ಜಗತ್ತಿನ ಪ್ರಖ್ಯಾತ ಮ್ಯೂಸಿಕ್ ಮಾಂತ್ರಿಕ, ಬೀಟಲ್ ಖ್ಯಾತಿಯ ಜಾರ್ಜ್ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರ ಹಿಂದಿನ ರಹಸ್ಯ ಬಯಲು

ಬೀಟಲ್ಸ್ ಮ್ಯೂಸಿಕಲ್ ಗ್ರೂಪ್ ನ “ಗಿಟಾರ್ ವಾದಕ” ಜಾರ್ಜ್ ಹ್ಯಾರಿಸನ್ ಗೆ ಯಾವಾಗ ಸಿತಾರ್ ವಾದಕದ ಬಗ್ಗೆ ತಿಳಿಯಿತೋ ಆಗ ಆತ ಭಾರತಕ್ಕೆ ಬಂದು ಪಂಡಿತ್ ರವಿಶಂಕ್ ಜೀ ಬಳಿ ಸೀತಾರ್ ಕಲಿಯಲು ಬಂದೇ ಬಿಟ್ಟ. ರವಿಶಂಕರ್ ಜೀ ಯವರಿಂದ ಹ್ಯಾರಿಸನ್ ಎಷ್ಟು ಪ್ರಭಾವಿತನಾಗಿಬಿಟ್ಟನೆಂದರೆ ಆತ ತನ್ನ ಕ್ರಿಶ್ಚಿಯನ್ ಮತವನ್ನ ತೊರೆದು ಶುದ್ಧ ಸಸ್ಯಾಹಾರಿ ಹಾಗು ವೇದ ಮಂತ್ರೋಚ್ಛಾರಿ ಹಿಂದುವಾಗಿ ಸನಾತನ ಧರ್ಮವನ್ನ ಅಪ್ಪಿಕೊಂಡು ಬಿಟ್ಟ.

ನಾನೀಗ ಯಾರನ್ನ ಹೊಗಳಲಿ? ಸಿತಾರ್ ವಾದಕದ್ದೋ? ಇಲ್ಲ ರವಿಶಂಕರ್ ಜೀ ಯದ್ದೋ? ಅಥವ ಹಿಂದೂ ಧರ್ಮದ್ದೋ ಇಲ್ಲ ಈ ಮೂರನ್ನೂ ಹೊಗಳಲೋ? 1966 ರಲ್ಲಿ ಭಾರತಕ್ಕೆ ಬಂದಾಗ ಜಾರ್ಜ್ ಹ್ಯಾರಿಸನ್ ಗೆ ಆಗಿನ್ನೂ ಕೇವಲ 23 ವರ್ಷ ವಯಸ್ಸು. ಭಾರತಕ್ಕೆ ಬಂದು ರವಿಶಂಕರ್ ಜೀ ಬಳಿ ಸಿತಾರ್ ವಾದಕವನ್ನ ಕಲಿತು ಹಿಂದೂ ಧರ್ಮವನ್ನ ಅಪ್ಪಿಕೊಂಡ ಹ್ಯಾರಿಸ್ ಬಳಿಕ ವೆಸ್ಟರ್ನ್ (ಪಶ್ಚಿಮ) ದೇಶಗಳಲ್ಲಿ ಭಾರತೀಯ ಸಂಗೀತದ ಪ್ರಚಾರ ಪ್ರಸಾರ ಕಾರ್ಯದಲ್ಲಿ ನಿರತನಾಗಿಬಿಟ್ಟ‌.

ಜಾರ್ಜ್ ಹ್ಯಾರಿಸನ್ ರವರು ಬಳಿಕ ಲಕ್ಷಾಂತರ ಕ್ರಿಶ್ಚಿಯನ್ನರನ್ನ ಹಿಂದೂ ಧರ್ಮಕ್ಕೆ ಮರಳುವಂತೆ ಮಾಡಿದ್ದಷ್ಟೇ ಅಲ್ಲದೆ ತನ್ನ ಇಡೀ ಜೀವನವನ್ನೇ ಹಿಂದೂ ಧರ್ಮದ ಶ್ರೇಷ್ಟತೆಯನ್ನ ಸಾರಲು ಸಮರ್ಪಿಸಿಬಿಟ್ಟರು. ಜಾರ್ಜ್ ಹ್ಯಾರಿಸನ್ ಇಂಗ್ಲೆಂಡಿನ ಅತಿ ಶ್ರೀಮಂತ ಮ್ಯೂಸಿಷಿಯನ್ ಗಳಲ್ಲಿ ಒಬ್ಬರಾಗಿದ್ದರು. ತಮ್ಮ ಇಡೀ ಸಂಪತ್ತನ್ನ ಅವರು ಹಿಂದೂ ಧರ್ಮಕ್ಕೆ ದಾನವಾಗಿ ನೀಡಿಬಿಟ್ಟಿದ್ದರು.

ಜಾರ್ಜ್ ಹ್ಯಾರಿಸನ್ ರವರು ಇಂಗ್ಲೆಂಡಿನ ವ್ಯಾಟ್‌ಫೋರ್ಡ್ ನಗರದಲ್ಲಿ ತಮ್ಮ 70 ಎಕರೆ ಜಮೀನನ್ನ ಹಾಗು ಮಹಲ್ ನಂತಿದ್ದ ತನ್ನ ಮನೆಯನ್ನೇ ಶ್ರೀಕೃಷ್ಣ ನಿಗಾಗಿ ದಾನವಾಗಿ ಕೊಟ್ಟುಬಿಟ್ಟಿದ್ದರು, ಅವರು ಅಂದು ನೀಡಿದ ಜಾಗದಲ್ಲೇ ಇಂದು ಯೂರೋಪಿನ ಅತಿ ದೊಡ್ಡ ಹಿಂದೂ ಮಂದಿರ ನಿರ್ಮಾಣವಾಗಿದೆ. ಯೂರೋಪಿನಲ್ಲಿರುವ ಹಿಂದುಗಳೆಲ್ಲಾ ಹಿಂದೂ ಹಬ್ಬ ಹರಿದಿನಗಳನ್ನ ಇದೇ ಮಂದಿರದಲ್ಲಿ ಆಚರಿಸುತ್ತಾರೆ.

ಜಾರ್ಜ್ ಹ್ಯಾರಿಸನ್ ರವರಿಂದ ನೀಡಲ್ಪಟ್ಟ ಜಾಗದಲ್ಲಿ ಇದೀಗ ವೈದಿಕ ಸಾಹಿತ್ಯ, ಕೃಷ್ಣ ಉಪದೇಶ ಹಾಗು ಧಾರ್ಮಿಕ ಶಿಕ್ಷಣದ ಕೇಂದ್ರವಾಗಿ ಇಂದು ಲಕ್ಷಾಂತರ ವಿದೇಶಿಗರ ಆಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ‌. ಸರ್ವೇಯೊಂದರ ಪ್ರಕಾರ ಲಂಡನ್ ನಲ್ಲಿ ಜನ ವೀಕ್ಷಿಸಲು ಮುಗಿಬೀಳುವ ಜನರಲ್ಲಿ ಮೊದಲನೆಯವರು ರೆಡ್ ಡಬರ್-ಡೆಕರ್ ಬಸ್ ನಲ್ಲಿ ಪ್ರಯಾಣಿಸುವವರು, ಎರಡನೆಯವರು ವಿಂಟೇಜ್ ಮಾಡೆಕ್ ಟ್ಯಾಕ್ಸಿಯಲ್ಲಿ ತಿರುಗಾಡುವವರಾದರೆ ಮೂರನೆಯ ಸ್ಥಾನದಲ್ಲಿ ಇಸ್ಕಾನ್ ಭಕ್ತರು ಲಂಡನ್ ನಲ್ಲಿ ಕಾಣಸಿಗುತ್ತಾರೆ.

ಲಂಡನ್ನಿನ ಆಕ್ಸ್ಫರ್ಡ್ ಸ್ಟ್ರೀಟ್ ಪ್ರತಿ ದಿನ ಸಂಜೆ ಇಸ್ಕಾನ್ ಶ್ರೀಕೃಷ್ಣ ಭಕ್ತರಿಂದ ತುಂಬಿ ತುಳುಕುತ್ತದೆ. ಪ್ರತಿದಿನ ಭಾರೀ ಸಂಖ್ಯೆಯಲ್ಲಿ ಹಿಂದುಗಳು ಹಾಗು ವಿದೇಶಿಗರು ಒಂದೆಡೆ ಸೇರಿ ಇಸ್ಕಾನ್ ಸಂಕೀರ್ತನೆ ನಡೆಸುವ ದೃಶ್ಯವನ್ನ ಲಂಡನ್ ನಲ್ಲಿ ಕಾಣಬಹುದಾಗಿದ್ದು ಸಂಗೀತದ ತಾಳಬದ್ದ ನೃತ್ಯವನ್ನೂ ಇಲ್ಲಿ ನೋಡಬಹುದಾಗಿದೆ.

ಲಂಡನ್ ಸಂಸ್ಕೃತಿಯಲ್ಲಿ ಇಸ್ಕಾನ್ ಇದೀಗ ಒಂದು ಪ್ರಶಂಸನೀಯ ಅಂಗವಾಗಿಬಿಟ್ಟಿದೆ ಹಾಗು ಇಸ್ಕಾನ್ ನಿಂದ ರಚಿತವಾಗಿರಯವ ನೈಸರ್ಗಿಕ ದೃಶ್ಯ ಪ್ರತಿಯೊಬ್ಬನೂ ನೋಡತಕ್ಕಂಥದ್ದು. ಪ್ರವಾಸಿಗರು, ವ್ಯಾಪಾರಿಗಳು, ಭಕ್ತರು, ಅಂಗಡಿ ಮಾಲೀಕರು ಈ ಕೀರ್ತನೆಯಲ್ಲಿ ಭಾಗವಹಿಸಲು ಮುಗಿಬೀಳುತ್ತಾರೆ. ಇಡೀ ವಿಶ್ವದಲ್ಲಿ ಇಸ್ಕಾನ್ ತನ್ನ ವಿಶಿಷ್ಟ ಆಧ್ಯಾತ್ಮಿಕತೆಯಿಂದಾಗಿ ಲಕ್ಷಾಂತರ ಕೋಟ್ಯಂತರ ಜನರನ್ನ ಶ್ರೀ ಕೃಷ್ಣ ನತ್ತ ಆಕರ್ಷಿತಗೊಳಿಸುತ್ತಿರೋದಷ್ಟೇ ಅಲ್ಲದೆ ನಾಸ್ತಿಕರನ್ನೂ ಆಸ್ತಿಕನಾಗುವಂತೆ ಮಾಡುತ್ತಿದೆ.

ಆಕ್ಸ್‌ಫರ್ಡ್ ಸ್ಟ್ರೀಟ್ ನಲ್ಲಿ ನಡೆಯುವ ಕೀರ್ತನೆ, ಅಸಾಧಾರಣ ಸಂಸ್ಕೃತ ಹಾಗು ಇಂಗ್ಲೀಷ್ ಮಿಶ್ರಣದ ಹೆಸರಿನ ಭಕ್ತಿ ವೇದಾಂತ ವಿಶ್ವದ ಹತ್ತು ಸಾವಿರ ಇಸ್ಕಾನ್ ಮಂದಿರಗಳಲ್ಲಿ ಪ್ರಮುಖವಾಗಿದ್ದು ಅತ್ಯಂತ ಪ್ರಾಚೀನ ಸಂಸ್ಕೃತಿ ತನ್ನ ಪಸರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ‌. ವಿಶ್ವವಿಖ್ಯಾತ ಗಾಯಕ ಹಾಗು ಸಂಗೀತಕಾರ ‘ಬೀಟಲ್’ ಜಾರ್ಜ್ ಹ್ಯಾರಿಸನ್ ರವರ “ಬೀಟಲ್ ಗ್ರೂಪ್” ಗೆ ಅರವತ್ತರ ದಶಕದಲ್ಲಿ ಸಂಗೀತ ಲೋಕದ ಮಾಂತ್ರಿಕನೆಂದೇ ಖ್ಯಾತವಾಗಿತ್ತು.

ಭಾರತ ಯಾತ್ರೆಯಲ್ಲಿ ಜಾರ್ಜ್ ಹ್ಯಾರಿಸನ್ ಗೆ ಹೃಷಿಕೇಶ್ ದ ಪಾವನ ಭೂಮಿಯಲ್ಲಿ ಆಧ್ಯಾತ್ಮಿಕತೆಯ ಹಲವು ವಿಸ್ಮಯಗಳು ಅನುಭವಕ್ಕೆ ಬಂದಿದ್ದವಂತೆ‌. ಭಾರತದ ಸಂಸ್ಕೃತಿ, ಇಲ್ಲಿನ ಅಧ್ಯಾತ್ಮಿಕತೆ, ಇಲ್ಲಿನ ಆಚಾರ ವಿಚಾರಗಳು ಜಾನ್ ಹ್ಯಾರಿಸನ್ ರನ್ನ ಆಕರ್ಷಿತಗೊಳಿಸಿದ್ದ ಕಾರಣ ಅವರು ಕ್ರಿಶ್ಚಿಯನ್ ಮತದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರು‌.

‘ಬೀಟಲ್’ ಜಾರ್ಜ್ ಹ್ಯಾರಿಸನ್,‌ ತನ್ನ ಜೀವನದ ಮುಂದಿನ ವರ್ಷಗಳಲ್ಲಿ ಕೇವಲ ಇಸ್ಕಾನ್ ನ ಭಕ್ತರಾಗಷ್ಟೇ ಉಳಿಯದೆ ನೂರಾರು ಎಕರೆ ಭೂಮಿಯನ್ನೂ ಇಸ್ಕಾನ್ ಗೆ ದಾನಮಾಡಿಬಿಟ್ಟಿದ್ದರು‌. ಇಸ್ಕಾನಿನ ಭಕ್ತಿ ವೇದಾಂತದ ಮ್ಯಾನರ್ ಇಂಗ್ಲೆಂಡಿನ ಸ್ಥಾಪನೆ ಹಾಗು ಬೀಟಲ್ ಜಾರ್ಜ್ ಹ್ಯಾರಿಸನ್ ರವರ ನಡುವೆ ಸಂಬಂಧವಿದೆ ಎಂದೆ ಹೇಳಲಾಗುತ್ತದೆ‌.

ಟ್ಯೂಡರ್ ರಾಜರುಗಳ ಸಮಯದಲ್ಲಿ ಶಾಂತ ಹಾಗು ಹಸಿರು ಪ್ರಕೃತಿಯ ವಾತಾವರಣದಲ್ಲಿ ಪ್ರಭುವಿನ ವಾಸಸ್ಥಾನವಿತ್ತು. ಮುಖ್ಯ ದ್ವಾರದಲ್ಲಿ ಶಾಂತಿ ಪೂರ್ಣ ವಾತಾರಣವಿದೆ, ಅಲ್ಲಿ ಪುಷ್ಪಗಳ ಸುಗಂಧವಿದೆ. ವಿಭಿನ್ನ ದೇಶಗಳ ಹಾಗು ಅನ್ಯ ಮತೀಯ ಭಕ್ತರ ಹಾಗು ಪ್ರವಾಸಿಗರು ಈ ಜಾಗದಲ್ಲಿ ಕೀರ್ತನೆಗಾಗಿ ಒಟ್ಟುಗೂಡುತ್ತಾರೆ. ಆತ ಬಿಳಿಯನಾಗಿರಲಿ ಕರಿಯನಾಗಿರಲಿ ಆತ ಪ್ರಭುವಿನಲ್ಲಿ ಲೀನನಾಗುವವನೇ ಎಂಬುದು ಭಕ್ತರಿಗೆ ಅರಿವಾಗುತ್ತಿದೆ.

ವಿದೇಶಿಗರಿಗೆ ಸನಾತನ ಧರ್ಮದ ಶ್ರೇಷ್ಟತೆ ಅರಿವಾಗುತ್ತಿದೆ ಆದರೆ ನಮ್ಮ ದೇಶದ ಕೆಲ ಮೂರ್ಖರು ಮಾತ್ರ ಈಗಲೂ ಹಿಂದೂ ಧರ್ಮವನ್ನ ದೂಷಿಸುತ್ತ ಪ್ರಶ್ನಿಸುತ್ತಿರುವುದು ಮಾತ್ರ ದುರ್ದೈವದ ಸಂಗತಿಯೇ ಸರಿ.

-Team Google Guruu

Leave a Reply

Your e-mail address will not be published. Required fields are marked *

error: Content is protected !!