12 ವರ್ಷದ ಬಾಲಕ ಮಾಡಿದ್ದನ್ನ ಕಂಡು ಬೆರಗಾದ ಪ್ರಧಾನಿ ಮೋದಿ

ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬ ಮಾತು ಎಂದಿಗೂ ಸತ್ಯ, ಸಾಧಿಸುವ ಛಲವೊಂದಿದ್ದರೆ ಯಾರು ಯಾವ ಮಟ್ಟಕ್ಕೂ ಬೆಳೆಯಬಹುದು ಎಂಬುವುದಕ್ಕೆ ಈ ನೈಜ ಘಟನೆಯೆ ಸಾಕ್ಷಿ, ಹೌದು ಒಬ್ಬ ವ್ಯಕ್ತಿಯು ಕಾಣುವ ಕನಸಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಎಂಬುದನ್ನು ಪುಣೆಯ ಹನ್ನೆರಡು ವರ್ಷದ ಈ ಬಾಲಕ ಸಾಧಿಸಿ ತೋರಿಸಿದ್ದಾರೆ.

 

ಪುಣೆ ಇಂಡಸ್ ಇಂಟರ್ನ್ಯಾಷನಲ್ ಶಾಲೆಯ ಯುವ, 12 ವರ್ಷ ವಯಸ್ಸಿನ ಹುಡುಗನಾದ ಹಾಜಿಕ್ ಕಾಜಿ ಜಗತ್ತಿಗೆ ಏನನ್ನಾದರೂ ಮಾಡುವೇ ಎಂದು ಪಣ ತೊಟ್ಟು ನಿಂತು ಅದನ್ನು ಮಾಡಿಯೇ ಮುಗಿಸಿದ, ಈ ಬಾಲಕನ ಬಗ್ಗೆ ನೀವು ತಿಳಿದರೆ ಭಾರತದಲ್ಲಿ ವಾಸಿಸುವ ನಿಮಗೆ ಹೆಮ್ಮೆಯ ಭಾವನೆ ಮೂಡುವುದಂತು ಖಂಡಿತ.

ದೇಶ ಮತ್ತು ವಿಶ್ವದ ಏರುತ್ತಿರುವ ಮಾಲಿನ್ಯದ ನಡುವೆ, 12 ವರ್ಷದ ಹಝಿಕ್ ಕಾಜಿ ಮುಂಬೈಯಿಂದ ಹಾಝಿಕ್ ಕಾಜಿ ಸಾಗರ ಮೇಲ್ಮೈಯಿಂದ ತ್ಯಾಜ್ಯವನ್ನು ಹೀರುವಂತೆ ಸಹಾಯ ಮಾಡುವ ಹಡಗನ್ನು ವಿನ್ಯಾಸಗೊಳಿಸಿ ಅದಕ್ಕೆ ERVIS ಎಂದು ಹೆಸರು ಸೂಚಿಸಿದ್ದಾನೆ.

ಹಝಿಕ್ ಕಾಜಿ ಶಾಲೆಯಲ್ಲಿ ಓದುತ್ತಿರುವಾಗ ಇಂಡಸ್ ಇಂಟರ್ನ್ಯಾಷನಲ್ ಶಾಲೆಯು ಆಯೋಜಿಸಿದ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಪ್ರೊಜೆಕ್ಟ್ ಮಾಡಿಕೊಂಡು ಬಂದು ಅದರ ಬಗ್ಗೆ ಮಾತನಾಡಲು ತಿಳಿಸಿತು, ಯಾವ ಪ್ರೊಜೆಕ್ಟ್ ಮಾಡಬೇಕೆಂದು ಯೋಚಿಸುತ್ತಿದ್ದ ಕಾಜೆಗೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್‌ನಲ್ಲಿ ಸಮುದ್ರದ ಪ್ಲಾಸ್ಟಿಕ್‌ಗಳು ಹೇಗೆ ನಮ್ಮ ದೇಹ ಸೇರುತ್ತವೆ ಎಂದು ವಿವರಿಸಲಾಗುತ್ತಿತ್ತು ಇದು ಆತನಿಗೆ ಪ್ರೇರಣೆ ನೀಡಿದೆ ಎಂದಿದ್ದಾನೆ.

ಆ ವಿಷಯವೊಂದನ್ನು ಮುಂದಿಟ್ಟುಕೊಂಡ ಹಝಿಕ್ ಕಾಜಿ ಸಮುದ್ರದಲ್ಲಿನ ಪ್ಲಾಸ್ಟಿಕ್ ತ್ಯಾಜವನ್ನು ಯಾವರೀತಿಯಾಗಿ ಹೊರ ತೆಗೆಯಬೇಕೆಂದು ಆಲೋವಿಸಿ ಆ ವಿಷಯಕ್ಕೆ ಸಂಭವಿಸಿದ ಅಧ್ಯಯನ ಹಾಗೂ ಅದನ್ನು ಕಾರ್ಯಗತಗೊಳಿಸಲು ತೆಗೆದುಕೊಳ್ಳುವ ನಿರ್ಧಾರನ್ನು TED ಆಯೋಜಿಸಿದ ಕಾರ್ಯಕ್ರಮದಲ್ಲಿ ವಿವರಿಸಿದನು ಆತನ ಈ ಪ್ರೊಜೆಕ್ಟ್ ಗೆ ಡಚ್ ಸಂಶೋಧಕ ಬೋಯಾನ್ ಸ್ಲ್ಯಾಟ್ ಅಭಿನಂದಿಸಿದರು.

ಸುದ್ದಿ ಸಂಸ್ಥೆ ANI ನೊಂದಿಗೆ ಈ ಬಗ್ಗೆ ಮಾತನಾಡಿದ ಆತ, ನಾನು ಕೆಲವು ಸಾಕ್ಷ್ಯಚಿತ್ರವನ್ನು ನೋಡಿದೆ ಮತ್ತು ಸಮುದ್ರ ಜೀವನದ ಮೇಲೆ ತ್ಯಾಜ್ಯದ ಪರಿಣಾಮವು ಬೀರಿದೆ. ಅದನ್ನು ಸರಿಪಡಿಸಲು ನಾನು ಏನಾದರೂ ಮಾಡಬೇಕೆಂದು ಭಾವಿಸಿ ಇಂತಹದ್ದೊಂದು ಪ್ರಕ್ರಿಯೆಗೆ ಮುಂದಾಗಿದ್ದೆನೆ ಎಂದು ಆ ಬಾಲಕ ಮಾಧ್ಯಮದ ಮುಂದೆ ಹೇಳಿದ್ದಾನೆ.

ನಾವು ಆಹಾರವಾಗಿ ಸೇವಿಸುವ ಮೀನುಗಳು ಸಮುದ್ರದಲ್ಲಿ ಪ್ಲಾಸ್ಟಿಕ್ ಅನ್ನು ತಿನ್ನುತ್ತವೆ. ಅಂದರೆ, ಮಾಲಿನ್ಯದ ಚಕ್ರವು ನಮಗೆ ಮತ್ತೆ ಬರುತ್ತದೆ ಈ ಪರಿಣಾಮವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ERVIS ಎಂಬ ಹೊಸ ಹಡಗನ್ನು ವಿನ್ಯಾಸಗೊಳಿಸಲಾಗಿದೆ. ERVIS ಸಾಗರದಲ್ಲಿ ತ್ಯಾಜ್ಯವನ್ನು ಹೀರಿಕೊಳ್ಳಲು ಕೇಂದ್ರಾಭಿಮುಖದ ಶಕ್ತಿಯನ್ನು ಬಳಸುತ್ತದೆ. ಅದರ ನಂತರ ನೀರು ಮತ್ತು ತ್ಯಾಜ್ಯವನ್ನು ಪ್ರತ್ಯೇಕಿಸಲಾಗುತ್ತದೆ.

 

ಈ ERVIS ಹಡಗು ತ್ಯಾಜ್ಯವನ್ನು ಮಾತ್ರ ಹೀರಿಕೊಂಡು, ಜಲಚರಗಳನ್ನು ಮತ್ತು ನೀರನ್ನು ಸಮುದ್ರಕ್ಕೆ ಮರಳಿ ಕಳುಹಿಸಲಾಗುತ್ತದೆ, ಎಂದು ಕಾಜಿ ಹೇಳಿದರು. ಹಾಗೆಯೇ ಈ ಹಡಗನ್ನು ಸೌರ, ಗಾಳಿ, ಆರ್‌ಎನ್‌ಜಿ ಮತ್ತು ಹೈಡ್ರೋಜನ್ ಇಂಧನಗಳಿಂದ ಚಲಿಸಬಹುದು ಎಂದು ಹೇಳಿದ್ದಾರೆ.

ಇದೀಗ ಈ ಹುಡುಗನ ಬಗ್ಗೆ ಪ್ರಧಾನಿ ಮೋದಿಯಿಂದ ಹಿಡಿದು ವಿಶ್ವದಾದ್ಯಂತ ಪ್ರಾಮುಖ್ಯತೆ ಹೊಂದಿದ್ದು ಈತನ ಬಗ್ಗೆ ಚರ್ಚೆಗಳು ಶುತುವಾಗಿದ್ದು ಈತನ ಪ್ರೊಜೆಕ್ಟ್ ಅನ್ನು ಸ್ವಾಗತಿಸಿದ್ದಾರೆ, ವಿದೇಶದ ಹಲವು ಕಂಪನಿಗಳು ಈ ಐಡಿಯಾವನ್ನು ಬಳಸಿ ತಮ್ಮ ದೇಶದ ಸಮುದ್ರಗಳಲ್ಲಿ ಈ ಬಾಲಕ ವಿನ್ಯಾಸಗೊಳಿಸಿದ ಹಡಗನ್ನು ಬಳಕೆ ಮಾಡಲಿವೆ ಎಂದು ಮೂಲಗಳು ತಿಳಿಸಿವೆ.

-Team Google Guruu

Leave a Reply

Your e-mail address will not be published. Required fields are marked *

error: Content is protected !!