ಮೋದಿ ಪ್ರಧಾನಿಯಾದ ಬೆನ್ನಲ್ಲೆ ಕಾಂಗ್ರೆಸ್​ಗೆ ಚಳಿ ಜ್ವರ ಬಿಡಿಸಿದ ಗೌತಮ್ ಗಂಭೀರ್; ಏನಂದ್ರು ಗೊತ್ತಾ.?

ಕ್ರಿಕೆಟ್​ ವೃತ್ತಿಯಲ್ಲಿ ಉತ್ತಮ ಇನ್ನಿಂಗ್ಸ್​ ಆಡಿ ಗಮನಾರ್ಹ ಸಾಧನೆ ಮಾಡಿ ವಿದಾಯ ಹೇಳಿರುವ ಗೌತಮ್​ ಗಂಭೀರ್​ ಅವರು ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್​ ಪ್ರಾರಂಭಿಸಿದ್ದಾರೆ. ಪ್ರಧಾನಿ ಮೋದಿ ರೀತಿಯಲ್ಲೇ ಹೆಚ್ಚು ಸಮರ್ಪಣಾ ಮನೋಭಾವದಿಂದ ಎನ್​​ಡಿಎದಲ್ಲಿ ಸರ್ಕಾರದಲ್ಲಿ ಮೊದಲ ಬಾರಿಗೆ ಕಾರ್ಯನಿರ್ವಹಿಸುತ್ತೇನೆ ಎಂದು ಗಂಭೀರ್​ ಹೇಳಿದ್ದಾರೆ.

ಕ್ರಿಕೆಟ್​ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಮೂಲಕ ಎದುರಾಳಿಗಳಿಗೆ ಸೋಲಿನ ರುಚಿ ತೋರಿಸಿದ್ದ ಗಂಭೀರ್​ ರಾಜಕೀಯದಲ್ಲೂ ಅದನ್ನು ಮುಂದುವರಿಸಿದ್ದಾರೆ ಎಂದು ಹೇಳಬಹುದು, ಹೌದು ಈ ಬಾರಿ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಕ್ರಿಕೆಟಿಗ ಗೌತಮ್ ಗಂಭೀರ್ ಬಹುಮತ ಪಡೆದು ಗೆಲುವು ಸಾಧಿಸಿದ್ದಾರೆ.

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಸೇರಿ ಪೂರ್ವ ದೆಹಲಿಯಿಂದ ಕಣಕ್ಕಿಳಿಯುವ ಮೂಲಕ ಮೊದಲ ಬಾರಿಗೆ ಗಂಭೀರ್ ಚುನಾವಣೆ ಎದುರಿಸಿದ್ದಾರೆ. ​ 6,96,156 ಮತಗಳನ್ನು ಗಳಿಸುವ ಮೂಲಕ 3,91,222 ಅಂತರದಲ್ಲಿ ಎದುರಾಳಿ ಕಾಂಗ್ರೆಸ್​ ಅಭ್ಯರ್ಥಿ ಅರವಿಂದರ್​ ಸಿಂಗ್​ ಲವ್ಲಿ 3,04,934 ಅವರಿಗೆ ಸೋಲುಣಿಸುವ ಮೂಲಕ ಮೊದಲ ಬಾರಿಗೆ ಸಂಸದರಾಗಿ ಸಂಸತ್ತಿಗೆ ಪ್ರವೇಶ ಪಡೆದಿದ್ದಾರೆ.

ಗೆಲುವಿನ ಖುಷಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿರುವ ಗಂಭೀರ್​, ಕಾಂಗ್ರೆಸ್​ಗೆ ಸಲಹೆಯೊಂದನ್ನು ನೀಡಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟ ಜನರಿಗೆ ನನ್ನ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ನಿರ್ಣಾಯಕ ನಾಯಕತ್ವವನ್ನು ನೀಡಿದ್ದರ ಫಲವೇ ಈ ಫಲಿತಾಂಶ ಎಂದಿದ್ದಾರೆ.

ಯಾವಾಗ ಪ್ರಾಮಾಣಿಕತೆಯಿಂದ ಕಷ್ಟಪಟ್ಟು ದುಡಿದಾಗ ಏನಾಗುತ್ತದೆ ಎಂಬುದನ್ನು ಈ ಫಲಿತಾಂಶ ತೋರಿಸುತ್ತಿದೆ ಎಂದು ಮೋದಿಯ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಚುನಾವಣೆಯಲ್ಲಿ ಜನರು ಋಣಾತ್ಮಕ ರಾಜಕಾರಣವನ್ನು ನಿರಾಕರಿಸಿದ್ದಾರೆ.

ಎಲ್ಲ ಸಮಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದರ ಬದಲಾಗಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಕಾಂಗ್ರೆಸ್​ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಎಲ್ಲಿಯವರೆಗೂ ಕಾಂಗ್ರೆಸ್​ನವರು ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಕಾಂಗ್ರೆಸ್​ ಅಧಿಕಾರಕ್ಕೆ ಬರುವುದಿಲ್ಲ. ಬೇಕಾದರೆ ಇದನ್ನು ನಾನು ಬರೆದುಕೊಡುತ್ತೇನೆ ಎಂದು ಹೇಳಿದರು.

ಇಷ್ಟೇ ಅಲ್ಲದೇ ಸದ್ಯದ ವಿಶ್ವಕಪ್​ ಕ್ರಿಕೆಟ್ ಕುರಿತು ಮಾತನಾಡಿದ ಗಂಭೀರ್ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. ವಿಶ್ವಕಪ್​ ಗೆಲ್ಲುವುದಕ್ಕಿಂತ ಹೆಚ್ಚಿನ ಸಂತೋಷ ಕ್ರಿಕೆಟ್​ನಲ್ಲಿ ಮತ್ತೊಂದಿಲ್ಲ 2011ರಲ್ಲಿ ನಾವು ವಿಶ್ವಕಪ್​ ಗೆದ್ದಿದ್ದೆವು. ಈ ಬಾರಿಯು ಗೆಲ್ಲುವುದಕ್ಕೆ ಅವಕಾಶ ಇದೆ ಎಂದು ತಿಳಿಸಿದರು.

-Team Google Guru

Leave a Reply

Your e-mail address will not be published. Required fields are marked *

error: Content is protected !!