ಕರ್ನಾಟಕದಲ್ಲಿ ಅಷ್ಟೇ ಅಲ್ಲ ಇದೀಗ ಈ ರಾಜ್ಯದಲ್ಲಿ 10 ಕಾಂ’ಗ್ರೆಸ್ ಶಾಸಕರಿಂದ ರಾ’ಜಿನಾಮೆ

ರಾಜ್ಯ ರಾಜಕಾರಣ ದಿನಕಳೆದಂತೆ ಹೆಚ್ಚೆಚ್ಚು ಕುತೂಹಲ ಸೃಷ್ಟಿಸುತ್ತಿದ್ದು, ಅಧಿಕಾರ ಉಳಿಸಿಕೊಳ್ಳುವ ಅಥವಾ ಅಧಿಕಾರ ಪಡೆಯಬೇಕು ಎಂಬ ಬಯಕೆ ದುರಾಸೆಯಾಗುವುದರ ಜತೆಗೆ ಎಲ್ಲವೂ ತಕ್ಷಣವೇ ಆಗಬೇಕು ಎಂಬ ಹಪ ಹಪಿ ಉಂಟಾದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕ ರಾಜ್ಯ ರಾಜಕೀಯವೇ ಒಂದು ಉತ್ತಮ ಉದಾಹರಣೆಯಾಗಿದೆ ಎನ್ನಬಹುದು.

ಶಾಸಕರ ರಾಜಿನಾಮೆಯಿಂದ ಅಲ್ಪಮತಕ್ಕೆ ಕುಸಿದಿರುವ ಸರ್ಕಾರವೊಂದನ್ನು ಉಳಿಸಿಕೊಳ್ಳಲು ರಾಜಿನಾಮೆ ನೀಡಿದ ಶಾಸಕರನ್ನು ಕತ್ತು ಹಿಡಿದು ಎಳೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕುವಂತಹ ಪರಿಸ್ಥಿತಿ ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ, ಅರ್ಧ ಶತಮಾನಕ್ಕೂ ಹೆಚ್ಚು ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ ಎಂದರೆ ಆ ಪಕ್ಷ ಎಷ್ಟೊಂದು ಹತಾಶೆಗೊಳಗಾಗಿದೆ ಎಂಬುದು ಅರ್ಥ ಮಾಡಿಕೊಳ್ಳಬೇಕು.

ಮೈತ್ರಿ ಸರ್ಕಾರದ 14 ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಬಳಿಕ ಈ ರಾಜಿನಾಮೆಗೆ ಬಿಜೆಪಿಯೇ ಕಾರಣ, ಸರ್ಕಾರ ಕೆಡವಲು ಆಪರೇಷನ್ ಕಮಲದ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದೆಲ್ಲಾ ಬೆಳಗ್ಗಿನಿಂದ ಕಾಂಗ್ರೆಸ್ ಪ್ರತಿಭಟನೆ, ರಾಜಭವನ ಚಲೋ ನಡೆಸಿತು. ಸಂಜೆಯ ವೇಳೆಗೆ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ರಾಜ್ಯದ ಶಕ್ತಿ ಕೇಂದ್ರ, ಜನರ ರಕ್ಷಣೆಯ ಕಾನೂನುಗಳನ್ನು ರಚಿಸುವ ವಿಧಾನಸೌಧದಲ್ಲೇ ತನ್ನದೇ ಪಕ್ಷದ ಶಾಸಕರೊಬ್ಬರನ್ನು ಕತ್ತು ಹಿಡಿದು ಎಳೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕುವ ಮೂಲಕ ಪುರಾಣ ಓದೋಕೆ, ಬದನೇಕಾಯಿ ತಿನ್ನೋಕೆ ಎಂಬುದನ್ನು ಸ್ಪಷ್ಟವಾಗಿ ಒಪ್ಪಿಕೊಂಡಿದೆ.

ಒಂದುಕಡೆ ಕರ್ನಾಟಕ ರಾಜ್ಯದಲ್ಲಿ ಭಾರೀ ರಾಜಕೀಯ ಹೈಡ್ರಾಮಾ ನಡೆಯುತ್ತಿರುವ ಬೆನ್ನಲ್ಲೇ, ಇನ್ನೊಂದು ಕಡೆ ನೆರೆಯ ರಾಜ್ಯ ಗೋವಾದಲ್ಲೂ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಗೋವಾ ಪ್ರತಿಪಕ್ಷ ನಾಯಕ ಚಂದ್ರಕಾಂತ್ ಕವಲೇಕರ್ ನೇತೃತ್ವದಲ್ಲಿ 10 ಕಾಂಗ್ರೆಸ್ ಶಾಸಕರು ಬುಧವಾರ ಆಡಳಿತರೂಢ ಬಿಜೆಪಿ ಜೊತೆ ವಿಲೀನವಾಗಿದ್ದಾರೆ.

ಒಟ್ಟು 15 ಕಾಂಗ್ರೆಸ್ ಶಾಸಕರ ಪೈಕಿ 10 ಶಾಸಕರ ಬಣ ಇಂದು ಬಿಜೆಪಿಯೊಂದಿಗೆ ವಿಲೀನವಾಗಿದೆ. ಇದರೊಂದಿಗೆ 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯೆ 5ಕ್ಕೆ ಕುಸಿದಿದ್ದು, ಆಡಳಿತರೂಢ ಬಿಜೆಪಿ ಬಲ 17ರಿಂದ 27ಕ್ಕೆ ಏರಿಕೆಯಾಗಿದೆ. ಕವಲೇಕರ್ ನೇತೃತ್ವದಲ್ಲಿ 10 ಕಾಂಗ್ರೆಸ್​ ಶಾಸಕರು ಇಂದು ಸಂಜೆ ಸ್ಪೀಕರ್ ರಾಜೇಶ್ ಪಟ್ನಾಕರ್  ಅವರನ್ನು ಭೇಟಿ ಮಾಡಿ, ವಿಲೀನ ಪತ್ರ ನೀಡಿದ್ದಾರೆ. 

ಚಂದ್ರಕಾಂತ್ ಕವಲೇಕರ್, ಅಟನಾಸಿಯೋ ಆನ್ಸೆರಾಟ್ಟೆ, ಜೆನ್ನಿಫರ್ ಮಾನ್ಸೆರಾಟ್ಟೆ, ಫ್ರಾನ್ಸಿಸ್ ಸಿಲ್ವೇರಾ, ಫಿಲಿಪ್ ನೆರಿ ರಾಡ್ರಿಗೆಸ್, ಕ್ಲಿಯೋಫೇಷಿಯೋ ಡಯಾಸ್, ವಿಲ್​ಫ್ರೆಡ್ ಡಿಸಾ, ನೀಲಕಂಠ್ ಹಲರನಕರ್, ಇಸಿಡೋರ್ ಫರ್ನಾಂಡಿಸ್ ಅವರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದಾರೆ. ಮೂರನೇ ಎರಡು ಭಾಗದಷ್ಟು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ.

ಅತೀ ಹೆಚ್ಚು ಭಾಗ ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷ ಸೇರಿದ್ದ ಕಾರಣ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ ಮತ್ತು ಶಾಸಕ ಸ್ಥಾನವೂ ರದ್ದಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!