ಭಾರತ ಸೇರಿದಂತೆ ವಿಶ್ವವೇ ಪೂಜಿಸುವ ಆಂಜನೆಯನನ್ನು ಈ ಊರಿನ ಜನ ಪೂಜಿಸುವುದಿಲ್ಲ!

ಇತ್ತೀಚಿನ ದಿನಗಳಲ್ಲಿ ಹನುಮಂತನ ಬಗ್ಗೆ ಹಾಗೂ ಆತನ ಜಾತಿಯ ಬಗ್ಗೆ ಹಲವು ವಿವಾದಾತ್ಮಕ ಹೇಳಿಕೆಗಳು ರಾಜಕಾರಣಿಗಳ ಬಾಯಿಂದ ಕೇಳಿಬರುತ್ತಿವೆ. ಯಾರೋ ಅವನನ್ನು ದಲಿತ ಎಂದು ಕರೆದಿದ್ದಾರೆ, ಇನ್ಯಾರೋ ಮುಸ್ಲಿಂ ಎಂದು, ಮತ್ಯಾರೋ ಮತ್ಯಾವುದೋ ಜಾತಿಯಾವ ಎಂದು ಕರೆಯುವುದರ ಮೂಲಕ ಈ ವಿಷಯವನ್ನು ದೇಶಾದ್ಯಂತ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು.

ವಾಸ್ತವವಾಗಿ ಹನುಮಾನನ್ನು ಹಿಂದೂಗಳ ಪ್ರಮುಖ ಆರಾಧ್ಯ ದೇವರುಗಳಲ್ಲಿ ಒಬ್ಬನೆಂದು ಪೂಜಿಸಲಾಗುತ್ತದೆ. ಆದರೆ ಹನುಮನನ್ನು ಪೂಜಿಸದ ಒಂದು ಗ್ರಾಮ ನಮ್ಮ ಭಾರತದಲ್ಲೇ ಇದೇ ಎಂಬುದು ಕೆಲವೇ ಕೆಲವು ಮಂದಿಗಷ್ಟೇ ಗೊತ್ತು. ಇಲ್ಲಿನ ನಿವಾಸಿಗಳು ಹನುಮಾನ್‌ನನ್ನು ಕಂಡರೆ ಉರಿದು ಬೀಳುತ್ತಾರೆ ಆತ ಮಾಡಿದ ಒಂದು ಕೆಲಸದಿಂದಾಗಿ ಕೋಪಗೊಂಡಿರುವ ಕಾರಣ ಅವರು ಇಂದಿಗೂ ಸಹ ಹನುಮನನ್ನು ಪೂಜಿಸುವುದಿಲ್ಲವಂತೆ.

ಉತ್ತರ ಖಂಡದ ಅಲ್ಮೊರಾ ಬಳಿಯ ಚಮೋಲಿ ಜಿಲ್ಲೆಯ ಜೋಶಿಮತ್ ವಿಕಾಸ್ ಬ್ಲಾಕ್ ನಲ್ಲಿ ದ್ರೋಣಗಿರಿ ಎಂಬ ಗ್ರಾಮವಿದೆ. ಈ ಹಳ್ಳಿ ಸುಮಾರು 14000 ಅಡಿ ಎತ್ತರದಲ್ಲಿದೆ. ಇಲ್ಲಿರುವ ಜನರು ಸಂಜೀವನಿಗಾಗಿ ಹನುಮಾನ್ ಪರ್ವತವನ್ನು ಕೊಂಡೊಯ್ದಿದ್ದಾರೆ ಎಂದು ನಂಬುತ್ತಾರೆ.

ದ್ರೋಣಗಿರಿ ಜನರು ಪರ್ವತವನ್ನು ಪೂಜಿಸುವುದರಿಂದ, ಪರ್ವತವನ್ನು ಕೊಂಡೊಯ್ದ ಕಾರಣ ಅವರು ಹನುಮಾನ ವಿರುದ್ಧ ಕೋಪಗೊಂಡಿದ್ದಾರೆ. ಹಾಗಾಗಿ ಇಲ್ಲಿನ ಜನ ಇಂದಿಗೂ ಸಹ ಹನುಮಂತನನ್ನು ಪೂಜಿಸುವುದಿಲ್ಲ. ಈ ಹಳ್ಳಿಯಲ್ಲಿ ಕೆಂಪು ಧ್ವಜವನ್ನೂ ಸಹ ನಿಷೇಧಿಸಲಾಗಿದೆ.

ದ್ರೋಣಗಿರಿ ಗ್ರಾಮದ ನಿವಾಸಿಗಳ ಪ್ರಕಾರ, ಹನುಮಾನ್ ಗ್ರಾಮಕ್ಕೆ ಬಂದಾಗ ಅವರು ಗೊಂದಲಕ್ಕೊಳಗಾದರು. ಆ ಪರ್ವತವು  ಸಂಜೀವಿನಿ ಪರ್ವತ ಆಗಿರಬಹುದು ಎಂದು ಅವರು ಭಾವಿಸಿರಲಿಲ್ಲ. ನಂತರ ಗ್ರಾಮದಲ್ಲಿ ಕಾಣಿಸಿಕೊಂಡ ಮಹಿಳೆಗೆ ಭೇಟಿಯಾದ ಹನುಮಂತ ಮಾತನಾಡಿಸಿದರು.

ಸಂಜೀವನಿ ಎಲ್ಲಿದೆ ಎಂದು ಹನುಮಾನ್ ಕೇಳಿದರು. ವೃದ್ಧೆಯು ದ್ರೋಣಗಿರಿ ಪರ್ವತದ ಕಡೆಗೆ ಕೈ ತೋರಿಸಿದರು. ಹನುಮಾನ್ ಪರ್ವತಕ್ಕೆ ಹಾರಿಹೋದರು, ಆದರೆ ಅಲ್ಲಿ ಸಂಜೀವಿನಿ ಎಲ್ಲಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಅವರು ಮತ್ತೆ ಗ್ರಾಮಕ್ಕೆ ಬಂದು ವೃದ್ಧೆಯನ್ನು ಸಂಜೀವಿನಿ ಯಾವ ಸ್ಥಳದಲ್ಲಿದೆ ಎಂದು ಕೇಳಿದಾಗ ವೃದ್ಧೆಯು ಪರ್ವತವನ್ನು ತೋರಿಸಿದರು.

ಹನುಮಾನ್ ಜಿ ಆ ಪರ್ವತದ ಬಹುಭಾಗವನ್ನು ಹೊತ್ತೊಯ್ದನು. ಇದರಿಂದಾಗಿ ಹನುಮಂತನಿಗೆ ಸಹಾಯ ಮಾಡಿದ ವೃದ್ಧೆಯನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಯಿತು ಎಂದು ಅಲ್ಲಿನ ಜನ ಇಂದಿಗೂ ಸಹ ವಿವರಣೆ ನೀಡುತ್ತಾರೆ.

ಯಾವಾಗ ಆಂಜನೆಯ ಪರ್ವತ ಹೊತ್ತೊಯ್ದ ದಿನದಿಂದ ಇಂದಿಗೂ ಸಹ ಆ ಗ್ರಾಮದ ಗ್ರಾಮಸ್ಥರು ಆರಾಧ್ಯ ದೈವವಾದ ಪರ್ವತದ ವಿಶೇಷ ಪೂಜೆಯಲ್ಲಿ ಜನರು ಮಹಿಳೆಯರ ಕೈಯಿಂದ ಏನನ್ನೂ ಸೇವಿಸುವುದಿಲ್ಲ. ಅಲ್ಲದೆ ಈ ಪೂಜೆಯಲ್ಲಿ ಮಹಿಳೆಯರು ಬಹಿರಂಗವಾಗಿ ಭಾಗವಹಿಸುವುದಿಲ್ಲ.

-Team Google Guruu

Leave a Reply

Your email address will not be published. Required fields are marked *

error: Content is protected !!