ಸಾಮಾನ್ಯ ವ್ಯಕ್ತಿಗಳನ್ನ ವಿಐಪಿ ಮಾಡಲು ಹೊಸ ಕಾನೂನು ಜಾರಿಗೆ ತರಲಿದೆ ಕೇಂದ್ರ ಸರ್ಕಾರ

ಒಂದು ವೇಳೆ ನಿಮ್ಮನ್ನು ಕೂಡ ವಿಐಪಿ, ಸೂಪರ್ ‌ಸ್ಟಾರ್ ಅಥವ ಮಹಾಪುರುಷನ ರೀತಿಯಲ್ಲಿ ನೋಡುವಂತಾದರೆ ನಿಮಗೆ ಹೇಗೆ ಫೀಲ್ ಆಗಬಹುದು? ಅವರೆಲ್ಲರಂತೆಯೇ ನಿಮಗೆ ಎಲ್ಲಾ ರೀತಿಯ ಸಕಲ ಸೌಲಭ್ಯಗಳು ಸಿಗುವಂತಾದರೆ ನಿಮಗೆ ಹೇಗೆ ಅನಿಸುತ್ತೆ? ಸ್ವಲ್ಪ ಯೋಚಿಸಿ, ನಿಮ್ಮ ಹೆಸರಿನಿಂದ ರಸ್ತೆ, ಬಿಲ್ಡಿಂಗ್, ಶಾಲೆ, ಕಾಲೇಜುಗಳಾದರೆ, ವಿಮಾನ ನಿಲ್ದಾಣಗಳಲ್ಲಿ ನಿಮಗೆ ಬೋರ್ಡಿಂಗ್ ಅಧಿಕಾರ ಹೆಚ್ಚಿಸಿಬಿಟ್ಟರೆ ಸಾಮಾನ್ಯ ವ್ಯಕ್ತಿಗಳಿಗೆ ಅದಕ್ಕಿಂತ ಖುಷಿಯ ಸಂಗತಿ ಮತ್ತೊಂದಿರಲ್ಲ. ಹೌದು ನಿಮ್ಮ ಜೊತೆಯೂ ಭಾರತದಲ್ಲಿ ಇನ್ನುಮುಂದೆ ಹೀಗಾಗಲಿದೆ.

ಗುರುವಾರದಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸರ್ವೇಕ್ಷಣ 2018-19 ರಲ್ಲಿ ಬದಲಾವಣೆ ತರಲು ಇಂತಹದ್ದೊಂದು ಸಲಹೆಯನ್ನ ಮುಂದಿಡಲಾಗಿದೆ. ಸರ್ಕಾರವು ನಿಮಗೆ ವಿಐಪಿ ಮಾಡಲು ಹೊರಟಿದೆ, ಸರ್ಕಾರವು ಆರ್ಥಿಕ ಸರ್ವೇಕ್ಷಣದ ಸಲಹೆಯಲ್ಲಿ ಹೇಳಿರುವಂತೆ ಪ್ರತ್ಯೇಕ ಜಿಲ್ಲೆಯ ಸರಿಯಾದ ಸಮಯಕ್ಕೆ ನಿಯತ್ತಾಗಿ ಟ್ಯಾಕ್ಸ್ ಕಟ್ಟುತ್ತಿರುವ ಟಾಪ್ 10 ವ್ಯಕ್ತಿಗಳ ಹೆಸರನ್ನ ಜಿಲ್ಲೆಯ ಶಾಲೆ, ಆಸ್ಪತ್ರೆ, ಬಿಲ್ಡಿಂಗ್ ಅಥವ ರಸ್ತೆಗಳಿಗೆ ನಿಮ್ಮ ಹೆಸರಿಡಲು ಚಿಂತನೆ ನಡೆಸಿದೆ.

ಮುಖ್ಯ ಆರ್ಥಿಕ ಸಲಹೆಗಾರರಾದ ಕೃಷ್ಣಮೂರ್ತಿ ಸುಬ್ರಮಣಿಯನ್ ರವರು ದೇಶದಲ್ಲಿ ಟ್ಯಾಕ್ಸ್ ಕಟ್ಟುವವರ ಸಂಖ್ಯೆಯನ್ನ ವೃದ್ಧಿಗೊಳಿಸಲು ಇಂತಹದ್ದೊಂದು ಸಲಹೆಯನ್ನ ಸರ್ಕಾರದ ಎದುರಿಟ್ಟಿದೆ. ಜಲಕಲ್ಯಾಣಕ್ಕಾಗಿ ಯೋಜನೆಗಳಲ್ಲಿ “ಕಾಮ್ ಪರ್ ಟ್ಯಾಕ್ಸ್ ಪೈಸಾ” ತೋರಿಸುವ ಸೈನ್ ಬೋರ್ಡ್, ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್ ‌ಗಾಗಿ ವಿಶೇಷಾಧಿಕಾರಗಳು, ರಸ್ತೆ ಹಾಗು ಟೋಲ್ ಬೂತ್ ಗಳಲ್ಲಿ ಟೋಲ್ ರಿಯಾಯಿತಿ, ಮುಖ್ಯವಾದ ಬಿಲ್ಡಿಂಗ್ ಗಳು, ಸ್ಮಾರಕಗಳು, ರೈಲು ಬಸ್ಸುಗಳ ಮೇಲೂ ನಿಮ್ಮ ಹೆಸರನ್ನಿಡಲು ಚಿಂತಿಸಿದೆ‌.

ಈ ಸರ್ವೇಕ್ಷಣದಲ್ಲಿ ಹೇಳಿರುವಂತೆ ದೇಶದಲ್ಲಿ ನಡೆದ ಸರ್ವೇಕ್ಷಣದಲ್ಲಿ ಹೊರಬಂದಿರುವ ಅಂಶವೇನೆಂದರೆ ಟ್ಯಾಕ್ಸ್ ಕಳ್ಳತನ ಮಾಡುವ ಒಬ್ಬನಿಂದ ಮತ್ತೊಬ್ಬನ ಆತ್ಮಸ್ಥೈರ್ಯ ಕೂಡ ಹೆಚ್ಚಾಗುತ್ತದೆಯಂತ ತಿಳಿದು ಬಂದಿದೆ. ದೇಶದಲ್ಲಿ ಟ್ಯಾಕ್ಸ್ ಕಟ್ಟುವವರಿಗೆ ತಾವು ಕಟ್ಟುವ ಟ್ಯಾಕ್ಸ್ ಭ್ರಷ್ಟಾಚಾರಿಗಳ ಜೇಬು ಸೇರುತ್ತದೆ, ತಾವು ಕಟ್ಟುವ ಟ್ಯಾಕ್ಸ್ ದೇಶದ ಅಭಿವೃದ್ಧಿಗೆ ವಿನಿಯೋಗವಾಗಲಿಲ್ಲವೆಂದರೆ ಅದನ್ನ ಕಟ್ಟಿ ಏನು ಪ್ರಯೋಜನ ಅನ್ನೋದು ಜನರ ಅಭಿಪ್ರಾಯವಾಗಿದಯಂತೆ. ಹೀಗಾಗಿ ಇಂಥವರ ಮನೋಸ್ಥೈರ್ಯ ಹೆಚ್ಚಿಸಿ ಹೆಚ್ಚೆಚ್ಚು ಟ್ಯಾಕ್ಸ್ ಕಟ್ಟುವಂತೆ ಮಾಡಿ ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಇಂತಹದ್ದೊಂದು ನೂತನ ಯೋಜನೆ ಜಾರಿಗೆ ತರಲು ಚಿಂತಿಸಿದೆ‌.

– Team Google Guruu

Leave a Reply

Your e-mail address will not be published. Required fields are marked *

error: Content is protected !!