ಇಡೀ ಮಂದಿರವೇ ಅಪಘಾ’ತದಲ್ಲಿ ಕುಸಿದು ಟ್ರ’ಕ್ ಛಿ’ದ್ರಛಿ’ದ್ರವಾದರೂ ಕದಲದೇ ನಿಂತ ಹನುಮ

ಹಿಂದೂ ಧರ್ಮದಲ್ಲಿ ಆಂಜನೇಯನಿಗೆ ವಿಶಿಷ್ಟ ಸ್ಥಾನಮಾನವಿದೆ, ಏಳು ಜನ ಚಿರಂಜೀವಿಗಳಲ್ಲಿ ಹನುಮನು ಈಗಲೂ ಜೀವಂತವಾಗಿದ್ದಾನೆ ಎಂಬುದು ಹಿಂದುಗಳಾದ ನಮ್ಮ ನಂಬಿಕೆಯಾಗಿದೆ. ನಿಜಕ್ಕೂ ಹನುಮ ಈಗಲೂ ಅಮರನಾಗಿದ್ದು ಇಂದಿಗೂ ಭೂಮಿಯ ಮೇಲೆ ನಮ್ಮ ಮಧ್ಯೆಯೇ ಇದ್ದು ಚಮತ್ಕಾರಗಳನ್ನ ಸೃಷ್ಟಿಸುತ್ತಿದ್ದಾನೆ. ಆಗಾಗ ಆಂಜನೇಯನ ಚಮತ್ಕಾರಗಳನ್ನ ನಾವು ನೋಡುತ್ತಲೇ ಇರುತ್ತೇವೆ. ಇಂತಹುದೇ ಒಂದು ಚಮತ್ಕಾರ ಇದೀಗ ಉತ್ತರಪ್ರದೇಶದಲ್ಲಿ ಕಂಡುಬಂದಿದೆ.‌

ಉತ್ತರಪ್ರದೇಶದ ಬಾಂದಾ ಜಿಲ್ಲೆಯ ಕೊತವಾಲಿ ಠಾಣಾವ್ಯಾಪ್ತಿಯ ಮವೈ ಹಳ್ಳಿಯ ಹತ್ತಿರವಿರುವ ಹನುಮಾನ ಮಂದಿರದಲ್ಲಿ ನಡೆದ ಭಯಾನಕ ದುರ್ಘಟನೆಯಲ್ಲಿ ಬಜರಂಗಬಲಿಯ ಮೂರ್ತಿಯು ಒಂದಿಂಚೂ ಅತ್ತಿತ್ತ ಅಲುಗಾಡಿಲ್ಲ. ಭಗವಂತನ ಈ ಚಮತ್ಕಾರ ಕಂಡು ಅಲ್ಲಿನ ಜನರಿಗೆ ಈಗಲೂ ಆ ದೃಶ್ಯವನ್ನ ನಂಬಲಾಗುತ್ತಿಲ್ಲ. ಈ ದುರ್ಘಟನೆ ಎಷ್ಟು ಭಯಾನಕವಾಗಿತ್ತೆಂದರೆ ಟ್ರಕ್‌ನ ಮುಂದಿನ ಭಾಗ ಛಿದ್ರಛಿದ್ರವಾಗಿಬಿಟ್ಟಿದೆ ಆದರೆ ಬಜರಂಗಬಲಿಯ ಮೂರ್ತಿ ಕುಸಿದು ಬಿದ್ದದ್ದಾಗಲಿ ಇಲ್ಲ ಒಡಿದುಹೋಗುವ ಬದಲು ಒಂದಿಂಚೂ ಆ ಸ್ಥಳದಿಂದ ಕದಲಿಲ್ಲ.

ಸುದ್ದಿಮೂಲಗಳ ಪ್ರಕಾರ ಟ್ರಕ್ ಡ್ರೈವರ್ ಒಬ್ಬ ಅವಸರದಲ್ಲಿ ತಾನು ನಿಗದಿತ ಸ್ಥಳಕ್ಕೆ ತಲುಪಲು ಯತ್ನಿಸುತ್ತಿದ್ದ, ಆದರೆ ಇದ್ದಕ್ಕಿದ್ದಂತೆ ಟ್ರಕ್ ಡ್ರೈವರ್ ಆ ಲಾರಿಯ ಮೇಲಿನ ನಿಯಂತ್ರಣ ಕಳೆದುಕೊಂಡುಬಿಟ್ಟ, ನಿಯಂತ್ರಣ ತಪ್ಪಿದ ಆ ಟ್ರಕ್ ಸೀದಾ ಒಂದು ಮಂದಿರಕ್ಕೆ ನುಗ್ಗಿಯೇ ಬಿಟ್ಟಿತು. ಆ ದೇವಸ್ಥಾನ ಒಂದು ಕ್ಷಣದಲ್ಲಿ ಧ್ವಂಸವಾಗಿಬಿಟ್ಟಿತ್ತಿ. ಟ್ರಕ್‌ನ ಮುಂಭಾಗ ಛಿದ್ರಛಿದ್ರವಾಗಿಬಿಟ್ಟಿತು. ಅಷ್ಟೇ ಅಲ್ಲದೆ ದೇವಸ್ಥಾನದಲ್ಲಿ ಮಲಗಿದ್ದ ಇಬ್ಬರು ಪೂಜಾರಿಗಳು ಕೂಡ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡುಬಿಟ್ಟರು.

ಈ ದುರ್ಘಟನೆಯಲ್ಲಿ ಟ್ರಕ್ ಡ್ರೈವರ್ ಹಾಗು ಕ್ಲೀನರ್‌ಗೂ ಕೂಡ ಗಂಭೀರ ಗಾಯಗಳಾಗಿವೆ ಆದರೆ ಆ ಮಂದಿರದಲ್ಲಿದ್ದ ಹನುಮನ ಮೂರ್ತಿಗೆ ಒಂದು ಸ್ಕ್ರ್ಯಾಚ್ ಕೂಡ ಆಗಿಲ್ಲ. ಕೈಯಲ್ಲಿ ಗಧೆಯನ್ನ ಹಿಡಿದು ನಿಂತಿರುವ ಬಜರಂಗಬಲಿಯ ಮೂರ್ತಿ ಈ ದುರ್ಘಟನೆಯ ಬಳಿಕವೂ ತನ್ನ ಸ್ಥಾನದಿಂದ ಒಂದಿಂಚೂ ಕದಲಿಲ್ಲ. ಘಟನೆಯ ಬಳಿಕ ಸ್ಥಳಕ್ಕೆ ತಲುಪಿದ ಸ್ಥಳೀಯ ಜನರಿಗೆ ಈ ದೃಶ್ಯ ನೋಡಿ ಇದನ್ನ ನಂಬಲು ಸಾಧ್ಯವಾಗಲಿಲ್ಲ.

ಈ ಮಂದಿರದಲ್ಲಿ ಪೂಜೆ ಮಾಡುವ ಪೂಜಾರಿಯೊಬ್ಬರು ಈ ಘಟನೆಯ ಬಗ್ಗೆ ಮಾತನಾಡುತ್ತ ಈ ದುರ್ಘಟನೆಯಲ್ಲಿ ಮಂದಿರದಲ್ಲಿ ಪ್ರಾಣ ಕಳೆದುಕೊಂಡು ಇಬ್ಬರು ಪೂಜಾರಿಗಳ ಜೊತೆ ತಾನೂ ಇರುತ್ತಿದ್ದೆ. ಆದರೆ ಶುಕ್ರವಾರ ಅಂದರೆ ಈ ಘಟನೆ ನಡೆದ ಸಂದರ್ಭದಲ್ಲಿ ಅಂದು ನಾನು ಅಲ್ಲಿರಲಿಲ್ಲ. ಶನಿವಾರದಂದು ನಾನು ವಾಪಸ್ ಬಂದಾಗ ಅಲ್ಲಿ ಕಂಡ ದೃಶ್ಯ ಹಾಗು ಮಂದಿರ ಧ್ವಂಸವಾಗಿದ್ದನ್ನ ಕಂಡೆ. ಮಂದಿರದ ಒಂದೇ ಒಂದು ಗೋಡೆಯೂ ಉಳಿದಿಲ್ಲ, ಎಲ್ಲಾ ನೆಲಕ್ಕುರುಳಿವೆ ಆದರೆ ಬಜರಂಗಬಲಿಯ ಮೂರ್ತಿ ಮಾತ್ರ ತನ್ನ ಜಾಗದಿಂದ ಒಂದಿಂಚೂ ಕದಲಿಲ್ಲ, ಮೂರ್ತಿಗೆ ಒಂದಿಷ್ಟೂ ಡ್ಯಾಮೇಜ್ ಆಗಿಲ್ಲ. ಇದನ್ನ ಕಂಡ ನಾನು ಒಮ್ಮೆ ಹೌಹಾರಿಬಿಟ್ಟೆ. ಇದು ನಿಜಕ್ಕೂ ಯಾವ ಚಮತ್ಕಾರಕ್ಕೂ ಕಡಿಮೆಯಲ್ಲ ಎಂದು ಆ ಪೂಜಾರಿ ಘಟನೆಯ ಬಗ್ಗೆ ವಿವರಿಸಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!