ಭಾರತದ ಜೊತೆ ಮಾತುಕತೆಗಾಗಿ ಅಂಗಲಾಚಿದ ಪಾಕ್‌ಗೆ ಬಿಗ್ ಶಾಕ್ ಕೊಟ್ಟ ಅಮೆರಿಕಾ

ನರೇಂದ್ರ ಮೊದಿ ಎರಡನೇ ಬಾರಿ ಪ್ರಧಾನಿಯಾದ ಬೆನ್ನಲ್ಲೆ ಟ್ವೀಟರ್ ಅಕೌಂಟ್ ಮೂಲಕ ಶುಭಾಶಯ ಕೋರಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತದ ಜೊತೆ ಶಾಂತಿಯುತ ಮಾತುಕತೆಗಾಗಿ ಬೇಡಿಕೆ ಇಟ್ಟಿದ್ದರು. ಆದರೆ ಅದಕ್ಕೆ ಪ್ರತ್ಯುತ್ತರ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಎಲ್ಲಿಯವರೆಗೂ ಭಯೋತ್ಪಾದನೆಗೆ ಬೆಂಬಲ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಮಾತುಕತೆ ಅಸಾಧ್ಯ ಎಂದು ಹೇಳಿದ್ದರು.

ಆದರೇ ಇದೀಗ ಪಾಕ್ ಮತ್ತೆ ಭಾರತದೊಂದಿಗೆ ಶಾಂತಿ ಒಪ್ಪಂದಕ್ಕೆ ಮುಂದಾಗಿದ್ದು ಇದಕ್ಕಾಗಿ ಅಮೇರಿಕಾದ ಮೊರೆ ಹೋಗಿದೆ, ಹೌದು ಈ ಬಾರಿ ಇಮ್ರಾನ್ ಖಾನ್ ಅಮೇರಿಕಾ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ಭಾರತದ ಜೊತೆ ಮಾತುಕತೆ ನಡೆಸಲು ಹಾಗೂ ಶಾಂತಿಯುತ ಸಂಭಂಧ ಬೆಳೆಸಲು ಸಹಾಯ ಕೋರಿದೆ ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಇಮ್ರಾನ್ ಖಾನ್ ಖಾರವಾಗಿಯೇ ಉತ್ತರಿಸಿದ್ದಾರೆ.

ಭಯೋತ್ಪಾದನೆಗೆ ಕಡಿವಾಣ ಹಾಕಿ ಬಳಿಕ ಪಾಕಿಸ್ತಾನವು ಭಾರತದೊಂದಿಗೆ ಸಂಬಂಧವನ್ನು ಮುಂದುವರೆಸಬೇಕು ಎಂದು ಅಮೆರಿಕ ಹೇಳಿದೆ. ಭಯೋತ್ಪಾದನೆ ವಿರುದ್ಧ ಹೆಚ್ಚು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ಪಾಕಿಸ್ತಾನವನ್ನು ಒತ್ತಾಯಿಸಿರುವ ಅಮೆರಿಕ, ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದೆ.

ಇಸ್ಲಾಮಾಬಾದ್ ನಲ್ಲಿ ಭಯೋತ್ಪಾದಕರು ಸ್ವತಂತ್ರವಾಗಿ ಚಲಿಸುವ ಮತ್ತು ಆಯುಧಗಳನ್ನು ಪಡೆದುಕೊಳ್ಳದಂತೆ ತಡೆಯಬೇಕು. ಇದಲ್ಲದೆ, ಭಯೋತ್ಪಾದಕರು  ಭಾರತೀಯ ಭೂಪ್ರದೇಶದ ಒಳನುಸುಳಿ ದಾಳಿ ಮಾಡುವುದನ್ನೂ ಕೂಡ ತಡೆಯಬೇಕು ವೈಟ್ ಹೌಸ್ನ ಅಧಿಕೃತ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಪಾಕಿಸ್ತಾನ ಮೂಲದ ಡಾನ್ ನ್ಯೂಸ್ ವರದಿ ಮಾಡಿದೆ.  

ಭಾರತ-ಪಾಕಿಸ್ತಾನ ನಡುವಿನ ಶಾಂತಿಯುತ ಸಂಧಾನದ ಜೊತೆಗೆ, ಪಾಕಿಸ್ತಾನ ತನ್ನ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತದೆ. ಅಷ್ಟೇ ಅಲ್ಲದೆ, ಭಯೋತ್ಪಾದನ ಚಟುವಟಿಕೆಗಳನ್ನು ನಿಗ್ರಹಿಸುವ ಸಲುವಾಗಿ ಉತ್ತಮ ಹೆಜ್ಜೆ ಇಡಲಿದೆ ಎಂದು ನಿರೀಕ್ಷಿಸುತ್ತಿರುವುದಾಗಿ ಅಮೇರಿಕಾ ತಿಳಿಸಿದೆ.

ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಭಾರತ ಹಾಗೂ ಪಾಕಿಸ್ತಾನ ನಡುವಿನ ಶಾಂತಿಯುತ ಮಾತುಕತೆಗೆ ಬಯಸುತ್ತಿರುವುದಾಗಿ ತಿಳಿಸಿ ಕಳೆದ ವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಾಶ್ಮೀರ ಸೇರಿದಂತೆ ಭಾರತ ಪಾಕಿಸ್ತಾನ ನಡುವಿನ ಎಲ್ಲಾ ಸಮಸ್ಯೆಗಳನ್ನು ಕುಳಿತು ಬಗೆಹರಿಸಿಕೊಳ್ಳುವ ಬಗ್ಗೆ ಇಮ್ರಾನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಇಮ್ರಾನ್ ಖಾನ್ ಹೇಳುವಂತೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆ ಉಭಯ ದೇಶಗಳು ಶಾಂತಿಯಿಂದ ಇರಲು ಇರುವ ಏಕೈಕ ಪರಿಹಾರವಾಗಿದೆ ಎಂಬುದಾಗಿದೆ ಆದರೆ ಪಾಪಿ ಪಾಕಿಸ್ತಾನದ ನರಿ ಬುದ್ದಿ ತಿಳಿದ ಪ್ರಧಾನಿ ಮೋದಿ ಇದ್ಯಾವುದಕ್ಕೂ ಉತ್ತರ ನೀಡದೆ ಭಯೋತ್ಪಾದನೆ ಮುಕ್ತ ಮಾಡುವುದಾದರೇ ಮಾತ್ರ ಮಾತುಕತೆ ಸಾಧ್ಯ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!