ರಸ್ತೆ ಬದಿ ನಮಾಜ್ ಮಾಡುವ ಮುಸ್ಲಿಮರಿಗೆ ಉತ್ತರ ಕೊಟ್ಟ ಬಿಜೆಪಿ

ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಗ್ರ್ಯಾಂಡ್‌ ಟ್ರಂಕ್‌ ರಸ್ತೆ ಸೇರಿದಂತೆ ಇತರ ಪ್ರಮುಖ ರಸ್ತೆಗಳನ್ನು ಶುಕ್ರವಾರ ನಮಾಜ್ ವೇಳೆ ಬಂದ್ ಮಾಡಲಾಗುತ್ತಿದ್ದೂ ರಸ್ತೆ ಮಧ್ಯೆ ಕುಳಿತು ನಮಾಜ್ ಮಾಡುತ್ತಿರುವ ಕಾರಣ ಜನಸಾಮಾನ್ಯರಿಗೆ ಓಡಾಡಲು ತೊಂದರೆಯಾಗುತ್ತಿತ್ತು ಇದನ್ನು ಮಮತಾ ಬ್ಯಾನರ್ಜಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಹೀಗಾಗಿ ಎಂದು ಬಿಜೆಪಿ ಯುವ ಮೋರ್ಚಾ ತಿಳಿಸಿದೆ.

ಪಶ್ಚಿಮ ಬಂಗಾಳದ ಹೌರದಲ್ಲಿ ಮುಸ್ಲಿಂ ಸಮಾಜದ ಜನರು ಶುಕ್ರವಾರ ಪ್ರಾರ್ಥನೆ (ನಮಾಜ್‌) ಸಲ್ಲಿಸಲು ರಸ್ತೆಯಲ್ಲಿ ಸಂಚಾರ ನಿಷೇಧಿಸಿರುವ ಕ್ರಮವನ್ನು ಖಂಡಿಸಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಇಲ್ಲಿನ ಬೆಲ್ಲೆ ಖಾಲ್‌ನಲ್ಲಿ ರಸ್ತೆಯ ಮಧ್ಯೆ ಕುಳಿತು ಹನುಮಾನ್ ಚಾಲಿಸಾವನ್ನು ಪಠಿಸಿದ್ದಾರೆ.

ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಗ್ರ್ಯಾಂಡ್‌ ಟ್ರಂಕ್‌ ರಸ್ತೆ ಸೇರಿದಂತೆ ಇತರ ಪ್ರಮುಖ ರಸ್ತೆಗಳನ್ನು ಶುಕ್ರವಾರ ನಮಾಜ್ ವೇಳೆ ಬಂದ್ ಮಾಡಲಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಯುವ ಮೋರ್ಚಾ ಮಂಗಳವಾರ ಜೂನ್ 25 ರಂದು ಬಿಜೆಪಿ ಕಾರ್ಯಕರ್ತರು ಹನುಮಾನ್ ದೇವಸ್ಥಾನದ ಸಮೀಪವಿರುವ ಪ್ರತಿಯೊಂದು ರಸ್ತೆಯಲ್ಲೂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಶುಕ್ರವಾರದಂದು ನಮಾಜ್ ವೇಳೆ ಇಲ್ಲಿನ ಪ್ರಮುಖ ರಸ್ತೆಗಳು ಬಂದ್ ಆಗುವುದರಿಂದ ರೋಗಿಗಳು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ತೆರಳಲು ಕಷ್ಟವಾಗಿದೆ, ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ಹಲವರು ತೊಂದರೆ ಅನುಭವಿಸುತ್ತಿದ್ದಾರೆ. ನಮಾಜ್‌ ವೇಳೆ ರಸ್ತೆಯಲ್ಲಿ ಸಂಚಾರ ನಿಷೇಧವನ್ನು ಎಲ್ಲಿಯವರೆಗೆ ಮುಂದುವರೆಸುತ್ತಾರೊ ಅಲ್ಲಿಯವರೆಗೆ ನಾವೂ ಹನುಮಾನ್‌ ಮಂದಿರಗಳ ಸಮೀಪದ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಹನುಮಾನ್‌ ಚಾಲಿಸಾ ಪಠಿಸಲು ಮುಂದಾಗಿದ್ದಾರೆ.

ರಸ್ತೆ ಪಕ್ಕದಲ್ಲಿ ನಿಂತು ಜೈ ಶ್ರೀ ರಾಮ್ ಎಂದು ಹೇಳಿದ್ದಕ್ಕೆ ಕೆಸ್ ದಾಖಲಿಸುವ ಮಮತಾ ಬ್ಯಾನರ್ಜಿ ಈ ರೀತಿ ರಸ್ತೆ ಮಧ್ಯೆ ಗಂಟೆಗಟ್ಟಲೆ ಕುಳಿತು ನಮಾಜ್ ಮಾಡುವ ಮೂಲಕ ಜನ ಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದರೂ ಅವರ ಬಗ್ಗೆ ತುಟಿ ಬಿಚ್ಚಲ್ಲ ಯಾಕೆ.? ಪ್ರಜಾ ಪ್ರಭುತ್ವ ಎಂದರೆ ಎಲ್ಲರಿಗೂ ಸಮಾನತೆ ನೀಡಬೇಕು ಅಲ್ವ. ಆದರೆ ಬಂಗಾಳದಲ್ಲಿ ಮಾತ್ರ ಕೇವಲ ಅಲ್ಪ ಸಂಖ್ಯಾತರ ಓಲೈಕೆ ಮಾಡ್ತಾರೆ.?

ಕೇವಲ ಚುನಾವಣಾ ಹಿತದೃಷ್ಟಿಯಿಂದ ಮತಗಳಿಗಾಗಿ ಒಂದು ಸಮೂಹವನ್ನು ಓಲೈಸುವುದು ಎಷ್ಟು ಸರಿ, ಇನ್ನೂ ಮುಂದೆಯಾದರೂ ಮಮತಾ ಬ್ಯಾನರ್ಜಿ ಮುಸಲ್ಮಾನರಿಗಾಗಿ ಪ್ರಾರ್ಥನಾ ಸ್ಥಳ ನಿರ್ಮಿಸಿ ಅವಕಾಶ ಮಾಡಿ ಕೊಟ್ಟು ರಸ್ತೆಯಲ್ಲಿ ಓಡಾಡುವ ಜನರಿಗೆ ಅನುಕೂಲ ಮಾಡಿ ಕೊಡಲಿ, ಇಲ್ಲವಾದ್ದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಇನ್ನಷ್ಟು ಹೆಚ್ಚು ಪಾಠ ಕಲಿಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

-Team Google 

Leave a Reply

Your e-mail address will not be published. Required fields are marked *

error: Content is protected !!