ಮೈತ್ರಿ ಸರಕಾರದಲ್ಲಿ ಭಾ’ರಿ ದೊಡ್ಡ ಹಗರಣ

ಒಂದು ಕಡೆ ಸರ್ಕಾರ ಬೀಳುವ ಹಂತ ತಲುಪಿದರೆ ಇನ್ನೊಂದು ಕಡೆ ರಾಜ್ಯದಲ್ಲಿ ಅಧಿಕಾರ ವರ್ಗಾವಣೆ ತೀವ್ರಗತಿಯಲ್ಲಿ ಸಾಗಿದೆ ಹೌದು, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಗೃಹ ಇಲಾಖೆಗೆ ಮೂಗು ತೂರಿಸಿದ ಆರೋಪ ಎದುರಿಸುತ್ತಿದ್ದಾರೆ. ಇದುವರೆಗೂ ಬರೋಬ್ಬರಿ 21 ಡಿವೈಎಸ್​ಪಿ ಹಾಗೂ 110 ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಿಸಿದ್ಧಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿವೆ.

ಲೋಕೋಪಯೋಗಿ ಸಚಿವರಾದ ಹೆಚ್ ಡಿ ರೇವಣ್ಣನವರು ಗೃಹ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಗೊತ್ತಿಲ್ಲದೆಯೇ ಅಥವಾ ಅವರ ಗಮನಕ್ಕೆ ತರದೆಯೇ ಅಧಿಕಾರಿಗಳ ವರ್ಗಾವಣೆ ನಡೆಸುತ್ತಿದ್ದಾರಂತೆ. ಈ ಘಟನೆ ಸಚಿವ ಎಂ.ಬಿ. ಪಾಟೀಲ್ ಅವರನ್ನು ಸಿಡಿದೇಳುವಂತೆ ಮಾಡಿದ್ದಾರೆ ಹೀಗಾಗಿ ಎಂ. ಬಿ ಪಾಟೀಲರು ಈ ವಿಷಯ ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಆದರೂ ಸಹ ಸರ್ಕಾರದಲ್ಲಿ ಸೂಪರ್ ಸಿಎಂ ನಂತೆ ಹೆಚ್.ಡಿ. ರೇವಣ್ಣ ಕಾರ್ಯನಿರ್ವಹಿಸುತ್ತಾರೆ. ಇವರು ಲೋಕೋಪಯೋಗಿ ಮಂತ್ರಿಯಾದರೂ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳ ವರ್ಗಾವಣೆ ಮಾಡುವುದರಲ್ಲಿ ಎತ್ತಿದ ಕೈ. ಸರ್ಕಾರ ರಚನೆಯಾಗುತ್ತಿದ್ದಂತೆಯೇ ಇಂತಹ ಅನೇಕ ವರ್ಗಾವಣೆ ಮಾಡಿ ಸುದ್ದಿಯಾಗುದ್ದರು ಈಗ ಮತ್ತೆ ಸರಕಾರ ಬೀಳುವಾಗ ಅದೆ ಚಾಳಿ ಮುಂದುವರಿಸಿದ್ದಾರೆ.

ಗ್ರಹ ಸಚಿವತಿಗೆ ಹಾಗೂ ಆ ಇಲಾಖೆಯ ಸಂಬಂಧಿಸಿದವರಿಗೆ ಗೊತ್ತಿಲ್ಲದೆಯೇ ವರ್ಗಾವಣೆ ನಡೆದು ಹೋಗಿರುತ್ತದೆ. ಹೀಗಾಗಿ ವರ್ಗಾವಣೆಯ ಹಿಂದೆ ಭಾರಿ ದೊಡ್ಡ ಹಗರಣ ನಡಿತಿದೆಯಾ ಎಂಬ ಅನುಮಾನ ಕೇಳಿಬರುತ್ತಿದೆ. ದುಡ್ಡು ತೆಗೆದುಕೊಂಡು ಇಂತಹ ವರ್ಗಾವಣೆ ನಡೆಸುತ್ತಿದ್ದಾರೆನೋ ಎಂದು ಜನ ಮಾತನಾಡಿಕೊಳ್ತಿದ್ದಾರೆ.

ರೇವಣ್ಣನವರ ಈ ಕೆಲಸಕ್ಕೆ ಸಾರ್ವಜನಿಕರು ಬಿಡಿ ಸ್ವತಃ ಪಕ್ಷದ ಅನೇಕ ಮಂತ್ರಿಗಳು ಮತ್ತು ಶಾಸಕರು ಈ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೆ ಎದ್ದಿರುವ ಭಿನ್ನಮತಕ್ಕೆ ರೇವಣ್ಣರೂ ಒಬ್ಬ ಕಾರಣ ಕರ್ತರು ಎಂಬ ಮಾತುಗಳು ಕೇಳಿಬರುತ್ತಿವೆ. ಈಗ ರಾಜೀನಾಮೆ ನೀಡಿರುವ ಕೆಲ ಶಾಸಕರು ಹೆಚ್ಚು ವಿರೋಧ ಮಾಡುತ್ತಿರುವುದು ರೇವಣ್ಣನವರಿಗೆ ಹೊರತು ಕುಮಾರಸ್ವಾಮಿಗಲ್ಲ.

ಹೀಗೆ ಮೈತ್ರಿ ಸರ್ಕಾರ ತಮ್ಮ ಕಾರಣದಿಂದಲೇ ಅಲುಗಾಡುತ್ತಿರುವುದು ಗೊತ್ತಿದ್ದೇ ಹೆಚ್.ಡಿ. ರೇವಣ್ಣ ಅವರ ವರ್ಗಾವಣೆ ಚಾಳಿ ಬಿಟ್ಟಿಲ್ಲದಿರುವುದು ನಿಜಕ್ಕೂ ಅಚ್ಚರಿ ಹುಟ್ಟಿಸಿದೆ. ಸದ್ಯಕ್ಕೆ ರೇವಣ್ಣ ಮಾಡಿಸಿದ ಎಲ್ಲಾ ವರ್ಗಾವಣೆಯನ್ನೂ ಗೃಹ ಸಚಿವರು ತಡೆ ಹಿಡಿದಿದ್ದಾರೆ. ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಗೃಹ ಸಚಿವರ ಸೂಚನೆಯಂತೆ ವರ್ಗಾವಣೆ ಆದೇಶಗಳನ್ನು ಪೆಂಡಿಂಗ್ ಇಟ್ಟಿದ್ದಾರೆ.

ಒಂದು ವೇಳೆ, ರೇವಣ್ಣ ಅವರ ಪ್ರವೃತ್ತಿ ಹೀಗೇ ಮುಂದುವರಿದರೆ ಅತೃಪ್ತ ಶಾಸಕರನ್ನು ಮನವೊಲಿಸಿ ವಾಪಸ್ ಕರೆಸಿಕೊಳ್ಳುವುದು ಕಷ್ಟವಾಗಬಹುದು ಎಂಬ ಭಯ ಕಾಂಗ್ರೆಸ್ ಪಕ್ಷದ ನಾಯಕರಿಗಿದೆ. ಮೈತ್ರಿ ಸರ್ಕಾರದ ಸಮನ್ವಯತೆ ಸಮಿತಿ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಅವರು ವರ್ಗಾವಣೆ ವಿಚಾರದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ಬುದ್ದಿ ಹೇಳಿ ಸರಿ ಮಾಡ್ತಾರಾ ಇಲ್ಲ ದೋಸ್ತಿ ಸರ್ಕಾರ ಕಳೆದುಕೊಳ್ತಾರಾ ಕಾದು ನೋಡಬೇಕು.

-Team Google Guru

Leave a Reply

Your e-mail address will not be published. Required fields are marked *

error: Content is protected !!