಾರ ಶಾಪಗ್ರಸ್ಥ ದ್ವಾರವಂತೆ

ನಂಬಿಕೆಗಳ ಪ್ರಕಾರ ಆರನೆಯ ಶತಮಾನದಲ್ಲಿ ತಿರುವಾಂಕೂರಿನ ಮಹಾರಾಜ ಈ ಮಂದಿರದ ನಿರ್ಮಾಣ ಮಾಡಿದ್ದನಂತೆ ಹಾಗು ತನ್ನ ಅಪಾರ ಹಾಗು ಅಗಣಿತ ಸಂಪತ್ತನ್ನ ಮಂದಿರ ಕೆಲವು ಕೋಣೆಗಳಲ್ಲಿ ಹಾಗು ದಪ್ಪದಾಗಿರುವ ಮಂದಿರದ ಗೋಡೆಯ ಹಿಂಭಾಗದಲ್ಲಿ ಮುಚ್ಚಿಟ್ಟಿದ್ದನಂತೆ.

ಅದಾದ ಬಳಿಕ ಹಲವಾರು ಶತಮಾನಗಳವರೆಗೆ ಈ ಬಾಗಿಲನ್ನ ಯಾರೂ ತೆರೆಯುವ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ‌. ಬಳಿಕ ಈ ಕೋಣೆಯನ್ನು ಶಾಪಗ್ರಸ್ಥ ದ್ವಾರದ ಕೋಣೆಯೆಂದೇ ಜನ ನಂಬುತ್ತ ಬಂದಿದ್ದಾರೆ.

ಪೌರಾಣಿಕ ಕಥೆಗಳ ಹಾಗು ಇಲ್ಲಿನ ಜನರಿಗೆ ತಮ್ಮ ಪೂರ್ವಜರು ಹೇಳಿರುವಂತೆ ಈ ಏಳನೆಯ ದ್ವಾರವನ್ನ ತೆರೆಯಲು ಕೆಲ ಜನರ ತಂಡ ಪ್ರಯತ್ನ ಪಟ್ಟಿತ್ತಂತೆ ಆದರೆ ಅದರೊಳಗೆ ಹೋಗೋದು ಬಿಡಿ ಹತ್ತಿರ ತೆರಳಿದ್ದಾಗ ಭಯಾನಕ ವಿಷವುಳ್ಳ ಹಾವುಗಳು ಕಡಿದದ್ದರಿಂದ ಅವರೆಲ್ಲರೂ ಸತ್ತು ಹೋಗಿದ್ದರೆಂಬ ಕಥೆಗಳೂ ಪ್ರಚಲಿತದಲ್ಲಿವೆ.

25 ವರ್ಷಗಳ ಹಿಂದೆ ರಾಜ್ಯ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾಗ ಈ ಮಂದಿರದ ಸಂಪತ್ತನ್ನ ತರಲು ತಂಡವೊಂದನ್ನ ಕಳಿಸಿದ್ದಾಗ ಆ ತಂಡದ ಸದಸ್ಯರೂ ಹಾವುಗಳ ಕಚ್ಚುವಿಕೆಯಿಂದಲೇ ಇಡೀ ತಂಡದ ಸದಸ್ಯರೇ ಮರಣವನ್ನಪ್ಪಿದ್ದರು. ಮಂದಿರದ ಈ ದ್ವಾರವನ್ನ ತೆರೆಯಲು ಸಾಮಾನ್ಯ ಮನುಷ್ಯರಿಂದಾಗಲಿ ಅಥವ ಬೀಗದ ಕೈಯಿಂದಾಗಲಿ ಸಾಧ್ಯವಿಲ್ಲ ಹಾಗು ಸಿದ್ಧ ಪುರುಷನಿಂದ ಅದೂ ವಿಶಿಷ್ಟ, ರಹಸ್ಯಮಯವಾದ ಗರುಡ ಮಂತ್ರದಿಂದ ಮಾತ್ರ ಸಾಧ್ಯವೆಂದು ಹೇಳಲಾಗುತ್ತದೆ.

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಆರು ದ್ವಾರಗಳನ್ನ ತೆಗೆಯಲಾಗಿದೆ ಆದರೆ ಏಳನೆಯ ದ್ವಾರದ ಹತ್ತುರ ಸುಳಿಯೋದಕ್ಕೂ ಇಲ್ಲಿಯವರೆಗೆ ಯಾರೂ ಪ್ರಯತ್ನಪಟ್ಟಿಲ್ಲ ಹಾಗು ಅದನ್ನ ತೆಗೆಯೋಕೂ ಸಾಧ್ಯವಿಲ್ಲವೆಂದು ಸ್ವತಃ ವಿಜ್ಞಾನ ಗಳೇ ಹಿಂದೆ ಸರಿದಿದ್ದಾರೆ.

– Vinod Hindu Nationalist

Leave a Reply

Your e-mail address will not be published. Required fields are marked *

error: Content is protected !!