ಮೋದಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತ ಮನೇಲೇ ಕೂತು ನೀವೂ ಗಳಿಸಬಹುದು ಬರೋಬ್ಬರಿ 70 ಸಾವಿರ;

ಒಬ್ಬ ಸಾಮಾನ್ಯ ವ್ಯಕ್ತಿಯ ಆದಾಯದ ದೊಡ್ಡ ಮೊತ್ತದ ಪಾಲು ಆತನ ವೈದ್ಯಕೀಯ ಖರ್ಚು, ಔಷಧಿಗಳಿಗೆಂದೇ ಖರ್ಚಾಗುತ್ತದೆ. ಬಡವರಿಗಾಗಿ, ಸಾಮಾನ್ಯ ಜನರಿಗೆ ಕಡಿನೆ ದರದಲ್ಲಿ ಔಷಧಿಗಳನ್ನ ನೀಡಿವುದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜುಲೈ 1, 2015 ರಲ್ಲಿ ‘ಜನೌಷಧಿ’ ಯೋಜನೆಯನ್ನ ಜಾರಿಗೆ ತಂದಿದ್ದರು.

ಈ ಯೋಜನೆಯಲ್ಲಿ ಸರ್ಕಾರದ ವತಿಯಿಂದ ಅತ್ಯುತ್ತಮ ಗುಣಮಟ್ಟದ ಜೆನರಿಕ್(Generic) ಔಷಧಿಗಳ ಬೆಲೆಯನ್ನ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. ಮೋದಿ ಸರ್ಕಾರದ ವತಿಯಿಂದ ‘ಜನೌಷಧಿ ಸ್ಟೋರ್’ ಗಳನ್ನ ಪ್ರತಿಯೊಂದು ಊರುಗಳಲ್ಲೂ ತೆರೆಯಲಾಗಿದೆ. ಆ ಸ್ಟೋರ್ ಗಳಲ್ಲಿ ನಿಮಗೆ ಬೇಕಾದ ಔಷಧಿಗಳನ್ನ ನೀವು ಬೇರೆ ಮೆಡಿಕಲ್ ಸ್ಟೋರ್ ಗಳಿಗಿಂತಲೂ 90% ಕಡಿಮೆ ಬೆಲೆಯಲ್ಲಿ ಪಡೆಯಬಹುದಾಗಿದೆ.

ಜನರಿಕ್ ಔಷಧಿಗಳ ಬ್ರ್ಯಾಂಡೆಡ್ ಅಥವ ಫಾರ್ಮಾ ದ ಔಷಧಿಗಳಿಗೆ ಹೋಲಿಕೆ ಮಾಡಿದರೆ ಜನೌಷಧಿ ಮಳಿಗೆಯಲ್ಲಿ ಸಿಗುವ ಔಷಧಗಳು ಭಾರೀ ಕಡಿಮೆಯಿವೆ. ಜನರಿಗೆ ಅರ್ಥ ಮಾಡಿಕೊಳ್ಳಬೇಕಿರುವ ಹಾತಿಳಿದುಕೊಳ್ಳಬೇಕಿರುವ ವಿಷಯವೇನೆಂದರೆ ಬ್ರ್ಯಾಂಡೆಡ್ ಮೆಡಿಸಿನ್ ಗಳ ಹೋಲಿಕೆಯಲ್ಲಿ ಜನರಿಕ್ ಮೆಡಿಸಿನ್ ಗಳ ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಹಾಗು ಅದರ ಜೊತೆ ಜೊತೆಗೆ ಬ್ರ್ಯಾಂಡೆಡ್ ಮೆಡಿಸಿನ್ ಗಳಿಗಿಂತಲೂ ಗುಣಮಟ್ಟವೂ ಅದ್ಭುತವಾಗಿದೆ.

ಜನರಿಕ್ ಔಷಧಿಗಳು ಮಾರ್ಕೆಟ್ ನಲ್ಲಿ ಉಪಲಬ್ಧವಿದ್ದು ಪ್ರಧಾನಮಂತ್ರಿ ಜನೌಷಧಿ ಮಳಿಗೆಯಿಂದ ನೀವು ಖರೀದಿಸಬಹುದಾಗಿದೆ‌. ಈ ಯೋಜನೆಯನ್ನ ಬಡವರುಹಾಗು ಸಾಮಾನ್ಯ ಜನರು ಮಾರ್ಕೆಟ್ ಬೆಲೆಗಿಂತಲೂ 60 ರಿಂದ 70 ಹಾಗು ಕೆಲವೊಂದು ಔಷಧಿ, ಮೆಡಿಸನ್ ಗಳಂತೂ 90% ವರೆಗೂ ಕಡಿಮೆ ಬೆಲೆಯಲ್ಲಿ ಸಿಗುವಂತಾಗಲು ಕೇಂದ್ರ ಸರ್ಕಾರವು ದೇಶಾದ್ಯಂತ ಹೆಚ್ಚುವರಿ ಒಂದು ಸಾವಿರ ಜನೌಷಧಿ ಮಳಿಗೆಗಳನ್ನ ತೆರಯಲಿದೆ.

ನೀವೂ ಜನೌಷಧಿ ಮಳಿಗೆಯನ್ನ ಸ್ಟಾರ್ಟ್ ಮಾಡಬಹುದು:

ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾಗಿರುವ ಜನೌಷಧಿ ಕೇಂದ್ರವನ್ನ ಯಾರು ಬೇಕಾದರೂ ಶುರು ಮಾಡಬಹುದಾಗಿದೆ. ಇದಕ್ಕೆ ಮೊಟ್ಟ ಮೊದಲ ಅರ್ಹತೆಯೆಂದರೆ ನೀವು ಭಾರತೀಯ ಪೌರತ್ವ ಹೊಂದಿರಬೇಕು. ಆಸ್ಪತ್ರೆ, ಸರ್ಕಾರೇತರ ಸಂಘಟನೆ, ಡಾಕ್ಟರ್ ಗಳ ಸಮೇತ ಸಾಮಾನ್ಯ ಜನರೂ ಕೂಡ ಜನೌಷಧಿ ಕೇಂದ್ರವನ್ನ ಶುರು ಮಾಡಬಹುದಾಗಿದೆ. ಒಂದು ವೇಳೆ ನೀವು SC/ST ಶ್ರೇಣಿ ಅಥವ ದಿವ್ಯಾಂಗ ವರ್ಗಕ್ಕೆ ಸೇರಿದವರಾಗಿದ್ದರೆ ಭಾರತ ಸರ್ಕಾರವೇ ನಿಮಗೆ 50 ಸಾವಿರ ರೂ.ಗಳ ವರೆಗೆ ಆರ್ಥಿಕ ಸಹಾಯ ಕೂಡ ಮಾಡುತ್ತೆ.

ಇದಕ್ಕೆ ಬೇಕಾಗುವ ಅಗತ್ಯ ದಾಖಲಾತಿಗಳೇನು?

ಒಂದು ವೇಳೆ ನೀವೂ ಕೂಡ ಜನೌಷಧಿ ಕೇಂದ್ರವನ್ನ ಶುರು ಮಾಡಲು ಇಚ್ಛಿಸಿದ್ದರೆ ನಿಮ್ಮ ಬಳಿ ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಹೊಂದಿರಲೇಬೇಕು. ಒಂದು ವೇಳೆ ನೀವು ಯಾವುದಾದರೂ ಆಸ್ಪತ್ರೆ ಹಾಗು NGO ವತಿಯಿಂದ ಇದನ್ನ ಶುರು ಮಾಡಬೇಕಿದ್ದರೆ ನೀವು ಆ ಸಂಸ್ಥೆಯ ರೆಜಿಸ್ಟ್ರೇಶನ್ ಪ್ರಮಾಣಪತ್ರ ಹಾಗು ಪ್ಯಾನ್ ಕಾರ್ಡ್ ಹೊಂದಿರಬೇಕು. ಈ ಜನೌಷಧಿ ಕೇಂದ್ರ ತೆರೆಯಲು ನೀವು 10 Sq.ft ಜಾಗ ಅಥವ ನಿಮ್ಮದೇ ಅಥವ ಬಾಡಿಗೆಗಾಗಿ ಮಳಿಗೆಯನ್ನ ಹೊಂದಿರಬೇಕು.

ಈ ರೀತಿಯಾಗಿ ಮಾಡಬಹುದು ಆನಲೈನ್ ರೆಜಿಸ್ಟ್ರೇಶನ್:

ನೀವು ಕೂಡ ಜನೌಷಧಿ ಕೇಂದ್ರ ತೆರೆಯಲು ಚಿಂತಿಸಿದ್ದರೆ ಅದಕ್ಕಾಗು ಆನಲೈನ್ ಮೂಲಕ http://janaushadhi.gov.in/index.aspx ಲಿಂಕ್ ವಿಸಿಟ್ ಮಾಡಬಹುದು. ಕ್ಲಿಕ್ ಮಾಡಿದ ಬಳಿಕ ನಿಮ್ಮ screen ಮೇಲೆ Bureau of Pharma PSUs of India (BPPI) ನ ಪೇಜ್ ಓಪನ್ ಆಗುತ್ತೆ. ಈ ಪೇಜ್ ನಲ್ಲಿ ನಿಮಗೆ ಹಲವಾರು ಆಪ್ಷನ್ ಗಳು ಸಿಗುತ್ತವೆ. ಅಲ್ಲಿ ನಿಮಗೆ registration ಕೂಡ ಸಿಗುತ್ತೆ‌. Registration ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮಗೆ ಅಲ್ಲೂ ಹಲವಾರು option ಕಾಣಸಿಗುತ್ತವೆ. ಅಲ್ಲಿ ನೀವು offline registration ಹಾಗು online registration ಆಪ್ಷನ್ ಗಳ ಮೂಲಕ registration ಮಾಡಿಕೊಳ್ಳಬಹುದು‌. ವೆಬಸೈಟ್ ನಲ್ಲಿ ನಿಮಗೆ ಜನೌಷಧಿ ಕೇಂದ್ರ ತೆರೆಯಲು ಬೇಕಾದ ಮಾಹಿತಿಯನ್ನ guidelines ಮೂಲಕ ತಿಳಿದುಕೊಳ್ಳಬಹುದು.

Online apply ಮಾಡಲು ನೀವು ಕ್ಲಿಲ್ ಮಾಡುತ್ತಲೇ ನಿಮ್ಮೆದುರು Login ಆಪ್ಷನ್ ಕಾಣುತ್ತೆ. ಅದರಲ್ಲಿ ಹೋದ ಬಳಿಕ ಅಲ್ಲಿ ನೀವು ನಿಮ್ಮ ಖುದ್ದು ಕೇಂದ್ರದ್ದಾಗಲಿ ಅಥವ ಸಂಸ್ಥೆಯ ಮೂಲಕ registration ಮಾಡಿಕೊಳ್ಳಬೇಕು. ಆ option ನಿಮಗೆ login ಬಟನ್ ಕೆಳಗಡೆಯೇ ನೀಡಲಾಗಿದೆ. Registration ಬಟನ್ ಮೇಲೆ ಕ್ಲಿಕ್ ಮಾಡುತ್ತಲೇ ನಿಮ್ಮ ಹೆಸರು, ಮೊಬೈಲ್ ನಂಬರ್, ಪರ್ಸನಲ್ ಡಿಟೇಲ್ಸ್ ಗಳನ್ನ ತುಂಬಬೇಕಾಗುತ್ತದೆ‌.

ಇದಾದ ಬಳಿಕ ನೀವು ಜನೌಷಧಿ ಮಳಿಗೆ ತೆರೆಯಲು ರೆಜಿಸ್ಟರ್ಡ್ ಮೆಂಬರ್ ಆಗುವಿರಿ. ಈ ಪೂರ್ಣ ಪ್ರಕ್ರಿಯೆ ಮುಗಿದ ಬಳಿಕ ನೀವು ನಿಮ್ಮ ಆಧಾರ್ ನಂಬರ್ ಹಾಕಿ ನಿಮ್ಮ‌ಆಧಾರ್ ನಂಬರ್ ರೆಜಿಸ್ಟರ್ ಮಾಡಿಕೊಳ್ಳಬೇಕು. ನಿಮ್ಮ ಆಧಾರ್ ನಂಬರ್ ಧೃಢೀಕರಿಸಲು ನಿಮ್ಮ ಮೊಬೈಲ್ ಗೆ OTP ಆಪ್ಷನ್ ಕೂಡ ಸೆಲೆಕ್ಟ್ ಮಾಡಬಹುದಾಗಿದೆ. ಅದಾದ ಬಳಿಕ ನಿಮ್ಮೆದುರು ಒಂದು ಫಾರಂ ಓಪನ್ ಆಗುತ್ತೆ, ಅದನ್ನ ತುಂಬಿದ ಬಳಿಕ submit ಬಟನ್ ಕ್ಲಿಕ್ ಮಾಡಿ ಬಳಿಕ ಆ ಫಾರಂ ನ ಪ್ರಿಂಟ್ ತೆಗೆದುಕೊಳ್ಳಿ. ಈ ಪ್ರಿಂಟ್ ತಗೊಂಡು ನೀವು Bureau of Pharma PSU of India (BPPI) ನಲ್ಲಿ 2 ಸಾವಿರ ರೂ.ಗಳ ಫೀಸ್ ಕಟ್ಟಿ ರೆಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕು. ಬಳಿಕ ವಿಲೇಜ್ ಲೆವೆಲ್ ಎಂಟರ್‌ಪ್ರಿನಿಯರ್(VLE) ಯಿಂದ ಲೈಸೆನ್ಸ್ ಪಡೆದುಕೊಳ್ಳಬೇಕು.

ಏನಿದೆ ಇದರಿಂದ ಲಾಭ?

ಜನೌಷಧಿ ಕೇಂದ್ರ ನಡೆಸಲಿಕ್ಕಾಗಿ ನಿಮಗೆ ಔಷಧಿಗಳ MRP ಮೇಲಿನ ಟ್ಯಾಕ್ಸ್ ನ ಹೊರತಾಗಿ 20% ಹೆಚ್ಚುವರಿ ಲಾಭವನ್ನ ನೀಡಲಾಗುವುದು. ಈ ಯೋಜನೆಯ ಇನ್ನೊಂದು ವಿಶೇಷತೆ, ಲಾಭವೇನೆಂದರೆ ಜನೌಷಧಿ ಕೇಂದ್ರ ತೆರೆಯಲು ಕೇಂದ್ರದ ಮೋದಿ ಸರ್ಕಾರವೇ ಪ್ರೋತ್ಸಾಹ ಧನವನ್ನೂ ನೀಡುತ್ತೆ. ಈ ಹಣ ಮಾಸಿಕ ಮಾರಾಟದ 15% ನ ದರದಿಂದ ಸಿಗುತ್ತೆ ಹಾಗು ಏನಿಲ್ಲವೆಂದರೂ ವಾರಕ್ಕೆ 10 ಸಾವಿರ ರೂ ಸಿಗುತ್ತೆ. ಇದರರರ್ಥ ಪ್ರತಿ ತಿಂಗಳೂ ನೀವು 60 ರಿಂದ 70 ಸಾವಿರ ರೂಪಾಯಿಗಳನ್ನ ಗಳಿಸೋದು ಮಾತ್ರ ಪಕ್ಕಾ.

– Team Google Guruu

Leave a Reply

Your email address will not be published. Required fields are marked *

error: Content is protected !!