ಮೊಟ್ಟ ಮೊದಲ ಬಾರಿಗೆ ಭಾರತೀಯ ಮಹಿಳಾ ಸೇನೆಯಿಂದ ಮಹತ್ತರ ಹೆಜ್ಜೆ;

ಭಾರತೀಯ ವಾಯುಪಡೆಯ ಮಹಿಳಾ ಯೋಧರಿಂದ ಕೂಡಿದ್ದ ತಂಡ ಎಂಐ 17 ಯುದ್ಧಹೆಲಿಕಾಪ್ಟರ್​ನಲ್ಲಿ ಯಶಸ್ವಿಯಾಗಿ ಹಾರಾಟ ಕೈಗೊಂಡು ಹೊಸ ದಾಖಲೆ ನಿರ್ಮಿಸಿದ್ದಾರೆ. ಫ್ಲೈಟ್​ ಲೆಫ್ಟಿನೆಂಟ್​ ಕ್ಯಾಪ್ಟನ್ ಪಾರುಲ್​ ಭಾರಧ್ವಜ​, ಫ್ಲೈಯಿಂಗ್​ ಆಫೀಸರ್​ ಅಮನ್​ ನಿಧಿ ಸಹಪೈಲಟ್​ ಮತ್ತು ಫ್ಲೈಟ್​ ಲೆಫ್ಟಿನೆಂಟ್​ ಹಿನಾ ಜೈಸ್ವಾಲ್​ ಫ್ಲೈಟ್​ ಇಂಜಿನಿಯರ್​ ಸೇರಿ ಎಂಐ 17 ವಿ5 ಯುದ್ಧ ಹೆಲಿಕಾಪ್ಟರ್​ನಲ್ಲಿ ಹಾರಾಟ ಕೈಗೊಂಡರು.

ಯುದ್ಧದಲ್ಲಿ ತರಬೇತಿ ಕಾರ್ಯಕ್ರಮದಡಿಯಲ್ಲಿ ನೈಋತ್ಯ ವಾಯು ನೆಲೆಯ ನಿರ್ಬಂಧಿತ ಪ್ರದೇಶಗಳಲ್ಲಿ ಹೆಲಿಕಾಪ್ಟರ್​ ಅನ್ನು ಇಳಿಸುವುದು ಮತ್ತು ಹಾರಾಟ ಕೈಗೊಳ್ಳುವುದು ಸೇರಿ ಹಲವು ರೀತಿಯ ತರಬೇತಿ ವೇಳೆ ಇವರು ಈ ಮಹಿಳೆಯರು ಹಾರಾಟ ಕೈಗೊಂಡಿದ್ದರು ಎಂದು ಭಾರತೀಯ ವಾಯುಪಡೆಯ ಮೂಲಗಳು ತಿಳಿಸಿವೆ.

ಎಲ್ಲಾ ಮಹಿಳಾ ಸಿಬ್ಬಂದಿಯೂ ಮಿ -17 ವಿ 5 ಹೆಲಿಕಾಪ್ಟರ್ ಅನ್ನು ಬ್ಯಾಟಲ್ ಇನಾಕ್ಯುಲೇಷನ್ ತರಬೇತಿ ಕಾರ್ಯಾಚರಣೆಯಲ್ಲಿ ಹಾರಿಸಿದರು ಮತ್ತು ನಿರ್ಬಂಧಿತ ಪ್ರದೇಶಗಳಿಂದ ಸುತ್ತುವರೆದಿರುವ ಸೌತ್ ವೆಸ್ಟರ್ನ್ ಏರ್ ಕಮಾಂಡ್ನ ಮುಂದೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾರೆ ಎಂದು ಸೇನೆ ಮಾಹಿತಿ ನೀಡಿದೆ.

ಪಂಜಾಬ್​ನ ಮುಕೇರಿಯನ್​ ನಿವಾಸಿಯಾಗಿರುವ ಫ್ಲೈಟ್​ ಲೆಫ್ಟಿನೆಂಟ್​ ಪಾರುಲ್​ ಭಾರಧ್ವಜ್​, ಎಂಐ 17 ವಿ 5 ಯುದ್ಧ ಹೆಲಿಕಾಪ್ಟರ್ ಅನ್ನು ಚಾಲನೆ ಮಾಡಿದ ಮೊದಲ ಮಹಿಳಾ ಪೈಲಟ್​ ಎಂಬ ಹೆಗ್ಗಳಿಕೆಗೆ ಪಾರುಲ್ ಪಾತ್ರರಾಗಿದ್ದಾರೆ ಎಂದು ವಾಯು ಸೇನೆ ಮುಖಸ್ಥರು ತಿಳಿಸಿದ್ದಾರೆ.

ಈ ಮಹಿಳೆ ಮೂಲತಃ ರಾಂಚಿ ನಿವಾಸಿ ಫ್ಲೈಯಿಂಗ್​ ಆಫೀಸರ್​ ನಿಧಿ ಜಾರ್ಖಂಡ್​ನ ಮೊದಲ ಐಎಎಫ್​ ಪೈಲಟ್​ ಎಂಬ ಹೆಗ್ಗಳಿಕೆ ಹೊಂದಿದ್ದರೆ, ಫ್ಲೈಯಿಂಗ್​ ಆಫೀಸರ್​ ಜೈಸ್ವಾಲ್​ ಚಂಡಿಗಢ ನಿವಾಸಿಯಾಗಿದ್ದು ಭಾರತೀಯ ವಾಯುಪಡೆಯ ಮೊದಲ ಮಹಿಳಾ ಫ್ಲೈಟ್​ ಇಂಜಿನಿಯರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!