ಪ್ರತೀ ಕುಟುಂಬದ ಮನೆಗೆ ಬೆಳಕಾದ ಪ್ರಧಾನಿ ಮೋದಿ

ಅಡುಗೆ ಅನಿಲ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಯೋಜನೆಯ ನಂತರದಲ್ಲಿ ವಿದ್ಯುತ್ ಸಬ್ಸಿಡಿಯನ್ನೂ ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಇಂಧನ ಸಚಿವಾಲಯ ನೂತನ ವಿದ್ಯುತ್ ದರ ನೀತಿಯನ್ನು ರೂಪಿಸಿದ್ದು, ಲೋಕ ಸಭೆಯಲ್ಲಿ ಇದಕ್ಕೆ ಅನುಮೋದನೆಯೂ ಸಿಕ್ಕಿದೆ. ಮುಂದಿನ ಆಗಸ್ಟ್​ನಿಂದಲೇ ಈ ನೂತನ ನೀತಿ ಜಾರಿಗೆ ಬರಲಿದ್ದು, ವಿದ್ಯುತ್ ಸಬ್ಸಿಡಿಯ ಹಣ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ.

ಶ್ರೀಮಂತರು ಬಡವರೆನ್ನದೆ ಸರ್ಕಾರದಿಂದ ಸಿಗುವ ವಿದ್ಯುತ್ ಸಬ್ಸಿಡಿಯ ಅನುಕೂಲವನ್ನು ಎಲ್ಲರೂ ಪಡೆದುಕೊಳ್ಳುತ್ತಿದ್ದಾರೆ. ಇದು ಸರ್ಕಾರಕ್ಕೆ ಹೊರೆಯಾಗುತ್ತಿದ್ದು, ಇದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಸಬ್ಸಿಡಿ ಕಡಿತಕ್ಕಿರುವ ಕ್ರಮಗಳನ್ನು ಸೂಚಿಸಲು ತಜ್ಞರ ಸಮಿತಿ ರೂಪಿಸಿತ್ತು. ಇದು ಎಲ್​ಪಿಜಿಯ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತೆ.

ವಿದ್ಯುತ್ ಸಬ್ಸಿಡಿಯನ್ನೂ ನೇರವಾಗಿ ಖಾತೆಗೆ ವರ್ಗಾಯಿಸಬಹುದೆಂದು ಸಲಹೆ ನೀಡಿತ್ತು. ಈ ಸಮಿತಿಯಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು ಮತ್ತು ಬಿಹಾರದ ಪ್ರಧಾನ ಇಂಧನ ಇಲಾಖೆ ಕಾರ್ಯದರ್ಶಿಗಳು, ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ ಮತ್ತು ಕೇಂದ್ರ ವಿದ್ಯುತ್ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿದ್ದರು.

ಇಲ್ಲಿಯವರೆಗೆ ಟ್ರಾನ್ಸ್ ಮಿಷನ್ ಮತ್ತು ಡಿಸ್ಟ್ರಿಬ್ಯೂ ಷನ್ ಸಮಯದಲ್ಲಾದ ವಿದ್ಯುತ್ ಹಾನಿಯನ್ನೂ ಬಳಕೆದಾರರ ಖಾತೆಗೆ ಹಾಕಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಹೀಗಾಗುವುದಿಲ್ಲ. ಬಳಕೆ ಮಾಡಿದ ವಿದ್ಯುತ್​ನ್ನು ಮಾತ್ರವೇ ಬಳಕೆದಾರರ ಖಾತೆಗೆ ಹಾಕಲು ಅವಕಾಶವಿರಲಿದೆ.

ಸದ್ಯ ಜಾರಿಯಲ್ಲಿರುವ ಎಲ್​ಪಿಜಿ ಸಬ್ಸಿಡಿ ವರ್ಗಾವಣೆ ಯೋಜನೆಯಂತೆ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್​ಗಳನ್ನು ಮಾರುಕಟ್ಟೆ ಬೆಲೆಯಲ್ಲಿ ಮಾರಾಟ ಮಾಡಿ ಇದಕ್ಕೆ ಸರ್ಕಾರ ನೀಡುವ ಸಬ್ಸಿಡಿ ಮೊತ್ತವನ್ನು ಗ್ರಾಹಕರ ಖಾತೆಗೆ ವರ್ಗಾಯಿಸಲಾಗುತ್ತದೆ. ಮುಂದಿನ ಆಗಸ್ಟ್​ನಿಂದ ವಿದ್ಯುತ್​ಗೂ ಇದೇ ನೀತಿ ಅನ್ವಯವಾಗಲಿದ್ದು, ಪ್ರತಿ ತಿಂಗಳು ಗ್ರಾಹಕರು ತಾವು ಬಳಕೆ ಮಾಡಿರುವ ವಿದ್ಯುತ್​ಗೆ ಮಾರುಕಟ್ಟೆ ದರವನ್ನು ನೀಡಬೇಕಾಗುತ್ತದೆ.

ಇದರ ಸಬ್ಸಿಡಿ ಮೊತ್ತ ನೇರವಾಗಿ ಅವರ ಖಾತೆಗೆ ಹೋಗಲಿದೆ. ಸದ್ಯ ಸಬ್ಸಿಡಿಯನ್ನು ಮಾರಾಟವಾಗಿರುವ ವಿದ್ಯುತ್ ಮತ್ತು ಸಂಗ್ರಹವಾಗಿರುವ ಮೊತ್ತವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತಿತ್ತು. ಸಂಗ್ರಹವಾಗಿರುವ ಮೊತ್ತವನ್ನು ಕಳೆದು ಉಳಿದ ಮೊತ್ತವನ್ನು ಸರ್ಕಾರ ಭರಿಸುತ್ತಿತ್ತು. ಆದರೆ ನೂತನ ನೀತಿಯಿಂದ ಗ್ರಾಹಕರು ಬಳಕೆ ಮಾಡಿರುವ ವಿದ್ಯುತ್​ಗೆ ಮಾತ್ರವೇ ಸರ್ಕಾರ ಸಬ್ಸಿಡಿ ಭರಿಸಲಿದೆ. ಸೋರಿಕೆಯಾಗಿರುವ ವಿದ್ಯುತ್ ಮತ್ತು ಕಂಪನಿಗಾಗಿರುವ ನಷ್ಟವನ್ನು ಸರ್ಕಾರ ನೀಡುವ ಅಗತ್ಯವಿರುವುದಿಲ್ಲ.

ಗ್ರಾಹಕರಿಗೆ ವಿದ್ಯುತ್​ನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಸರ್ಕಾರಗಳು ನೀಡುತ್ತಿವೆ. ಇದರ ಸಬ್ಸಿಡಿ ಹಣವನ್ನು ವಿದ್ಯುತ್ ಹಂಚಿಕೆ ಮಾಡುತ್ತಿರುವ ಕಂಪನಿಗಳಿಗೆ ವರ್ಗಾಯಿಸಲಾಗುತ್ತಿದೆ. ಆಯಾ ರಾಜ್ಯಗಳು ಬಜೆಟ್ ಸಂದರ್ಭದಲ್ಲಿ ಸಬ್ಸಿಡಿ ಮೊತ್ತ ಘೋಷಿಸುತ್ತದೆ. ನಂತರ ತ್ರೖೆಮಾಸಿಕವಾಗಿ ಹಣವನ್ನು ವರ್ಗಾಯಿಸುತ್ತವೆ. ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಹಣ ವರ್ಗಾವಣೆ ತಡವಾಗುತ್ತದೆ. ಆದರೆ ನೂತನ ನೀತಿ ಜಾರಿಗೆ ಬಂದಾಗ ಪ್ರತಿತಿಂಗಳೂ ಗ್ರಾಹಕರ ಖಾತೆಗೆ ಹಣ ವರ್ಗಾಯಿಸುವುದು ಅನಿವಾರ್ಯವಾಗಿರಲಿದೆ.

ನೂತನ ನೀತಿಯಲ್ಲಿ ಕಂಪನಿಗಳು ಅಘೋಷಿತ ವಿದ್ಯುತ್ ಕಡಿತ ಮಾಡಿದರೆ ದಂಡ ವಿಧಿಸುವ ಅವಕಾಶವಿರುತ್ತದೆ. ಹೀಗಾಗಿ ವಿದ್ಯುತ್ ಕಡಿತದ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ನೂತನ ವಿದ್ಯುತ್ ಬೆಲೆ ನೀತಿಯನುಸಾರ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಮತ್ತು ಸ್ಮಾರ್ಟ್​ವಿುೕಟರ್ ಅಳವಡಿಕೆಗೆ ಉದ್ದೇಶಿಸ ಲಾಗಿದೆ. ಬಳಕೆದಾರರು ಸ್ಮಾರ್ಟ್​ವಿುೕಟರ್​ನ ಬೆಲೆಯನ್ನು ಕಂತುಗಳಲ್ಲಿ ತುಂಬುವುದಕ್ಕೆ ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ.
 
-Team Google Guru

Leave a Reply

Your e-mail address will not be published. Required fields are marked *

error: Content is protected !!