ದೇಶದ ನೂತನ ಗೃಹಮಂತ್ರಿ ಅಮಿತ್ ಶಾಹ್ ರಿಂದ ಮತ್ತೊಂದು ಮಾಸ್ಟರ್‌ಸ್ಟ್ರೋಕ್

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ 350+ ಸೀಟುಗಳನ್ನ ಬಾಚಿಕೊಂಡು ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು‌. ಎರಡನೆಯ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ್ದರು‌. ಮೋದಿ ಸಂಪುಟದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್ ಶಾಹ್ ರನ್ನ ಗೃಹಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಗೃಹಮಂತ್ರಿ ಹುದ್ದೆ ಅಲಂಕರಿಸಿತ್ತಲೇ ಅಮಿತ್ ಶಾಹ್ ರವರು ಜಮ್ಮು ಕಾಶ್ಮೀರದ ವಿಷಯದಲ್ಲಿ ಮಹತ್ತರ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದ ವಿಷಯವ ನಿಮಗೆಲ್ಲಾ ಗೊತ್ತಿರುವಂಥದ್ದೇ. ಇದೀಗ ಜಮ್ಮು ಕಾಶ್ಮೀರದ ವಿಚಾರದಿಂಸಲೇ ಗೃಹಮಂತ್ರಿ ರೂಪದಲ್ಲಿ ಅಮಿತ್ ಶಾಹ್ ರವರು ಇಂದು ಲೋಕಸಭೆಯಲ್ಲಿ ತಮ್ಮ ಮೊದಲ ಬಿಲ್ ಮಂಡಿಸಲಿದ್ದಾರೆ.

ಕೇಂದ್ರ ಗೃಹಮಂತ್ರಿ ಅಮಿತ್ ಶಾಹ್ ಜಮ್ಮು ಕಾಶ್ಮೀರ ಮೀಸಲಾತಿ ಸಂಶೋಧನಾ ಬಿಲ್ ಪ್ರಸ್ತಾಪಿಸಲಿದ್ದಾರೆ. ಜಮ್ಮು ಕಾಶ್ಮೀರ ಮೀಸಲಾತಿ ವಿಧೇಯಕ ಆದ್ಯಾದೇಶ 2019 ರ ಕೇಂದ್ರೀಯ ಕ್ಯಾಬಿನೆಟ್‌ ಇದೇ ಫೆಬ್ರವರಿ 28, 2019 ರಂದು ಒಪ್ಪಿಗೆ ನೀಡಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಈ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದ್ದರು.

ಈ ವಿಧೇಯಕ ಪಾಸ್ ಆಗುವುದರಿಂದ ಜಮ್ಮು ಕಾಶ್ಮೀರದ ಪ್ರತಿಯೊಂದು ವರ್ಗಕ್ಕೂ(ಜಾತಿ, ಮತ ಪಂಥಗಳಿಗೂ) ಮೀಸಲಾತಿ ಸಿಗಲಿದೆ. ಇದರ ಮೂಲಕ ಜಮ್ಮು ಕಾಶ್ಮೀರ ಮೀಸಲಾತಿ ಅಧಿನಿಯಮ 2004 ರಲ್ಲಿ ಸಂಶೋಧನೆ ಮಾಡಲಾಗುವುದು. ಜಮ್ಮು ಕಾಶ್ಮೀರ ಮೀಸಲಾತಿ ಸಂಶೋಧನೆ 2019 ಪ್ರಕಾರ ರಾಜ್ಯದಲ್ಲಿ ಗಡಿ ಪ್ರದೇಶದಲ್ಲಿರುವ ಜನಗಳಿಗೂ ವಾಸ್ತವ ಗಡಿ ನಿಯಂತ್ರಣಾ ರೇಖೆ(LAC) ಬಳಿಯಿರುವ ಜನರ ರೀತಿಯಂತೆಯೇ ಮೀಸಲಾತಿಯ ಲಾಭ ಸಿಗುತ್ತದೆ.

ಮೀಸಲಾತಿ ನಿಯಮದಲ್ಲಿ ಆದ ಈ ಸಂಶೋಧನೆ ಪ್ರಕಾರ ಯಾವುದೇ ವ್ಯಕ್ತಿ ಹಿಂದುಳಿದ ಕ್ಷೇತ್ರ, ನಿಯಂತ್ರಣ ರೇಖೆ ಹಾಗು ಗಡಿಯಿಂದ ಭದ್ರತೆಯ ಕಾರಣದಿಂದಾಗಿ ಅಲ್ಲಿಂದ ಸ್ಥಳಾಂತರವಾಗಿದ್ದರೆ ಅಂಥವರಿಗೆ ಮೀಸಲಾತಿಯಿಂದ ವಂಚನೆ ಮಾಡಲಾಗುವುದಿಲ್ಲ. ಸದ್ಯ ಈ ನಿಯಮ ಹಿಂದುಳಿದ ಪ್ರದೇಶ, LOC ಹಾಗು ಐಬಿ ಯ ಹತ್ತಿರವಿರುವ ಪ್ರದೇಶಗಳ ನಿವಾಸಿಗಳಿಗೆ ಹಲವಾರು ಸೌಲಭ್ಯಗಳು ಸಿಗುತ್ತವೆ. ಸರ್ಕಾರಿ ನೌಕರಿಯಲ್ಲಿ ಮೀಸಲಾತಿಯಿಂದ ಹಿಡಿದು ಪ್ರಮೋಷನ್ ಹಾಗು ಸಬ್ಸಿಡಿಯಂತಹ ಹಲವಾರು ಸೌಲಭ್ಯಗಳು ನೀಡಲಾಗುತ್ತದೆ.

ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಅಭಿಭಾಷಣಕ್ಕೆ ಧನ್ಯವಾದ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ‌ಈ ವಿಷಯಕ್ಕಾಗಿ 10 ಗಂಟೆಗಳ ಸಮಯವನ್ನೂ ಮೀಸಲಾಗಿಡಲಾಗಿತ್ತು. ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿಯ ವತಿಯಿಂದ ಹಾಕಲಾಗಿರುವ ಅನುಚ್ಛೇದ 356 ನ್ನ ಜಾರಿಯಲ್ಲಿಡುವ ಪ್ರಸ್ತಾವನೆಯ ಚರ್ಚೆಗಾಗಿ 3 ಗಂಟೆಯ ಸಮಯ ಕೂಡ ತೆಗೆದುಕೊಳ್ಳಲಾಗಿತ್ತು.

ಇಲ್ಲಿ ನಿಮಗೆ ನೆನಪಿಸುವ ಅಂಶವೇನೆಂದರೆ ಜಮ್ಮು ಕಾಶ್ಮೀರ ಸರ್ಕಾರವು ಕಳೆದ ತಿಂಗಳು ಸಾವಿರಾರು ಕಾಶ್ಮೀರಿ ಪಂಡಿತರಿಗೆ ಬಿಗ್ ಗಿಫ್ಟ್ ನೀಡಿತ್ತು. ಈ ಗಿಫ್ಟ್‌ನ ಪ್ರಕಾರ ರಾಜ್ಯದ ಭಿನ್ನ ವರ್ಗದ ಜನಗಳಿಗೆ ಮೀಸಲಾತಿ ಪ್ರಮಾಣಪತ್ರ ಜಾರಿ ಮಾಡಲಾಗುವ ಮೀಸಲಾತಿ ನಿಯಮದಲ್ಲಿನ ಸಂಶೋಧನೆಯ ಘೋಷಣೆಯ ಬಗ್ಗೆ ಕಾಶ್ಮೀರಿ ಪಂಡಿತರಿಗೆ ತಿಳಿಸಲಾಗಿತ್ತು. ಇದೀಗ ಈ ಮೀಸಲಾತಿ ಬಿಲ್ ಇಂದು ಅಮಿತ್ ಶಾಹ್ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!