ಕಾಶ್ಮೀರದ ವಿಚಾರವಾಗಿ ಇಮ್ರಾನ್ ಖಾನ್‌ನ್ನ ಹಿಗ್ಗಾಮುಗ್ಗಾ ಝಾಡಿಸಿ ಭಾರತದ ಪರ ನಿಂತ ಪಾಕಿಸ್ತಾನದ ಮಾಜಿ ಸಚಿವೆ ಹೀನಾ ರಬ್ಬಾನಿ

ಪಾಕಿಸ್ತಾನ್ ಮಾಜಿ ವಿದೇಶಾಂಗ ಮಂತ್ರಿ ಹೀನಾ ರಬ್ಬಾನಿ ಖಾರ್ ಮಾತನಾಡುತ್ತ ತನ್ನ ದೇಶದ ಆರ್ಥಿಕ, ರಾಜಕೀಯ ಪರಿಸ್ಥಿತಿಗಳು, ಸೈನ್ಯಕ್ಕಾಗಿ ಅಮೇರಿಕಾ ದೇಶದ ಮೇಲೆ ಡಿಪೆಂಡ್ ಆಗಿರುವುದಕ್ಕಿಂತ ಭಾರತ ಹಾಗು ಅಕ್ಕ ಪಕ್ಕದ ರಾಷ್ಟ್ರಗಳ ಜೊತೆ ಸಂಬಂಧ ಗಟ್ಟಿಸಿಕೊಳ್ಳುವಂತೆ ಪಾಕಿಸ್ತಾನ ಸರ್ಕಾರವನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊನ್ನೆ ಶನಿವಾರದಂದು ‘ಥಿಂಕ್ ಫೆಸ್ಟ್’ ನಲ್ಲಿ ಭಾಗವಹಿಸಿ ಅಮೇರಿಕಾ ಪಾಕಿಸ್ತಾನ ದೇಶಗಳ ಸಂಬಂಧಗಳ ಬಗ್ಗೆ ಮಾತನಾಡುತ್ತ ಪಾಕಿಸ್ತಾನ ಸದಾ ಒಂದು ಪೂರ್ಣ ರೀತಿಯ ರಣನೀತಿಯನ್ನ ಹೊಂದುವ ರಾಷ್ಟ್ರವಾಗಬೇಕು. ಆದರೆ ಪಾಕಿಸ್ತಾನ ಯೋಚಿಸೋಕೂ ಅದು ಸಾಧ್ಯವಿಲ್ಲ ಎಂದಿದ್ದಾರೆ.

ಪಾಕಿಸ್ತಾನದ ಜನಪ್ರೀಯ ಪತ್ರಿಕೆ ‘ಡಾನ್’ ನಲ್ಲಿ ರವಿವಾರದಂದು ಬಿತ್ತರಗೊಂಡ ಸುದ್ದಿಯ ಪ್ರಕಾರ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಮಾತನಾಡುತ್ತ ಪಾಕಿಸ್ತಾನ ತನ್ನ ಎರಡೂ ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದುಕೊಂಡು ನಿಂತರೆ ತಮ್ಮ ದೇಶಕ್ಕೆ ಯಾವ ಮರ್ಯಾದೆಯಾಗಲಿ, ಘನತೆ ಗೌರವವಾಗಲಿ ಸಿಗುವುದಿಲ್ಲ ಎಂದು ತನ್ನ ದೇಶಕ್ಕೆ ಹಿಗ್ಗಾಮುಗ್ಗಾ ಉಗಿದಿದ್ದಾರೆ.

ಹೀನಾ ರಬ್ಬಾನಿ ಪಾಕಿಸ್ತಾನದ ಮೊಟ್ಟ ಮೊದಲ ಮಹಿಳಾ ವಿದೇಶಾಂಗ ಮಂತ್ರಿ ಯಾಗಿ 2011 ರಿಂದ 2013 ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಕ್ಷ ಜಯಭೇರಿ ಬಾರಿಸಿ ಪಾಕಿಸ್ತಾನದ ಚುಕ್ಕಾಣಿ ಹಿಡಿದು ಇಮ್ರಾನ್ ಖಾನ್ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದ. ಇಮ್ರಾನ್ ಖಾನ್ ಅಧಿಕಾರ ಸ್ವೀಕರಿಸಿದಾಗಿನಿಂದ ಪಾಕಿಸ್ತಾನ ಭಿಕಾರಿ ರಾಷ್ಟ್ರವಾಗುತ್ತ ಸಾಗುತ್ತಿದೆ.

ಪಾಕಿಸ್ತಾನದ ಮಾಜಿ ಸಚಿವೆ ಹೀನಾ ರಬ್ಬಾನಿ ಈ ಕುರಿತು ಮಾತನಾಡುತ್ತ ಪಾಕಿಸ್ತಾನದ ಅತೀ ಮಹತ್ವಪೂರ್ಣ ಸಂಬಂಧವನ್ನ ಅಮೇರಿಕಾದ ಜೊತೆಯಲ್ಲ ಬದಲಾಗಿ ಭಾರತ, ಅಫ್ಘಾನಿಸ್ತಾನ, ಇರಾನ್ ಹಾಗು ಚೀನಾದ ಜೊತೆ ಬೆಳೆಸಬೇಕು. ಅಮೇರಿಕಾಗೆ ಪಾಕಿಸ್ತಾನ ಅಮೇರಿಕಾ ಈವರೆಗೂ ಎಷ್ಟು ಗೌರವ ನೀಡಿದೆಯೋ ಅಷ್ಟು ಗೌರವ ನೀಡುವ ಯೋಗ್ಯತೆ ಅಮೇರಿಕಾಕ್ಕಿಲ್ಲ.

ಯಾಕಂದ್ರೆ ನಮ್ಮ ಅರ್ಥವ್ಯವಸ್ಥೆ ಇದೀಗ ಸಂಪೂರ್ಣವಾಗಿ ಅಮೇರಿಕಾದ ಮೇಲೆಯೇ ಡಿಪೆಂಡೆಂಟ್ ಆಗಿಲ್ಲ, ಆದರೆ ಹೊರಜಗತ್ತಿನ ಪ್ರಕಾರ ಪಾಕಿಸ್ತಾನ ಅಮೇರಿಕಾದ ಮೇಲೆಯೇ ಡಿಪೆಂಡ್ ಆಗಿದೆ ಎಂಬುದಾಗಿದೆ. ನಮ್ಮ ದೇಶ ಅಮೇರಿಕಾಗೆ ನೀಡುವ ಮಹತ್ವಕ್ಕಿಂತ ನೆರೆಯ ರಾಷ್ಟ್ರಗಳ ಜೊತೆಯಲ್ಲಿ ಅದರಲ್ಲೂ ಭಾರತಕ್ಕೆ ಮಹತ್ವ ನೀಡಬೇಕು ಎಂದಿದ್ದಾರೆ ಹೀನಾ ರಬ್ಬಾನಿ

ಇಲ್ಲಿ ನೆನಪಿಸಿಕೊಳ್ಳಬೇಕಾದ ವಿಷಯವೇನೆಂದರೆ ಈಕೆ ಪಾಕಿಸ್ತಾನ್ ವಿದೇಶಾಂಗ ಮಂತ್ರಿಯಾಗಿದ್ದ ಸಂದರ್ಭದಲ್ಲೇ ಅಲ್ ಖೈದಾ ಪ್ರಮುಖ ಉಗ್ರ ಬಿನ್ ಲಾಡೆನ್ ನ್ನ ಪಾಕಿಸ್ತಾನದ ಏಬಟಾಬಾದ್ ನಲ್ಲಿ 2011 ರ ಮೇ ತಿಂಗಳಲ್ಲಿ ಹೊಡೆದುರುಳಿಸಲಾಗಿತ್ತು. ಹೀನಾ ರಬ್ಬಾನಿ‌ ಮುಂದೆ ಮಾತನಾಡುತ್ತ ನಮ್ಮ ದೇಶ ಅಮೇರಿಕಾದ ಮೇಲೆ ಹೆಚ್ಚು ಭರವಸೆಯನ್ನ ಇಟ್ಟುಕೊಂಡು ಕೂರಬಾರದು.

ಅಫ್ಘನ್ ನಲ್ಲಿ ನಡೆಯುತ್ತಿರುವ ಯುದ್ಧದಿಂದ ಪಾಕಿಸ್ತಾನ ತಕ್ಷಣವೇ ಹೊರಬರಬೇಕು, 17 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಅಮೇರಿಕಾದ ಕಾರ್ಯಾಚರಣೆ, ಅದರಲ್ಲಿ ಪಾಕಿಸ್ತಾನದ ಸಹಭಾಗಿತ್ವ ಹಾಗು ಆಗಿನಿಂದ ನಡೆದುಕೊಂಡು ಬರುತ್ತಿರುವ ಯುದ್ಧದಿಂದಾಗಿ ಪಾಕಿಸ್ತಾನ ಅತಿ ಹೆಚ್ಚು ನಷ್ಟ ಅನುಭವಿಸಿದೆ ಎಂದು ಹೀನಾ ರಬ್ಬಾನಿ ಹೇಳಿದ್ದಾರೆ.

ನಿಮಗೆ ತಿಳಿಸಬಯಸುವ ವಿಚಾರವೇನೆಂದರೆ ಇಂತಹ ಹೇಳಿಕೆಗಳನ್ನ ಹೀನಾ ರಬ್ಬಾನಿಯಿಂದ ಇದೇ ಮೊದಲ ಬಾರಿ ಬಂದಿಲ್ಲ, ಇದಕ್ಕೂ ಮೊದಲು ಹಲವಾರು ಬಾರಿ ಆಕೆ ಭಾರತ ಹಾಗು ಪಾಕಿಸ್ತಾನದ ಸಂಬಂಧಗಳ ಕುರಿತಾಗಿ ಪಾಸಿಟಿವ್ ಆಗಿ ಮಾತನಾಡಿದ್ದಾಳೆ.

ಈ ಹಿಂದೆ ತನ್ನ ರಾಷ್ಟ್ರವನ್ನೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತ ‘ಪಾಕಿಸ್ತಾನ ಭಾರತದ ಜೊತೆ ಹೋರಾಡಿ ಕಾಶ್ಮೀರವನ್ನ ಗೆಲ್ಲಲು ಸಾಧ್ಯವಿಲ್ಲ, ಈ ಸಮಸ್ಯೆಯನ್ನ ಎರಡೂ ರಾಷ್ಟ್ರಗಳ ಶಾಂತಿ ಮಾತುಕತೆಯಿಂದ ಮಾತ್ರ ಸಾಧ್ಯ’ ಎಂದೂ ಹೇಳಿದ್ದರು.

ಪಾಕಿಸ್ತಾನಿ ನ್ಯೂಸ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಈ ಹೀನಾ ರಬ್ಬಾನಿ “ನನ್ನ ಪ್ರಕಾರ ಪಾಕಸ್ತಾನ ಭಾರತದ ವಿರುದ್ಧ ಯುದ್ಧ ಮಾಡಿ ಕಾಶ್ಮೀರವನ್ನ ಪಡೆಯಲು ಸಾಧ್ಯವೇ ಇಲ್ಲ. ಒಂದು ವೇಳೆ ನಾವು ಹೀಗೆ ಮಾಡದೇ ಇದ್ದರೆ ಉಳಿಯುವ ಏಕೈಕ ಮಾರ್ಗವೆಂದರೆ ಅದು ಕೇವಲ ಭಾರತದ ಜೊತೆ ಶಾಂತಿ ಮಾತುಕತೆ ಮಾಡಿಕೊಳ್ಳೋದು ಮಾತ್ರ” ಎಂದಿದ್ದರು.

ಆಕೆ ಮುಂದೆ ಮಾತನಾಡುತ್ತ ಎರಡೂ ರಾಷ್ಟ್ರಗಳು ಸಮಕ್ಷಮ ಎದುರು ಬದುರು ಕೂತು ಮಾತುಕತೆ ನಡೆಸೋದು ಮಾತ್ರ ಪಾಕಿಸ್ತಾನಕ್ಕೆ ಉಳಿದಿರುವ ಏಕೈಕ ದಾರಿ, ಅದರಿಂದ ಮಾತ್ರ ಎರಡೂ ರಾಷ್ಟ್ರಗಳ ಸಂಬಂಧಗಳಲ್ಲಿ ಸುಧಾರಣೆ ತರಬಹುದು. ಕಾಶ್ಮೀರದಂತಹ ಸೆನ್ಸಿಟಿವ್ ವಿಚಾರದಲ್ಲಿ ಎರಡೂ ರಾಷ್ಟ್ರಗಳ ಮಧ್ಯೆ ನಿರಂತರ ಶಾಂತಿ ಮಾತುಕತೆ ನಡೆದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಹೊರತು ಪಾಕಿಸ್ತಾನ ಯುದ್ಧದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು.

ಅಂದು ತನ್ನದೇ ಸರ್ಕಾರವಿದ್ದಾಗ ಪಾಕಿಸ್ತಾನಿ ಸರ್ಕಾರವನ್ನ ಕಂಟ್ರೋಲ್ ಮಾಡುತ್ತಿದ್ದ ISI ಹಾಗು ಪಾಕಿಸ್ತಾನಿ ಸೇನೆಯನ್ನ ತರಾಟೆಗೆ ತೆಗೆದುಕೊಂಡಿದ್ದ ಹೀನಾ ರಬ್ಬಾನಿ‌ ಇಂದು ತನ್ನದೇ ರಾಷ್ಟ್ರದ ವಿರುದ್ಧ ಹಾಗು ಇಮ್ರಾನ್ ಖಾನ್ ಆಡಳಿದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಸಂಪೂರ್ಣವಾಗಿ ಕುಸಿದೇ ಹೋಗಿರುವ ಆರ್ಥಿಕತೆಯಿಂದಾಗಿ ಕಂಗೆಟ್ಟಿರುವ ಇಮ್ರಾನ್ ಖಾನ್ ಗೆ ಹೀನಾ ರಬ್ಬಾನಿಯ ಈ ಖಾರವಾದ ಹೇಳಿಕೆ ಭಾರೀ ಇರಿಸುಮುರುಸು ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ.

– Vinod Hindu Nationalist

Leave a Reply

Your e-mail address will not be published. Required fields are marked *

error: Content is protected !!