ನೀವು ಖಾಸಗಿ (Private) ಅಥವ ಸರ್ಕಾರಿ ಕಂಪೆನಿಯಲ್ಲಿ ಕೆಲಸಗಾರರಾಗಿದ್ದರೆ ಈ ಸುದ್ದಿಯನ್ನ ಮಿಸ್ ಮಾಡದೇ ಓದಿ, ತಪ್ಪದೇ ಶೇರ್ ಮಾಡಿ

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಆರ್ಥಿಕತೆಯನ್ನ ಬಲಗೊಳಿಸಲು, ದೇಶದ ಯುವಕರು, ರೈತರು, ಬಡವರು, ಮಹಿಳೆಯರಿಗಾಗಿ ಹಲವಾರು ಜನಪ್ರೀಯ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಈ ಹಿಂದೆ ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸುವ ಮುನ್ನ ದೇಶದಲ್ಲಿ ನಿರಾಶಾದಾಯಕ ವಾತಾವರಣವಿತ್ತು.

ದಿನ ಬೆಳಗಾದರೆ ದೇಶದಲ್ಲಿ ಅಷ್ಟು ಲಕ್ಷ ಕೋಟಿ ಭ್ರಷ್ಟಾಚಾರ ಇಷ್ಟು ಲಕ್ಷ ಕೋಟಿ ಭ್ರಷ್ಟಾಚಾರ ಎಂಬ ಸುದ್ದಿಯನ್ನ ನೋಡಿ ನೋಡಿ ಹೈರಾಣಾಗಿ ಹೋಗಿದ್ದ ದೇಶದ ಜನತೆ ಬದಲಾವಣೆ ಬಯಸಿ ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನ ಪೂರ್ಣ ಬಹುಮತದಿಂದ ಆಯ್ಕೆ ಮಾಡಿದ್ದರು. ದೇಶದ ಜನತೆಯ ನಂಬಿಕೆಯನ್ನ ಹುಸಿಗೊಳಿಸದ ಪ್ರಧಾನಿ ಮೋದಿ ಸರ್ಕಾರದಲ್ಲಿ ಇಲ್ಲಿಯವರೆಗೆ ಒಂದೇ ಒಂದು ಭ್ರಷ್ಟಾಚಾರದ ಸುದ್ದಿ ಕೇಳಿಲ್ಲ‌. ಅಧೋಗತಿಗೆ ತಲುಪಿದ್ದ ಭಾರತದ ಆರ್ಥಿಕತೆ ಇಂದು ಜಗತ್ತಿನ ಪ್ರಗತಿಶೀಲ ರಾಷ್ಟ್ರಗಳನ್ನೂ ಸೆಡ್ಡು ಹೊಡೆದು 7.8 ಕ್ಕೆ ತಲುಪಿದೆ.

ಇದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಮೋದಿಯನ್ನ ಸೋಲಿಸಿ ಮತ್ತೆ ಅಧಿಕಾರಕ್ಕೆ ಬರಲು ಭರ್ಜರಿಯಾದ ಸಿದ್ಧತೆಯನ್ನ ನಡೆಸಿದ್ದವು, ಪ್ರಧಾನಿ ಮೋದಿ ಮಾತ್ರ ತಮ್ಮ ಕೆಲಸಗಳ ಮೂಲಕ, ಅಭಿವೃದ್ಧಿ, ಸಬಕಾ ಸಾಥ್ ಸಬಕಾ ವಿಕಾಸ್ ಎಂಬ ಮಂತ್ರವನ್ನೇ ಮಾನದಂಡವನ್ನಾಗಿಟ್ಟುಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿ ಭರ್ಜರಿಯಾದ ಗೆಲುವು ಸಾಧಿಸಿದ್ದು ತಮಗೆಲ್ಲಾ ತಿಳಿದ ವಿಷಯವೇ. ಪ್ರಧಾನಿ ಮೋದಿ ಇದೀಗ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವವರಿಗಾಗಿ ಖುಷಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ.

ಸರ್ಕಾರವು ಕಾಂಟ್ರ್ಯಾಕ್ಟ್ ಬೇಸಿಸ್ ಮೇಲೆ ಕೆಲಸ ಮಾಡುತ್ತಿರುವವರಿಗಾಗಿ ಇದೀಗ ಮಹತ್ವದ ಘೋಷಣೆಯೊಂದನ್ನ ಮಾಡಿದೆ. ಸರ್ಕಾರದ ವತಿಯಿಂದ ಪ್ರಿನ್ಸಿಪಲ್ ಸೆಕ್ರೆಟರಿ ಹಾಗು ಸೆಕ್ರೆಟರಿ ಗೆ ಖಡಕ್ ಸರ್ಕ್ಯೂಲರ್ (ಆದೇಶ) ಮೂಲಕ ಮಹತ್ವದ ಆದೇಶವೊಂದು ಜಾರಿಯಾಗಿದ್ದು ಕಾಂಟ್ರ್ಯಾಕ್ಟ್ ಬೇಸಿಸ್ ಮೇಲೆ ಕೆಲಸ ನಿರ್ವಹಿಸುತ್ತಿರುವ ಕೆಲಸಗಾರರಿಗೆ ಸಮಯಕ್ಕೆ ಅನುಗುಣವಾಗಿ ಟೈಂ ಟು ಟೈಂ ಸ್ಯಾಲರಿ(ಸಂಬಳ) ನೀಡಬೇಕೆಂದು ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರವು ಇಂತಹದ್ದೊಂದು ಆದೇಶ ಜಾರಿಗೊಳಿಸಿ ಎಲ್ಲಾ ಹೆಡ್ ಆಫ್ ದಿ ಡಿಪಾರ್ಟಮೆಂಟ್ ಗಳಿಗೆ ಸರ್ಕ್ಯೂಲರ್ ಕಳಿಸಿ ಕ್ಯಾಬಿನೆಟ್ ನ ಈ ನಿರ್ಧಾರವನ್ನ ಹಾಗು ಆದೇಶವನ್ನ ಖಡಕ್ ಆಗಿ ಪಾಲಿಸುವಂತೆ ಸಮಯಕ್ಕೆ ಸರಿಯಾಗಿ ಸ್ಯಾಲರಿ ನೀಡಬೇಕು ಹಾಗು ಕ್ಯಾಬಿನೆಟ್ ನ ಈ ಆದೇಶವನ್ನ ಚಾಚೂ ತಪ್ಪದೆ ಪಾಲಿಸಬೇಕು ಎಂದು ಹೇಳಿದೆ.

ಏನಿದು ಸರ್ಕ್ಯೂಲರ್?

ಕೇಂದ್ರ ಸರ್ಕಾರದ ಈ ಆದೇಶ (Circular) ನ ಪ್ರಕಾರ ಸಂಬಂಧಪಟ್ಟ ಹೆಡ್ ಆಫ್ ದಿ ಡಿಪಾರ್ಟ್ಮೆಂಟ್ ಗೆ ಈ ಜವಾಬ್ದಾರಿಯನ್ನ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದು ತಮ್ಮ ತಮ್ಮ ಇಲಾಖೆಗಳಲ್ಲಿ ಕಾಂಟ್ರ್ಯಾಕ್ಟ್ ಬೇಸಿಸ್ ಮೇಲೆ ಕೆಲಸ ಮಾಡುತ್ತಿರುವ ಎಲ್ಲ ಕೆಲಸಗಾರರಿಗೂ ಸರಿಯಾದ ಸಮಯದಲ್ಲಿ ಸಂಬಳ ನೀಡಲಾಗುತ್ತಿದೆಯಾ ಎಂಬುದನ್ನ ಖುದ್ದಾಗಿ ಪರಿಶೀಲಿಸಬೇಕು ಎಂದಿದೆ.

ಸರ್ಕಾರಿ ನಿಯಮಗಳ ಪ್ರಕಾರ 1 ಸಾವಿರಕ್ಕೂ ಕಡಿಮೆ ಸ್ಟಾಫ್ ಇದ್ದಲ್ಲಿ ತಿಂಗಳು ಮುಗಿಯುವುದರವರೆಗೆ ಹಾಗು ತಿಂಗಳ 7 ನೆಯ ತಾರೀಕಿನವರೆಗೆ ಪೇಮೆಂಟ್ ಮಾಡಲೇಬೇಕು. ಅದೇ ಒಂದು ಸಾವಿರಕ್ಕೂ ಅಧಿಕ ಸ್ಟಾಫ್ ಇರುವ ಡಿಪಾರ್ಟ್‌ಮೆಂಟ್ ಗಳಲ್ಲಿ ತಮ್ಮಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಪ್ರತಿ ತಿಂಗಳು 10 ನೆಯ ತಾರೀಕಿನವರೆಗೆ ಪೇಮೆಂಟ್ ಮಾಡಲೇಬೇಕು ಎಂಬ ಆದೇಶವನ್ನ ಕೇಂದ್ರ ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಗೆ ಹೊರಡಿಸಿದೆ.

ಮುಖ್ಯಮಂತ್ರಿಗಳವರೆಗೆ ತಲುಪಿದ ರಿಪೋರ್ಟ್:

ಪ್ರತಿಯೊಂದು ಇಲಾಖೆಯ ವಿಭಾಗದ HOD ಗೆ ತನ್ನ ಕಡೆಯಿಂದ ತನ್ನ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಸರಿಯಾದ ಸಮಯಕ್ಕೆ ಪೇಮೆಂಟ್ ಮಾಡಲಾಗುತ್ತಿದೆಯಾ ಎಂಬುದನ್ನ ಖುದ್ದಾಗಿ ತಾನೇ ತಿಳಿದುಕೊಂಡು ಸ್ಪಷ್ಟೀಕರಣ ನೀಡಬೇಕು. ಈ ವಿಚಾರದಲ್ಲಿ HOD ಮುಖ್ಯ ಸಚಿವರಿಗೆ ತಿಂಗಳ ಪ್ರತಿ 20 ನೆ ತಾರೀಖಿನಂದು ಒಂದು ಸರ್ಟಿಫಿಕೇಟ್ ಕೊಡಬೇಕು. ಬಳಿಕ ಮುಖ್ಯ ಸಚಿವರು ಎರಡು ದಿನಗಳ ಬಳಿಕ ಅಂದರೆ ಪ್ರತಿ ತಿಂಗಳ 22 ನೆಯ ತಾರೀಖಿನಂದು ಒಂದು ರಿಪೋರ್ಟ್ ತಯಾರಿಸಿ ಅದನ್ನ ಸಬ್ಮಿಟ್ ಮಾಡಬೇಕು.

ದೋಷಿಗಳ ವಿರುದ್ಧ ಕೈಗೊಳ್ಳಲಾಗುತ್ತೆ ಕಠಿಣ ಕ್ರಮ:

ತಮ್ಮ ತಮ್ಮ ಇಲಾಖೆಗಳಲ್ಲಿನ ಕೆಲಸಗಾರರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡದೇ ಹೋದಲ್ಲಿ ಹಾಗು ಸರ್ಕಾರದ, ಅಧಿಕಾರಿಗಳ ಆದೇಶವನ್ನ ಧಿಕ್ಕರಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಂತಹ ಅಧಿಕಾರಿಗಳ ಹೆಸರಿನ ಲಿಸ್ಟ್ ನ್ನ ಸಂಬಂಧಪಟ್ಟ ವಿಜಿಲೆನ್ಸ್ ಡಿಪಾರ್ಟ್ಮೆಂಟ್ ಗೆ ಕಳಿಸಲಾಗುತ್ತೆ. ಇದರ ಜೊತೆ ಜೊತೆಗೆ ಸಂಬಂಧಟ್ಟ HOD ಗೂ ಈ ಕುರಿತು ಸ್ಪಷ್ಟನೆ ನೀಡುವಂತೆ ನೋಟಿಸ್ ಕೊಟ್ಟು ಅಷ್ಟಕ್ಕೂ ಕೆಲಸಗಾರರಿಗೆ ಸಂಬಳ ನೀಡಲು ಲೇಟ್ ಆಗಿದ್ದಾದರೂ ಯಾಕೆ?

ಸಂಬಳವನ್ನ ಸಮಯಕ್ಕೆ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಯಾಕೆ ಕೈಗೊಳ್ಳಬಾರದು ಎಂದು ನೋಟಿಸ್ ನೀಡಲಾಗುತ್ತದೆ‌. ಈಗಾಗಲೇ ಈ ಆದೇಶ ದೆಹಲಿ ಸರ್ಕಾರದಲ್ಲಿ ಚಾಲ್ತಿಯಲ್ಲಿದೆ. ಕೇಂದ್ರ ಸರ್ಕಾರದ ಈ ಆದೇಶ ಜಾರಿಯಾಗಿರುವುದರಿಂದ ನಿಮಗೆ ನೀವು ಕೆಲಸ ಮಾಡುತ್ತಿರುವ ಕಂಪೆನಿ ಸಂಬಳ ನೀಡುವಲ್ಲಿ ನಿಮಗೆ ಸತಾಯಿಸುತ್ತಿದ್ದಲ್ಲಿ ನೀವು ದೂರು ನೀಡಿ ತಕ್ಷಣವೇ ನಿಮ್ಮ ಸಂಬಳವನ್ನ ಪಡೆಯಬಹುದಾಗಿದೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!